ದೇವರಹಿಪ್ಪರಗಿ: ಲೋಕಸಭೆಯ ಚುನಾವಣೆಯ ಅಂಗವಾಗಿ ಮತಗಟ್ಟೆ ಅಧಿಕಾರಿಗಳ ಒಂದನೇ ಹಂತದ ತರಬೇತಿ ಕಾರ್ಯಕ್ರಮ ಜರುಗಿತು.
ಪಟ್ಟಣದ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆಯಲ್ಲಿ ಭಾನುವಾರ ಆರಂಭಗೊಂಡ ತರಬೇತಿಯಲ್ಲಿ ೪೮೦ ಅಧಿಕಾರಿಗಳು ಭಾಗವಹಿಸಿದ್ದರು. ಒಂದು ಕೋಣೆಗೆ ೪೦ ಜನರಂತೆ ಒಟ್ಟು ೧೨ ಕೋಣೆಗಳಲ್ಲಿ ಮಾಸ್ಟರ್ ಟ್ರೇನರ್‌ಗಳು ತರಬೇತಿ ನೀಡಿದರು.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ತರಬೇತಿಯ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದರು. ಬೆಳಿಗ್ಗೆ ಆರಂಭಗೊಂಡ ತರಬೇತಿ ಮಧ್ಯಾನ್ಹ ಮೂರು ಗಂಟೆಯವರೆಗೆ ಜರುಗಿತು.
ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳ ತರಬೇತಿ ಹಾಗೂ ನಿಯೋಜನೆಯ ಸಮಯದಲ್ಲಿ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗೆ ಸರಿಯಾದ ಉಪಹಾರ, ಊಟ ಹಾಗೂ ನೀರು ಸೇರಿದಂತೆ ಸಾಕಷ್ಟು ವ್ಯವಸ್ಥೆ ಮಾಡಿರದ ಕಾರಣ ತಾಲ್ಲೂಕಾಡಳಿತ ವಿರುದ್ಧ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ ಘಟನೆ ಸಂಭವಿಸಿದ್ದರಿಂದ, ಈ ಬಾರಿ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಊಟ, ನೀರು ಹಾಗೂ ವಿಶ್ರಾಂತಿ ವೇಳೆಯಲ್ಲಿ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
ಸಹಾಯಕ ಚುನಾವಣಾಧಿಕಾರಿ ಪ್ರವೀಣ ಜೈನ್, ತಹಶೀಲ್ದಾರ ಪ್ರಕಾಶ ಸಿಂದಗಿ, ಶಿರಸ್ತೇದಾರ ಸುರೇಶ ಮ್ಯಾಗೇರಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

