Author: editor.udayarashmi@gmail.com

ವಿಜಯಪುರ: 245 ಸಿಟಿಐ ಮತ್ತು 545 ಸಿವಿಲ್ ಪಿ.ಎಸ್.ಐ ಹುದ್ದೆಗಳ ನೇಮಕಾತಿ ಸೇರಿದಂತೆ ಈಗಾಗಲೇ ನಡೆದಿರುವ ಲಿಖಿತ ಪರೀಕ್ಷೆಗಳ ಫಲಿತಾಂಶವನ್ನು ಕರ್ನಾಟಕ ಲೋಕಸೇವಾ ಆಯೋಗ ಆದಷ್ಟು ಬೇಗ ಪ್ರಕಟಿಸಬೇಕು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.ಈ ಕುರಿತಂತೆ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಪಿಸಿ (ಸಿವಿಲ್/ಸಿಎಆರ್/ಡಿಎಆರ್) ಹುದ್ದೆಯಿಂದ ದೂರ ಉಳಿಯುತ್ತಾರೆ. ಇದರಿಂದ ಬೇರೆಯವರಿಗೂ ಅವಕಾಶ ಸಿಗುತ್ತದೆ ಹಾಗೂ ತೇರ್ಗಡೆಯಾದವರಿಗೆ ಮತ್ತೆ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.ಪಿ.ಸಿ ಪರೀಕ್ಷೆಯ ಫಲಿತಾಂಶ ಮೊದಲು ಬಿಡುಗಡೆಯಾಗಿ, ನಂತರ ಪಿ.ಎಸ್.ಐ ಆಗಿ ಎರಡರಲ್ಲೂ ತೇರ್ಗಡೆಯಾದವರು ಪಿ.ಸಿ ಬಿಟ್ಟು ಪಿ.ಎಸ್.ಐ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮತ್ತೆ ಬ್ಯಾಕ್ಲಾಗ್ ಆಗಿ ಸರ್ಕಾರಕ್ಕೂ ಅಭ್ಯರ್ಥಿಗಳಿಗೂ ತೊಂದರೆಯಾಗುವುದು ಖಚಿತ.ಒಂದು ಉದ್ಯೋಗ ಸಿಗುವುದರಿಂದ ಒಂದು ಮನೆಗೆ ಸಾಕಷ್ಟು ಆರ್ಥಿಕ ನೆರವಾಗುತ್ತದೆ. ಅಭ್ಯರ್ಥಿಯ ಭವಿಷ್ಯ ಸಧೃಡವಾಗುತ್ತದೆ. ಪರೀಕ್ಷೆ ಫಲಿತಾಂಶದ ವಿಳಂಬ, ಅನಿಶ್ಚಿತತೆ, ಅವೈಜ್ಞಾನಿಕ ವೇಳಾಪಟ್ಟಿ, ಅಭ್ಯರ್ಥಿ ಇರುವ ಊರಿಂದ ಬೇರೆ ಊರಿಗೆ ಪರೀಕ್ಷೆ ಸೆಂಟರ್ ನಿಗದಿ…

Read More

ಚಡಚಣ: ಎನ್ ಎಚ್ ಎಮ್ ಒಳಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಚಡಚಣ ಸಮುದಾಯದ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಕೈಗೆ ಕಪ್ಪು ಬಟ್ಟೆ ಧರಿಸಿ ಆಸ್ಪತ್ರೆಯ ಮುಂದೆ ಮೌನ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಡಾ. ಆಯ್ ಎಮ್ ಬಿರಾದಾರ. ಪ್ರಶಾಂತ ಸಾಳುಂಕೆ, ಸಚೀನ ತೇಲಿ, ಶಿವಾನಂದ ಹಾಲಶೆಟ್ಟಿ, ಶ್ರೀಧರ ಬಂಡಗಾರ, ಶ್ರೀಶೈಲ ಯಳಮೇಲಿ, ರಾಜು ರತ್ನಾಕರ, ಪ್ರಕಾಶ ವಾಘಮೋರೆ, ಸಂಗಪ್ಪ ಕುಸಬಿ, ಪ್ರಸಾದ ಕೋತ, ಗಂಗಾಧರ ಬೈರಶೇಟ್ಟಿ, ಸುರೇಶ್ ಜೊಳ್ಳಿ, ರೇಣುಕಾ ಬೆಳ್ಳೇನವರ, ಭಾಗಿರಥಿ ಬೆಳ್ಳೇನವರ, ಜಕ್ಕಮ್ಮಾ ಶಾಪೂರ, ರಾಜಶ್ವೇರಿ ಗೋಟ್ಯಾಳ ಉಪಸ್ಥಿತರಿದ್ದರು.

