Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಗಾಣಿಗ ಸಮಾಜ ಬಾಂಧವರು ಎಂದಿಗೂ ಯಾರಿಗೂ ಕೆಡಕು ಬಯಸುವವರಲ್ಲ. ಗಾಣಿಗ ಸಮುದಾಯದವರು ಹೃದಯ ವಿಶಾಲತೆಯನ್ನು ಹೊಂದಿದ್ದಾರೆ. ನಮ್ಮ ಸಮಾಜ ಬಾಂಧವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಂಘಟಿತರಾಗುವದು ಅಗತ್ಯವಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಗಣೇಶ ನಗರದಲ್ಲಿರುವ ಯಲ್ಲಾಲಿಂಗೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ತಾಲೂಕು ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಗಾಣಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕ ಹಾಗೂ ಸಮಾಜದ ಮಹಿಳಾ ಘಟಕದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಓದಿದವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಸಮಾಜದ ಸಭೆಗಳು ನಿರಂತರವಾಗಿ ನಡೆಯುವಂತಾಗಬೇಕು. ಸಮಾಜ ಬಾಂಧವರು ಒಂದಾಗಿ ಸಮಾಜದ ಅಭಿವೃದ್ಧಿಗ ಶ್ರಮಿಸಲು ಮುಂದಾಗಬೇಕು. ಸಂಕ್ರಮಣದ ನಂತರ ಎಲ್ಲರೂ ಒಂದಾಗಿ ಬೃಹತ್…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಜ್ಯದ ವಿವಿಧ ನೋಂದಾಯಿತ ಕಂಪನಿಗಳಲ್ಲಿ ತಯಾರಿಸಿದ ಸ್ಪ್ರಿಂಕ್ಲರ್ ಪೈಪುಗಳನ್ನು ರೈತ ಬಾಂಧವರಿಗೆ ರಿಯಾಯತಿ ದರದಲ್ಲಿ ವಿತರಿಸಿದ ಈ ಸ್ಪ್ರಿಂಕ್ಲರ್ ಪೈಪುಗಳು ಕಳಪೆ ಗುಣಮಟ್ಟದಾಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಸ್ ಅವರಿಗೆ ಈಚೆಗೆ ಅಖಂಡ ಕರ್ನಾಟಕ ರೈತ ಸಂಘದಿಂದ ಮುಖಂಡ ಅರವಿಂದ ಕುಲಕರ್ಣಿ ಅವರು ಬೆಂಗಳೂರಿನಲ್ಲಿ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡ ಮೇರೆಗೆ ಬುಧವಾರ ಕೃಷಿ ಇಲಾಖೆಯ ಅಧಿಕಾರಿಗಳು ಹುಲಬೆಂಚಿ, ನಾಗರಾಳಹುಲಿ, ಶರಣಸೋಮನಾಳ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ವಿತರಿಸಿದ ಸ್ಪ್ರಿಂಕ್ಲರ್ ಪೈಪುಗಳನ್ನು ಗುಣಮಟ್ಟ ಪರೀಕ್ಷೆಗೆ ಸಂಗ್ರಹಿಸಿದರು.ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ರೈತ ಸಂಘದ ಮನವಿಗೆ ಸ್ಪಂದಿಸಿ ಕೃಷಿ ಇಲಾಖೆಯ ಆಯುಕ್ತರಿಗೆ ರೈತರಿಗೆ ವಿತರಿಸಿದ ಸ್ಪ್ರಿಂಕ್ಲರ್ ಪೈಪುಗಳ ಬಗ್ಗೆ ಹದಿನೈದು ದಿನಗಳಲ್ಲಿ ಮಾಹಿತಿ ಸಂಗ್ರಹಿಸಿ ಕಳಪೆ ಸ್ಪ್ರಿಂಕ್ಲರ್ ಪೈಪುಗಳನ್ನು ವಿತರಿಸಿದ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲು ಹಾಗೂ ಪೈಪುಗಳ ಗುಣಮಟ್ಟ ಪರೀಕ್ಷಿಸಲು ಕ್ರಮ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕರಾಟೆ ತರಬೇತುದಾರ ಶಿವುಕುಮಾರ ಶಾರದಳ್ಳಿ ಅವರಿಗೆ ಏಕಲವ್ಯ ಅಕಾಡೆಮಿ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.ಈ ವೇಳೆ ಪಾಲಕರ ಮುಖಂಡ ಅರವಿಂದ ಕೊಪ್ಪ ಅವರು ಮಾತನಾಡಿ, ಬಡತನದಲ್ಲಿದ್ದರೂ ವಿಶಾಲ ಹೃದಯ ಹೊಂದಿದ ಶಿವುಕುಮಾರರಂಥ ಶಿಕ್ಷಕರನ್ನು ಪಡೆದದ್ದು ಈ ಭಾಗದ ಜನತೆಯ ಭಾಗ್ಯ. ತಮ್ಮಲ್ಲಿರುವ ಕಲೆಯನ್ನು ನಿಸ್ವಾರ್ಥದಿಂದ ಇತರರಿಗೆ ಧಾರೆ ಎರೆಯುತ್ತಿರುವ ಅವರ ಸೇವೆಗೆ ಮೆಚ್ಚಿ ಈ ಹುದ್ದೆ ಅವರಿಗೆ ನೀಡಿದ್ದು ಸಂತಸ ತಂದಿದೆ. ನಮ್ಮ ಭಾಗದ ಮಕ್ಕಳು ರಾಜ್ಯ ರಾಷ್ಟç ಮಟ್ಟದಲ್ಲಿ ಮಿಂಚುವಷ್ಟು ಎತ್ತರಕ್ಕೆ ಏಕಲವ್ಯ ಅಕಾಡಮಿ ಬೆಳೆಯಲಿ. ಇನ್ನಷ್ಟು ಹುದ್ದೆಗಳು ಶಾರದಳ್ಳಿ ಅವರನ್ನ ಹುಡುಕಿಕೊಂಡು ಬರಲಿ ಎಂದರು.ಈ ವೇಳೆ ವಿದ್ಯಾರ್ಥಿಗಳ ಪಾಲಕರಾದ ನಾಗೇಂದ್ರ ಶಿವಶಿಂಪಿ, ಮಹಾಂತೇಶ ಬೂದಿಹಾಳಮಠ, ಬಸವರಾಜ ನಾಗೂರ, ವಿಜಯಕುಮಾರ ಸೋನಾರ, ಮಲ್ಲನಗೌಡ ಕಡಕಲ್ಲ ಸೇರಿದಂತೆ ಮತ್ತೀತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಗದಗ: ಪಂ.ಪುಟ್ಟರಾಜ ಗುರುವರ್ಯರ ಸಾಹಿತ್ಯ ಸಾಧನೆಯನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ಸುಮಾರು ೨೪ ವರ್ಷಗಳಿಂದ ರಾಜ್ಯದ ರಾಜಧಾನಿ ಬೆಂಗಳೂರನ್ನೂ ಒಳಗೊಂಡಂತೆ ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಹಮ್ಮಿಕೊಳ್ಳುತ್ತಾ ಬಂದಿರುವ ಪಂ. ಪುಟ್ಟರಾಜ ಸಾಹಿತ್ಯೋತ್ಸವವು, ಎರಡನೆಯ ಬಾರಿ ಮತ್ತೆ ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ ೨೦ ಭಾನುವಾರ ಅಕ್ಟೋಬರ್ ೨೦೨೪ ರಂದು ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೮ ಗಂಟೆವರೆಗೆ ದಾರವಾಡದ ರಂಗಾಯಣದಲ್ಲಿ ಇಡೀ ದಿನ ನಡೆಯುವುದು. ಮುಂಜಾನೆ: ೧೦.೦೦ ಗಂಟೆ ಈ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ.ಈ ಸಮಾರಂಭದ ಸಾನಿಧ್ಯವನ್ನು ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಡಾ. ಬಸವರಾಜ ದೇವರು ವಹಿಸಿಕೊಳ್ಳುವರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಕೆಂಬಾವಿ ಸಂಸ್ಥಾನ ಹಿರೇಮಠದ ಚನ್ನಬಸವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿಕೊಳ್ಳುವರು. ಪುಟ್ಟರಾಜ ಗುರುಗಳ ಶಿಷ್ಯರಾದ ಕಡಣಿ ಸಂಸ್ಠಾನ ಹಿರೇಮಠದ ಚನ್ನವೀರಸ್ವಾಮಿಗಳು, ಗದಗ ಉದ್ಘಾಟನೆ ಮಾಡಲಿದ್ದಾರೆ. ಕ.ವಿ.ವಿ.ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕರು, ಸಾಹಿತಿಗಳಾದ ಡಾ, ಎ. ಎಲ್. ದೇಸಾಯಿ ದಾರವಾಡ…

Read More

ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಹಮ್ಮಿಕೊಂಡ ೮ನೇ ಶರಣಾನುಭವ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿದೇಶಗಳಲ್ಲಿ ಬುದ್ಧಿಗೆ ಮಹತ್ವ ನೀಡಿದರೆ, ನಮ್ಮ ಭಾರತದಲ್ಲಿ ಹೃದಯವಂತಿಕೆಗೆ ಮೊದಲು ಆದ್ಯತೆ ನೀಡಲಾಗುತ್ತದೆ. ಇದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದರು.ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಹಮ್ಮಿಕೊಂಡ ಮಾಸಿಕ ೮ ನೇ ಶರಣಾನುಭವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಾನವನಿಗೆ ವೈಭವದ ಜೀವನಕ್ಕೆ ಬೇಕಾಗುವ ಎಲ್ಲ ಸಂಪತ್ತಿದೆ. ಆದರೆ ಬದುಕಿನಲ್ಲಿ ನೆಮ್ಮದಿಯಿಲ್ಲ. ಏಕೆಂದರೆ ಮಠ-ಮಂದಿರದ ಪರಂಪರೆಯನ್ನು ನಾವು ಮರೆಯುತ್ತಿದ್ದೇವೆ. ಅದಕ್ಕೆ ಎಷ್ಟೇ ಆಸ್ತಿ ಇದ್ದರೂ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತಿಲ್ಲ. ಮಾನವನಿಗೆ ಸಂಸ್ಕೃತಿ, ಸಂಸ್ಕಾರ ಬರಬೇಕಾದರೆ ಮಠ, ಮಂದಿರಕ್ಕೆ ಹೋಗಬೇಕು ಎಂದರು.ಈ ವೇಳೆ ತಾಲೂಕು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಶ್ರೀಮಠವು ಪ್ರಶಸ್ತಿಯನ್ನು ಆಶೀರ್ವಾದ ರೂಪದಲ್ಲಿ ನೀಡಿ ತಾಯಿ ಮತ್ತು ಮಕ್ಕಳ ಅನುಭವ ಉಂಟುಮಾಡುತ್ತಿದೆ. ಮನೆಗಳೇ ಮಠಗಳಾಗಬೇಕು ಎಂದು ಶರಣರು ಕಂಡ…

Read More

ಬಾಬಾನಗರ ಗ್ರಾಮದಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಮನರೇಗಾ ಯೋಜನೆಯ ಮಾಹಿತಿ, ಶಿಕ್ಷಣ & ಸಂವಹನ (ಐಇಸಿ) ಕಾರ್ಯಕ್ರಮದಡಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದ ಅಂಗವಾಗಿ ಮನೆ-ನೆಗೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರೇಣುಕಾ ಸೋಲಾಪುರ ಅವರು ಮಾತನಾಡಿದರು.