Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 29, 2026

ಪರೀಕ್ಷಾ ನಿಯಮಗಳಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ

ನೂತನ ವ್ಯವಸ್ಥಾಪಕರಿಗೆ ಎಸ್‌ಸಿ-ಎಸ್‌ಟಿ ನೌಕರ ಸಂಘದಿಂದ ಸ್ವಾಗತ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಏ.೧೧ರಿಂದ ಯರನಾಳ ವಿರಕ್ತಮಠದ ಜಾತ್ರಾಮಹೋತ್ಸವ
(ರಾಜ್ಯ ) ಜಿಲ್ಲೆ

ಏ.೧೧ರಿಂದ ಯರನಾಳ ವಿರಕ್ತಮಠದ ಜಾತ್ರಾಮಹೋತ್ಸವ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಸವನಬಾಗೇವಾಡಿ: ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಯವರ ಜನ್ಮಸುವರ್ಣ ಮಹೋತ್ಸವ ಕಾರ್ಯಕ್ರಮದಂಗವಾಗಿ ಏ.೧೧ ರಿಂದ ೧೩ ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಏ.೧೧ ರಂದು ಸಂಜೆ ೭ ಗಂಟೆಗೆ ಹಮ್ಮಿಕೊಂಡಿರುವ ಜಾತ್ರಾಮಹೋತ್ಸವ ಉದ್ಘಾಟನೆ, ಧರ್ಮಸಭೆಯನ್ನು ವೀರಗೋಟದ ಸಿದ್ದಿಪುರುಷ ಅಡವಿಲಿಂಗ ಮಹಾರಾಜರು ಉದ್ಘಾಟಿಸುವರು. ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖ, ಜಿಡಗಾದ ಡಾ.ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವ ವಹಿಸುವರು. ಸಾನಿಧ್ಯವನ್ನು ಮಾರತಹಳ್ಳಿಯ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಡಾ.ಮಲೇಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ ಮನಗೂಳಿಯ ಡಾ.ಫಿರೋಜ ಇನಾಮದಾರ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಶಿವಾನಂದ ಪಾಟೀಲ, ಅತಿಥಿಗಳಾಗಿ ಶಾಸಕರಾದ ವಿಠ್ಠಲ ಕಟಕದೊಂಡ, ರಾಜುಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಡಾ.ಶಿವಾನಂದ ಕೆಲ್ಲೂರ, ಉಮೇಶ ಕಾರಜೋಳ, ಡಾ.ಸಿದ್ದಣ್ಣ ಉತ್ನಾಳ, ಶಾಂತಾಬಾಯಿ ಕೋಲಕಾರ, ಸುರೇಶ ಹಾರಿವಾಳ ಆಗಮಿಸುವರು.
ಏ.೧೨ ರಂದು ಸಂಜೆ ೭ ಗಂಟೆಗೆ ಗುರುಸಂಗನಬಸವ ಸ್ವಾಮೀಜಿಯವರ ಜನ್ಮ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಮ್ಮುಖವನ್ನು ಬಂಥನಾಳದ ಡಾ.ವೃಷಭಲಿಂಗ ಸ್ವಾಮೀಜಿ, ಕೊಡೆಂಗಲ್ದ ಡಾ.ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಸಾನಿಧ್ಯವನ್ನು ಇಲಕಲ್ಲದ ಗುರುಮಹಾಂತ ಸ್ವಾಮೀಜಿ ವಹಿಸುವರು. ಮುತ್ತಗಿಯ ವೀರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೀಳಗಿ. ಗುರುಪಾದೇಶ್ವರ ಶಿವಾಚಾರ್ಯ ಸ್ವಾಮೀಜಿ, ಆಲಮಟ್ಟಿಯ ರುದ್ರಮುನಿ ದೇವರು, ತಾಳಿಕೋಟಿಯ ಸಿದ್ದಲಿಂಗ ದೇವರು ಉಪಸ್ಥಿತಿ ಇರುವರು. ಮುಖ್ಯ ಅತಿಥಿಗಳಾಗಿ ಸಚಿವ ಎಂ.ಬಿ.ಪಾಟೀಲ, ಅತಿಥಿಗಳಾಗಿ ಶಾಸಕರಾದ ಸಿ.ಎಸ್.ನಾಡಗೌಡ, ಯಶವಂತರಾಯಗೌಡ ಪಾಟೀಲ, ಗಜಸೇನೆಯ ರಾಜ್ಯಾಧ್ಯಕ್ಷ ರಾಘವೇಂದ್ರ, ಈರಣ್ಣ ಪಟ್ಟಣಶೆಟ್ಟಿ ಆಗಮಿಸುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹನೀಯರಿಗೆ ಸುವರ್ಣ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಏ. ೧೩ ರಂದು ಬೆಳಗ್ಗೆ ೧೧ ಗಂಟೆಗೆ ಗುರು ಸಂಗನಬಸವ ಸ್ವಾಮೀಜಿಯವರ ಸಿಂಹಾಸನಾರೋಹಣ ಮತ್ತು ತಾಯಂದಿರ ಉಡಿತುಂಬುವ ಕಾರ್ಯಕ್ರಮದ ಸಾನಿಧ್ಯವನ್ನು ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ ವಹಿಸುವರು. ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬುರನಾಪುರದ ಯೋಗೇಶ್ವರಿ, ಹುಣಶ್ಯಾಳದ ಆನಂದದೇವರು, ತದ್ದೇವಾಡಿಯ ಮಹಾಂತೇಶ ಶಾಸೀಜಿ, ಕೆರೂರದ ಶಿವಕುಮಾರ ಸ್ವಾಮೀಜಿ, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಕಾಮನಕೇರಿಯ ಪರಮಾನಂದ ಮಹಾರಾಜರು, ಹೂವಿಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮನವರು, ಯರನಾಳದ ಶಿವಪ್ರಸಾದ ದೇವರು ಸಮ್ಮುಖ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ, ಭಾಗ್ಯಶ್ರೀ ಪಾಟೀಲ, ಸೌಮ್ಯ ಕಲ್ಲೂರ, ಶ್ರೀದೇವಿ ಉತ್ಲಾಸಕರ, ಡಾ.ಅಮರೇಶ ಮಿಣಜಗಿ, ಅಪ್ಪುಗೌಡ ಪಾಟೀಲ, ರಮೇಶ ಸೂಳಿಬಾವಿ, ಪ್ರಭು ದೇಸಾಯಿ, ಡಾ.ಬಸನಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ ಆಗಮಿಸುವರು. ಇದೇ ಸಂದರ್ಭದಲ್ಲಿ ಅಶ್ವಿನಿ ರೆಡ್ಡಿ ಅವರಿಗೆ ಸುವರ್ಣ ಪ್ರಶಸ್ತಿ ಪ್ರಧಾನ ಮಾಡಲಾಗುವದು.
ಮಧ್ಯಾನ್ಹ ೩.೩೦ ಗಂಟೆಗೆ ಹಂಗರಗಿ ಗ್ರಾಮದ ಭಕ್ತರಿಂದ ಕಳಸವು ಶ್ರೀಮಠಕ್ಕೆ ಪೂರ್ಣ ಕುಂಭಮೇಳ ಸಕಲ ವಾದ್ಯಗಳೊಂದಿಗೆ ಆಗಮಿಸಿದ ನಂತರ ಮಹಾರಥೋತ್ಸವ ಜರುಗಲಿದೆ. ನಂತರ ಗುರು ಸಂಗನಬಸವ ಸ್ವಾಮೀಜಿಯವರ ಜನ್ಮಸುವರ್ಣ ಮಹೋತ್ಸವ ಹಾಗೂ ವಿದ್ಯಾರ್ಥಿದೇವೋಭವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅನೇಕರು ಪೂಜ್ಯರಿಗೆ ನಾಣ್ಯಗಳಿಂದ ತುಲಾಭಾರ, ಗುರುವಂದನೆ ಸಲ್ಲಿಸುವರು. ಜಾತ್ರಾಮಹೋತ್ಸವದಂಗವಾಗಿ ಹಮ್ಮಿಕೊಂಡಿರುವ ರಸಮಂಜರಿ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರಾದ ಸಂಜು ಬಸಯ್ಯ, ಪಲ್ಲವಿ, ಸಂಜು ಜಾಲಿಕಟ್ಟಿ, ರೇವಣಸಿದ್ದ ಪುಲಾರಿ, ಸಿದ್ದಾರ್ಥ ಬೈಚಬಾಳ, ಪ್ರವೀಣ ಗಸ್ತಿ, ಗೀತಾ ಒಡೆಯರ, ಸಾಕ್ಷಿ ಹಿರೇಮಠ, ಮಹಾನ್ಯ ಪಾಟೀಲ, ವಿರೇಶ ವಾಲಿ ಭಾಗವಹಿಸಲಿದ್ದಾರೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 29, 2026

