Author: editor.udayarashmi@gmail.com

ಬ್ರಹ್ಮದೇವನಮಡು: ಸಿಂದಗಿ ತಾಲೂಕು ಹೊನ್ನಳ್ಳಿ ಗ್ರಾಮದ ಕೆರೆಗೆ ಶುಕ್ರವಾರ ಸಿಂದಗಿ ತಾಪಂ ಇಒ ರಾಮು ಅಗ್ನಿ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ನಂತರ ಮಾತನಾಡಿ, ಕೆರೆಯಲ್ಲಿರುವ ಮೊಸಳೆ ಸೆರೆ ಹಿಡಿಯಲು ಕೆರೆ ಸುತ್ತಲಿನ ಪ್ರದೇಶಕ್ಕೆ ಸಿಸಿ ಟೀವಿ, ಜಾಳಗಿ ಅಳವಡಿಸುವಂತೆ ಸ್ಥಳದಲ್ಲಿದ್ದ ಗ್ರಾಪಂ ಪಿಡಿಒ ನಾಯ್ಕೋಡಿ ಅವರಿಗೆ ಸೂಚಿಸಿ, ತಾಲೂಕು ಅರಣ್ಶಾಧಿಕಾರಿಗಳಿಗೆ ಫೋನಾಯಿಸಿ ಮಾತನಾಡಿ, ಮೊಸಳೆಗೆ ಬಲೆ ಹಾಕಿ ಸೆರೆ ಹಿಡಿಯುವಂತೆ ತಿಳಿಸಿದರು.ಈ ವೇಳೆ ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ, ಗ್ರಾಪಂ ಅಧ್ಶಕ್ಷರ ಪ್ರತಿನಿಧಿ ಹಣಮಂತ್ರಾಯಗೌಡ ಬಿರಾದಾರ, ಸಾಹೇಬಪಟೇಲ ಮುರಡಿ, ದೇವಿಂದ್ರ ತೊನಶ್ಶಾಳ, ಸಂಗನಗೌಡ ಪಾಟೀಲ, ಭೀಮನಗೌಡ ಹೆಬ್ಬಾಳ, ಮಲ್ಲು ಕೆಂಭಾವಿ, ಹಣಮಂತ ಯಂಟಮಾನ, ಇಶ್ಮಾಯಿಲ್ ತಂಗಡಗಿ, ಮಲ್ಲು ಭಜಂತ್ರಿ, ಉಷೇನ ಯಂಕಂಚಿ, ಬಸನಗೌಡ ಪಾಟೀಲ, ದಿನೇಶ ಕಡಕೋಳ,ಅಂಬ್ರಿಶ ಪಾಟೀಲ, ಸುರೇಶ ತಳವಾರ ಇತರರಿದ್ದರು.

Read More

ವಿಜಯಪುರ: ವಿಶ್ವಗುರು ಬಸವಣ್ಣ ರಾಜ್ಯದ ಸಾಂಸ್ಕೃತಿಕನಾಯಕ ಎಂದು ಸರಕಾರ ಘೋಷಣೆ ಮಾಡಿದ್ದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ಸಾಮಾಜಿಕ ಸಮಾನತೆಯ ಹರಿಕಾರ ಕ್ರಾಂತಿಯೋಗಿ ಬಸವಣ್ಣ ಅನುಯಾಯಿಗಳು, ಪೂಜ್ಯಶ್ರೀಗಳು ಸರಕಾರದ ಈ ಸೂಕ್ತ ನಿರ್ಧಾರದಿಂದ ಅತ್ಯಂತ ಸಂತುಷ್ಟರಾಗಿದ್ದಾರೆ.ಎಲ್ಲಾ ಧರ್ಮದ ತತ್ವ ಸಿದ್ಧಾಂತ ಬಸವಣ್ಣನ ವಚನ ಸಾಹಿತ್ಯದಲ್ಲಿ ಕಾಣುತ್ತೇವೆ. ವಿಶ್ವವೇ ಅನುಕರಣೆ ಮಾಡುವ ಬಸವಣ್ಣನವರ ವಚನ ಸಾಹಿತ್ಯದ ವಿವಿಧ ಭಾಷೆಗಳಲ್ಲಿ ಅನುವಾದ ಗೊಂಡಿವೆ ಹಾಗೂ ರಾಜ್ಯದ ಎಲ್ಲಾ ತರಗತಿಯ ಪಠ್ಯ ಪುಸ್ತಕದಲ್ಲಿ ವಚನ ಸಾಹಿತ್ಯದ ಪಾಠಗಳು ಅಳವಡಿಸಬೇಕೆಂದು ಹಾಸಿಂಪೀರ ವಾಲಿಕಾರ ಸರ್ಕಾರವನ್ನು ಒತ್ತಾಯಿಸಿದರು.

