ಬಸವನಬಾಗೇವಾಡಿ: ನಾವು ಕಳೆದ ೨೦ ವರ್ಷಗಳಿಂದ ರಾಜ್ಯದ ವಿವಿಧೆಡೆ ನಗೆ ಸಮ್ಮೇಳನ ಮಾಡುತ್ತಾ ಬರುತ್ತಿದ್ದೇವೆ. ಈಚೆಗೆ ನಗೆ ಸಮ್ಮೇಳನ ಆಯೋಜನೆ ಮಾಡಲು ಯಾವ ಜಿಲ್ಲೆಯವರು ಅಷ್ಟಾಗಿ ಮುಂದೆ ಬರುತ್ತಿಲ್ಲ. ಇದರಿಂದಾಗಿ ಮುಂದಿನ ರಾಜ್ಯ ಬಜೆಟ್ನಲ್ಲಿ ನಗೆ ಸಮ್ಮೇಳನಕ್ಕೆ ರಾಜ್ಯ ಸರ್ಕಾರದಿಂದ ಕನಿಷ್ಠ ಒಂದು ಕೋಟಿ ರೂಪಾಯಿಯನ್ನು ಅನುದಾನ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ನಗೆ ಭಾಗ್ಯವನ್ನು ನೀಡುವಂತೆ ಮನವಿ ಮಾಡಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ನಗೆಯೋಗ ಕೂಟಗಳ ಒಕ್ಕೂಟದ ಅಧ್ಯಕ್ಷ ಪನ್ನಗ ಶಯನಂ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ನಗೆಯೋಗ ಕೂಟಗಳ ಒಕ್ಕೂಟ ಹಾಗೂ ಸ್ಥಳೀಯ ಬಸವೇಶ್ವರ ನಗೆಯೋಗ ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ೨೦ ನೇ ನಗೆ ಸಮ್ಮೇಳನದ ಎರಡನೇ ದಿನ ಭಾನುವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರಂಭದಲ್ಲಿ ನಗೆ ಸಮ್ಮೇಳನ ಆಯೋಜನೆ ಮಾಡುವಾಗ ಸಾಕಷ್ಟು ಪ್ರತಿನಿಧಿಗಳು ಶುಲ್ಕ ತುಂಬಿ ಬರುತ್ತಿದ್ದರು. ಈಚೆಗೆ ಸಮ್ಮೇಳನ ಆಯೋಜನೆ ಮಾಡಲು ಹೆಚ್ಚಾಗಿ ಮುಂದೆ ಬರುತ್ತಿಲ್ಲ. ರಾಜ್ಯ ಸರ್ಕಾರ ನಗೆ ಸಮ್ಮೇಳನಕ್ಕೆ ಅನುದಾನ ನೀಡಿದರೆ ಯಾವುದೇ ಪ್ರತಿನಿಧಿಗಳಿಂದ ಶುಲ್ಕ ಪಡೆಯದೇ ಸಮ್ಮೇಳನವನ್ನು ಆಯೋಜನೆ ಮಾಡಲು ಸಾಧ್ಯ. ಜೀವನದಲ್ಲಿ ನಗೆ ಬಹುಮೌಲ್ಯಯುತವಾಗಿದೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯನವರು ಅನೇಕ ಭಾಗ್ಯಗಳನ್ನು ನಾಡಿನ ಜನತೆಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಾಡಿನ ಜನತೆಗೆ ನಗೆ ಭಾಗ್ಯವನ್ನು ನೀಡಲು ನಮ್ಮ ನಗೆಕೂಟದಿಂದ ಮನವಿ ಸಲ್ಲಿಸಿ ಪ್ರತಿ ವರ್ಷ ನಗೆ ಸಮ್ಮೇಳನಕ್ಕೆ ಬಜೆಟ್ ನಲ್ಲಿ ಅನುದಾನ ನೀಡುವಂತೆ ರಾಜ್ಯದ ಎಲ್ಲ ನಗೆಕೂಟಗಳ ಸದಸ್ಯರ ಸಹಿಯೊಂದಿಗೆ ಮುಂದಿನ ದಿನಗಳಲ್ಲಿ ಮನವಿ ಸಲ್ಲಿಸುವುದಾಗಿ ಹೇಳಿದರು.
