Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತಿಚಿಗೆ ಜಿಲ್ಲೆಯಲ್ಲಿ ಕಳೆದ ೩೧ ವರ್ಷಗಳ ದಾಖಲೆ ಮುರಿದ ಮಳೆಯಿಂದಾಗಿ ಜಿಲ್ಲೆಯ ಸಾಕಷ್ಟು ರೈತರಿಗೆ ಅನೇಕ ಸಮಸ್ಯೆಗಳು ಉದ್ಭವಿಸಿವೆ, ಕೈಗೆ ಬಂದಿರುವ ಬೆಳೆ ನೀರಲ್ಲಿ ನಿಂತು ಸಂಪೂರ್ಣ ನಾಶವಾಗಿವೆ. ಈ ಬೆಳೆಗಳನ್ನೆ ನಂಬಿರುವ ರೈತರಿಗೆ ದಿಕ್ಕು ತೊಚದಂತಾಗಿದೆ, ಇದರಿಂದ ವರ್ಷಪೂರ್ತಿ ಕುಟುಂಬದ ನಿರ್ವಹಣೆ ಮಾಡಬೇಕಿರುವ ರೈತರು ಚಿಂತೆ ಮಾಡುವಂತಾಗಿದೆ, ಮಕ್ಕಳ ಆರೋಗ್ಯ, ಶಿಕ್ಷಣ, ಊಟ, ಬಟ್ಟೆ ಸೇರಿದಂತೆ ಇನ್ನಿತರ ಖರ್ಚು ವೆಚ್ಚವನ್ನು ಹೇಗೆ ನೀಭಾಯಿಸಬೇಕು ಎಂದು ದಿಕ್ಕೆ ತೋಚದಂತಾಗಿದೆ.ಕೂಡಲೇ ಬೆಳೆವಿಮೆ ಹಾಗೂ ಪ್ರಕೃತಿ ವಿಕೋಪದ ಮಾರ್ಗಸೂಚಿಯಂತೆ ನಷ್ಟಗೊಂಡ ಎಲ್ಲಾ ರೈತರಿಗೂ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳು ಹಾಗೂ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮನವಿ ಸಲ್ಲಿಸಿ ಮಾತನಾಡಿ, ಕೂಡಲೇ ಇಲಾಖೆಯಿಂದ ಸಮೀಕ್ಷೆ ಮಾಡಿ ನಷ್ಟಗೊಂಡ ದಾಳಿಂಬೆ, ದ್ರಾಕ್ಷಿ, ಲಿಂಬೆ, ಉಳ್ಳಾಗಡ್ಡಿ, ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ವಿಮೆ ಹಾಗೂ ರಾಜ್ಯ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ಹಡಪದ ಸಮಾಜದ ಮಹಿಳೆಯ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಇಲ್ಲಿನ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಈ ವೇಳೆ ಸಮಾಜದ ಅಧ್ಯಕ್ಷ ಶಂಕ್ರಪ್ಪ ಕುಂಚುಗುನೂರ, ಉಪಾಧ್ಯಕ್ಷ ಭೀಮಣ್ಣ ಬಳವಾಟ ಸದಸ್ಯರಾದ ಬಸವರಾಜ್ ಯರಗಲ್, ಶೇಕು ಅರಸನಾಳ, ಶಿವರಾಜ್ ಹಡಪದ್, ಶಿವಕುಮಾರ್ ಬಿದರಕುಂದಿ, ಶ್ರೀಕಾಂತ್ ಹಡಪದ ಸೇರಿದಂತೆ ಹಲವರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನ ಟೌನ್ ಹಾಲ್‌ನಲ್ಲಿ ಜನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಶಿಕ್ಷಕರ ಹಬ್ಬದಲ್ಲಿ ತಾಲೂಕಿನ ಶಿಕ್ಷಕಿ ಎಸ್.ಬಿ.