Read More

ತಿಕೋಟಾ: ತಾಲ್ಲೂಕಿನ ಘೋಣಸಗಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಾಲ್ಲೂಕ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಧಿಡೀರ್ ಭೇಟಿ ನೀಡಿ ನರೇಗಾ ಯೋಜನೆಯಡಿ ಮಂಜೂರಾದ ಹೈಟೆಕ್ ಶೌಚಾಲಯದ ಅಪೂರ್ಣ ಕಾಮಗಾರಿ ಶುಕ್ರವಾರ ವೀಕ್ಷಣೆ ಮಾಡಿ ಬೇಗನೆ ಕಾಮಗಾರಿ ಮುಗಿಸುವಂತೆ ಪಿಡಿಓ ಅವರಿಗೆ ಸೂಚಿಸಿದರು.ಎರಡು ವರ್ಷದ ಹಿಂದೆ ಮಂಜೂರಾದ ಈ ಹೈಟೆಕ್ ಶೌಚಾಲಯದ ಕಾಮಗಾರಿ ಇನ್ನೂ ಮುಗಿದಿಲ್ಲ. ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಶೌಚಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿದೆ ಬೇಗ ಕಾಮಗಾರಿ ಮುಗಿಸಿ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಿ ಕೊಡಬೇಕು ಎಂದು ಹಲವು ಬಾರಿ ವಿನಂತಿಸಿದರೂ ಕಾಮಗಾರಿ ಮಾಡಲು ವಿಳಂಬವಾಗಿದೆ. ಈಗಲಾದರೂ ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ಅನೂಕೂಲ ಮಾಡಿ ಕೊಡಬೇಕು ಎಂದು ಇಓ ಐನಾಪುರ ಅವರಿಗೆ ಶಾಲಾ ಮುಖ್ಯೋಪಾಧ್ಯಾಯ ಪಿ.ಎಸ್.ಗದ್ಯಾಳ ವಿನಂತಿಸಿದರು.ವರ್ಗಕೋಣೆಗೆ ಭೇಟಿ: ಶಾಲಾ ವರ್ಗಕೋಣೆಗೆ ಭೇಟಿ ನೀಡಿದ ಅವರು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವ ತಯಾರಿ ಮಾಡುತ್ತಿರುವದನ್ನು ವೀಕ್ಷಿಸಿದರು. ವರ್ಗಕೋಣೆಯಲ್ಲಿ ಪ್ರೋಜೆಕ್ಟರ್ ಬಳಸಿ ಮಕ್ಕಳು…

