Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಇಂದಿರಾ ನಗರದ ನಿವಾಸಿಗಳು ತಮ್ಮ ತಗಡಿನ ಮನೆಗಳನ್ನು ತೆರವು ಮಾಡುವುದನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿ ತಹಶೀಲ್ದಾರ ಕಚೇರಿಯ ಎದುರು, ಕೊಳಗೇರಿ ಅಭಿವೃದ್ಧಿ ಮಂಡಳಿ ನೀಡಿದ ಹಕ್ಕುಪತ್ರ ಹಿಡಿದು ದಿಢೀರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಈ ವೇಳೆ ನಿವಾಸಿಗಳಾದ ರಾಮು ದಳವಾಯಿ ಮಾತನಾಡಿ, ಕೊಳಗೇರಿ ಅಭಿವೃದ್ದಿ ಮಂಡಳಿಯವರು ಮತ್ತು ಪುರಸಭೆಯವರು ಜಂಟಿಯಾಗಿ ಸರ್ವೇ ಮಾಡಿ ನಮಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳನ್ನು ನೀಡಲಾಗಿದೆ. ಸುಮಾರು ವರ್ಷಗಳಿಂದ ನಾವು ಇಲ್ಲಿ ವಾಸವಿದ್ದೇವೆ. ಸಧ್ಯ ಪುರಸಭೆ ಮುಖ್ಯಾಧಿಕಾರಿಗಳು ದಿಢೀರನೆ ಬಂದು ಮಂಡಳಿ ನೀಡಿದ ಹಕ್ಕು ಪತ್ರಗಳನ್ನೂ ಸಹ ಗಮನಿಸಿದೇ ನಿಮ್ಮ ತಗಡಿನ ಮನೆಗಳು ಅನಧಿಕೃತವಾಗಿವೆ. ಕೂಡಲೇ ಖಾಲಿ ಮಾಡಿ ಇಲ್ಲದಿದ್ರೆ ತೆರವುಗೊಳಿಸುವದಾಗಿ ತಿಳಿಸಿದ್ದಾರೆ. ಈ ನಡೆಯನ್ನು ನಾವು ಖಂಡಿಸುತ್ತೇವೆ. ಕೊಳಗೇರಿ ಅಭಿವೃದ್ಧಿ ಮಂಡಳಿ ನೀಡಿದ ಹಕ್ಕುಪತ್ರವನ್ನು ಗಮನಿಸದೇ, ಯಾವ ನೊಟೀಸನ್ನೂ ನೀಡದೇ ನಮ್ಮ ಮನೆಗಳನ್ನು ತೆರವುಗೊಳಿಸಲು ಹುನ್ನಾರ ನಡೆಸಿರುತ್ತಾರೆ. ಕೂಡಲೇ ಈ ದಬ್ಬಾಳಿಕೆಯನ್ನು ಕೈಬಿಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದಲ್ಲಿರುವ ಅಕ್ರಮ ನಳಗಳನ್ನು ಸಕ್ರಮಗೊಳಿಸಿದರೆ ಪುರಸಭೆಗೆ ಆದಾಯ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷ ಶಾಂತವೀರ ಬಿರಾದಾರ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಹಲವು ವಿಷಯಗಳನ್ನು ಚರ್ಚಿಸಿ ಮಾತನಾಡಿದ ಅವರು, ಅಕ್ರಮವಾಗಿ ನಳ ಸಂಪರ್ಕ ಪಡೆದ ಮನೆಯ ಮಾಲಿಕರಿಗೆ ಸಕ್ರಮಗೊಳಿಸಿಕೊಳ್ಳಲು ಕಾಲಾವಕಾಶ ಅಥವಾ ನೋಟಿನ್ ನೀಡಿ ಸಕ್ರಮಗೊಳಿಸಲು ತಿಳಿಸಬೇಕು ಎಂಬುದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.ಬಳಿಕ ಮುಖ್ಯಾಧಿಕಾರಿ ಸುರೇಶ ನಾಯಕ ಮಾತನಾಡಿ, ಪಟ್ಟಣದಲ್ಲಿ ಒಟ್ಟು ೧೦ ಸಾವಿರಕ್ಕೂ ಅಧಿಕ ಮನೆಗಳಿವೆ. ಆದರೆ ಅದರಲ್ಲಿ ಕೇವಲ ೨ಸಾವಿರ ಮನೆಗಳು ಮಾತ್ರ ಅಧಿಕೃತ ನಳಗಳ ಜೋಡಣೆಯಿದ್ದು, ಇನ್ನೂಳಿದ ಮನೆಗಳಿಗೆ ಅಕ್ರಮ ನಳಗಳ ಜೋಡಣೆ ಇದೆ ಅವುಗಳನ್ನು ಸಕ್ರಮಗೊಳಿಸುವುದು ಸೂಕ್ತ ಎಂದು ಉಲ್ಲೇಖ ಮಂಡಿಸಿದರು.