ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ಕಿರಾಣಿ ಅಂಗಡಿಯ ಮಾಲೀಕನೊಬ್ಬನ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕಾಳಗಿ ತಾಂಡಾದ ಗುರಪ್ಪ ಚೌವ್ಹಾಣ ಮೇಲೆ ಪ್ರಕರಣ ದಾಖಲಾಗಿದ್ದು ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ತನ್ನ ಕಿರಾಣಿ ಅಂಗಡಿಯ ಎದರು ತನ್ನ ಪಾಯಿದೆಗೋಸ್ಕರ ಯಾವುದೇ ಲೈಸನ್ಸ್ ವ, ಪರವಾನಗೆ ಪಡೆಯದೇ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಗ್ಲಾಸು, ನೀರು, ತಿನಿಸು ಮತ್ತು ಸ್ಥಳಾವಕಾಶ ಮಾಡಿಕೊಟ್ಟು ಪ್ರಕರಣಕ್ಕೆ ದಾರಿ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪಟ್ಟಣದ ಪಿಎಸ್‌ಐ ಸಂಜಯ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