Read More

ವಿಜಯಪುರ: ಯುವಕರು ಸ್ವಯಂ ಉದ್ಯೋಗದ ಮೂಲಕ ಸಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗದಾತರಾಗಿ ತಾವೇ ಹೊರಹೊಮ್ಮಬೇಕು. ಅಂದಾಗ ಮಾತ್ರ ಯುವಸಮೂಹ ಯಶಸ್ವಿಯಾಗಲು ಸಾಧ್ಯ ಎಂದು ಸಮಾಜ ಕಲ್ಯಾಣ ಉಪನಿರ್ದೇಶಕ ಎಸ್. ಎಂ. ಪಾಟೀಲ ಹೇಳಿದರು.ಬಬಲೇಶ್ವರ ಪಟ್ಟಣದಲ್ಲಿ ಸಚಿನ ಗಿಫ್ಟ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರವು ಉದ್ದಿಮೆ ಶೀಲಾ ಕೌಶಲ್ಯ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಯುವಕರು ಜೀವನದಲ್ಲಿ ಸಾಧನೆಯನ್ನು ಮಾಡಬೇಕು. ಅಂದಾಗ ಮಾತ್ರ ಭಾರತವು ಅಭಿವೃದ್ಧಿಶೀಲವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.ಸಮಾಜ ಕಲ್ಯಾಣ ಅಧಿಕಾರಿಗಳಾದಂತ ಸದಾನಂದ ಬಡಿಗೇರ ವಿಶ್ವದಲ್ಲಿ ಅತಿ ಹೆಚ್ಚು ಯುವ ಸಮೂಹವನ್ನು ಹೊಂದಿರುವ ಭಾರತವು ವೃತ್ತಿಪರ ಕೌಶಲ್ಯವನ್ನು ಹೊಂದುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು.ಸ್ವಯಂ ಉದ್ಯೋಗದ ಮೂಲಕ ಯುವಕರು ತಮ್ಮ ಸಾವಲಂಬನೆಯನ್ನು ಕಂಡಕೊಂಡು ತಂದೆ ತಾಯಿಗೆ ಹೊರಿಯಾಗದೆ ತಮ್ಮ ಬದುಕನ್ನು ತಾವು ರೂಪಿಸಿಕೊಳ್ಳಲು ಸ್ವಯಂ ಉದ್ಯೋಗ ಒಂದೇ ದಾರಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಂತಾಬಾಯಿ ಹಂಚಿನಾಳ ವಸತಿ ನಿಲಯ ಪಾಲಕರು, ಎಸ್ ಎಲ್ ನಾಟಿಕರ ವಸತಿ ನಿಲಯ…

Read More

ಢವಳಗಿ: ನಮ್ಮೂರ ಪ್ರೌಢಶಾಲೆ ಅಭಿವೃದ್ಧಿಗಾಗಿ ಒಂದು ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿ ಕುಡಿವ ನೀರು ಹಾಗೂ ಇನ್ನೀತರ ಮೂಲಸೌಕರ‍್ಯ ಕಲ್ಪಿಸಿಕೊಡುವಲ್ಲಿ ಶ್ರಮಿಸುತ್ತೇನೆ ಎಂದು ತಾಲ್ಲೂಕಿನ ರೂಢಗಿ ಸರಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ನೂತನ ಅಧ್ಯಕ್ಷ ಸಂಗಮೇಶ ಎನ್.ಹಾರಿವಾಳ ಹೇಳಿದರು.ತಾಲ್ಲೂಕಿನ ರೂಢಗಿ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ನೂತನ ಎಸ್.ಡಿ.ಎಂ.ಸಿ ರಚನೆ ಪ್ರಕ್ರಿಯೆ ಬಳಿಕ ಅವರು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು.ರೂಢಗಿ ಸರಕಾರಿ ಪ್ರೌಢಶಾಲೆಗೆ ಬರಲು ಸರಿಯಾದ ರಸ್ತೆ ಇಲ್ಲ. ಈ ಶಾಲೆಯನ್ನು ಹಾಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಂಜೂರಾತಿ ಮಾಡಿಸಿಕೊಟ್ಟಿದ್ದರು. ಈ ಭಾಗದಲ್ಲಿ ಪಿಯು ಕಾಲೇಜು ಆರಂಭಕ್ಕೆ ಬೇಡಿಕೆ ಇದ್ದು, ಅದರ ಬಗ್ಗೆ ಗ್ರಾಮಸ್ಥರ ಜೊತೆಗೂಡಿ ಸಂಬಂಧಿಸಿದ ಶಾಸಕರು, ಸಚಿವರು,ಸ ರಕಾರದ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ ಸೂಳಿಭಾವಿ, ಮುಖಂಡ ಶ್ರೀಶೈಲ್ ದೊಡಮನಿ ಮಾತನಾಡಿದರು.ಶಿಕ್ಷಣ ಸಂಯೋಜಕ ಎಚ್.ಎ.ಮೇಟಿ, ಮುಖಂಡರಾದ ಎಸ್.ಪಿ.ಸೇವಾಲಾಲ್, ಮುಖ್ಯಗುರು ಬಿ.ಎಚ್.ನಾಯಕರ ಮಾತನಾಡಿದರು.ಗ್ರಾ.ಪಂ ಅಧ್ಯಕ್ಷ ಬಸವರಾಜ ಬೆಲ್ಲದ, ಗ್ರಾಮಸ್ಥರಾದ ಬಸವರಾಜ ದೊಡಮನಿ, ಶಿವರಾಜ ಲಮಾಣಿ,…

