Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಲಿಂಗಾಯತ ನೌಕರರ ಸಂಘದ ಸ್ಥಾಪನೆಯ ದ್ಯೇಯ ಉದ್ದೇಶಗಳನ್ನು ಹಾಗೂ ಬಸವ ತತ್ವವನ್ನು ಒಪ್ಪಿಕೊಂಡು ಬಂದವರೆಲ್ಲ ಲಿಂಗಾಯತರು. ಈ ಸಂಘವು ಯಾವುದೇ ರಾಜಕೀಯ, ಬೇರೆ ಸಂಘಗಳ ಪರ ಹಾಗೂ ವಿರೋಧಿ ಸಂಘವಲ್ಲ ಎಂದು ಲಿಂ.ನೌ.ಸಂಘದ ಸಂಸ್ಥಾಪಕ ಅಧ್ಯಕ್ಷ ಶೀವರಾಜ ಕಪಲಾಪುರೆ ಹೇಳಿದರು.ಪಟ್ಟಣದ ಬಸವಮಂಟಪದಲ್ಲಿ ಹಮ್ಮಿಕೊಂಡ ಲಿಂಗಾಯತ ನೌಕರರ ಸಂಘ ಜಿಲ್ಲಾ ಘಟಕ ವಿಜಯಪುರ ಜಿಲ್ಲಾ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘದ ಚಟುವಟಿಕೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಸಂಘವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸಹಭಾಗಿತ್ವದಿಂದ ಕೂಡಿ ದುಡಿಯಬೇಕು. ಇದರ ಯಶಸ್ವಿಗಾಗಿ ಎಲ್ಲರೂ ಶ್ರಮಿಸೋಣ ಎಂದರು.ಈ ವೇಳೆ ಸರಕಾರಿ ನೌಕರರ ಲಿಂಗಾಯತ ಸಂಘ ವಿಜಯಪುರ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಸಿಂದಗಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆಯ ಪದನ್ನೋತಿ ಮುಖ್ಯಗುರು ಶರಣಬಸವ ಲಂಗೋಟಿ, ಹುಣಶ್ಯಾಳ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಆರ್.ಆರ್. ನಿಂಬಾಳಕರ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಹಾಗೂ ಸುಧಾಕರ ಬಿರಾದಾರ ಅವರನ್ನು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಜಯಪುರ ಹಾಗೂ ಕಲಕೇರಿಯ ಎ.ಕೆ.ಸಿರಸಗಿ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದಲ್ಲಿ ಜರುಗಿದ ೨೦೨೪-೨೫ ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ಕುಸ್ತಿ ಸ್ಪರ್ಧೆಯಲ್ಲಿ ಸಿಂದಗಿಯ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆಗೈದಿದ್ದಾರೆ. ೭೯ ಕೆಜಿ ವಿಭಾಗದ ಫ್ರೀ ಸ್ಟೆöÊಲ್ ಕುಸ್ತಿಯಲ್ಲಿ ಯಲ್ಲಾಲಿಂಗ ಪೂಜಾರಿ ೬೮ ಕೆಜಿ ವಿಭಾಗದ ಕುಸ್ತಿಯಲ್ಲಿ ಜ್ಯೋತಿ ನಾಯಕ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಬಂದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ೭೭ ಕೆಜಿಯ ಗ್ರೀಕೋ ರೋಮನ ಕುಸ್ತಿಯಲ್ಲಿ ವಿನಯ ವಿಶ್ವಕರ್ಮ ದ್ವಿತೀಯ ಸ್ಥಾನ, ೬೦ ಕೆಜಿಯ ಫ್ರೀ ಸ್ಟೆöÊಲ್ ವಿಭಾಗದಲ್ಲಿ ಅರ್ಪಿತಾ ಅಂಕಲಗಿ, ೬೩ ಕೆಜಿಯ ವಿಭಾಗದಲ್ಲಿ ಅಮೋಗಿ ಇಬ್ರಾಹಿಂಪೂರ ದ್ವೀತಿಯ, ೪೦ ಕೆಜಿ ವಿಭಾಗದಲ್ಲಿ ಯಶೋಧಾ ಗುಡಿಮನಿ ತೃತೀಯ ಸ್ಥಾನ, ೫೦ ಕೆಜಿ ವಿಭಾಗದಲ್ಲಿ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ಕಿರಾಣಿ ಅಂಗಡಿಯ ಮಾಲೀಕನೊಬ್ಬನ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಕಾಳಗಿ ತಾಂಡಾದ ಗುರಪ್ಪ ಚೌವ್ಹಾಣ ಮೇಲೆ ಪ್ರಕರಣ ದಾಖಲಾಗಿದ್ದು ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ತನ್ನ ಕಿರಾಣಿ ಅಂಗಡಿಯ ಎದರು ತನ್ನ ಪಾಯಿದೆಗೋಸ್ಕರ ಯಾವುದೇ ಲೈಸನ್ಸ್ ವ, ಪರವಾನಗೆ ಪಡೆಯದೇ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಗ್ಲಾಸು, ನೀರು, ತಿನಿಸು ಮತ್ತು ಸ್ಥಳಾವಕಾಶ ಮಾಡಿಕೊಟ್ಟು ಪ್ರಕರಣಕ್ಕೆ ದಾರಿ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪಟ್ಟಣದ ಪಿಎಸ್‌ಐ ಸಂಜಯ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ,ದಸರಾ ಹಬ್ಬದಂಗವಾಗಿ ಪ್ರತಿಷ್ಠಾಪಿಸಲಾಗುವ ದುರ್ಗಾಮಾತೆಯ ಮೂರ್ತಿ, ಅಂಬಾಭವಾನಿ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಸಂಭ್ರಮ, ಸಡಗರದಿಂದ ಜರುಗಿತು.ಪಟ್ಟಣದ ಅಂಬಾಭವಾನಿ ದೇವಸ್ಥಾನದ ಮುಂಭಾಗ ಬೆಳಗ್ಗೆ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರು ಪಲ್ಲಕ್ಕಿ ಉತ್ಸವ, ದುರ್ಗಾಮಾತೆಯ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ಹಾರಿವಾಳ, ರವಿಗೌಡ ಚಿಕ್ಕೊಂಡ, ಸಂಗಮೇಶ ಓಲೇಕಾರ, ಜಟ್ಟಿಂಗರಾಯ ಮಾಲಗಾರ, ರವಿ ಪಡಶೆಟ್ಟಿ, ಅಶೋಕ ಗುಳೇದ ಇತರರು ಇದ್ದರು.ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವ, ದೇವಿ ಮೂರ್ತಿಯ ಮೆರವಣಿಗೆಯು ಗೌರಿ-ಶಂಕರ ದೇವಸ್ಥಾನ ರಸ್ತೆ, ಬಸವ ಜನ್ಮಸ್ಮಾರಕ ರಸ್ತೆ, ಪತ್ತಾರ ಗಲ್ಲಿ ಮೂಲಕ ಅಗಸಿ, ಬಸವೇಶ್ವರ ವೃತ್ತದ ಮಾರ್ಗವಾಗಿ ಬಸವೇಶ್ವರ ದೇವಸ್ಥಾನದ ಬಾವಿಯಲ್ಲಿ ಗಂಗ ಸ್ಥಳಕ್ಕೆ ತೆರಳಿತು. ಗಂಗಸ್ಥಳ ಪೂಜೆ ನೆರವೇರಿದ ನಂತರ ಉತ್ಸವದ ಮೆರವಣಿಗೆಯು ಬಸವೇಶ್ವರ ವೃತ್ತ, ಅಗಸಿ,ಗ್ರಾಮದೇವತೆ ದೇವಸ್ಥಾನದ ರಸ್ತೆ ಮಾರ್ಗವಾಗಿ ಶಿವಾಜಿ ಗಲ್ಲಿಯಲ್ಲಿರುವ ಅಂಬಾಭವಾನಿ ದೇವಸ್ಥಾನಕ್ಕೆ ಮರಳಿತು. ಪಲ್ಲಕ್ಕಿ ಉತ್ಸವ,…
೨ದಿನ ಕಾಲ ಜರುಗಿದ ಮೆಗಾಮಾರುಕಟ್ಟೆಯ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯಿಂದ ನಿರ್ಮಾಣಗೊಂಡಿರುವ ಮೆಗಾಮಾರುಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳ ಮುಂದುವರಿದ ಬಹಿರಂಗ ಹರಾಜು ಪ್ರಕ್ರಿಯೆ ಮಂಗಳವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಸಕ್ಕರೆ, ಕೃಷಿ ಮಾರುಕಟ್ಟೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ಜರುಗಿತು. ಎರಡು ದಿನಗಳ ಕಾಲ ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ೧೭ ವಾಣಿಜ್ಯ ಮಳಿಗೆಗಳು ಬಹಿರಂಗ ಹರಾಜುಗೊಂಡು ಒಟ್ಟು ರೂ. ೨೭೩.