ಮುದ್ದೇಬಿಹಾಳ: ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣವಾಗದೇ ವಿದ್ಯಾರ್ಜನೆ ನೀಡುವ ವಿದ್ಯಾ ದೇವಾಲಯಗಳಾಗಬೇಕು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ಪಟ್ಟಣದ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಎಕ್ಸಪರ್ಟ್ ಪಿಯು ಕಾಲೇಜು ಆವರಣದಲ್ಲಿ ನಡೆದ ಎಕ್ಸ್ಫರ್ಟ ಟ್ಯಾಲೆಂಟ್ ಅವಾರ್ಡ ಸ್ಪರ್ದೆ-೨೦೨೪ ರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತೆ. ವಿದ್ಯೆ ದಾನ ಮಾಡುವ ಸಂಸ್ಥೆಗಳು ಎಂದಿಗೂ ವ್ಯಾಪಾರಿಕರಣವಾಗದೇ, ದೇಶದ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಜನೆ ನೀಡಿದಲ್ಲಿ ಜಗತ್ತಿಗೇ ನಂ-೧ ದೇಶ ಭಾರತವಾಗೋದರಲ್ಲಿ ಯಾವುದೇ ಸಂದೇಹವಿಲ್ಲ. ಶಿಕ್ಷಣದಲ್ಲಿ ಒಳ್ಳೆ ಹೆಸರು ಮಾಡಿರುವ ಟಾಪ್ ಲೀಸ್ಟ್ ನಲ್ಲಿ ನಾಗರಬೆಟ್ಟದ ಆಕ್ಸ್ಫರ್ಡ ಮಠ್ಸ್ ಶಿಕ್ಷಣ ಸಂಸ್ಥೆ ಸ್ಥಾನ ಗಿಟ್ಟಿಸಿಕೊಂಡಿರುವದು ಹೆಮ್ಮೆಯ ವಿಷಯ. ಸಂಸ್ಥೆ ಪ್ರಾರಂಭವಾದಾಗಲಿಂದಲೂ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮೇಲೆ ವಿಶೇಶ ಕಾಳಜಿ ವಹಿಸುತ್ತಿರುವ ಸಂಸ್ಥೆಯ ಮುಖ್ಯಸ್ಥ ಬಿ.ಜಿ.ಮಠ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವದು ಮುಂದೊAದು ದಿನ ಶಿಕ್ಷಣದ ಕ್ರಾಂತಿಯಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಇವರ ಸೇವೆ ಶ್ಲಾಘನೀಯ ಎಂದರು.
ಪ್ರಾಂಶುಪಾಲ ಸುರೇಶ ಹರನಾಳ ಮಾತನಾಡಿ, ಆಕ್ಸಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ಪ್ರಮುಖ ಹುದ್ದೆಯಲ್ಲಿದ್ದಾರೆ. ಶಿಕ್ಷಣ ತಲೆಗೇ ಹತ್ತದ ಅದೆಷ್ಟೋ ಮಕ್ಕಳು ಇಂದು ಟಾಪರ‍್ಸ್ ಲೀಸ್ಟ್ನಲ್ಲಿರುವ ಉಧಾಹರಣೆಗಳಿವೆ. ಈ ಪುಣ್ಯ ಭೂಮಿಯಲ್ಲಿ ಅದೇನೋ ಚಮತ್ಕಾರವಿದೆ. ದೈವ ಶಕ್ತಿ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಈ ಸಂಸ್ಥೆ ರಾಜ್ಯದ ಟಾಪ್ ೧೦ನೇ ಲೀಸ್ಟ್ ಗೆ ಬರಬೇಕು ಅನ್ನೋದು ನಮ್ಮ ಆಶಯ, ಇನ್ನೂ ಕೆಲವೇ ದಿನಗಳಲ್ಲಿ ಬರುವ ಆತ್ಮವಿಶ್ವಾಸ ನನಗಿದೆ ಎಂದರು.
ಸಂಸ್ಥೆಯ ಮುಖ್ಯಸ್ಥ ಬಿ.ಜಿ.ಮಠ ಮಾತನಾಡಿದರು.
ಶಿಕ್ಷಕ ಬಸಯ್ಯ ಹಿರೇಮಠ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಇರ್ಫಾನ್ ಬಾಗವಾನ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣವಾಗದಿರಲಿ :ಡಾ.ಚನ್ನವೀರ ಶ್ರೀ
Related Posts
Add A Comment