Read More

ಸಿಂದಗಿ: ಪರೀಕ್ಷೆಗಳು ಭಯವಲ್ಲ ಅವುಗಳು ನಮ್ಮ ಜ್ಞಾನ, ಸೃಜನಶೀಲತೆಯನ್ನು ಅಳೆಯುವ ಮಾಪನಗಳು ಅಷ್ಟೇ. ಪರೀಕ್ಷೆಗಳನ್ನು ಭಯದಿಂದ ಕಾಣದೆ ಅವುಗಳನ್ನು ಸವಾಲಾಗಿ ಸ್ವೀಕರಿಬೇಕು ಎಂದು ಹುಮನಾಬಾದಿನ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕ ಸಿ.ಎಸ್.ಆನಂದ ಹೇಳಿದರು.ಅವರು ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಆಂಗ್ಲಭಾಷಾ ವಿಷಯದ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಗುರಿ ತಲುಪುವ ಉದ್ದೇಶ ಹೊಂದದೆ ಉನ್ನತ ಸಾಧನೆ ಮಾಡುವ ಗುರಿಯನ್ನು ಹೊತ್ತುಕೊಂಡಿರಬೇಕು. ಯುವಶಕ್ತಿ ಈ ದೇಶದ ಶಕ್ತಿ ಈ ದೇಶದ ಅವಿಭಾಜ್ಯ ಅಂಗ. ನಮ್ಮನ್ನು ಹೆತ್ತವರು ನಮ್ಮ ಮೇಲೆ ಅಗಾದ ಕನಸುಗಳನ್ನು ಇಟ್ಟಿಕೊಂಡು ಬದುಕುತ್ತಿದ್ದಾರೆ ಅವರ ಆಸೆಗೆ ನಾವು ನಿರಾಸೆ ಮಾಡದೆ ನಿರಂತರ ಪ್ರಯತ್ನದ ಅಧ್ಯಯನಶೀಲತೆ ನಮ್ಮ ರಕ್ತದಲ್ಲಿ ಮೂಡಬೇಕು ಆಗ ನಾವು ಸಾಧಕರ ಸಾಲಿಗೆ ಸೇರುತ್ತೇವೆ ಎಂದರು.ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಅವರು ಮಾತನಾಡಿದರು.ಈ ವೇಳೆ ಆಂಗ್ಲಭಾಷಾ ಉಪನ್ಯಾಸಕ ಎಸ್.ಎ.ಪಾಟೀಲ, ಎ.ಬಿ.ಪಾಟೀಲ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ…

Read More

ಸಿಂದಗಿ: ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ ೩ನೇ ಪುಣ್ಯ ಸ್ಮರಣೆಯ ನಿಮಿತ್ಯ ಪಟ್ಟಣದ ಮನಗೂಳಿ ಆಸ್ಪತ್ರೆ ಉಚಿತ ಬೃಹತ ಆರೋಗ್ಯ ತಪಾಸಣಾ ಶಿಬಿರವನ್ನು ಜ.೨೧ ರಂದು ರವಿವಾರ ಮುಂಜಾನೆ ೧೦ ಗಂಟೆಯಿಂದ ಮಧ್ಯಾನ್ಹ ೩ ಗಂಟೆಯ ವರೆಗೆ ಮನಗೂಳಿ ಆಸ್ಪತ್ರೆಯಲ್ಲಿಯೆ ಆಯೋಜಿಸಲಾಗಿದೆ ಎಂದು ಮನಗೂಳಿ ಆಸ್ಪತ್ರೆಯ ಡಾ.ಶಾಂತವೀರ ಮನಗೂಳಿ ಹೇಳಿದರು.ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕಾ ಮೂಲಕ ತಿಳಿಸಿದ ಅವರು, ದಿ.ಎಮ್.ಸಿ.ಮನಗೂಳಿ ಅವರ ಸ್ಮರಣೆಗಾಗಿ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಶಿಬಿರದಲ್ಲಿ ತಜ್ಞ ವೈದ್ಯರು ಆಗಮಿಸುವರು. ವಿವಿಧ ರೋಗಗಳಾದ ಹೃದಯ ಸಂಬಂಧಿಸಿದ ಕಾಯಿಲೆ, ನರರೋಗ, ಕ್ಯಾನ್ಸರ್, ಸ್ತ್ರೀರೋಗ, ಮೂತ್ರಪಿಂಡದಲ್ಲಿ ಕಲ್ಲು, ಚರ್ಮರೋಗ, ಇಸಿಜಿ, ರಕ್ತತಪಾಷಣೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ರೋಗಗಳ ತಪಾಸಣಾ ಕಾರ್ಯ ನಡೆಯುವದು.ಶಿಬಿರದಲ್ಲಿ ಡಾ.ಶಾಂತವೀರ ಮನಗೂಳಿ, ಡಾ.ಸಂಧ್ಯಾ ಮನಗೂಳಿ, ಡಾ.ಕುಶಾಲ ತಾರಾಪೂರ, ಡಾ.ವಿಜಯಲಕ್ಷ್ಮಿ ತಾರಾಪೂರ, ಡಾ.ಮಲ್ಲಪ್ಪ ಹುಗ್ಗಿ, ಡಾ.ಗೌತಮ ವಗ್ಗರ, ಡಾ.ಸುನೀಲ ಸಜ್ಜನ,…

