ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಚೊಂಡಿ ಗ್ರಾಮದ ಬಾವಿಯೊಂದರಲ್ಲಿ ಬಿದ್ದಿದ್ದ ಹಸುವನ್ನು ರಕ್ಷಿಸುವಲ್ಲಿ ರವಿವಾರ ಅಗ್ನಿಶಾಮಕ ಸಿಬ್ಬಂದಿ ಸಫಲರಾಗಿದ್ದಾರೆ.
ಕಾಸೀಮಸಾಬ ಎಂಬುವರಿಗೆ ಸೇರಿದ್ದ ಜಮೀನಿನ ಸುಮಾರು ೫೦ ಅಡಿ ಆಳವಿರುವ ಭಾವಿಯಲ್ಲಿ ಹಸು ಬಿದ್ದಿದೆ. ಅದನ್ನು ಕಂಡ ಹಲವರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳಾದ ಸುಭಾಷ ರಾಠೋಡ, ಸಿದ್ದಣ್ಣ ಪೊಲೇಶಿ, ಸಂತೋಷ ಲಮಾಣಿ, ಮಹೇಶ ಕರಡ್ಡಿ, ಪ್ರಕಾಶ ಸುಬ್ಬನಗೋಳ, ಶಕೀಲ ಅವಟಿ, ಮಂಜುನಾಥ ಬಳಿಗಾರ, ರವೀಂದ್ರ ರತ್ನಾಕರ ಮತ್ತು ೧೧೨ ಸಿಬ್ಬಂದಿ ಸಿಕಂದರ ಮಸಳಿ ಮತ್ತು ಯಲ್ಲಪ್ಪ ಭಜಂತ್ರಿ ಗ್ರಾಮಸ್ಥರ ಸಹಾಯದಿಂದ ಸೂಕ್ತ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

