ವಿಜಯಪುರ: 245 ಸಿಟಿಐ ಮತ್ತು 545 ಸಿವಿಲ್ ಪಿ.ಎಸ್.ಐ ಹುದ್ದೆಗಳ ನೇಮಕಾತಿ ಸೇರಿದಂತೆ ಈಗಾಗಲೇ ನಡೆದಿರುವ ಲಿಖಿತ ಪರೀಕ್ಷೆಗಳ ಫಲಿತಾಂಶವನ್ನು ಕರ್ನಾಟಕ ಲೋಕಸೇವಾ ಆಯೋಗ ಆದಷ್ಟು ಬೇಗ ಪ್ರಕಟಿಸಬೇಕು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಪಿಸಿ (ಸಿವಿಲ್/ಸಿಎಆರ್/ಡಿಎಆರ್) ಹುದ್ದೆಯಿಂದ ದೂರ ಉಳಿಯುತ್ತಾರೆ. ಇದರಿಂದ ಬೇರೆಯವರಿಗೂ ಅವಕಾಶ ಸಿಗುತ್ತದೆ ಹಾಗೂ ತೇರ್ಗಡೆಯಾದವರಿಗೆ ಮತ್ತೆ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.
ಪಿ.ಸಿ ಪರೀಕ್ಷೆಯ ಫಲಿತಾಂಶ ಮೊದಲು ಬಿಡುಗಡೆಯಾಗಿ, ನಂತರ ಪಿ.ಎಸ್.ಐ ಆಗಿ ಎರಡರಲ್ಲೂ ತೇರ್ಗಡೆಯಾದವರು ಪಿ.ಸಿ ಬಿಟ್ಟು ಪಿ.ಎಸ್.ಐ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮತ್ತೆ ಬ್ಯಾಕ್ಲಾಗ್ ಆಗಿ ಸರ್ಕಾರಕ್ಕೂ ಅಭ್ಯರ್ಥಿಗಳಿಗೂ ತೊಂದರೆಯಾಗುವುದು ಖಚಿತ.
ಒಂದು ಉದ್ಯೋಗ ಸಿಗುವುದರಿಂದ ಒಂದು ಮನೆಗೆ ಸಾಕಷ್ಟು ಆರ್ಥಿಕ ನೆರವಾಗುತ್ತದೆ. ಅಭ್ಯರ್ಥಿಯ ಭವಿಷ್ಯ ಸಧೃಡವಾಗುತ್ತದೆ. ಪರೀಕ್ಷೆ ಫಲಿತಾಂಶದ ವಿಳಂಬ, ಅನಿಶ್ಚಿತತೆ, ಅವೈಜ್ಞಾನಿಕ ವೇಳಾಪಟ್ಟಿ, ಅಭ್ಯರ್ಥಿ ಇರುವ ಊರಿಂದ ಬೇರೆ ಊರಿಗೆ ಪರೀಕ್ಷೆ ಸೆಂಟರ್ ನಿಗದಿ ಮಾಡುವುದನ್ನು ಬಿಟ್ಟು ಪರೀಕ್ಷಾರ್ಥಿಗಳ ಪರ ಆಯೋಗ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಲಿಖಿತ ಪರೀಕ್ಷೆಗಳ ಫಲಿತಾಂಶ ಬೇಗ ಪ್ರಕಟಿಸಲು ಶಾಸಕ ಯತ್ನಾಳ ಆಗ್ರಹ
Related Posts
Add A Comment