Read More

ಸಿಂದಗಿ: ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಮೋಬೈಲ್ ಬಳಕೆ ಹೆಚ್ಚಾಗಿ ಸಾಮಾಜಿಕ ನಾಟಕಗಳು, ಸಂಗೀತ, ಪುರಾಣ ಪ್ರವಚನಗಳು, ನಶಿಸಿ ಹೋಗುತ್ತಿವೆ ಎಂದು ಬಿಜೆಪಿ ಓಬಿಸಿ ತಾಲೂಕಾಧ್ಯಕ್ಷ ರವಿಕಾಂತ ನಾಯ್ಕೋಡಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಸಮೀಪವಿರುವ ಬಗಲೂರ ಗ್ರಾಮದಲ್ಲಿ ಶ್ರೀ ಸೋಮಲಿಂಗೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ರೈತನ ಹೆಸರು ನಾಡಿಗೆ ಉಸಿರು ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ರಂಗಭೂಮಿ ಉಳಿವಿಗಾಗಿ ಸಾರ್ವಜನಿಕರು ಸಹಕಾರ ನೀಡಬೇಕು. ನಮ್ಮ ಸಂಸ್ಕೃತಿ, ಕಲೆ, ಸಾಮಾಜಿಕ ಸಂದೇಶಗಳನ್ನು ಸಾರುವ ನಾಟಕಗಳು, ಜನರ ಮನಸ್ಸನ್ನು ಸೆಳೆಯುತ್ತಿವೆ. ನಾಟಕ ಮತ್ತು ಸಂಗೀತಕ್ಕೆ ದಣಿದ ವ್ಯಕ್ತಿಗೆ ನೆಮ್ಮದಿ ಕೊಡುವ ಸಾಮರ್ಥ್ಯವಿದೆ ಎಂದರು.ಈ ವೇಳೆ ದಿವ್ಯ ಸಾನಿಧ್ಯ ವಹಿಸಿದ ಗುರುಲಿಂಗಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.ಶಿವು ಮಾಗಣಗೇರಿ, ರುದ್ರಗೌಡ ಕಿರಣಗಿ, ಮಡಿವಾಳ ಹೂನ್ನಳಿ, ಅಶೋಕ ನಾರಾಯಣಪೂರ, ರಾಜು ಸಾಂಬಾ, ರಾಜುಗೌಡ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More

