ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನ ಕೋಹಳ್ಳಿ ಗ್ರಾಮದ ಶ್ರೀ ಸಂಗಮೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶೌಕತಲಿ ಇಸ್ಮಾಯಿಲ್ ಡೊಂಗರಗಾಂವ ಹಾಗೂ ಉಪಾಧ್ಯಕ್ಷರಾಗಿ ಶಿವನವ್ವ ವಿಠಲ ಡಂಬಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಒಟ್ಟು 12 ನಿರ್ದೇಶಕರ ಪೈಕಿ 7 ನಿರ್ದೇಶಕರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸೇರಿದಂತೆ ನಿರ್ದೇಶಕರ ಮಂಡಳಿಯ ಸದಸ್ಯರು ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ನಿವಾಸಕ್ಕೆ ಭೇಟಿ ನೀಡಿ, ಮಾರ್ಗದರ್ಶನ ಮತ್ತು ಸಹಕಾರಕ್ಕಾಗಿ ಅಭಿನಂದನೆ ಸಲ್ಲಿಸಿ ಸತ್ಕರಿಸಿದರು.
ನೂತನ ಅಧ್ಯಕ್ಷ ಶೌಕತಲಿ ಇಸ್ಮಾಯಿಲ್ ಡೊಂಗರಗಾಂವ ಅವರು ಮಾತನಾಡಿ, “ಸಂಘದ ಅಭಿವೃದ್ಧಿಗೆ ಎಲ್ಲ ನಿರ್ದೇಶಕರು ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕ ಆಡಳಿತ ನೀಡುತ್ತೇವೆ. ರೈತರಿಗೆ ಅಗತ್ಯವಿರುವ ಸಾಲ, ಕೃಷಿ ಸಂಬಂಧಿತ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳು ಸಮಯಕ್ಕೆ ತಲುಪುವಂತೆ ಶ್ರಮಿಸುತ್ತೇವೆ. ಸಂಘವನ್ನು ಆರ್ಥಿಕವಾಗಿ ಇನ್ನಷ್ಟು ಸದೃಢಗೊಳಿಸಿ, ಸದಸ್ಯರ ಹಿತಾಸಕ್ತಿಗೆ ಆದ್ಯತೆ ನೀಡುವ ಮೂಲಕ ಎಲ್ಲರ ಸಹಕಾರದೊಂದಿಗೆ ಮಾದರಿ ಸಹಕಾರ ಸಂಘವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ,” ಎಂದು ಹೇಳಿದರು.
ಈ ವೇಳೆ ನೂರಅಹಮ್ಮದ ಡೊಂಗರಗಾಂವ, ಡಾ. ಆಸಿಫಲಿ ಡೊಂಗರಗಾಂವ, ಡಾ. ತಾಜುದ್ದೀನ್ ಡೊಂಗರಗಾಂವ, ಅಜರುದ್ದೀನ್ ಡೊಂಗರಗಾಂವ, ಆದಿಲ್ ಡೊಂಗರಗಾಂವ, ಸೇರಿದಂತೆ ಸಂಘದ
ನಿರ್ದೇಶಕರಾದ ರೇವಣ್ಣಸಿದ್ದ ಸತ್ತಿ, ಸುವರ್ಣಾ ಝರೆ, ಸುರೇಶ ಬಿಳಗುಂಡಿ, ರಾಮು ತಳವಾರ,ಸದಾಶಿವಸರಗರ, ಸದಾಶಿವ ಹರಪಾಳೆ, ಶ್ರೀಕಾಂತ ಆಲಗೂರ, ಸಹದೇವ ಸೂರ್ಯವಂಶಿ, ತುಕಾರಾಮ ಫಡತಾರೆ, ಸಿಕಂದರ ಮುಜಾವರ, ಕೇದಾರಿ ವಳಸಂಗ, ದಿಲೀಪ ಮರಗಾಳೆ, ಹಣಮಂತ ಬಜಂತ್ರಿ, ಶಿವಗೌಡ ಮುಧೋಳ, ಸುರೇಶ ಅವತಾಡೆ, ಸೈಬಣ್ಣ ಪೂಜಾರಿ, ಬಂದುಸಾಬ ಮುಜಾವರ, ನಿಂಗಪ್ಪ ಮಿರ್ಜಿ, ಬದ್ರುದ್ದೀನ್ ಡೊಂಗರಗಾಂವ, ಬೈಜು ಮರಗಾಳೆ, ವಿಠಲ ಸರಗರ, ವಿನೋದ ಗುರಪ್ಪಗೋಳ, ಅಶೋಕ ತಳಕೇರಿ, ಪ್ರಕಾಶ ಕನ್ನಾಳ, ಶಂಕರ ಗುರಪ್ಪ ಗೋಳ, ಪುರಂದರ ನಾಟೀಕಾರ, ಮಹಾದೇ ವ ಸತ್ತಿ, ಅಶೋಕ ಗುರಪ್ಪಗೋಳ, ಭೀಮಣ್ಣ ಕಂಕಣವಾಡಿ ಸೇರಿ ಹಲವರುಹಾಜರಿದ್ದರು.