Read More

ಬಸವನಬಾಗೇವಾಡಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಜನರ ಕಲ್ಯಾಣಕ್ಕಾಗಿ ಸಾಮಾಜಿಕ ಸಮಾನತೆಗಾಗಿ ನ್ಯಾಯದ ದೃಷ್ಟಿಯಿಂದ ಮೀಸಲಾತಿ ಒದಗಿಸಿದ್ದರು. ಆದರೆ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ನೀಡಿದ ೨೦೧೧ ರ ಸದಾಶಿವ ಆಯೋಗದ ವರದಿಯ ಆಧಾರ ಇಟ್ಟುಕೊಂಡು ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ನೀಡಲು ಪ್ರಯತ್ನದಲ್ಲಿದೆ. ಸರ್ಕಾರದ ನಡೆ ಸಂವಿಧಾನದ ಆಶಯಕ್ಕೆ ವಿರುದ್ಧವಿದೆ. ಇದಕ್ಕೆ ಬಂಜಾರಾ,ಭೋವಿ, ಕೊರಚ ಹಾಗೂ ಕೊರಮ ಸಮುದಾಯದ ವಿರೋಧವಿದೆ ಎಂದು ರಾಷ್ಟ್ರೀಯ ಗೊರಮಾಳವ ತಾಲೂಕಾಧ್ಯಕ್ಷ ಶಾಂತು ರಾಠೋಡ, ಭೋವಿ ಸಮಾಜದ ಜಿಲ್ಲಾ ಮುಖಂಡ ಸಿದ್ರಾಮ ಪಾತ್ರೋಟಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿರಾಗ್ ಪಾಸ್ವಾನ್, ಮಾಯಾವತಿ, ರಾಮದಾಸ ಅತವಾಲೆ ಅವರು ಆಗಷ್ಟ್ ೧ ರಂದು ಸುಪ್ರಿಂಕೋರ್ಟ್ ಒಳಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂದು ತೀರ್ಪು ನೀಡಿದನ್ನು ವಿರೋಧಿಸಿ ಇಂದು…

Read More

ಬಸವನಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವದಂಗವಾಗಿ ಬುಧವಾರ ಬೆಳಗ್ಗೆ ಮಧ್ಯ ಆರಾಧನೆ ಪೂಜೆ, ಅಷ್ಟೋತ್ತರ, ಕ್ಷೀರಾಭಿಷೇಕ ಜರುಗಿತು. ಆಚಾರ್ಯ ವಾದಿರಾಜ ಯಜುರ್ವೇದಿ ಅವರಿಂದ ಮಹಾಪೂಜೆ, ಅಲಂಕಾರ ಪೂಜೆ ನೆರವೇರಿತು.ಪೂಜಾ ಕಾರ್ಯಕ್ರಮದಲ್ಲಿ ವಸಂತಚಾರ್ಯ ಇಂಗಳೇಶ್ವರ, ರಾಮಾಚಾರಿ ಯಜುರ್ವೇದಿ, ವಿಠ್ಠಲಾಚಾರ್ಯ ಜೋಶಿ, ವಿಠ್ಠಲ ದೇಶಪಾಂಡೆ, ವಸಂತ ಕುಲಕರ್ಣಿ, ಯಲಗೂರೇಶ ಯಜುರ್ವೇದಿ, ಪ್ರಲ್ಹಾದ ಕುಲಕರ್ಣಿ, ಅನಂತರಾವ ಕುಲಕರ್ಣಿ, ವಿಠ್ಠಲ ಕುಲಕರ್ಣಿ, ರಾಮಾಚಾರ್ಯ ಜೋಶಿ, ನಾರಾಯಣ ಕುಲಕರ್ಣಿ ಇತರರು ಇದ್ದರು.ಆ.೨೨ ರಂದು ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವದಂಗವಾಗಿ ಉತ್ತರಾರಾಧನೆ ಪೂಜೆ, ಸತ್ಯನಾರಾಯಣ ಪೂಜೆ, ಮಹಾರಥೋತ್ಸವ ಜರುಗಲಿದೆ ಎಂದು ವಾದಿರಾಜ ಯಜುರ್ವೇದಿ ತಿಳಿಸಿದರು.