೭೦ ಲಕ್ಷ ಠೇವಣಿ ಮೊತ್ತ ಆಯಿತು.ಮೆಗಾಮಾರುಕಟ್ಟೆಯಲ್ಲಿ ಒಟ್ಟು ೧೩೪ ವಾಣಿಜ್ಯ ಮಳಿಗೆಗಳಿದ್ದು. ಇದರಲ್ಲಿ ೩೫ ವಾಣಿಜ್ಯ ಮಳಿಗೆಗಳು ಹಿಂದೆ ಎರಡು ಸಲ ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಹರಾಜು ಆಗಿವೆ. ಉಳಿದ ೯೯ ವಾಣಿಜ್ಯ ಮಳಿಗೆಗಳ ಮುಂದುವರಿದ ಬಹಿರಂಗ ಹರಾಜು ಪ್ರಕ್ರಿಯೆ ಮಂಗಳವಾರ, ಗುರುವಾರ ಎರಡು ದಿನಗಳ ಕಾಲ ಪುರಸಭೆ ಜರುಗಿಸಿತು.ಮಂಗಳವಾರ ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ೭ ವಾಣಿಜ್ಯ ಮಳಿಗೆಗಳು ಬಹಿರಂಗ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರ ಇವಣಗಿ ಗ್ರಾಮದಲ್ಲಿ ನವೆಂಬರ್ ೧೩ ರಂದು ಜರುಗುವ ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯವನ್ನು ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನುಡಿಗಾಗಿ ಅನೇಕರು ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ನಾಡಿನಲ್ಲಿ ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ನಡೆಯುತ್ತಿವೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಭಾಗದಲ್ಲಿ ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿದ್ದು ಶ್ಲಾಘನೀಯ. ನವೆಂಬರ್ ೧೩ ರಂದು ಜರುಗುವ ಈ ಸಮ್ಮೇಳನವನ್ನು ಎಲ್ಲ ಕನ್ನಡ ಮನಸ್ಸುಗಳು, ಸಾಹಿತಿಗಳು, ಗ್ರಾಮಸ್ಥರು ಸೇರಿಕೊಂಡು ಸಮ್ಮೇಳನವನ್ನು ಅಚ್ಚುಕಟ್ಟಾಗಿ ಐತಿಹಾಸಿಕ ಸಮ್ಮೇಳನವಾಗುವಂತೆ ಇಂದಿನಿಂದಲೇ ಸನ್ನದ್ಧರಾಗಬೇಕು. ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯು ಪಾರದರ್ಶಕವಾಗಿರಬೇಕೆಂಬ ಆಶಯ ನಮ್ಮದಾಗಿದೆ. ಈ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.ನರಲಸಗಿ ಗ್ರಾಮ ಪಂಚಾಯಿತಿ ಸದಸ್ಯ ಕಾಂತು ಹಿರೇಕುರಬರ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಗಾಂಧೀಜಿ ಅವರ ಪಾನಮುಕ್ತ ವಿಚಾರಗಳು ಜಗತ್ತಿಗೆ ಮಾದರಿಯಾಗಿವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಬಿರದಲ್ಲಿ ಪಾನಮುಕ್ತರಾದ 48 ಜನ ಶಿಬಿರಾರ್ಥಿಗಳು ಇಂದು ಬದಲಾವಣೆ ಆಗುವುದರ ಮುಖಾಂತರ ಗಾಂಧೀಜಿಯವರ ಕನಸನ್ನು ನನಸು ಮಾಡಿದ್ದಾರೆ ಎಂದು ಜೆಡಿಎಸ್ ಧುರೀಣ, ಜಿಲ್ಲಾ ಜಲ ಜಾಗೃತಿ ವೇದಿಕೆ ಅಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ ಹೇಳಿದರು.