ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ, ಮಕ್ಕಳಿಗೆ ಚಿಕ್ಕವರಿರುವಾಗಲೇ ಒಳ್ಳೆಯ ಸಂಸ್ಕಾರ ಕಲಿಸಿ ಸಂಸ್ಕಾರವಂತರನ್ನಾಗಿ ರೂಪಿಸಿದರೆ ಅವರ ಜೀವನದಲ್ಲಿ ಬೇಕಾದದ್ದನ್ನು ಸಾಧಿಸಬಹುದಾಗಿದೆ ಎಂದು ಬಿಸರಳ್ಳಿಯ ಗವಿಸಿದ್ದೇಶ್ವರ ಶಾಖಾಮಠದ ಶಿವಶಾಂತವೀರ ಮಹಾಸ್ವಾಮಿಗಳು ನುಡಿದರು.
ರವಿವಾರರಂದು ಶ್ರೀ ಗ್ರಾಮದೇವತಾ ಜಾತ್ರೋತ್ಸವ ಅಂಗವಾಗಿ ರಾಜವಾಡೆಯಲ್ಲಿ ಏರ್ಪಡಿಸಲಾದ ಧರ್ಮಸಭೆಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು, ಮಕ್ಕಳಲ್ಲಿ ಒಳ್ಳೆಯ ಜ್ಞಾನ ಬೆಳೆಯುವಂತೆ ಪಾಲಕರು ಎಚ್ಚರ ವಹಿಸಬೇಕು. ನಮ್ಮ ಸಂಸ್ಕೃತಿಯನ್ನು ಅರಿತ ವಿದೇಶಿಗರು ನಮ್ಮ ದೇಶಕ್ಕೆ ಬಂದಾಗ ಕಾಲಲ್ಲಿಯ ಚಪ್ಪಲ ಬಿಟ್ಟು ಭೂತಾಯಿಗೆ ನಮಿಸಿ ಬರುವಂತಹ ಕಾರ್ಯ ನಡೆದಿದೆ. ನಮ್ಮ ಭಾರತೀಯ ಸಂಸ್ಕೃತಿಯೆಂಬುದನ್ನು ಇಲ್ಲಿಯ ಜ್ಞಾನವನ್ನೇ ಉಸಿರಾಗಿಸಿಕೊಂಡು ಬದುಕುವವರೇ ನಿಜವಾದ ಭಾರತೀಯರೆಂದರು.
ಶ್ರೀ ಖಾಸ್ಗತೇಶ್ವರ ಮಠದ ಪೀಠಾದಿಪತಿ ಬಾಲಶಿವಯೋಗಿ ಸಿದ್ದಲಿಂಗದೇವರು ಮಾತನಾಡಿ, ಮಳೆಯಾಗಮನದಿಂದ ರೈತರ ಮೊಗದಲ್ಲಿ ಹರ್ಷ ಮೂಡಲಿದೆ. ರೈತರ ಖುಷಿ ಮುಂದೆ ನಮ್ಮ ಖುಷಿ ಇಲ್ಲ. ರೈತ ಇಲ್ಲದಿದ್ದರೆ ಮಣ್ಣು ತಿನ್ನುವ ಪರಿಸ್ಥಿತಿ, ಅದರಂತೆ ಸೈನಿಕ ಇಲ್ಲದಿದ್ದರೆ ದೇಶದ ರಕ್ಷಣೆಯಾಗಲು ಸಾಧ್ಯವಿಲ್ಲ ಎಂದರು.
ವೇದಿಕೆಯ ಮೇಲೆ ಜಿ.ಪಂ. ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾ ಭಾಜಪ ಮಾಜಿ ಅಧ್ಯಕ್ಷ ಆರ್.ಎಸ್. ಪಾಟೀಲ(ಕೂಚಬಾಳ), ಮುತ್ತುಗೌಡ ಪಾಟೀಲ, ಶರಣು ಗೊಟಗುಣಕಿ, ಪುರಸಭಾ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ, ದುಂಡಪ್ಪಗೌಡ ಪಾಟೀಲ, ಗುರುಸಂಗಪ್ಪ ಕಶೆಟ್ಟಿ, ಅಣ್ಣಪ್ಪ ಜಗತಾಪ, ಶಂಕರಗೌಡ ಪಾಟೀಲ, ಮಲ್ಲನಗೌಡ ಹಿರೇಗೌಡರ, ಸುರೇಶ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಅತಿಥಿ ಮಹೋದಯರಿಗೆ ಹಾಗೂ ದಾನಿಗಳಾದ ನಿವೃತ್ತ ಎಸ್.ಪಿ. ಕಟ್ಟಿಮನಿ, ಬಾಪುಗೌಡ ಬಿರಾದಾರ, ನಿರಂಜನಶಾ ಮಕಾಂದಾರ, ಪ್ರಭುಗೌಡ ಮದರಕಲ್ಲ, ಘನಶ್ಯಾಮ ಚವ್ಹಾಣ, ನಾರಾಯಣ ಗಾಯಕವಾಡ, ವಿಠ್ಠಲ ಶೇವಳಕರ, ಕಾಶೀನಾಥ ಹಿರೇಮಠ, ರಮೇಶ ಕಟ್ಟಿಮನಿ, ಆನಂದ ಮದರಕಲ್ಲ, ವಿಜುಗೌಡ ಪಾಟೀಲ(ಸಾಲವಾಡಗಿ), ಶಿವಾನಂದ ಹೂಗಾರ, ಮಲ್ಲನಗೌಡ ಪಾಟೀಲ, ಮೊದಲಾದವರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕುಮಾರಿ ತೇಜಸ್ವಿನಿ ಡಿಸಲೆ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