Read More

ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವ ಆಗಷ್ಟ್ ೨೬ ರಿಂದ ಐದು ದಿನಗಳ ಕಾಲ ಜರುಗಲಿದ್ದು. ಜಾತ್ರೆಗೆ ಬರುವ ಭಕ್ತ ಸಮೂಹಕ್ಕೆ ಐದು ದಿನಗಳ ಕಾಲ ನಿರಂತರ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ದಾಸೋಹವನ್ನು ದೇವಸ್ಥಾನದ ಹತ್ತಿರವಿರುವ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಹೇಳಿದರು.ಪಟ್ಟಣದ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಾತ್ರೆಯಂಗವಾಗಿ ದಾಸೋಹದ ಅಡುಗೆ ತಯಾರಿಸಲು ತಾತ್ಕಲಿಕವಾಗಿ ಹಾಕಲಾಗುತ್ತಿರುವ ಶೆಡ್ ಅನ್ನು ಬುಧವಾರ ಸಂಜೆ ವೀಕ್ಷಿಸಿ ಮಾತನಾಡಿದ ಅವರು, ಈಗಾಗಲೇ ಜಾತ್ರೆಗೆ ಬೇಕಾದ ಅಗತ್ಯ ಸಿದ್ಧತೆ ಭರದಿಂದ ಸಾಗಿದೆ. ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿನಿತ್ಯ ದಾಸೋಹ ವ್ಯವಸ್ಥೆ ಇರುತ್ತದೆ. ಜಾತ್ರೆಗೆ ಅಪಾರ ಪ್ರಮಾಣದ ಭಕ್ತರು ಬರುವದರಿಂದಾಗಿ ಅಲ್ಲಿ ಜಾಗೆ ವಿಶಾಲವಾಗಿಲ್ಲದೇ ಇರುವದರಿಂದಾಗಿ ಪ್ರತಿ ವರ್ಷ ಜಾತ್ರೆಯ ದಾಸೋಹದ ವ್ಯವಸ್ಥೆಯನ್ನು ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಡಳಿಯಿಂದ ವ್ಯವಸ್ಥೆ ಮಾಡಲಾಗುತ್ತದೆ. ದಾಸೋಹವನ್ನು ಸುವ್ಯವಸ್ಥಿತವಾಗಿ…

Read More

ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಸಲಹೆ ವಿಜಯಪುರ: ನಗರದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್, ಇ.ಎಲ್.ಸಿ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭ ಆ.೨೧ರಂದು ಜರುಗಿತು.ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವ ಶಂಕರಗೌಡ ಎಸ್. ಸೋಮನಾಳ ಮಾತನಾಡಿ, ವಿದ್ಯಾರ್ಥಿಗಳು ಬರಿ ಪದವಿ ಪಡೆಯುವುದು ಮುಖ್ಯವಲ್ಲ. ಅದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕಲೆಯನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ಒಂದಾದರೂ ದಿನ ಪತ್ರಿಕೆಯನ್ನು ಓದಬೇಕು ಎಂದು ತಿಳಿಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಾ. ಆರ್.ಎಸ್. ಕಲ್ಲೂರಮಠ ಮಾತನಾಡಿ, ವಿದ್ಯಾರ್ಥಿನಿಯರು ನಿಯಮಿತವಾಗಿ ಕಾಲೇಜಿಗೆ ಬರಬೇಕು. ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಅತಿಥಿಗಳಾಗಿ ಭಾಗವಹಿಸಿದ ವಿಶ್ರಾಂತ ಪ್ರಾಧ್ಯಾಪಕ ಎಸ್.ಪಿ. ಬೀಡಗೊಂಡ ಮಾತನಾಡುತ್ತ ವಿದ್ಯಾರ್ಥಿನಿಯರು ಚೆನ್ನಾಗಿ ಅಧ್ಯಯನಗೈದು ಕಾಲೇಜು ಹಾಗೂ ತಮ್ಮ ಮನೆಗೆ ಕೀರ್ತಿ…