ಪರೀಕ್ಷಾ ನಿಯಮಗಳಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ

ನೂತನ ವ್ಯವಸ್ಥಾಪಕರಿಗೆ ಎಸ್‌ಸಿ-ಎಸ್‌ಟಿ ನೌಕರ ಸಂಘದಿಂದ ಸ್ವಾಗತ

ಯುವ ಪ್ರತಿಭೆಗಳ ಕನಸಿಗೆ ರೆಕ್ಕೆ ನೀಡುವ ಕೃತಕ ಬುದ್ದಿಮತ್ತೆ ವೇದಿಕೆಗಳು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 29, 2026
    In ದಿನಪತ್ರಿಕೆ
  • ಪರೀಕ್ಷಾ ನಿಯಮಗಳಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ
    In (ರಾಜ್ಯ ) ಜಿಲ್ಲೆ
  • ನೂತನ ವ್ಯವಸ್ಥಾಪಕರಿಗೆ ಎಸ್‌ಸಿ-ಎಸ್‌ಟಿ ನೌಕರ ಸಂಘದಿಂದ ಸ್ವಾಗತ
    In (ರಾಜ್ಯ ) ಜಿಲ್ಲೆ
  • ಯುವ ಪ್ರತಿಭೆಗಳ ಕನಸಿಗೆ ರೆಕ್ಕೆ ನೀಡುವ ಕೃತಕ ಬುದ್ದಿಮತ್ತೆ ವೇದಿಕೆಗಳು
    In (ರಾಜ್ಯ ) ಜಿಲ್ಲೆ
  • ಆರೋಗ್ಯ ಸೇವೆಗಳ ವಿಸ್ತರಣೆಗೆ ಬಿ.ಎಲ್.ಡಿ.ಇ ಸಂಸ್ಥೆ ಸದಾ ಬದ್ಧ
    In (ರಾಜ್ಯ ) ಜಿಲ್ಲೆ
  • ನೂತನ ಪದಾಧಿಕಾರಿಗಳ ಪದಗ್ರಹಣ ಯಶಸ್ವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ-ನಾರಾಯಣಪುರದಿಂದ ಕಾಲುವೆಗಳಿಗೆ ನೀರು
    In (ರಾಜ್ಯ ) ಜಿಲ್ಲೆ
  • ಜು.೨೯ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಮಾಜಿ ಸೈನಿಕರ ಮಕ್ಕಳಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ನಗದು ಪ್ರಶಸ್ತಿ: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಶಿಷ್ಯವೇತನ, ಪುಸ್ತಕ ಅನುದಾನಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.