ಪುರಸಭೆಯಲ್ಲಿ ಚುನಾಯಿತರಾದ ಸದಸ್ಯರಿಗೆ ಗೌರವ ಇಲ್ಲದಂತಾಗಿದೆ. ನಮ್ಮ ವಾರ್ಡಿನ ಸಮಸ್ಯೆಗಳನ್ನು ಪುರಸಭೆ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೂ ಯಾವುದೇ ಕ್ರಮ ಜರುಗಿಸಲ್ಲ ಎಂದು ಸದಸ್ಯೆ ಪ್ರತಿಭಾ ಕಲ್ಲೂರ ಆರೋಪಿಸಿದರು.ಗುಂಟಾ ಪ್ಲಾಟ್‌ಗಳಿಗೂ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇತ್ತೀಚೆಗೆ ಆಹಾರ ಪದ್ದತಿಯಲ್ಲಿನ ಬದಲಾವಣೆಯಿಂದಾಗಿ ಜನರಲ್ಲಿ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿಸಿದ ಖಾಯಿಲೆ ಸೇರಿದಂತೆ ಅನೇಕ ರೋಗಗಳು ಸಾಮಾನ್ಯವಾಗಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಮತಕ್ಷೇತ್ರದ ಆಲಮೇಲ ಪಟ್ಟಣದಲ್ಲಿ ಡಾ.ಸಮೀರ ಹಾದಿಮನಿ ಹಾಗೂ ಸಮಾನ ಮನಸ್ಕರ ಬಳಗದ ವತಿಯಿಂದ ಹಮ್ಮಿಕೊಂಡ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಹಾದಿಮನಿ ಆಸ್ಪತ್ರೆಯು ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗಾಗಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಆರೋಗ್ಯ ಜಾಗೃತಿ ಮತ್ತು ರೋಗಿಗಳ ಆರ್ಥಿಕ ಹೊರೆ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಾದಿಮನಿ ಆಸ್ಪತ್ರೆಯ ವೈದ್ಯ ಡಾ.ಸಮೀರ ಹಾದಿಮನಿ ಇವರ ಸಾಮಾಜಿಕ ಕಳಕಳಿ ಹಾಗೂ ಇವರ ನಿಸ್ವಾರ್ಥ ಸೇವಾಕಾರ್ಯ ಶ್ಲಾಘನೀಯ ಎಂದರು.ಈ ವೇಳೆ ವಿಜಯಪುರದ ನೇತ್ರ ತಜ್ಞ ಡಾ.ಬಸವರಾಜ್ ಝಳಕಿ, ಮೂತ್ರಪಿಂಡ ತಜ್ಞ ಡಾ. ಸಂದೀಪ ಪಾಟೀಲ್, ಎಲುಬು-ಕೀಲು ತಜ್ಞ ಡಾ. ಪ್ರೀತಿಶ್ ಯಂಡಿಗೇರೆ ಮಾತನಾಡಿ, ಜನರು ತಮ್ಮ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕೇವಲ ಮುಖಂಡರಿಂದಷ್ಟೇ ಪಕ್ಷ ಬೆಳೆಯಲು ಸಾಧ್ಯವಿಲ್ಲ. ಯುವಕರು ಬೂತ್ ಮಟ್ಟದಲ್ಲಿ ಸಂಚರಿಸಿ ಪಕ್ಷದ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸಿದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸದಸ್ಯತ್ವ ಅಭಿಯಾನ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.ಮತಕ್ಷೇತ್ರದ ಗ್ರಾಮದಲ್ಲಿ ಬಿಜೆಪಿ ಸಂಘಟನಾ ಪರ್ವ ಮಹಾ ಸಂಪರ್ಕ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಜನಪರ ರೈತರ ಪರವಾಗಿ ಹತ್ತು ಹಲವಾರು ಹೊಸ ಹೊಸ ಯೋಜನೆಗಳನ್ನು ತರುವ ಮೂಲಕ ಬಲಿಷ್ಠ ರಾಷ್ಟ್ರಗಳು ಭಾರತದತ್ತ ಮುಖಮಾಡಿ ನೋಡುವ ಹಾಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬಿಜೆಪಿ ಪಕ್ಷ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ತಾವೆಲ್ಲರೂ ಬೂತ ಮಟ್ಟದಲ್ಲಿ ಸಂಚರಿಸಿ ಹೆಚ್ಚಿನ ಸಂಖ್ಯೆಯಲ್ಲಿ ನೂತನ ಸದಸ್ಯರನ್ನು ನೋಂದಾಯಿಸಬೇಕು ಎಂದು ಮನವಿ ಮಾಡಿದರು.ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ತಾಪಂ ಮಾಜಿ ಸದಸ್ಯ ಮಡಿವಾಳಪ್ಪ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದಲ್ಲಿ ರವಿವಾರ ಬೆಳ್ಳಂಬೆಳಿಗ್ಗೆ ಪುರಸಭೆಯ ವತಿಯಿಂದ ಪೊಲೀಸರ ಸರ್ಪಗಾವಲಿನಲ್ಲಿ ಎರಡು ಜೆಸಿಬಿಗಳು ಘರ್ಜಿಸಿವೆ.ಇಲ್ಲಿನ ತಂಗಡಗಿ ರಸ್ತೆಯ ಜ್ಞಾನ ಭಾರತಿ ಶಾಲೆಯಿಂದ ಅಂಬೇಡ್ಕರ್ ವೃತ್ತ ಮತ್ತು ರಿಲಯನ್ಸ್ ಪೆಟ್ರೋಲ್ ಪಂಪ ವರೆಗೆ ಮುಖ್ಯ ರಸ್ತೆಯಲ್ಲಿ ಪುರಸಭೆ ಜಾಗೆಯನ್ನು ಅತಿಕ್ರಮಣ ಮಾಡಿದ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಸಫಲವಾಗಿದೆ.ಹಲವು ದಿನಗಳಿಂದ ಪುರಸಭೆ ರಸ್ತೆಯನ್ನು ಅತಿಕ್ರಮಿಸಿ ಕೆಲವು ಡಬ್ಬಾ ಅಂಗಡಿಗಳು, ಗೂಡಂಗಡಿಗಳು ತಮ್ಮ ದೈನಂದಿನ ವ್ಯಾಪಾರ ವಹಿವಾಟುಗಳನ್ನು ನಡೆಸಿದ್ದರು. ಇದರ ಪರಿಣಾಮ ವಾಹನ ಸಂಚಾರಕ್ಕೆ, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ಸಾಕಷ್ಟು ತೊಂದರೆಯಾಗಿತ್ತು. ಹಲವೆಡೆ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಡಬ್ಬಾ ಅಂಗಡಿಗಳನ್ನಿಟ್ಟು ವ್ಯವಸ್ಥಿತವಾಗಿ ನಡೆಸಲಾಗುತ್ತಿತ್ತು. ಅಲ್ಲದೇ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭಯಾನಕ ಅಪಘಾತಗಳು ನಡೆದು ಶಾಲಾ ಮಕ್ಕಳ, ಯುವಕರ, ವೃದ್ಧರ ಸಾವುಗಳು ಅಗಿದ್ದವು. ಇದೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಈ ಕಾರ್ಯಾಚರಣೆ ನಡೆಸಿರುವದಾಗಿ ಪುರಸಭೆ ಮೂಲಗಳಿಂದ ತಿಳಿದು ಬಂದಿದೆ.ಕಳೆದ ಕೆಲವು ದಿನಗಳಿಂದ ಅಟೋ ಮೂಲಕ ಪಟ್ಟಣದಲ್ಲಿ ಅತಿಕ್ರಮಿತ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಚೊಂಡಿ ಗ್ರಾಮದ ಬಾವಿಯೊಂದರಲ್ಲಿ ಬಿದ್ದಿದ್ದ ಹಸುವನ್ನು ರಕ್ಷಿಸುವಲ್ಲಿ ರವಿವಾರ ಅಗ್ನಿಶಾಮಕ ಸಿಬ್ಬಂದಿ ಸಫಲರಾಗಿದ್ದಾರೆ.ಕಾಸೀಮಸಾಬ ಎಂಬುವರಿಗೆ ಸೇರಿದ್ದ ಜಮೀನಿನ ಸುಮಾರು ೫೦ ಅಡಿ ಆಳವಿರುವ ಭಾವಿಯಲ್ಲಿ ಹಸು ಬಿದ್ದಿದೆ. ಅದನ್ನು ಕಂಡ ಹಲವರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳಾದ ಸುಭಾಷ ರಾಠೋಡ, ಸಿದ್ದಣ್ಣ ಪೊಲೇಶಿ, ಸಂತೋಷ ಲಮಾಣಿ, ಮಹೇಶ ಕರಡ್ಡಿ, ಪ್ರಕಾಶ ಸುಬ್ಬನಗೋಳ, ಶಕೀಲ ಅವಟಿ, ಮಂಜುನಾಥ ಬಳಿಗಾರ, ರವೀಂದ್ರ ರತ್ನಾಕರ ಮತ್ತು ೧೧೨ ಸಿಬ್ಬಂದಿ ಸಿಕಂದರ ಮಸಳಿ ಮತ್ತು ಯಲ್ಲಪ್ಪ ಭಜಂತ್ರಿ ಗ್ರಾಮಸ್ಥರ ಸಹಾಯದಿಂದ ಸೂಕ್ತ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಇ.