Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಬಲೇಶ್ವರದ ಪ್ರಗತಿಯ ಪಯಣ ನಿರಂತರವಾಗಿರಲಿದೆ

ಒತ್ತಡದ ಜೀವನಕ್ಕೆ ಸಂಗೀತವೇ ಔಷಧಿ :ಕೂಚಬಾಳ

ಡಿ.ಎನ್. ಸಲ್ಯೂಷನ್ಸ್: 400 ಎಂಜಿನಿಯರ್ ಗಳಿಗೆ ಉದ್ಯೋಗ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಒತ್ತಡದ ಜೀವನಕ್ಕೆ ಸಂಗೀತವೇ ಔಷಧಿ :ಕೂಚಬಾಳ
(ರಾಜ್ಯ ) ಜಿಲ್ಲೆ

ಒತ್ತಡದ ಜೀವನಕ್ಕೆ ಸಂಗೀತವೇ ಔಷಧಿ :ಕೂಚಬಾಳ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ನಮ್ಮೊಳಗಿನ ಚಿಂತೆ, ಆಯಾಸ, ದುಃಖ ದುಮ್ಮಾನುಗಳಿಗೆ ಹಾಗೂ ಒತ್ತಡ ಜೀವನಕ್ಕೆ ಸಂಗೀತವೇ ಉತ್ತಮ ಔಷಧಿಯಾಗಿದೆ ಎಂದು ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಶ್ರೀ ರೇ.ಚ ರೇವಡಿಗಾರ (ರಿ) ಪ್ರತಿಷ್ಠಾನ ಹಮ್ಮಿಕೊಂಡ ಗುರು ಸ್ಮರಣೆ, ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಗೀತ ಮನಸ್ಸಿನ ಭಾರ ತಗ್ಗಿಸಿ, ನೆಮ್ಮದಿ ಮತ್ತು ಆರೋಗ್ಯಕರ ಜೀವನ ನಡೆಸಲು ಶಕ್ತಿಯ ಸಂಕೇತವಾಗಿದೆ ಎಂದರು.
ಪ್ರತಿಷ್ಠಾನದ ರಂಗನಾಥ್ ಥೋರ್ಪೆ ಮಾತನಾಡಿ, ಸಂಗೀತದಿಂದ ಜಗತ್ತನ್ನೆ ಬದಲಿಸಬಹುದು, ಸಂಗೀತ ಎಲ್ಲರನ್ನೂ ಒಂದುಗೂಡಿಸುವ ಕಲಾ ಸಂಪತ್ತು ಹೀಗಾಗಿ ಇಂದು ಹಿರಿಯ ಸಂಗೀತ ರತ್ನತ್ರೇಯರು, ಕಿರಿಯ ಪ್ರತಿಭಾನ್ವಿತ ಸಂಗೀತ ಯುವ ಕಲಾವಿದರ ಸಮ್ಮಿಲನವಾಗಲು ಸಾಧ್ಯವಾಗಿದೆ ಎಂದು ಪ್ರಾಸ್ತಾವಿಕ ಮಾತನಾಡಿದರು.
ಆರಕ್ಷಕ ಮೌಲಾಲಿ ಆಲಗೂರ ಮಾತನಾಡಿ, ಎಲೆಮರೆಯಾಗಿ ಉಳಿದ ಸಂಗೀತ ದಿಗ್ಗಜರನ್ನು ಹಾಗೂ ಯುವ ಕಲಾವಿದರನ್ನು ಒಟ್ಟಿಗೆ ಒಂದೇ ವೇದಿಕೆ ನೀಡಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ಹಿರಿಯ ಗಾಯಕರಾದ ರಾಜು ತಿವಾರಿ, ಮೌನಪ್ಪ ಪತ್ತಾರ, ಮುದ್ದುರಾಜ ಅಲ್ದಿ ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿ ಚಪ್ಪಾಳೆ
ಗಿಟ್ಟಿಸಿಕೊಂಡರೆ, ಉದಯೋನ್ಮುಖ ಗಾಯಕಿಯರಾದ ಪೂಜಾ ಹಿರೇಮಠ, ಭಾಗ್ಯ ಬಬಲೇಶ್ವರ, ರಾಜೇಶ್ವರಿ ತಮ್ಮ ಅತ್ಯದ್ಭುತ ಗಾಯನವನ್ನು ಪ್ರಸುತ್ತ ಪಡಿಸಿದರು.
ದಯಾನಂದ ಪತ್ತಾರ ಹಾಗೂ ವಿನಾಯಕ ಕುಲ್ಕರ್ಣಿ ತಬಲಾ ಸಾತ ನೀಡಿದರು. ಶ್ರೀ ರೇ.ಚ ರೇವಡಿಗಾರ ಪ್ರತಿಷ್ಠಾನ ವತಿಯಿಂದ ರಾಜು ತಿವಾರಿ, ಮೌನಪ್ಪ ಪತ್ತಾರ, ಮುತ್ತುರಾಜ್ ಅಲ್ದಿ ಇವರಿಗೆ ಸಿಂದಗಿಯ ಸಂಗೀತ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅದೇ ಸಮಯದಲ್ಲಿ ಆರಕ್ಷಕ ಮೌಲಾಲಿ ಆಲಗೂರ ರಾಜು ತಿವಾರಿ ಹಾಡುತ್ತಿದ್ದ ಹಾಡನ್ನು ವಾಟ್ಸ್ ಆಪ್ ಸ್ಟೇಟಸ್ ಹಾಕಿದ್ದನ್ನು ತಕ್ಷಣವೇ ಗಮನಿಸಿದ ಕತಾರ ದೇಶದಲ್ಲಿ ನೆಲೆಸಿರುವ ಮಾಡಬಾಳ ಗ್ರಾಮದ ಅನಿಲ್ ಬೋಸಗಿ (ಕರ್ನಾಟಕ ಸಂಘದ ಅಧ್ಯಕ) ಕರೆ ಮಾಡಿ ಐದು ಸಾವಿರ ಪೋನ್ ಪೇ ಮೂಲಕ ರಾಜು ತಿವಾರಿ ಇವರಿಗೆ ತಲುಪಿಸಿದರು. ಇನ್ನೂ ರಾಜಶೇಖರ ಕೂಚಬಾಳ ಎಲ್ಲ ಕಲಾವಿದರಿಗೂ ಒಂದು ಸಾವಿರದಂತೆ ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿದ ಪ್ರತಿಷ್ಠಾನಕ್ಕೆ ಐದು ಸಾವಿರ ನಗದು ಗೌರವಿತವಾಗಿ ನೀಡಿದರು. ಸಂಸ್ಥೆ ಕಾರ್ಯದರ್ಶಿ ಆನಂದ ಶಾಬಾದಿ, ಸಿದ್ಧಲಿಂಗ ಚೌಧರಿ, ಪಂಡಿತ ಯಂಪೂರೆ, ಮಹಾಂತೇಶ ನೂಲನವರ, ಗುರುನಾಥ ಅರಳಗುಂಡಗಿ, ಮೌಲಾಲಿ ಆಲಗೂರ, ಸೇರಿದಂತೆ ಇತರರು ಸಂಗೀತಕ್ಕೆ ಕಿವಿಯಾದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಬಲೇಶ್ವರದ ಪ್ರಗತಿಯ ಪಯಣ ನಿರಂತರವಾಗಿರಲಿದೆ