ತಾಲೂಕಿನ ಯರನಾಳ ಗ್ರಾಮದ ವಿರಕ್ತಮಠದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್, ವಿಜಯಪುರದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ ಸ್ಮೃತಿ ಹಾಗೂ ಪಾನಮುಕ್ತರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿಯವರ ಆಶಯದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮದ್ಯವರ್ಜನ ಶಿಬಿರ ಆಯೋಜನೆಗೊಳ್ಳುವ ಮೂಲಕ ಹಲವಾರು ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ.ಕದಳಿ ವೇದಿಕೆ ಸಂಚಾಲಕಿ ಸಾವಿತ್ರಿ ಕಲ್ಯಾಣಶೆಟ್ಟಿ ಮಾತನಾಡಿ, ಗಾಂಧೀಜಿಯವರ ವಿಚಾರಗಳು ಸಾರ್ವಕಾಲಿಕ ಮೌಲ್ಯಗಳಾಗಿವೆ. ಮಹಾತ್ಮರ ಜೀವನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಸಾಹಿತಿ ಸಿದ್ಧರಾಮ ಬಿರಾದಾರ ಮಾತನಾಡಿ,…
ಜಯದೇವ ಜಗದ್ಗುರುಗಳ 85ನೇ ಜಯಂತ್ಯುತ್ಸವ | 15ನೇ ಪ್ರತಿಭಾ ಪುರಸ್ಕಾರ ಸಮಾರಂಭ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾಯಕನಿಷ್ಠ ಗಾಣಿಗ ಸಮಾಜದಲ್ಲಿ ಪ್ರಾಮಾಣಿಕತೆ, ಸ್ವಾಭಿಮಾನ ಸಂಸ್ಕಾರ ಹಾಸುಹೊಕ್ಕಾಗಿದೆ. ಗಾಣಿಗರು ಸರ್ವ ಸಮಾಜಗಳೊಂದಿಗೆ ಪ್ರೀತಿಯಿಂದ ಬದುಕು ಸಾಗಿಸುತ್ತಾ ಎಲ್ಲ ರೀತಿಯಲ್ಲೂ ಶ್ರೀಮಂತರಾಗಬೇಕು ಎಂದು ಸಚಿವ ಎಸ್.ಕೆ.ಬೆಳ್ಳುಬ್ಬಿ ಸಮಾಜಕ್ಕೆ ಕಿವಿಮಾತು ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಬಳಿಯ ವನಶ್ರೀ ಸಂಸ್ಥಾನ ಮಠದಲ್ಲಿ ಬುಧವಾರ ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಸಂಘ ಹಾಗೂ ಶ್ರೀ ಜಗದ್ಗುರು ಜಯದೇವ ಶಿವಯೋಗೇಶ್ವರ ಟ್ರಸ್ಟ್ ಸಂಯುಕ್ತಾಶ್ರಯಲ್ಲಿ ಜರುಗಿದ ಜಯದೇವ ಜಗದ್ಗುರುಗಳ 86 ನೇ ಜಯಂತ್ಯುತ್ಸವ ಹಾಗೂ 15 ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ಲಿಂ. ಜಯದೇವ ಜಗದ್ಗುರುಗಳು ತಮ್ಮ ಇಡಿ ಬದುಕನ್ನೇ ಸಮಾಜಕ್ಕೆ ಅರ್ಪಿಸಿದ್ದಾರೆ. ಪೂಜ್ಯ ಸಿದ್ದೇಶ್ವರ ಸ್ವಾಮಿಗಳು, ಪ್ರಧಾನಿ ಮೋದಿಯವರನ್ನು ಜಾತಿಗೆ ಸೀಮಿತಗೊಳಿಸುವುದು ಬೇಡ. ಅವರು ವೈಯಕ್ತಿಕ ಸಾಧನೆಯಿಂದ ಬೆಳೆದಿದ್ದು, ಗಾಣಿಗ ಸಮಾಜದಲ್ಲಿ ಹುಟ್ಟಿದ್ದಾರೆಂಬುದು ನಮಗೆ ಹೆಮ್ಮೆ, ಪ್ರೇರಣೆ. ಸಮಾಜವನ್ನು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ನವರಾತ್ರಿ ಮಹೋತ್ಸವದ ಅಂಗವಾಗಿ ನಾಡದೇವಿಯನ್ನು ನಾಡಿನ ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆಯ ಮೂಲಕ ಶ್ರದ್ಧಾ, ಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು.