ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬರ ವೀಕ್ಷಣೆಯ ಅಂಗವಾಗಿ ದಿ:೩೦ ರಂದು(ಇಂದು) ಬಿಜೆಪಿ ನಿಯೋಗ ಕಡ್ಲೇವಾಡ ಪಿಸಿಎಚ್ ಕೆರೆ ಭೇಟಿ ನೀಡಲಿದೆ.
ಗುರುವಾರ (ಇಂದು) ಮಧ್ಯಾಹ್ನ ೧೨ಕ್ಕೆ ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಕೆರೆಗೆ ದೇವರಹಿಪ್ಪರಗಿ ಮತಕ್ಷೇತ್ರದ ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ನೇತೃತ್ವದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಭೇಟಿ ನೀಡಿ ವೀಕ್ಷಣೆ ಮಾಡಲಿದ್ದಾರೆ ಎಂದು ಪಕ್ಷದ ಜಿಲ್ಲಾ ಪ್ರಕಟಣೆ ತಿಳಿಸಿದೆ.

