ಕೊಲ್ಹಾರ: ಗ್ರಾಮದೇವಿ ಜಾತ್ರೋತ್ಸವದ ಸಂಭ್ರಮದ ನಡುವೆಯೇ ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಸ್ನಾನ ಮಾಡಲು ಹೋದ ಸಂದರ್ಭದಲ್ಲಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಪಟ್ಟಣದ ಹತ್ತಿರದ ಕೃಷ್ಣಾ ನದಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಶ್ರೀಧರ ಶಿವಪ್ಪ ಮಾದರ ಉರ್ಫ್ ದೊಡ್ಡಮನಿ (೧೦), ಯಶಸ್ವಿ ರಾಜು ಮಾದರ(೧೩) ಎಂದು ಗುರುತಿಸಲಾಗಿದೆ. ಬಾಲಕರಿಬ್ಬರು ಸಹೋದರ ಸಂಬಂಧಿಗಳು.
ಯುಗಾದಿ ಅಮವಾಸೈ ನಿಮಿತ್ತ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಹುಚ್ಚಮ್ಮ ದೇವಿ ಜಾತ್ರೋತ್ಸವ ಹಿನ್ನಲೆ ಕಾರಜೋಳ ಗ್ರಾಮದಿಂದ ಕೊಲ್ಹಾರದ ಕೃಷ್ಣಾ ನದಿಗೆ ದೇವಿಯ ಪಲ್ಲಕ್ಕಿ ಹೊತ್ತು ದೇವಿಯ ಸ್ನಾನಮಾಡಿಸಿಕೊಂಡು ಹೋಗಲು ಗ್ರಾಮಸ್ಥರೊಂದಿಗೆ ತಮ್ಮ ತಂದೆ ತಾಯಿಗಳೊಂದಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ.
ಕೊಲ್ಹಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
