ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಗರ್ಭಿಣಿ ಸ್ತ್ರೀಯರು ಪೌಷ್ಟಿಕ ಆಹಾರ ಸೇವಿಸುವ ಮೂಲಕ ಸದೃಢ ಮಕ್ಕಳನ್ನು ಪಡೆಯಬಹುದಾಗಿದೆ ಎಂದು ಅಲಮೇಲ್ ವೈದ್ಯಾಧಿಕಾರಿ ಡಾ. ಜಿ.ಎಸ್. ಪತ್ತಾರ ಹೇಳಿದರು
ಅವರು ತಾಲೂಕಿನ ದೇವಣಗಾಂವ ಗ್ರಾಮದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ತಾಯಂದಿರು ಗರ್ಭಿಣಿಯರಿದ್ದಾಗ ಉತ್ತಮ ಪೋಷಕಾಂಶಗಳಿರುವ , ಖನಿಜ ಲವಣಾಂಶ ಮತ್ತು ನಾರಿನಂಶ ಇರುವಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಜನಿಸುವ ಮಗು ಸದೃಢವಾಗಿ ಆರೋಗ್ಯವಾಗಿ ಜನಿಸುವ ಮೂಲಕ ದೇಶಕ್ಕೆ ಒಬ್ಬ ಸದೃಢ ಪ್ರಜೆಯನ್ನು ನೀಡಿದಂತಾಗುವುದು ಎಂದರು.
ದೇವಣಗಾಂವ ಪಿ ಎಚ್ ಸಿ ಓ ಶ್ರೀಮತಿ ಎಸ್ ಐ ಕಲಶೆಟ್ಟಿ, ಸಂತೋಷ್ ಕುಂಬಾರ, ಈರಣ್ಣ ಯಡ್ರಾಮಿ, ಶ್ರೀಮತಿ ರೇಣುಕಾ ಕುಲ ಕೋಟಿಗೇರ, ಗ್ರಾಪಂ ಕಾರ್ಯದರ್ಶಿ ಎನ್.ಎ. ಬಂಡಗಾರ, ಮಾರ್ಥಂಡ ವಗ್ಗೆ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.