ಗೊಂಗಡಿ ಇವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಅ೪ ರಿಂದ ರಾಜ್ಯದಾದ್ಯಂತ ಗ್ರಾಮ ಪಂಚಾಯತ ಸೇವೆಗಳಾದ ಬಾಪೂಜಿ ಸೇವೆ ಹಾಗೂ ಕಚೇರಿಯ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುವದನ್ನು ನಿಲ್ಲಿಸಿ ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸುವ ಕುರಿತು ಇಲ್ಲಿನ ತಾಲೂಕು ಪಂಚಾಯತ ನ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷರು ಆನಂದ ಹಿರೇಮಠ, ತಾಲೂಕು ಅಧ್ಯಕ್ಷ ಪಿ.ಎಸ್.ನಾಯ್ಕೋಡಿ. ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಸಂಗಮೇಶ ಕೂಡಗಿ. ಎಸ್.ಡಿ.ಎ ಸಂಘದ ಅಧ್ಯಕ್ಷ ಎಮ್.ಕೆ.ಗುಡಿಮನಿ, ಡಿಇಓ ಸಂಘದ ಅಧ್ಯಕ್ಷ ವೆಂಕಟೇಶ್ ಭಜಂತ್ರಿ, ಕರವಸೂಲಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ ತಮದಡ್ಡಿ, ಸದಸ್ಯರುಗಳ ಒಕ್ಕೂಟದ ಅಧ್ಯಕ್ಷ ರಮೇಶ್ ಇಂಗಳಗಿ ಇದ್ದರು. ಕಾರ್ಯನಿರ್ವಾಹಕ ಅಧಿಕಾರಿಗಳ ಪರವಾಗಿ…

Read More

ಅದ್ಧೂರಿ-ವಿಜೃಂಭಣೆಯಿಂದ ಜರುಗಿದ ಕರ್ನಾಟಕ ಸಂಭ್ರಮ-೫೦ ಆಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ, ಜತ್ತ ತಾಲ್ಲೂಕಿನ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಸುಕ್ಷೇತ್ರದಲ್ಲಿ ಸೆಪ್ಟೆಂಬರ್ ೩೦ ರಂದು ಕರ್ನಾಟಕ ಸಂಭ್ರಮ-೫೦’ರ ಆಚರಣೆಯ ಜೊತೆಯಲ್ಲಿ ಶ್ರೀಮತಿ ಡಾ.ಜಯದೇವಿ ತಾಯಿ ಲಿಗಾಡೆ” “ನಾಡೋಜ ಡಾ.ಕಯ್ಯಾರ ಕಿಂಞ್ಞಣ್ಣ ರೈ ಮತ್ತು “ಡಾ. ಚನ್ನಬಸವ ಪಟ್ಟದ್ದೇವರು ಇವರ ಹೆಸರಿನಲ್ಲಿ ಗಡಿ ಪ್ರಾಧಿಕಾರದಿಂದ ನೀಡುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಹೊರನಾಡ ಗಡಿ ಕನ್ನಡಿಗರ ಸಮಾವೇಶ ನಡೆಯಿತು.ಬರಗೂರು ರಾಮಚಂದ್ರಪ್ಪ ಅವರ ಸಮಿತಿಯ ಆಯ್ಕೆ ಮಾಡಿರುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.೨೦೨೩-೨೪ನೇ ಸಾಲಿಗೆ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಗಡಿನಾಡಿನ ಚೇತನ ಪ್ರಶಸ್ತಿಗೆ ಕಾಸರಗೋಡಿನ ರಾಧಾಕೃಷ್ಣ ಕೆ. ಉಳಿಯತ್ತಡ, ಡಾ.ಜಯದೇವಿ ತಾಯಿ ಲಿಗಾಡೆ ಗಡಿನಾಡ ಚೇತನ ಪ್ರಶಸ್ತಿಗೆ ಬೀದರದ ಪಂಚಾಕ್ಷರಿ ಪುಣ್ಯ ಶೆಟ್ಟಿ, ನಾಡೋಜ ಡಾ.