ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತಿಚಿಗೆ ಜಿಲ್ಲೆಯಲ್ಲಿ ಕಳೆದ ೩೧ ವರ್ಷಗಳ ದಾಖಲೆ ಮುರಿದ ಮಳೆಯಿಂದಾಗಿ ಜಿಲ್ಲೆಯ ಸಾಕಷ್ಟು ರೈತರಿಗೆ ಅನೇಕ ಸಮಸ್ಯೆಗಳು ಉದ್ಭವಿಸಿವೆ, ಕೈಗೆ ಬಂದಿರುವ ಬೆಳೆ ನೀರಲ್ಲಿ ನಿಂತು ಸಂಪೂರ್ಣ ನಾಶವಾಗಿವೆ. ಈ ಬೆಳೆಗಳನ್ನೆ ನಂಬಿರುವ ರೈತರಿಗೆ ದಿಕ್ಕು ತೊಚದಂತಾಗಿದೆ, ಇದರಿಂದ ವರ್ಷಪೂರ್ತಿ ಕುಟುಂಬದ ನಿರ್ವಹಣೆ ಮಾಡಬೇಕಿರುವ ರೈತರು ಚಿಂತೆ ಮಾಡುವಂತಾಗಿದೆ, ಮಕ್ಕಳ ಆರೋಗ್ಯ, ಶಿಕ್ಷಣ, ಊಟ, ಬಟ್ಟೆ ಸೇರಿದಂತೆ ಇನ್ನಿತರ ಖರ್ಚು ವೆಚ್ಚವನ್ನು ಹೇಗೆ ನೀಭಾಯಿಸಬೇಕು ಎಂದು ದಿಕ್ಕೆ ತೋಚದಂತಾಗಿದೆ.
ಕೂಡಲೇ ಬೆಳೆವಿಮೆ ಹಾಗೂ ಪ್ರಕೃತಿ ವಿಕೋಪದ ಮಾರ್ಗಸೂಚಿಯಂತೆ ನಷ್ಟಗೊಂಡ ಎಲ್ಲಾ ರೈತರಿಗೂ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳು ಹಾಗೂ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮನವಿ ಸಲ್ಲಿಸಿ ಮಾತನಾಡಿ, ಕೂಡಲೇ ಇಲಾಖೆಯಿಂದ ಸಮೀಕ್ಷೆ ಮಾಡಿ ನಷ್ಟಗೊಂಡ ದಾಳಿಂಬೆ, ದ್ರಾಕ್ಷಿ, ಲಿಂಬೆ, ಉಳ್ಳಾಗಡ್ಡಿ, ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ವಿಮೆ ಹಾಗೂ ರಾಜ್ಯ ಹಾಗೂ ಕೇಂದ್ರ ಪ್ರಕೃತಿ ವಿಕೋಪದ ಮಾರ್ಗಸೂಚಿಯಂತೆ ಪರಿಹಾರ ನೀಡಬೇಕು, ಈಗಾಗಲೇ ನೆರೆಯ ಬೆಳಗಾವಿ ಜಿಲ್ಲೆಯಲ್ಲಿ ನಷ್ಟಗೊಂಡ ದ್ರಾಕ್ಷಿ ಬೆಳೆಗಾರರಿಗೆ ೪೫ ಕೋಟಿ ಪರಿಹಾರ ನೀಡಲಾಗಿದೆ, ಆದ್ದರಿಂದ ನಮ್ಮ ಜಿಲ್ಲೆಯಲ್ಲಿಯ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಗ್ರಹಿಸುತ್ತೆವೆ ಎಂದರು.
ನೆರೆಯ ಜಿಲ್ಲೆಗೊಂದು ನ್ಯಾಯ ನಮಗೊಂದು ನ್ಯಾಯ? ಹೇಗೆ ಬದುಕುಬೇಕು, ಮೊದಲೇ ಬರಗಾಲದಿಂದ ಕಂಗೆಟ್ಟಿರುವ ರೈತರು ಈ ವರ್ಷ ಅತೀ ಹೆಚ್ಚು ಮಳೆಯಾಗಿ ನಷ್ಟಕ್ಕಿಡಾಗಿದ್ದೆವೆ, ಇವುಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾಗಿ ಪರಿಹಾರ ನೀಡಬೇಕು, ಕಳೆದ ವರ್ಷ ವಿಮೆಯಲ್ಲಿ ಭಾರಿ ಅನ್ಯಾಯವಾಗಿದೆ, ಈ ಭಾರಿ ಆ ರೀತಿ ಆಗಬಾರದು, ಒಂದು ವೇಳೆ ರೈತರಿಗೆ ಸರಿಯಗಿ ಪರಿಹಾರ ಬರದಿದ್ದರೆ ಹೋರಾಟ ಅನಿವಾರ್ಯವಾಗಲಿದೆ, ಇಲಾಖೆ ಬೀಗ ಹಾಕಿ ಹೋರಾಟ ಮಾಡುತ್ತೆವೆ ಎಂದು ಎಚ್ಚರಿಸಿದರು,
ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ನಜೀರ ನಂದರಗಿ ,ಕೋಲ್ಹಾರ ಅಧ್ಯಕ್ಷ ಸೋಮು ಬಿರಾದಾರ, ವಿಜಯಪುರ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ತಿಕೋಟಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಶಾನೂರ ನಂದರಗಿ, ಸಂಗಪ್ಪ ಟಕ್ಕೆ, ಮಹಾದೇವ ಕದಂ, ತಿಪ್ಪರಾಯ ಬೈರೊಡಗಿ, ಬಸ್ಸು ನ್ಯಾಮಗೊಂಡ, ಅಲ್ಲಮಪ್ರಭು ಗದ್ಯಾಳ, ಸುಗೇಂದ್ರ ನಲೋಡಿ, ರಾಜಕುಮಾರ ಹಿರೇಕುರಬುರ, ಸಂಗನಬಸಪ್ಪ ಹಡಕ್ಯಾಳ, ಅಶೋಕ ಹಿಪ್ಪರಗಿ, ಮಲ್ಲಪ್ಪ ಹಿಪ್ಪರಗಿ, ಪ್ರಕಾಶ ಹಿಪ್ಪರಗಿ, ಅಶೋಕ ಗದ್ಯಾಳ ಸೇರಿದಂತೆ ಇತರರು ಇದ್ದರು.

