ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿದೆ ಎಂದು ತಪ್ಪು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಕೂಡಲೇ ದೇಶದ ಜನತೆಗೆ ಕ್ಷಮೆಯಾಚಿಸಬೇಕು ಎಂದು
ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರವೀಂದ್ರ ಲೋಣಿ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಕೇವಲ ಒಂದು ರೂ. ಮಾತ್ರ ಟ್ರಸ್ಟ್ ನೀಡಿದೆ, ಯಾವ ಅನುದಾನವನ್ನು ಸರ್ಕಾರದಿಂದ ಮಂದಿರ ನಿರ್ಮಾಣಕ್ಕೆ ಬಿಡುಗಡೆಯಾಗಿಲ್ಲ, ಆದರೆ ಜನರ ತೆರಿಗೆ ದುಡ್ಡು ಬಳಕೆ ಮಾಡಿ ಮಂದಿರ ನಿರ್ಮಾಣ ಮಾಡಿದ್ದಾರೆ ಎಂದು ತಪ್ಪು ಗ್ರಹಿಕೆ ಮಾಡುವ ಪ್ರಯತ್ನ ಮಾಡಿರುವ ಎಸ್.ಎಂ. ಪಾಟೀಲ ಗಣಿಹಾರ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದರು.
ನಿಜವಾಗಿಯೂ ನಿಮಗೆ ಕಾಳಜಿ ಇದ್ದರೆ ಅಲ್ಪಸಂಖ್ಯಾತ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಆಸ್ತಿ ಅತಿಕ್ರಮಣ ಬಗ್ಗೆ ಮಾತನಾಡಿ, ಅದರ ಬಗ್ಗೆ ಹೋರಾಡಿ, ಅನ್ವರ ಮಾನಿಪ್ಪಡಿ ವರದಿ ಆಧರಿಸಿ ಹೋರಾಟ ಮಾಡಿ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಿ, ಇದನ್ನು ಬಿಟ್ಟು ರಾಮ ಮಂದಿರ ವಿಷಯ ಕೆಣಕುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸ್ಥಾನ ಗಿಟ್ಟಿಸಿಕೊಳ್ಳಲು ಈ ರೀತಿ ಸುಳ್ಳು ಹೇಳಿಕೆ ನೀಡಿ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಹೋಗಬೇಡಿ ಎಂದರು.
ನಿಮ್ಮ ರಾಜ್ಯ ಸರ್ಕಾರದ ಐಟಿ ಬಿಟಿ ಮಂತ್ರಿಗಳು ಏನು ಮಾಡುತ್ತಿದ್ದಾರೆ, ಕೇಂದ್ರ ಸರ್ಕಾರದ ಐಟಿ ಬಿಟಿ ಮಂತ್ರಿ ಯಾವ ರೀತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ನೋಡಿ ಕಲಿತುಕೊಳ್ಳಲು ರಾಜ್ಯ
ನೀವು ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಏಕೆ ಪತ್ರಿಕಾಗೋಷ್ಠಿ ಮಾಡುವುದಿಲ್ಲ? ಖಾಸಗಿ ಹೋಟೆಲ್ ನಲ್ಲಿ ಏಕೆ ಪತ್ರಿಕಾಗೋಷ್ಠಿ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಸಾಧು-ಸಂತರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರೆಸುವ ಮೂಲಕ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾಡುತ್ತಿದ್ದಾರೆ, ಅವರ ಆರೋಪದಲ್ಲಿ ಯಾವ ಹುರುಳಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ ಎಂದರು.
ಈ ಹಿಂದೆ ಜನಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದ ಎಸ್.ಎಂ. ಪಾಟೀಲ ಗಣಿಹಾರ ಈಗ ಕೇವಲ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸುವುದನ್ನೇ ತಮ್ಮ ಕಾಯಕ ಮಾಡಿಕೊಂಡಿದ್ದಾರೆ ಎಂದರು.
ಸಹಕಾರಿ ಧುರೀಣ ಹಾಗೂ ಬಿಜೆಪಿ ಮುಖಂಡ ರಮೇಶ ಬಿದನೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬಹಿರಂಗ ಚರ್ಚೆಗೆ ಬನ್ನಿ
ಕೇಂದ್ರ ಸರ್ಕಾರದಿಂದ ವೈಫಲ್ಯವಾಗಿದ್ದರೆ ನೀವು ಚರ್ಚೆಗೆ ಬನ್ನಿ. ನಾನು ದಾಖಲೆ ಹಾಗೂ ಅಂಕಿ ಅಂಶಗಳ ಸಮೇತ ನಾನು ಕೇಂದ್ರ ಸರ್ಕಾರದ ಸಾಧನೆ ಪರ ಮಾತನಾಡುವೆ, ಬೇಕಾದರೆ ಸವಾಲು ಸ್ವೀಕರಿಸಿ ಎಂದು ಲೋಣಿ ಸವಾಲು ಹಾಕಿದರು.
ನಿಮ್ಮ ಪಕ್ಷದಲ್ಲಿ ಶಿಸ್ತು ಇಲ್ಲ, ನೀವು ಮುಖಂಡರ ಜೊತೆ ಚರ್ಚಿಸುವುದಿಲ್ಲ, ನೀವು ತಪ್ಪು ಮಾಹಿತಿ ಬಿತ್ತರಿಸಿದರೆ ಕಾಂಗ್ರೆಸ್ ಪಕ್ಷಕ್ಕೂ ಮುಜುಗರ, ಹೀಗಾಗಿ ಕಾಂಗ್ರೆಸ್ ನಾಯಕರು ಎಸ್.ಎಂ. ಪಾಟೀಲರಿಗೆ ಬ್ರೇಕ್ ಹಾಕುವ ಕೆಲಸ ಮಾಡಲಿ ಎಂದರು.

