ಬಸವನಬಾಗೇವಾಡಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಜನರ ಕಲ್ಯಾಣಕ್ಕಾಗಿ ಸಾಮಾಜಿಕ ಸಮಾನತೆಗಾಗಿ ನ್ಯಾಯದ ದೃಷ್ಟಿಯಿಂದ ಮೀಸಲಾತಿ ಒದಗಿಸಿದ್ದರು. ಆದರೆ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ನೀಡಿದ ೨೦೧೧ ರ ಸದಾಶಿವ ಆಯೋಗದ ವರದಿಯ ಆಧಾರ ಇಟ್ಟುಕೊಂಡು ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ನೀಡಲು ಪ್ರಯತ್ನದಲ್ಲಿದೆ. ಸರ್ಕಾರದ ನಡೆ ಸಂವಿಧಾನದ ಆಶಯಕ್ಕೆ ವಿರುದ್ಧವಿದೆ. ಇದಕ್ಕೆ ಬಂಜಾರಾ,ಭೋವಿ, ಕೊರಚ ಹಾಗೂ ಕೊರಮ ಸಮುದಾಯದ ವಿರೋಧವಿದೆ ಎಂದು ರಾಷ್ಟ್ರೀಯ ಗೊರಮಾಳವ ತಾಲೂಕಾಧ್ಯಕ್ಷ ಶಾಂತು ರಾಠೋಡ, ಭೋವಿ ಸಮಾಜದ ಜಿಲ್ಲಾ ಮುಖಂಡ ಸಿದ್ರಾಮ ಪಾತ್ರೋಟಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿರಾಗ್ ಪಾಸ್ವಾನ್, ಮಾಯಾವತಿ, ರಾಮದಾಸ ಅತವಾಲೆ ಅವರು ಆಗಷ್ಟ್ ೧ ರಂದು ಸುಪ್ರಿಂಕೋರ್ಟ್ ಒಳಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂದು ತೀರ್ಪು ನೀಡಿದನ್ನು ವಿರೋಧಿಸಿ ಇಂದು ಭಾರತ್ ಬಂದ್ ಕರೆ ನೀಡಿದ್ದರು. ಈ ಬಂದ್ಗೆ ನಮ್ಮದು ಸಂಪೂರ್ಣ ಬೆಂಬಲವಿದೆ. ಒಳಮೀಸಲಾತಿ ಮಾಡುವದನ್ನು ಕೈಬಿಡಬೇಕು. ಸಂವಿಧಾನದಲ್ಲಿ ಒಳಮೀಸಲಾತಿ ಎಂಬ ಪದವೇ ಇಲ್ಲ. ಆಂದ್ರಪ್ರದೇಶದಲ್ಲಿ ಹಿಂದೆ ಒಳಮೀಸಲಾತಿ ನೀಡಿತ್ತು. ಆಗ ಕೆಲ ಸಮುದಾಯದವರು ಇದರ ಬಗ್ಗೆ ಸುಪ್ರಿಂಕೋರ್ಟ್ಗೆ ಮೊರೆ ಹೋಗಿ ಇದರ ಬಗ್ಗೆ ಪ್ರಶ್ನಿಸಿದಾಗ ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ನೀಡುವ ಅಧಿಕಾರ ಇಲ್ಲ ಎಂದು ಹೇಳಿತ್ತು. ಇದೀಗ ಸುಪ್ರೀಂಕೋರ್ಟ್ ಒಳಮೀಸಲಾತಿ ಕುರಿತು ಆದೇಶ ಹೊರಡಿಸಿದರ ಬಗ್ಗೆ ಮರುಪರಿಶೀಲನೆ ಮಾಡುವ ಅಗತ್ಯವಿದೆ ಎಂದರು.
ಸಂವಿಧಾನತ್ಮಕವಾಗಿ ನೀಡಿರುವ ಮೀಸಲಾತಿ ಮಾತ್ರ ಮುಂದುವರಿಸಿಕೊಂಡು ಹೋಗಬೇಕಿದೆ. ಒಳಮೀಸಲಾತಿಯಿಂದ ನಮ್ಮ ಎರಡು ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ರಾಜ್ಯ ಸರ್ಕಾರ ತರಾತುರಿಯಾಗಿ ಒಳಮೀಸಲಾತಿಯನ್ನು ಜಾರಿಗೆ ತರಕೂಡದು. ನಮ್ಮ ಸಮುದಾಯಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕಿದೆ. ಮೀಸಲಾತಿ ಕುರಿತು ಸಂವಿಧಾನದಲ್ಲಿ ತಿದ್ದುಪಡಿಯಾಗಬೇಕಾದರೆ ಕೇಂದ್ರ ಸರ್ಕಾರ ಮಾಡಬೇಕು. ಇದನ್ನು ರಾಜ್ಯ ಸರ್ಕಾರ ಮಾಡಲು ಸಾಧ್ಯವಿಲ್ಲ. ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮರುಪರಿಶೀಲನೆ ಮಾಡುವದು ತುಂಬಾ ಅಗತ್ಯವಿದೆ. ಒಳಮೀಸಲಾತಿ ನೀಡುವದನ್ನು ಕೈಬಿಟ್ಟು ಸಂವಿಧಾನ ಆಶಯದಂತೆ ಮೊದಲಿನ ಮೀಸಲಾತಿಯನ್ನು ಮುಂದುವರಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಬಸವರಾಜ ಚವ್ಹಾಣ, ಶಿವಾಜಿ ಲಮಾಣಿ, ಬಾಬು ಚವ್ಹಾಣ, ಬಾಳು ರಾಠೋಡ, ಶಿವಾಜಿ ರಾಠೋಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