ಸಿ.ಎಸ್- ೯೫ ಸಿಂಚಣಿದಾರರು, ರಾಷ್ಟ್ರೀಯ ಸಂಘರ್ಷ ಸಮಿತಿಯ ಕರೆಯ ಮೇರೆಗೆ ವಿಜಯಪುರದ ಭವಿಷ್ಯ ನಿಧಿ ಕಛೇರಿ ಎದುರು ಸುಮಾರು ೫೦೦ ಕ್ಕಿಂತ ಹೆಚ್ಚು ಜನ ಸೇರಿ ಕನಿಷ್ಠ ಪಿಂಚನ ಹೆಚ್ಚಳಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಿದರು. ಇ.ಪಿ.ಎಸ್-೯೫ ಪಿಂಚಣಿದಾರರು ಕಳೆದ ೧೦ -೧೨ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಮಹಾರಾಷ್ಟ್ರದ ಬುಲ್ಡಾನಾದಲ್ಲಿ ಸರತಿ ಉಪವಾಸ ಸತ್ಯಾಗ್ರಹ ಇಂದಿಗೆ ೨೦೯೮ ದಿನಕ್ಕೆ ಕಾಲಿಟ್ಟರೂ ಕೇಂದ್ರ ಸರ್ಕಾರ ಹುಸಿ ಭರವಸೆಗಳನ್ನು ಕೊಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಎನ್.ಎ.ಸಿ. ವಿಜಯಪುರ ಅಧ್ಯಕ್ಷ ಎಸ್.ಜೆ.ಗೌಡರ ಮಾತನಾಡಿದರು.ಇದುವರೆಗೆ ಕನಿಷ್ಠ ಪಿಂಚಣಿ ರೂ.೭೫೦೦+ಡಿ. ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಬೇಡಿಕೆಯನ್ನು ಸರ್ಕಾರ ಇ.ಪಿ.ಎಫ್.ಓ, ಈಡೇರಿಸುತ್ತಿಲ್ಲ . ಪಿಂಚಣಿದಾರರ ಬವಣೆ ಹೇಳತೀರದ್ದು ಆಗಿದೆ. ಸೇವಾವಧಿಯಲ್ಲಿ ವಂತಿಗೆ ಕೊಟ್ಟು ಯೋಗ್ಯ ಪಿಂಚನೆ ಇಲ್ಲದೇ ಪಿಂಚಣಿದಾರ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರ ಬೇಗನೆ ಬೇಡಿಕೆಯನ್ನು ಈಡೇರಿಸಿ ವೃದ್ಧರನ್ನು ಗೌರವಯುತ ಜೀವನವನ್ನು ನಡೆಸಲು ಅನುಕೂಲ ಮಾಡಿಕೊಡಬೇಕೆಂದು ನ್ಯಾಮ್ಸ್ ನೇತಾರ ಎಂ.ಎ.ಮುಲ್ಲಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಜ್ಜನಸಿರಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿವೇಕ ಸಜ್ಜನ ಹಾಗೂ ತಮ್ಮ ಪತಿಯ ಕಾರ್ಯಗಳನ್ನು ಪ್ರೋತ್ಸಾಹಿಸಿ ಬೆಂಬಲವಾಗಿ ನಿಂತ ಅವರ ಧರ್ಮಪತ್ನಿ ನಾಗವೇಣಿ ಸಜ್ಜನ ಅವರನ್ನು ಸ್ವಾಮಿ ವಿವೇಕಾನಂದ ಸೇನೆಯಿಂದ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ವಿವೇಕ ಸಜ್ಜನ ಅವರು, ಒಂದು ಸೌಹಾರ್ದವು ಪ್ರಗತಿ ಹೊಂದಬೇಕಾದರೆ ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕಾರ್ಯ ಮಾಡುವುದರ ಜೊತೆಗೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಷೇರುದಾರರ ಅಭಿಪ್ರಾಯವನ್ನು ಆಲಿಸಿ ಒಟ್ಟಾಗಿ ಮುನ್ನಡೆದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.