ಸರಕಾರದ ನಿರ್ದೇಶನದಂತೆ ೨೦೨೪-೨೫ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಅಕ್ಟೋಬರ್ ೦೨ ರಿಂದ ಒಂದು ತಿಂಗಳುಗಳ ಕಾಲ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದ ಭಾಗವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ನೀಡುವದರ ಜೊತೆಗೆ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ, ಈ ತಾಂತ್ರಿಕ ಯುಗದಲ್ಲಿ ಎಲ್ಲರೂ ಪತ್ರರಹಿತ ಕೆಲಸ ಮಾಡಲು ಹೆಚ್ಚು ಒಲವು ತೋರುತ್ತಾರೆ. ಅದರಂತೆ ನಮ್ಮ ಮನರೇಗಾ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಿದರು.ನಂತರ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯು ಸಾಮಾನ್ಯ ಸ್ಥಿತಿಯಿಂದ ಬೆಳೆದು ಮಹಾನ್ ಕವಿಯಾಗಿ ಜಗತ್ತಿಗೆ ಸರ್ವಶ್ರೇಷ್ಠ ಮಹಾಕಾವ್ಯ ರಾಮಾಯಣವನ್ನು ನೀಡುವ ಮೂಲಕ ಮಹಾನ್ ದಾರ್ಶನಿಕರಾಗಿದ್ದಾರೆ. ಸಮಾಜಕ್ಕೆ ಆದರ್ಶಪ್ರಾಯವಾಗಬೇಕಾದರೆ ಇಂತಹ ಮಹಾನ್ ನಾಯಕರ ಜೀವನ ಸಂದೇಶ ಅರಿತುಕೊಂಡು ಮುನ್ನೆಡೆಯಬೇಕೆಂದರು.ಈ ಸಂದರ್ಭದಲ್ಲಿ ಡಾ.ವೈ.ಬಿ.ನಾಯಕ, ಡಾ.ಬಿ.ಎನ್.ಸಾಲವಾಡಗಿ, ಪ್ರೊ.ಎಂ.ಕೆ.ಯಾದವ, ಪ್ರೊ.ದಿಲೀಪಕುಮಾರ, ಪ್ರೊ.ಪಿ.ಎಸ್.ನಾಟೀಕಾರ, ಡಾ.ಶ್ರೀನಿವಾಸ ದೊಡಮನಿ, ಪ್ರೊ.ಜಯರಾಂ ರೆಡ್ಡಿ, ಪ್ರೊ.ಎಂ.ಆರ್.ಮಮದಾಪುರ, ಡಾ.ಎಸ್.ಬಿ.ಜನಗೊಂಡ, ಬೋಧಕೇತರ ಸಿಬ್ಬಂದಿ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಕಾವ್ಯದಲ್ಲಿ ಮೂಡಿಬಂದಿರುವ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕೆಂದು ವಿಜಯಪುರ ಎಸ್ಬಿ ಕಲಾ ಮತ್ತು ಕೆಸಿಪಿ ವಿeನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ದೊಡಮನಿ ಹೇಳಿದರು.ಪಟ್ಟಣದ ಬಸವಭವನದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ರಾಮಾಯಣ ಕಾವ್ಯದಲ್ಲಿರುವ ಜೀವನದ ಮೌಲ್ಯಗಳಾದ ರಾಮನ ಆದರ್ಶ, ಸೀತೆಯ ಪತಿವೃತ್ತ, ಕರುಣೆ, ದಯಾಗುಣ, ಭಕ್ತಿ ಮೌಲ್ಯ, ದೌರ್ಜನ್ಯ ತಡೆ ಗಟ್ಟುವಿಕೆ, ನಿಸರ್ಗದ ಪ್ರೇಮ ಸೇರಿದಂತೆ ಅನೇಕ ಮೌಲ್ಯಗಳನ್ನು ಕಾಣುತ್ತೇವೆ. ಇಂತಹ ರಾಮಾಯಣ ಕಾವ್ಯವು ಪ್ರತಿಯೊಂದು ಮನೆಯಲ್ಲಿ ಇರುವ ಜೊತೆಗೆ ಅದರಲ್ಲಿರುವ ಶಾಶ್ವತ ಮೌಲ್ಯಗಳನ್ನು ನಾವು ಅರಿತುಕೊಂಡು ಜೀವನ ಸಾಗಿಸಬೇಕಿದೆ ಎಂದರು.ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಗುರುವಿನ ಕಾರುಣ್ಯವಿದ್ದರೆ ಜೀವನ ಪಾವನವಾಗುತ್ತದೆ. ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿರುವ ಜೀವನ ಸಂದೇಶ ಅರಿತುಕೊಳ್ಳುವ ಅಗತ್ಯವಿದೆ ಎಂದರು.ಕರವೇ ಮುಖಂಡ ಅಶೋಕ ಹಾರಿವಾಳ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗುರುವಾರ ಸೈಬರ್ ಕ್ರೈಂ ವಂಚನೆ ಆಧಾರಿತ ’ಢಣ ಢಣ ಕಾಂಚಾಣ’ ವೆಬ್ ಸೀರಿಸ್‌ನ ಪೋಸ್ಟರ್‌ನ್ನು ಪ್ರಶಾಂತ ಕದ್ದರಕಿ ಬಿಡುಗಡೆಗೊಳಿಸಿದರು.ಈ ವೇಳೆ ನಿರ್ಮಾಪಕ ಗುರುರಾಜ ಮಠ ಮಾತನಾಡಿ, ನಿರ್ದೇಶಕ ರಘುಚಂದ್ರ ಬಿರಾದಾರ ಸೈಬರ್ ವಂಚನೆಯ ಕಥಾ ಹಂದರವನ್ನು ಹೆಣೆದು ಈ ವೆಬ್ ಸೀರಿಸ್ ರಚಿಸಿದ್ದಾರೆ. ಬಹುತೇಕ ವಿಜಯಪುರ ಜಿಲ್ಲೆ ಹಾಗೂ ಗ್ರಾಮೀಣ ಭಾಗದಲ್ಲಿ ಶೂಟಿಂಗ್ ಮಾಡಲಾಗಿದ್ದು. ಇಡೀ ವೆಬ್ ಸೀರಿಸ್ ಉತ್ತರ ಕರ್ನಾಟಕ ಭಾಷೆಯನ್ನು ಒಳಗೊಂಡಿದೆ. ಉತ್ತರ ಕರ್ನಾಟಕದ ಕಲಾವಿದರ ನಟನೆಯನ್ನು ಉತ್ತರ ಕರ್ನಾಟಕದ ಸೊಗಡಿನಲ್ಲಿಯೇ ನೋಡಬಹುದಾಗಿದೆ. ಶಿವು ಕುಂಬಾರ, ಶೃತಿ ಪೂಜಾರ, ಸಂತೋಷ ಉಪ್ಪಿನ, ಯಶವಂತ ಕೊಚಬಾಳ, ಪ್ರವೀಣ ಬಿರಾದಾರ ಈ ೬ಜನ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ೭ ಎಪಿಸೋಡ್‌ಗಳು ಓಟಿಟಿಯ ಮೂಲಕ ತೆರೆಗೆ ಬರಲಿದೆ ಎಂದರು.ಚಲನಚಿತ್ರ ನಟ ಸಂತೋಷ ಉಪ್ಪಿನ ಮಾತನಾಡಿ, ನಿರ್ದೇಶಕ ರಘುಚಂದ್ರ ಬಿರಾದಾರರವರ ಉತ್ತರ ಕರ್ನಾಟಕದ ಶೈಲಿಯ ನಿರ್ದೇಶನವು ವಿಭಿನ್ನವಾಗಿ ಮೂಡಿಬಂದಿದೆ. ಈ ಭಾಗದ ಕಲಾವಿದರಿಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಹೊಲದ ಭಾವಿಯೊಂದರಲ್ಲಿ ಬಿದ್ದಿರುವ ಹಸುವನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಸಫಲರಾಗಿದ್ದಾರೆ.ತಾಲೂಕಿನ ಅಗಸಬಾಳ ಗ್ರಾಮದ ಜಮೀನೊಂದರ ಅಂದಾಜು ೬೦ ಅಡಿ ಭಾವಿಯೊಳಗೆ ರಾತ್ರಿ ವೇಳೆ ಹಸು ಬಿದ್ದು ಒದ್ದಾಡುತ್ತಿದ್ದು. ಈ ವಿಷಯ ತಿಳಿದ ಕೆಲ ಗ್ರಾಮಸ್ಥರು ಅದನ್ನು ಹೊರತೆಗೆಯಲು ಪಯತ್ನಪಟ್ಟು ಸಫಲವಾಗದಿದ್ದಾಗ, ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಠಾಣಾಧಿಕಾರಿ ಪ್ರಮೋದ ಸುಂಕದ ಸಿಬ್ಬಂದಿಗಳಾದ ಸಿದ್ದಣ್ಣ ಪೊಲೇಶಿ, ಸಂತೋಷ ಲಮಾಣಿ, ಮಹೇಶ ಕರಡ್ಡಿ, ಮಂಜುನಾಥ ಬಳಿಗಾರ, ರವೀಂದ್ರ ರತ್ನಾಕರ, ಸುನೀಲ ನಾಯಕ ಕಾರ್ಯಾಚರಣೆ ನಡೆಸಿ ಹಸುವನ್ನು ರಕ್ಷಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Read More