Read More

ವಿಜಯಪುರ: ಬಸವಾದಿ ಶರಣರು ಭೌತಿಕ, ಆಧ್ಯಾತ್ಮಿಕ, ಸತ್ಯ ತತ್ವಗಳನ್ನು ಸಾಮರಸ್ಯಗೊಳಿಸಿ ಸವಿದು ಅನುಭವಿಸಿ ನಿತ್ಯ, ಸತ್ಯ, ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದ ಮಹಾಂತರವರು ಅಂತಹ ವಚನಕಾರರಲ್ಲಿ ವೈದ್ಯ ಸಂಗಣ್ಣ ಒಬ್ಬರು. ಅವರ ವಚನಗಳಲ್ಲಿ ಭಕ್ತಿನಿಷ್ಠೆ, ಜ್ಞಾನನಿಷ್ಠೆ, ವಿಶ್ವಾಸನಿಷ್ಠೆ, ಕಾಯಕ, ದಾಸೋಹ ಜೊತೆಗೆ ಶರಣರ ನಾಡಿಮಿಡಿತವನ್ನು ಕಂಡು ಹಿಡಿದು ಚಿಕಿತ್ಸೆ ನೀಡುತ್ತ ನೈಸರ್ಗಿಕವಾಗಿ ಬೆಳೆದ ತಪ್ಪಲು ತಂದು ಅದರ ರಸದಿಂದ ಔಷಧ ತಯಾರಿಸಿ ಚಿಕಿತ್ಸೆ ನೀಡುತ್ತಿದ್ದರು. ಕಾಯಕದ ಜೊತೆಗೆ ಪಂಚಾಕ್ಷರಿ ಮಂತ್ರ ಪಠಿಸುವುದರಿಂದ ರೋಗ ಹೋಗಲಾಡಿಸಬಹುದು ಎಂದು ಶರಣರಿಗೆ ಹೇಳುತ್ತ ವಿಶ್ವಾಸ, ಆತ್ಮಸ್ಥೈರ್ಯ ತುಂಬುತ್ತಿದ್ದರು. ಅವರು ರಚಿಸಿದ ವಚನಗಳು ಕೇವಲ ೨೪ ಮಾತ್ರ ಲಭ್ಯವಾಗಿವೆ. ಶರಣರಿಗೆ ಜೀವನಾಮೃತ ನೀಡಿದವರು ಅವರು ಎಂದು ಸಾಹಿತಿ ಮೋಹನ ಕಟ್ಟಿಮನಿ ಹೇಳಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದವರು ವೀರಶೈವ ಸಭಾಭವನದಲ್ಲಿ ಏರ್ಪಡಿಸಿದ ಮಾಸಿಕ ಶಿವಾನುಭವಗೋಷ್ಠಿಯಲ್ಲಿ ವಚನಕಾರ ವೈದ್ಯ ಸಂಗಣ್ಣ ಅನುಭಾವ ಕುರಿತು ಮಾತನಾಡಿದರು.ಶಿವಶರಣ ವೈದ್ಯ ಸಂಗಣ್ಣ ಅವರ ಕುರಿತು ಶಾರದಾ ಕೊಪ್ಪ (ಐಹೊಳ್ಳಿ) ಮಾತನಾಡುತ್ತ…

Read More

ಆಲಮಟ್ಟಿ ಜಲಾಶಯಕ್ಕೆ ಗಂಗಾಪೂಜೆ-ಬಾಗಿನ ಅರ್ಪಣೆ |ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗ್ರಹ ವಿಜಯಪುರ: ಆಲಮಟ್ಟಿ ಜಲಾಶಯ ಎತ್ತರದಿಂದ ಬಾಧಿತವಾಗುವ ಪ್ರದೇಶದಲ್ಲಿ ಪುನರ್‌ವಸತಿ, ಪುನರ್‌ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಿದ್ಧವಿದ್ದು, ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.ಬುಧವಾರ ಜಿಲ್ಲೆಯ ಆಲಮಟ್ಟಿ ಆಣೆಕಟ್ಟೆಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ ೨ನೇ ತೀರ್ಪು ಬಂದಿದ್ದು, ತೀರ್ಪಿನನ್ವಯ ಆಲಮಟ್ಟಿ ಎತ್ತರ ಹೆಚ್ಚಳದಿಂದಾಗಿ ೧೩೦ ಟಿಎಂಸಿ ನೀರು ಹೆಚ್ಚುವರಿಯಾಗಿ ದೊರೆಯಲಿದೆ. ೧೩೦ ಟಿಎಂಸಿ ನೀರನ್ನು ಬಳಕೆ ಮಾಡಲು ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದರೆ ಮಾತ್ರ ಆಲಮಟ್ಟಿ ಎತ್ತರ ಹೆಚ್ಚಿಸಲು ಸಾಧ್ಯವಾಗುತ್ತದೆ. ೫೧೯.೬ ರಿಂದ ೫೨೪.೨೫೬ ಮೀ. ಎತ್ತರಿಸಿದಾಗ ಮಾತ್ರ ೧೩೦ ಟಿಎಂಸಿ ನೀರು ದೊರೆಯಲಿದೆ. ಆಲಮಟ್ಟಿ ಎತ್ತರ ಹೆಚ್ಚಳದಿಂದ ೧೪.೬೮ ಲಕ್ಷ ಎಕರೆ ಜಮೀನು ನೀರಾವರಿಗೊಳಪಟ್ಟು…

Read More

ವಿಜಯಪುರ: ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಯೋಜನೆಯಡಿಯಲ್ಲಿ ರಾಜ್ಯದ ಕ್ರೀಡಾ ಪೋಷಕರನ್ನು ಗುರುತಿಸಿ ಗೌರವಿಸಲು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಹ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಕಚೇರಿಯಿಂದ ಮಾರ್ಗಸೂಚಿ ಹಾಗೂ ಅರ್ಜಿ ನಮೂನೆ ಪಡೆದುಕೊಂಡು ದಿನಾಂಕ : ೧೮-೦೯-೨೦೨೪ರೊಳಗಾಗಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ : ೦೮೩೫೨-೨೫೧೦೮೫, ಮೊ: ೯೪೮೦೮೮೬೫೫೫ ಸಂಖ್ಯೆಗೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More