…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಗರ್ಭಿಣಿ ಸ್ತ್ರೀಯರು ಪೌಷ್ಟಿಕ ಆಹಾರ ಸೇವಿಸುವ ಮೂಲಕ ಸದೃಢ ಮಕ್ಕಳನ್ನು ಪಡೆಯಬಹುದಾಗಿದೆ ಎಂದು ಅಲಮೇಲ್ ವೈದ್ಯಾಧಿಕಾರಿ ಡಾ. ಜಿ.ಎಸ್. ಪತ್ತಾರ ಹೇಳಿದರುಅವರು ತಾಲೂಕಿನ ದೇವಣಗಾಂವ ಗ್ರಾಮದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ತಾಯಂದಿರು ಗರ್ಭಿಣಿಯರಿದ್ದಾಗ ಉತ್ತಮ ಪೋಷಕಾಂಶಗಳಿರುವ , ಖನಿಜ ಲವಣಾಂಶ ಮತ್ತು ನಾರಿನಂಶ ಇರುವಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಜನಿಸುವ ಮಗು ಸದೃಢವಾಗಿ ಆರೋಗ್ಯವಾಗಿ ಜನಿಸುವ ಮೂಲಕ ದೇಶಕ್ಕೆ ಒಬ್ಬ ಸದೃಢ ಪ್ರಜೆಯನ್ನು ನೀಡಿದಂತಾಗುವುದು ಎಂದರು.ದೇವಣಗಾಂವ ಪಿ ಎಚ್ ಸಿ ಓ ಶ್ರೀಮತಿ ಎಸ್ ಐ ಕಲಶೆಟ್ಟಿ, ಸಂತೋಷ್ ಕುಂಬಾರ, ಈರಣ್ಣ ಯಡ್ರಾಮಿ, ಶ್ರೀಮತಿ ರೇಣುಕಾ ಕುಲ ಕೋಟಿಗೇರ, ಗ್ರಾಪಂ ಕಾರ್ಯದರ್ಶಿ ಎನ್.ಎ. ಬಂಡಗಾರ, ಮಾರ್ಥಂಡ ವಗ್ಗೆ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ರೇವತಗಾಂವ ಗ್ರಾಮದ ಮಲ್ಲಿಕಾರ್ಜುನ ಕಲ್ಲಪ್ಪ ಮಾನೆಯವರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ(ರಿ)ದ ಮತಿಯಿಂದ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಶನಿವಾರದಂದು ಬೆಂಗಳೂರಿನ ಜ್ಞಾನ ಭಾರತಿ ಆವರಣದ ಪ್ರೊ.ಕೆ ವೆಂಕಟಗಿರಿ ಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ(ರಿ) ವಿಭುಧನ್-೨೦೨೪ ನಾಲೆಡ್ಜ್ ಕ್ರಿಯೇಟಿವ್ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿಯನ್ನು ಎಂ.ಇ.ಎಸ್.ಗ್ರೂಪ್ ಶೈಕ್ಷಣಿಕ ನಿರ್ದೇಶಕರಾದ ಎಚ್.ಎಸ್.ಗಣೇಶ ಭಟ್ಟ, ನಾಲೆಡ್ಜ್ ಪಬ್ಲಿಕೇಷನ್ ಸಂಸ್ಥಾಪಕರಾದ ಬಿ.ಎನ್.ಸುನಿಲ್, ಸಮಾಜ ಸೇವಕರಾದ ಮಹೇಂದ್ರ ಮನ್ನೋತ್, ನ್ಯಾಕ್ ಸಲಹೆಗಾರರಾದ ಡಾ.ಸುಜಾತ ಶ್ಯಾನುಬಾಗ್, ಡೈಮಂಡ್ ಕಾಲೇಜು ಸಂಸ್ಥಾಪಕರಾದ ಅನಿಲ್‌ಕುಮಾರ ಜೋಶಿ, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ(ರಿ)ದ ರಾಜ್ಯಾಧ್ಯಕ್ಷರಾದ ಸರೇಶ ಎಸ್ ಗೊಲ್ಲ, ರಾಜ್ಯ ಉಪಾಧ್ಯಕ್ಷರಾದ ಪ್ರಮೀಳ ಎನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿಧಿ ಕೋಡಿಹಳ್ಳಿಯವರುಗಳು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ…