ಪಟ್ಟಣದಲ್ಲಿ ಗುರುವಾರ ಬೇವಿನಕಟ್ಟಿ ಗೌಡರಓಣಿಯ ನಾಡದೇವಿ ಉತ್ಸವ ಕಮೀಟಿಯಿಂದ ಪ್ರತಿಷ್ಠಾಪಿಸುತ್ತಿರುವ ನಾಡದೇವಿಯ ಉತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು.ಬೆಳಗ್ಗೆ ಇಂಡಿ ರಸ್ತೆಯ ರೇಣುಕಾಚಾರ್ಯ ದೇವಸ್ಥಾನದಿಂದ ಡೊಳ್ಳು ವಾದ್ಯಗಳು ಹಾಗೂ ಅಬ್ಬರದ ಡಿಜೆ ಸಂಗೀತದೊಂದಿಗೆ ಪ್ರಾರಂಭವಾದ ಭವ್ಯ ಮೆರವಣಿಗೆ ಕೆಇಬಿ, ಅಂಬೇಡ್ಕರ್ ವೃತ್ತ, ಮೊಹರೆ ವೃತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಜಾರ, ಪತ್ತಾರಕಟ್ಟೆ ಮಾರ್ಗವಾಗಿ ಹಳೆಯ ಶಾಲೆಯ ಹತ್ತಿರದ ಪ್ರತಿಷ್ಠಾಪನಾ ಸ್ಥಳ ತಲುಪಿತು.ಮೆರವಣಿಗೆಯಲ್ಲಿ ಗುರುವೀರ ಮಹಿಳಾ ವೀರಗಾಸೆ ಕಲಾತಂಡ, ಪುನಾ ಹಾಗೂ ನಾಸಿಕದ ಡೋಲ ತಂಡಗಳು, ಕೇರಳದ ಚಂಡಿಕಾ ವಾದ್ಯ, ದೇವಿ ಮಹಾತ್ಮೆ, ಗೊಂಬೆಮೇಳ, ವೀರಗಾಸೆ, ವೀರಭದ್ರಕುಣಿತ, ಧ್ವಜಾಕುಣಿತ, ಕೀಲುಗುದುರೆ ಮಹಿಳಾ ವೀರಗಾಸೆ, ಸೌದತ್ತಿ ಯಲ್ಲಮ್ಮನ ಜೋಗತಿಯರ ತಂಡಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾಂಸ್ಕೃತಿಕ ಕಲಾ ತಂಡಗಳು ನೋಡುಗರ ಗಮನ ಸೆಳೆದವು.ನಾಡದೇವಿ ಉತ್ಸವ ಕಮೀಟಿಯ ಅಧ್ಯಕ್ಷ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಮಹಾರಾಷ್ಟ್ರದ ತುಳಜಾಪುರ ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ದೀಪವನ್ನು ಹೊತ್ತಿಸಿಕೊಂಡು, ಅದನ್ನು ರೇವತಗಾಂವ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿರುವ ದೇವಿಯ ಮೂರ್ತಿಯ ಮುಂದೆ ಹಚ್ಚುವುದು ವಾಡಿಕೆ.ನವರಾತ್ರಿಯ ಘಟಸ್ಥಾಪನೆಯ ಮುನ್ನಾ ದಿನ ರೇವತಗಾಂವ ಗ್ರಾಮದ ಅಂಬಾಭವಾನಿ ಯುವಕ ಮಂಡಳಿಯ ನೂರಾರು ಜನ ಯುವಕರು ತುಳಜಾಪುರಕ್ಕೆ ಹೋಗಿ, ತುಳಜಾಭವಾನಿ ಮಂದಿರದಲ್ಲಿ ದೀಪ ಹೊತ್ತಿಸಿಕೊಂಡು ಅದು ಆರದಂತೆ ನೂರಾರು ಕಿ.ಮೀ ಕಾಲ್ನಡಿಗೆ ಮೂಲಕ ತರಲಾಯಿತು.ಈ ದೀಪ ಗುರುವಾರದಂದು ಬೆಳಗ್ಗೆ ಗ್ರಾಮಕ್ಕೆ ತರಲಾಯಿತು. ಈ ವೇಳೆ ಗ್ರಾಮದ ಮುತೈದೆಯರು ಅದಕ್ಕೆ ಪೂಜೆ ಸಲ್ಲಿಸಿ ಜ್ಯೋತಿಗೆ ಸ್ವಾಗತ ಮಾಡಿಕೊಂಡರು. ನಂತರ ಅಂಬಾಭವಾನಿ ದೇವಾಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಅಂಬಾಭವಾನಿಯ ಮುಂದೆ ಜ್ಯೋತಿ ಹಚ್ಚಲಾಯಿತು. ತದನಂತರ ದೇವಾಸ್ಥಾನದ ಮುಂಭಾಗ ಜ್ಯೋತಿಯನ್ನು ಪ್ರತಿಷ್ಠಾಪಿಸಲಾಯಿತು.ಗುರುವಾರದಿಂದ ೯ ದಿನ ಅಂಬಾಭವಾನಿಗೆ ನಿತ್ಯ ಪೂಜೆ ಸಲ್ಲಿಸಲಾಗುವುದು. ಈ ಅಂಬಾಭವಾನಿಗೆ ದುರ್ಗಾ ಪರಮೇಶ್ವರಿ, ಭುವನೇಶ್ವರಿ, ನಾಡದೇವತೆ ಎಂದು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಅಂಬಾಭವಾನಿಯ ಮುಂದೆ ಪ್ರತಿದಿನ ಭಕ್ತರು ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ದೇವಾಸ್ಥಾನವು…