ಡಿ.ಎನ್. ಸಲ್ಯೂಷನ್ಸ್: 400 ಎಂಜಿನಿಯರ್ ಗಳಿಗೆ ಉದ್ಯೋಗ

ಸಿಬ್ಬಂದಿ ಸೇವೆ ಸಾರ್ವಜನಿಕರು ನೆನೆದರೆ ಸೇವೆಗೆ ಸಾರ್ಥಕತೆ

ದಿ:೩೦ ರಂದು ಬಿಜೆಪಿ ನಿಯೋಗದಿಂದ ಬರ ವೀಕ್ಷಣೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಬಲೇಶ್ವರದ ಪ್ರಗತಿಯ ಪಯಣ ನಿರಂತರವಾಗಿರಲಿದೆ
    In (ರಾಜ್ಯ ) ಜಿಲ್ಲೆ
  • ಒತ್ತಡದ ಜೀವನಕ್ಕೆ ಸಂಗೀತವೇ ಔಷಧಿ :ಕೂಚಬಾಳ
    In (ರಾಜ್ಯ ) ಜಿಲ್ಲೆ
  • ಡಿ.ಎನ್. ಸಲ್ಯೂಷನ್ಸ್: 400 ಎಂಜಿನಿಯರ್ ಗಳಿಗೆ ಉದ್ಯೋಗ
    In (ರಾಜ್ಯ ) ಜಿಲ್ಲೆ
  • ಸಿಬ್ಬಂದಿ ಸೇವೆ ಸಾರ್ವಜನಿಕರು ನೆನೆದರೆ ಸೇವೆಗೆ ಸಾರ್ಥಕತೆ
    In (ರಾಜ್ಯ ) ಜಿಲ್ಲೆ
  • ದಿ:೩೦ ರಂದು ಬಿಜೆಪಿ ನಿಯೋಗದಿಂದ ಬರ ವೀಕ್ಷಣೆ
    In (ರಾಜ್ಯ ) ಜಿಲ್ಲೆ
  • ಗುರುವಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನ ಗುರು ಪೂರ್ಣಿಮೆ :ಜೋಗೂರ
    In (ರಾಜ್ಯ ) ಜಿಲ್ಲೆ
  • ಅಂಧಶ್ರದ್ಧೆ, ಅಸಮಾನತೆ ಖಂಡಿಸಿದ್ದ ಹಡಪದ ಅಪ್ಪಣ್ಣ
    In (ರಾಜ್ಯ ) ಜಿಲ್ಲೆ
  • ಗುರುಗಳ ಮಾರ್ಗದರ್ಶನ, ಸತತ ಅಭ್ಯಾಸದಿಂದ ಸಾಧನೆ ಸಾಧ್ಯ :ಮುನ್ನೊಳ್ಳಿ
    In (ರಾಜ್ಯ ) ಜಿಲ್ಲೆ
  • ಶೈಕ್ಷಣಿಕ ಶುಲ್ಕ ಮರುಪಾವತಿ ಮತ್ತು ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ಶರಣರ ವಚನಗಳಲ್ಲಿ ಜೀವನದ ಸಾರ ಅಡಗಿದೆ :ಎಡಿಸಿ ಡಾ.ಔದ್ರಾಮ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.