ಸಿದ್ದಸಿರಿ ಸೌಹಾರ್ದ ಸಹಕಾರಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ಮಾತನಾಡಿ, ರಾಜ್ಯದಲ್ಲಿ ೬೫೦೦ ವಿವಿಧ ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಜನತೆಯ ವಿಶ್ವಾಸ ಗಳಿಸುವುದರೊಂದಿಗೆ ಗ್ರಾಹಕ ಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಅನೇಕ ರಾಷ್ಟ್ರೀಕೃತ, ಖಾಸಗಿ ಬ್ಯಾಂಕುಗಳ ಮಧ್ಯದಲ್ಲಿಯೂ ಕೂಡ ಜನತೆ ಸೌಹಾರ್ದ ಸಹಕಾರಿಗಳಲ್ಲಿ ಹೆಚ್ಚಿನ ವ್ಯವಹಾರಗಳನ್ನು ಮಾಡುತ್ತಿದ್ದು ಸಹಕಾರಿಗಳ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಜನತೆಯ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ವಿಶ್ವವಿದ್ಯಾನಿಲಯದ ಹಾಗೂ ಸಂಯೋಜಿತ ಮಹಿಳಾ ಮಹಾವಿದ್ಯಾಲಯಗಳ ಸ್ನಾತಕ ವಿದ್ಯಾರ್ಥಿನಿಯರಿಗಾಗಿ “ರಸಪ್ರಶ್ನೆ” ಸ್ಪರ್ಧೆಯನ್ನು ಇದೇ ಅ.೦೧ ರಂದು ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಗುವುದು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ. ಮುದ್ದೇಬಿಹಾಳ: ಮೊಟ್ಟೆ ಕೊಟ್ಟಿಲ್ಲ ಅಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮುವಾರ ತಾಲೂಕಿನ ಗುಡಿಹಾಳ ಗ್ರಾಮದಲ್ಲಿ ನಡೆದಿದೆ.ಪ್ರಭಾರ ಮುಖ್ಯ ಶಿಕ್ಷಕನ ವಿರುದ್ಧ ಆರೋಪಗಳ ಸುರಿಮಳೆಗೈದ ವಿದ್ಯಾರ್ಥಿಗಳು, ಶಾಲೆಗೆ ನಿಗದಿತ ಅವಧಿಯಲ್ಲಿ ಬರುವದಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ.ಮಧ್ಯಾಹ್ನ ೧೨ಗಂಟೆಗೆ ಬಂದು ೩ ಗಂಟೆಗೆ ತೆರಳುತ್ತಾರೆ. ಕೇಳಿದರೆ ಮೀಟಿಂಗ್ ಅಂತಾ ಸುಳ್ಳು ಹೇಳುತ್ತಾರೆ. ಅಲ್ಲದೇ ಅತಿಥಿ ಶಿಕ್ಷಕರಿಗೆ ಹೆದರಿಸುತ್ತಾರೆ. ಸರಿಯಾಗಿ ಮೊಟ್ಟೆ ಕೊಡುವದಿಲ್ಲ. ಬಹಳ ಕೇಳಿದರೆ ಮೊಟ್ಟೆ ಬದಲಾಗಿ ಶೇಂಗಾ ಚಿಕ್ಕಿ ಕೊಡುತ್ತಾರೆ ಎಂದೆಲ್ಲ ಆರೋಪಿಸಿದರು.ವಿದ್ಯಾರ್ಥಿಗಳ ದೂರಿನ ಹಿನ್ನೆಲೆ ಪಾಲಕರು ಶಾಲೆಗೆ ಪ್ರಭಾರ ಮುಖ್ಯ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು.ಈ ಶಾಲೆ ನಮಗೆ ಬೇಡವೇ ಬೇಡ, ಮುಚ್ಚಿ ಬಿಡೋಣ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.ಈ ಬಗ್ಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಾಂತಗೌಡ ಮಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಿಲ್ಲ ಎಂಬ ಬಗ್ಗೆ ಹಲವು ಬಾರಿ ದೂರುಗಳು ಬಂದಿದ್ದು ಕೊಡುವಂತೆ ಪ್ರಭಾರ ಮುಖ್ಯಗುರು ಸಂಗಮೇಶ ಶಾಂತಪ್ಪ ನವಲಿ…
