ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ಹಡಪದ ಸಮಾಜದ ಮಹಿಳೆಯ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಇಲ್ಲಿನ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ವೇಳೆ ಸಮಾಜದ ಅಧ್ಯಕ್ಷ ಶಂಕ್ರಪ್ಪ ಕುಂಚುಗುನೂರ, ಉಪಾಧ್ಯಕ್ಷ ಭೀಮಣ್ಣ ಬಳವಾಟ ಸದಸ್ಯರಾದ ಬಸವರಾಜ್ ಯರಗಲ್, ಶೇಕು ಅರಸನಾಳ, ಶಿವರಾಜ್ ಹಡಪದ್, ಶಿವಕುಮಾರ್ ಬಿದರಕುಂದಿ, ಶ್ರೀಕಾಂತ್ ಹಡಪದ ಸೇರಿದಂತೆ ಹಲವರು ಇದ್ದರು.