Read More

ಕೊಲ್ಹಾರ ತಾಲೂಕಾ ಹೋರಾಟ ಸಮಿತಿ ಸದಸ್ಯ, ಪತ್ರಕರ್ತ ಪರಶುರಾಮ ಗಣಿ ಗೆ ಸನ್ಮಾನ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬಡತನದಲ್ಲಿ ಹುಟ್ಟಿ ಬೆಳೆದು,ಹೆತ್ತವರನ್ನು ಕಳೆದುಕೊಂಡು ಸಾಮಾಜಿಕ ಸೇವೆ, ಪತ್ರಿಕಾ ಸೇವೆ ಮಾಡುತ್ತಾ ಜನರ ಮದ್ಯದಲ್ಲಿ ಪತ್ರಿಕಾ ವಿತರಕರಾಗಿ, ಹಾಲು ಮಾರಾಟಗಾರನಾಗಿ ಬೆಳೆದ ಕೊಲ್ಹಾರದ ಪರಶುರಾಮ ಗಣಿಯವರ ಕಾರ್ಯ ಬಹಳ ಶ್ಲಾಘನೀಯವಾದದ್ದು ಎಂದು ಗಜೇಂದ್ರಗಡ ತಳ್ಳಿಹಾಳ ಕೋಡಿಮಠದ ಕಾಲಜ್ಞಾನ ಬ್ರಹ್ಮ ವಿಶ್ವಕಾಲಜ್ಞಾನಿ ಶಿವಯೋಗ ಡಾ.ಶರಣಬಸವ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ಸಾಮಾಜಿಕ ಹೋರಾಟಗಾರ, ಕೊಲ್ಹಾರ ತಾಲೂಕಾ ಹೋರಾಟ ಸಮಿತಿ ಸದಸ್ಯ ಪರಶುರಾಮ ಗಣಿಯವರ ೫೧ ನೇ ಹುಟ್ಟುಹಬ್ಬ ಹಾಗೂ ೨೫ ನೇ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡುತ್ತಾ ಮಾತನಾಡಿದ ಅವರು, ಸಂಸಾರ ಎಂಬುವುದು ಗಾಳಿಯ ಸೊಡರು ಅದರಲ್ಲಿ ಈಜಿ ದಡ ಸೇರುವವನೆ ಬುದ್ದಿವಂತ, ಬಾಲ್ಯದಲ್ಲಿ ತಂದೆ -ತಾಯಿಯರನ್ನು ಕಳೆದುಕೊಂಡು ಹೆಂಡತಿಯನ್ನು ತಾಯಿಯ ಸ್ವರೂಪದಲ್ಲಿ ಕಂಡು ಅಣ್ಣ, ತಮ್ಮ, ಅಕ್ಕ, ಮಾವನಂದಿರ ಜೊತೆ ೫೧ ವರ್ಷಗಳ ಕಾಲ ಯಾವುದೆ ಕಪ್ಪು ಚುಕ್ಕೆ ಬರದಂತೆ,…

Read More

ಬೊಳೆಗಾಂವ ಗ್ರಾಮ ಶರಾಯಿ ಮುಕ್ತಕ್ಕೆ ಪಣ | ಇಂಡಿಯಲ್ಲಿ ಮಧ್ಯವರ್ಜನ ಶಿಬಿರ ಉದಯರಶ್ಮಿ ದಿನಪತ್ರಿಕೆ ಇಂಡಿ: ಮಧ್ಯಪಾನ ದಂತಹ ದುಶ್ಚಟಗಳನ್ನು ಬಿಡುವದು ಯುವಕರ ಜವಾಬ್ದಾರಿ. ತಮ್ಮಲ್ಲಿರುವ ಅಂಧಕಾರ ಹೋಗಲಾಡಿಸಲು ಯುವಕರು ವ್ಯಸನ ಮುಕ್ತರಾಗುವದು ಅತೀ ಮುಖ್ಯ. ಯಾವದೋ ಸಮಸ್ಯೆಗೆ ಸಿಲುಕಿ ವ್ಯಸನಿಗಳಾಗುತ್ತಿದ್ದು ಅದರಿಂದ ಕುಟುಂಬ ಸಮಾಜ ಮೇಲೆ ದುಷ್ಪರಿಣಾಮ ಬಿಳುತ್ತಿದ್ದು ಕುಟುಂಬದ ಅರ್ಥಿಕ ಸ್ಥಿತಿ ಕೆಟ್ಟು ಯುವಕರು ಬೀದಿ ಪಾಲಾಗುತ್ತಿದ್ದಾರೆ. ಅರಿವೇ ಗುರು ಎಂಬ ಮಂತ್ರ ಪಾಲಿಸಿ ತಮ್ಮಲ್ಲಿರುವ ಅರಿವನ್ನು ಒಳ್ಳೆಯತನಕ್ಕೆ ಬಳಸಿಕೊಳ್ಳಬೇಕಾಗಿದೆ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಅವರು ಪಟ್ಟಣದ ಕಾಳಿಕಾ ದೇವಸ್ಥಾನದಲ್ಲಿ ತಾಲೂಕಾ ಆಡಳಿತ ಇಂಡಿ, ಅಬಕಾರಿ ಇಲಾಖೆ, ಪುರಸಭೆ ಹಾಗೂ ಗ್ರಾ.