ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಆರೋಗ್ಯ ಇಲಾಖೆಯಲ್ಲಿನ ನಿರತ ನುರಿತ ಸಿಬ್ಬಂದಿಗಳ ಸೇವೆಯನ್ನು ಸಾರ್ವಜನಿಕರು ಸೇರಿದಂತೆ ವಿಶೇಷವಾಗಿ ಗ್ರಾಮೀಣ ಜನತೆ ನೆನೆಯುವಂತಾಗಬೇಕು ಆಗ ಮಾತ್ರ ಸೇವೆಗೆ ಸಾರ್ಥಕತೆ ಎಂದು ಜಿಲ್ಲಾ ಕ್ಷಯರೋಗ ಕಾರ್ಯಾಕ್ರಮಾಧಿಕಾರಿ (ಡಿಟಿಓ) ವೈ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇಲಾಖೆಯ ಎಲ್ಲ ಸೇವಾನಿರತ ಸಿಬ್ಬಂದಿಗೆ ಪದನ್ನೋತಿ, ವರ್ಗಾವಣೆ ಸಾಮಾನ್ಯ ಇವುಗಳ ನಡುವೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸೇವೆ ಸಲ್ಲಿಸುವುದು ಎಲ್ಲಕ್ಕಿಂತಲೂ ಮೀಗಿಲಾದುದು ಎಂದರು.
ಇದೇ ಸಂದರ್ಭದಲ್ಲಿ ಪದನ್ನೋತಿ ಹಾಗೂ ವರ್ಗಾವಣೆ ಹೊಂದಿದ ವ್ಹಿ.ಜಿ.ಕುಲಕರ್ಣಿ, ಡಿ.ಡಿ.ಪಾಟೀಲ, ಎಸ್.ಬಿ.ಕಲ್ಲೂರ, ಸುಜಾತಾ ದಂಡಿನ, ಜಯಶ್ರೀ ಹುಬ್ಬಳ್ಳಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಆರೋಗ್ಯ ಕೇಂದ್ರದ(ಸಿಎಚ್‌ಸಿ) ಎಎಮ್‌ಓ ವಿರೇಶ ಹಳ್ಳೂರ ಅಧ್ಯಕ್ಷತೆ ವಹಿಸಿದ್ದರು.
ಡಾ.ಸಂತೋಷ ಯಡಹಳ್ಳಿ, ಡಾ.ದೌಲತ್ರಾಯಗೌಡ ಬಿರಾದಾರ, ಡಾ.ಶ್ವೇತಾ, ಡಾ.ಪ್ರಿಯಾಂಕಾ, ಕಿರಣ ಪಾಟೀಲ, ಎಸ್.ಡಿ.ಕುಲಕರ್ಣಿ, ವಿಜಯ ಹುಬ್ಬಳ್ಳಿ, ಪ್ರಭು ಜಂಗಿನಮಠ, ಮಹಾಲಿಂಗ ಫಕೀರಪುರ, ಎಂ.ಆರ್,ಮಾಶ್ಯಾಳ, ಸುಕನ್ಯಾ ಚಳಗೇರಿ, ಪ್ರೇಮಾ ಬಡಿಗೇರ, ರಶ್ಮೀ ಗುತ್ತೇದಾರ, ಲಕ್ಷ್ಮೀಕಾಂತ, ವಿಶಾಲ ಬಾಗಲೆ, ನಿಂಗರಾಜ, ಮೈಬೂಬ ಗಿರಣಿ ಶಫೀಕ, ರಮೇಶ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಇದ್ದರು.

