ಬಸವನಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವದಂಗವಾಗಿ ಬುಧವಾರ ಬೆಳಗ್ಗೆ ಮಧ್ಯ ಆರಾಧನೆ ಪೂಜೆ, ಅಷ್ಟೋತ್ತರ, ಕ್ಷೀರಾಭಿಷೇಕ ಜರುಗಿತು. ಆಚಾರ್ಯ ವಾದಿರಾಜ ಯಜುರ್ವೇದಿ ಅವರಿಂದ ಮಹಾಪೂಜೆ, ಅಲಂಕಾರ ಪೂಜೆ ನೆರವೇರಿತು.
ಪೂಜಾ ಕಾರ್ಯಕ್ರಮದಲ್ಲಿ ವಸಂತಚಾರ್ಯ ಇಂಗಳೇಶ್ವರ, ರಾಮಾಚಾರಿ ಯಜುರ್ವೇದಿ, ವಿಠ್ಠಲಾಚಾರ್ಯ ಜೋಶಿ, ವಿಠ್ಠಲ ದೇಶಪಾಂಡೆ, ವಸಂತ ಕುಲಕರ್ಣಿ, ಯಲಗೂರೇಶ ಯಜುರ್ವೇದಿ, ಪ್ರಲ್ಹಾದ ಕುಲಕರ್ಣಿ, ಅನಂತರಾವ ಕುಲಕರ್ಣಿ, ವಿಠ್ಠಲ ಕುಲಕರ್ಣಿ, ರಾಮಾಚಾರ್ಯ ಜೋಶಿ, ನಾರಾಯಣ ಕುಲಕರ್ಣಿ ಇತರರು ಇದ್ದರು.
ಆ.೨೨ ರಂದು ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವದಂಗವಾಗಿ ಉತ್ತರಾರಾಧನೆ ಪೂಜೆ, ಸತ್ಯನಾರಾಯಣ ಪೂಜೆ, ಮಹಾರಥೋತ್ಸವ ಜರುಗಲಿದೆ ಎಂದು ವಾದಿರಾಜ ಯಜುರ್ವೇದಿ ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