ಜಾನಪದ ಸಾಹಿತಿ, ಸಿಪಿಐ ಜ್ಯೋತಿರ್ಲಿಂಗ ಹೊನ್ನಾಕಟ್ಟಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ನಗೆ ಬಹಳ ಕಡಿಮೆಯಾಗುತ್ತಿದೆ. ಅಲ್ಲದೇ ಸಂಬಂಧಗಳು ಸಹ ಕಡಿಮೆಯಾಗುತ್ತಿರುವುದು ವಿಷಾದಕರ. ಹಾಸ್ಯ ಎಲ್ಲೆಡೆ ಇರುತ್ತದೆ ಅನ್ನುವದಕ್ಕೆ ಜಗಳದಲ್ಲಿಯೂ ಹಾಸ್ಯ ಇದೆ ಎನ್ನುವುದಕ್ಕೆ ಗಂಡ-ಹೆಂಡತಿ ಪ್ರಸಂಗ ಹೇಳುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದ ಅವರು, ಜನಪದವು ಸಾಹಿತ್ಯಕ್ಕೆ ತಾಯಿ ಬೇರು. ಇಂತಹ ಜನಪದ ಸಾಹಿತ್ಯದಲ್ಲಿ ಜೀವನದ ಸಂಸ್ಕಾರವಿದೆ. ಜನಪದ ಸಾಹಿತ್ಯ ಎಂದಿಗೂ ಹಳಸುವುದಿಲ್ಲ. ಜನಪದ ಸಾಹಿತ್ಯದ ಅನೇಕ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸಭಿಕರನ್ನು ಮನಸೂರೆಗೊಂಡರು.
ವಿಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಜಗತ್ತಿನ ಯಾವ ಪ್ರಾಣಿಗಳಿಗೂ ಭಗವಂತ ನಗೆ ಎಂಬುವದನ್ನು ಕೊಟ್ಟಿಲ್ಲ. ಮನುಷ್ಯನಿಗೆ ಮಾತ್ರ ನಗೆಯನ್ನು ಭಗವಂತ ನೀಡಿದ್ದಾರೆ. ಪ್ರತಿಯೊಬ್ಬರು ಜೀವನದಲ್ಲಿ ನಗುತ್ತಾ ಉತ್ತಮ ಜೀವನ ಸಾಗಿಸಬೇಕೆಂದರು.
ನಗು ಮಹಾ ಮೆರವಣಿಗೆಗೆ ಚಾಲನೆ ನೀಡಿದ್ದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ
ಸಾನಿಧ್ಯ ವಹಿಸಿದ್ದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ
ವೇದಿಕೆಯಲ್ಲಿ ಸಿದ್ದಲಿಂಗ ಸ್ವಾಮೀಜಿ, ರಾಜ್ಯ ನಗೆಯೋಗ ಕೂಟದ ಅಧ್ಯಕ್ಷ ಪ್ರೊ.ಪಿ.ಸದಾಶಿವ, ಸಮ್ಮೇಳನದ ಅಧ್ಯಕ್ಷ ಶಿವಯ್ಯ ಹಿರೇಮಠ, ಮುಖಂಡರಾದ ಬಿ.ಕೆ.ಕಲ್ಲೂರ, ಬಸವರಾಜ ಹಾರಿವಾಳ, ಸಂಗಮೇಶ ಓಲೇಕಾರ, ಬಸಣ್ಣ ದೇಸಾಯಿ, ಅಶೋಕ ಹಾರಿವಾಳ, ಸುಭಾಸ ಚಕ್ರಮನಿ, ಅಶೋಕ ಗುಡದಿನ್ನಿ, ಶಿವಾನಂದ ಮಂಗಾನವರ, ವಿವಿಧ ನಗೆಕೂಟದ ಸದಸ್ಯರಾದ ಕುಸುಮಾ, ನಳಿನಾಕ್ಷಿ, ಸುಮಾ ಮೂಲಿಮನಿ, ಪಾರ್ವತಿ ಶೆಟ್ಟಿ ಇತರರು ಇದ್ದರು. ಬಿ.ವ್ಹಿ.ಚಕ್ರಮನಿ ಸ್ವಾಗತಿಸಿದರು. ಅಶೋಕ ಹಂಚಲಿ, ಎಸ್.ಬಿ.ದಳವಾಯಿ, ಬಿ.ಬಿ.ಚಿಂಚೋಳಿ ನಿರೂಪಿಸಿದರು. ಬಸವರಾಜ ಚಿಂಚೋಳಿ ವಂದಿಸಿದರು. ನಂತರ ವಿವಿಧ ನಗೆಯೋಗ ಕೂಟದ ಸದಸ್ಯರಿಂದ ಮನರಂಜನಾ ಕಾರ್ಯಕ್ರಮ ಜರುಗಿದವು.
Subscribe to Updates
Get the latest creative news from FooBar about art, design and business.
Related Posts
Add A Comment