ಸಿಂದಗಿ: ಪಟ್ಟಣದ ಆರಾಧ್ಯ ದೇವತೆ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು.ಬೆಳಿಗ್ಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ಭಕ್ತ ಸಮೂಹದೊಂದಿಗೆ ದೇವಸ್ಥಾನದಿಂದ ನಂದಿಕೋಲ ಹಾಗೂ ಸಕಲವಾದ್ಯಗಳೊಂದಿಗೆ ಪ್ರಾರಂಭವಾಯಿತು. ಶ್ರೀ ಸಂಗಮೇಶ್ವರ ಮತ್ತು ಭ್ರಮರಾಂಭಿಕಾ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವದ ಮೆರವಣಿಗೆ ಮತ್ತು ರಥೋತ್ಸವ ನೀಲಗಂಗಾದೇವಸ್ಥಾನದ ಮಾರ್ಗವಾಗಿ ಹಳೆ ಬಜಾರದಲ್ಲಿನ ಶ್ರೀಬಸವೇಶ್ವರ ದೇವಸ್ಥಾನದವರೆಗೆ ನಡೆಯಿತು. ದೇವಸ್ಥಾನದಲ್ಲಿ ಮತ್ತು ಮಾರ್ಗ ಮಧ್ಯ ನೀಲಗಂಗಾ ದೇವಸ್ಥಾನ ಹಾಗೂ ಹಳೆ ಬಜಾರದ ಮಧ್ಯದಲ್ಲಿ ವಿಶ್ವನಾಥ ಬಡಿಗೇರ ಹಾಗೂ ಸಂಗಡಿಗರು ಪುರವಂತರ ಸೇವೆ ಸಲ್ಲಿಸಿದರು. ಪುರವಂತರ ಸೇವೆಯೊಂದಿಗೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಮಾರ್ಗದುದ್ದಕ್ಕೂ ಭಕ್ತಾಧಿಗಳು ಉತ್ಸವ ಪಲ್ಲಕ್ಕಿಯಲ್ಲಿರುವ ಶ್ರೀ ಸಂಗಮೇಶ್ವರ ಮತ್ತು ಭ್ರಮರಾಂಭಿಕಾ ಉತ್ಸವ ಮೂರ್ತಿಗಳಿಗೆ ಆರತಿ ಮತ್ತು ಪೂಜೆ ಸಲ್ಲಿಸೂವ ಮೂಲಕ ದೇವರ ಕೃಪೆಗೆ ಪಾತ್ರರಾದರು.ಸ್ಥಳೀಯ ಸಾರಂಗಮಠ-ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಭೀಮಾಶಂಕರಮಠದ ಸದ್ಗುರು ದತ್ತಪ್ಪಯ್ಯ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.ಪಂಡಿತ ಕುಲಕರ್ಣಿ, ವಿಜಯ ಕುಲಕರ್ಣಿ, ನೀಲಗಂಗಾದೇವಿ ದೇವಸ್ಥಾನದ ಧರ್ಮದರ್ಶಿ ಸುನೀಲ ದೇವರಮನಿ, ಶ್ರೀಶೈಲ ನಂದಿಕೋಲ,…

Read More

ವಿಜಯಪುರ: ಶೈಕ್ಷಣಿಕ ಸಂಸ್ಥೆಗಳು ಉನ್ನತ ಮಟ್ಟದಲ್ಲಿ ಬೆಳೆಯಲು ಆಗಾಗ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಮೌಲ್ಯಮಾಪನ ಕಾರ್ಯವೈಖರಿಯನ್ನು ವಿಶ್ಲೇಷಿಸುವುದು ಅವಶ್ಯವಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಇಂದು ಶುಕ್ರವಾರ ನಡೆದ ಬಿ.ಎಲ್.ಡಿ.ಇ ಅಂಗ ಸಂಸ್ಥೆಗಳ ವಾರ್ಷಿಕ ಆಡಳಿತ ಮತ್ತು ಶೈಕ್ಷಣಿಕ ಮೌಲ್ಯಮಾಪನ ಮಂಥನ-3 ಉದ್ಘಾಟಿಸಿ ಅವರು ಮಾತನಾಡಿದರು.ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಬಿ.ಎಲ್.ಡಿ.ಇ ಸಂಸ್ಥೆ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್ಒಪಿ) ಜಾರಿಗೆ ತಂದಿದೆ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು.ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ.ಕೊಟ್ನಾಳ ಮಾತನಾಡಿ, ಬಿ.ಎಲ್.ಡಿ.ಇ ಅಂಗ ಸಂಸ್ಥೆಗಳಲ್ಲಿ ಎಸ್ಒಪಿ ಕಾರ್ಯವೈಖರಿಯ ಆಳವಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ಶಿಕ್ಷಣದ ಧ್ಯೇಯೋದ್ದೇಶಗಳು, ಸಂಸ್ಥೆ ಹೊಂದಿರುವ ದೃಷ್ಟಿಕೋನ, ಶೈಕ್ಷಣಿಕ ಗುಣಮಟ್ಟ ಹಾಗೂ ಆಡಳಿತಾತ್ಮಕ ಸುಧಾರಣೆಯನ್ನು ಅವಲೋಕನ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.ಎ.ವಿ.ಎಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ…

Read More