ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅರ್ಹ ಸಾಧಕ ಕ್ರೀಡಾಪಟುಗಳು ಹಾಗೂ ಇತರರಿಂದ ವಿವಿಧ ಪ್ರಶಸ್ತಿ ಮತ್ತು ವಿವಿಧ ಪ್ರೋತ್ಸಾಹಧನ ನೀಡುವ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಅಗಸ್ಟ್ ೩೧ ರವರೆಗೆ ವಿಸ್ತರಿಸಿದೆ.
೨೦೨೫-೨೬ ನೇ ಸಾಲಿನ ಕ್ರೀಡಾ ವಿದ್ಯಾರ್ಥಿ ವೇತನ ಹಾಗೂ ೨೦೨೬-೨೭ ನೇ ಸಾಲಿನ ಶೈಕ್ಷಣಿಕ ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಕೆಗೆ ಈ ಹಿಂದೆ ಜುಲೈ ೩೧ ಕೊನೆಯ ದಿನವಾಗಿತ್ತು ಈಗ ಅವಧಿಯನ್ನು ಅಗಸ್ಟ್ ೩೧ ರವರೆಗೆ ವಿಸ್ತರಿಸಲಾಗಿದೆ.ಅರ್ಹ ಕ್ರೀಡಾಪಟುಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಎಂ.ಎನ್.ಅನುಚೇತ್ ಪ್ರಕಟಣೆಯಲ್ಲಿ ಕೋರಿದ್ದಾರೆ.