ಪಂ ರೂಗಿ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಸಹಯೋಗದಲ್ಲಿ ಬೊಳೆಗಾಂವ ಗ್ರಾಮವನ್ನು ಸರಾಯಿ ಮುಕ್ತ ಗ್ರಾಮಮಾಡಲು ೧೮೬೩ ನೇ ಮಧ್ಯವರ್ಜನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.ತಡವಲಗಾ ಗ್ರಾಮದ ಹಿರೇಮಠದ ಅಭಿನವ ರಾಚೋಟೇಶ್ವರ ಸ್ವಾಮಿಜಿ ಮಾತನಾಡಿದ ಅವರು,ಸಪ್ತ ವ್ಯಸನಗಳಲ್ಲಿ ಮಧ್ಯಪಾನ ಅತ್ಯಂತ ಅಪಾಯಕಾರಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಜರುಗಿದ ಸ್ಪರ್ಧಾತ್ಮಕ ಪರೀಕ್ಷೆ ಕಟ್ಟುನಿಟ್ಟಿನ ನಡುವೆ ಸುಗಮವಾಗಿ ಜರುಗಿದವು.ಪಟ್ಟಣದಲ್ಲಿ ಭಾನುವಾರ ಪರೀಕ್ಷಾ ಕೇಂದ್ರಗಳಾದ ಸಿದ್ಧೇಶ್ವರ ಸ್ವಾಮೀಜಿ, ವೆಂಕಟೇಶ್ವರ ಮತ್ತು ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪಿ.ಯು ಕಾಲೇಜುಗಳಲ್ಲಿ ಪರೀಕ್ಷೆ ಬೆಳಿಗ್ಗೆ ಆರಂಭಗೊಂಡವು. ಸಿದ್ಧೇಶ್ವರ ಸ್ವಾಮೀಜಿ ಪಿ.ಯು ಕಾಲೇಜಿನ ೧೯ ಕೋಠಡಿಗಳಲ್ಲಿ ೪೫೦, ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜಿನ ೧೭ ಕೋಠಡಿಗಳಲ್ಲಿ ೪೦೮ ಹಾಗೂ ವೆಂಕಟೇಶ್ವರ ಕಾಲೇಜಿನ ೧೭ ಕೋಠಡಿಗಳಲ್ಲಿ ೪೦೮ ರಂತೆ ಒಟ್ಟು ೩ ಪರೀಕ್ಷಾ ಕೇಂದ್ರಗಳಲ್ಲಿ ೧೨೬೬ ಪರೀಕ್ಷಾರ್ಥಿಗಳು ಹಾಜರಿದ್ದು ಪರೀಕ್ಷೆ ಬರೆದರು.ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ ೯ ಗಂಟೆಯಿಂದಲೇ ಆಗಮಿಸಲು ಆರಂಭಿಸಿದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ನಿಯೋಜಿತ ಸಿಬ್ಬಂದಿ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವುದರ ಮೂಲಕ ವೈಯಕ್ತಿಕ ತಪಾಸಣೆಗೆ ಒಳಪಡಿಸಿದರು. ಈ ಸಂದರ್ಭದಲ್ಲಿ ಮೊಬೈಲ್ ಸೇರಿದಂತೆ ಇನ್ನೀತರ ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಪುರುಷ ಅಭ್ಯರ್ಥಿಗಳು ಉದ್ದ ತೋಳಿನ ಅಂಗಿ, ಮಹಿಳೆಯರು ಮಾಂಗಲ್ಯದ ಹೊರತಾಗಿ ಯಾವುದೇ ಆಭರಣ ಹಾಗೂ ಹಿಜಾಬ್‌ದಂತ ಉಡುಗೆ ಧರಿಸಿರಬಾರದು…

Read More