ಸಿಂದಗಿ: ಕ್ಷೇತ್ರದ ಅಭಿವೃದ್ಧಿ, ನೀರಾವರಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ನಾನು ಯಾವತ್ತೂ ರಾಜಕಾರಣ ಮಾಡುವುದಿಲ್ಲ. ನಾನೊಬ್ಬ ಪಕ್ಷಾತೀತ ಶಾಸಕ. ಕ್ಷೇತ್ರದ ಅಭಿವೃದ್ಧಿ ಹಂತ ಹಂತವಾಗಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ರವಿವಾರದಂದು ತಾಲೂಕಿನ ಸಾಸಾಬಾಳ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಿಂದಗಿ ಹಮ್ಮಿಕೊಂಡಿರುವ ಸಾಸಬಾಳ ಎಲ್. ಟಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಅಂದಾಜು ರೂ. ೪೨ ಲಕ್ಷ ರೂಪಾಯಿಗಳಲ್ಲಿ ಮನೆ ಮನೆಗೆ ನೀರು ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು,ಈ ಕ್ಷೇತ್ರದ ಜನತೆಯ ಪರವಾಗಿ ನಾನು ಇದ್ದೇನೆ. ಚುನಾವಣೆ ಮಾಡಿದವರು ನನ್ನವರು, ಮಾಡದಿದ್ದವರೂ ನನ್ನವರು, ನಾನು ಈ ಕ್ಷೇತ್ರದ ಪ್ರತಿನಿಧಿಯಾಗಿ ಎಲ್ಲರ ಏಳಿಗೆಗೆ ಸದಾ ಸಿದ್ದನಾಗಿದ್ದೇನೆ. ತಮ್ಮ ನೂರೆಂಟು ಕಾರ್ಯಗಳಿಗೆ ನನ್ನನ್ನ ಮುಕ್ತ ಭಾವದಿಂದ ಸಂಪರ್ಕಿಸಿ ಎಲ್ಲರ ಸಮಸ್ಯೆಗಳಿಗೂ ನಾನು ಸ್ಪಂದಿಸುವ ಸಾಮಾನ್ಯ ಶಾಸಕನಿದ್ದಂತೆ. ಮೂಲಭೂತ ಸೌಕರ್ಯಗಳಲ್ಲಿ ಕುಡಿಯುವ ನೀರು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಗ್ರಾಮದ ಪ್ರತಿ ಮನೆಮನೆಗಳಿಗೂ ನೀರನ್ನ ಹರಿಸುವ ಕಾರ್ಯ ಶ್ರೇಷ್ಠವಾಗಿರುವ ಕಾರ್ಯವಾಗಿದೆ. ಈ ಕಾಮಗಾರಿ ವ್ಯವಸ್ಥಿತವಾಗಿ ನಡೆದು ಗ್ರಾಮಸ್ಥರ ಪಾಲಿಗೆ ಉತ್ತಮ ರೀತಿಯಲ್ಲಿ ನೆರವಾಗಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ೧೦೮ ಯೋಜನೆಗಳ ಕನಸುಗಳನ್ನು ಕಂಡಿದ್ದೇನೆ ಆ ನನ್ನ ಎಲ್ಲ ಕನಸುಗಳು ನಾನು ಈಡೇರಿಕೆ ಮಾಡೇ ಮಾಡುತ್ತೇನೆ. ಜನತೆ ನಮ್ಮ ಅಭಿವೃದ್ಧಿಪರ ಕಾರ್ಯಗಳಿಗೆ ಸದಾ ಮಾರ್ಗದರ್ಶನ, ಸರಕಾರ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸೈಫನ ಕೊರವಾರ, ಧರ್ಮರಾಯ ಒಡೆಯರ, ಮಲ್ಲಣ್ಣ ಸಾಲಿ, ಬಸವರಾಜ ಮಾರಲಭಾವಿ. ಧರ್ಮಣ್ಣ ರಾಠೋಡ, ಬಸವರಾಜ ತೆಲ್ಲೂರ, ಬಾಬುಗೌಡ ಬಿರಾದಾರ, ನಿಂಗನಗೌಡ ಡವಳರ, ನಾಡಗೌಡ ಪೊಲೀಸ, ಮುದ್ದೇಗೌಡ ಬಿರಾದಾರ, ಶಿವು ಕುದರಗೊಂಡ, ಶರಣಗೌಡ ಬಿರಾದಾರ ಸೇರಿದಂತೆ ರಾಜಕೀಯ ಮುಖಂಡರು, ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸದ್ಯಸರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

