ಉದಯರಶ್ಮಿ ದಿನಪತ್ರಿಕೆ
ಅಥಣಿ: ಗುರುಗಳ ಮಾರ್ಗದರ್ಶನದಿಂದ ಸತತವಾಗಿ ಅಭ್ಯಾಸದಿಂದ ಮುಂದೆ ಜೀವನದಲ್ಲಿ ಒಂದು ಸಾಧನೆ ಮಾಡಬಹುದು ಎಂದು ಅಥಣಿ ಪೊಲೀಸ ಅಧಿಕಾರಿ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಮಾತನಾಡಿದರು.
ಅವರು ಗುಂಡೇವಾಡಿ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆ ವತಿಯಿಂದ ಸರ್ವೋದಯ ಸ್ವತಂತ್ರ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಲ್ಲಿ ಸಂಸ್ಕೃತಿ ಮತ್ತು ಕ್ರೀಡಾ ಚಟುವಟಿಕೆ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು. ಶಾಲೆಯಲ್ಲಿ ಕಡಿಮೆ ಅಂಕ ಹಾಗೂ ಭಾಷೆ ಮುಖ್ಯವಲ್ಲ ನಾವು ಒಂದು ನಿರ್ಧಷ್ಟವಾದ ಗುರಿ ಹಾಗೂ ಸತತವಾಗಿ ಅಭ್ಯಾಸ ಮಾಡಿದರೆ ಇಟ್ಟ ಗುರಿ ಮುಟ್ಟಲ್ಲೂ ಸಾಧ್ಯವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಅಥಣಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಮನಿ ಮಾತನಾಡಿ ಗುರುವಿನ ಸ್ಥಾನ ಬಹಳ ಮಹತ್ವವಾಗಿದೆ, ಗುರುಗಳು ಒಂದು ಕಾರ್ಖಾನೆ ಇದ್ದ ಹಾಗೆ, ಗುರುಗಳ ಮಾತು ಹೇಳಿದ ಪಾಲನೆ ಯಾರು ಮಾಡುತ್ತಾರೆ ಅವರು ಜೀವನದಲ್ಲಿ ಸಾಧನೆ ಮಾಡಬಹುದು.
ವಿದ್ಯಾರ್ಥಿಗಳು ಗುರುವಿನ ಬಗ್ಗೆ ತಂದೆ ತಾಯಿ ಬಗ್ಗೆ ಗೌರವ, ಪ್ರೀತಿ ಯಾರು ಅಳವಡಿಸಿಕೊಂಡರೆ ಒಳ್ಳೆ ಮನುಷ್ಯರಾಗಿ ಬದುಕಬಹುದು. ಜೀವನದಲ್ಲಿ ಸಾಧನೆ ಮಾಡಬೇಕಾದರೆ ಬಡತನ ಅಡ್ಡಿ ಬರುವುದಿಲ್ಲ ಕಷ್ಟ ಪಟ್ಟು ಓದಿದರೆ ಗುರಿ ಮುಟ್ಟಬಹುದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಅಥಣಿ ವೈದ್ಯರಾದ ಡಾ ಆನಂದ ಗುಂಜಿಗಾಂವಿ
ಹಾಗೂ ಶಿಕ್ಷಕರಾದ ಬಾಬು ಗುರವ
ಮಾತನಾಡಿದರು.
ಈ ವೇಳೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಸಂಚಾಲಕ ರವಿ ಕಾಂಬಳೆ, ತಾಲೂಕಾ ಪಂಚಾಯತ ಮಾಜಿ ಸದಸ್ಯ ಚಂದ್ರಕಾಂತ ಗೊಂಧಳಿ , ಗ್ರಾಮದ ಯುವ ಮುಖಂಡ ವಿಶ್ವಾನಾಥ ಪಾಟೀಲ, ರಾವಸಾಬ ಕಾರಾಜನಗಿ, ಜಾವಿದ್ ಮುಜಾವರ, ಅಜೀತ ಬನಜವಾಡ, ಶೇಕರ ಕಾರಾಜನಗಿ, ಕದಂ ಸರ್, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು

