ಉದಯರಶ್ಮಿ ದಿನಪತ್ರಿಕೆ
ಗದಗ: ಪಂ.ಪುಟ್ಟರಾಜ ಗುರುವರ್ಯರ ಸಾಹಿತ್ಯ ಸಾಧನೆಯನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ಸುಮಾರು ೨೪ ವರ್ಷಗಳಿಂದ ರಾಜ್ಯದ ರಾಜಧಾನಿ ಬೆಂಗಳೂರನ್ನೂ ಒಳಗೊಂಡಂತೆ ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಹಮ್ಮಿಕೊಳ್ಳುತ್ತಾ ಬಂದಿರುವ ಪಂ. ಪುಟ್ಟರಾಜ ಸಾಹಿತ್ಯೋತ್ಸವವು, ಎರಡನೆಯ ಬಾರಿ ಮತ್ತೆ ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ ೨೦ ಭಾನುವಾರ ಅಕ್ಟೋಬರ್ ೨೦೨೪ ರಂದು ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೮ ಗಂಟೆವರೆಗೆ ದಾರವಾಡದ ರಂಗಾಯಣದಲ್ಲಿ ಇಡೀ ದಿನ ನಡೆಯುವುದು. ಮುಂಜಾನೆ: ೧೦.೦೦ ಗಂಟೆ ಈ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಈ ಸಮಾರಂಭದ ಸಾನಿಧ್ಯವನ್ನು ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಡಾ. ಬಸವರಾಜ ದೇವರು ವಹಿಸಿಕೊಳ್ಳುವರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಕೆಂಬಾವಿ ಸಂಸ್ಥಾನ ಹಿರೇಮಠದ ಚನ್ನಬಸವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿಕೊಳ್ಳುವರು. ಪುಟ್ಟರಾಜ ಗುರುಗಳ ಶಿಷ್ಯರಾದ ಕಡಣಿ ಸಂಸ್ಠಾನ ಹಿರೇಮಠದ ಚನ್ನವೀರಸ್ವಾಮಿಗಳು, ಗದಗ ಉದ್ಘಾಟನೆ ಮಾಡಲಿದ್ದಾರೆ. ಕ.ವಿ.ವಿ.ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕರು, ಸಾಹಿತಿಗಳಾದ ಡಾ, ಎ. ಎಲ್. ದೇಸಾಯಿ ದಾರವಾಡ ನುಡಿ ನಮನ ಸಲ್ಲಿಸಲಿದ್ದಾರೆ.
ಅತಿಥಿಗಳಾಗಿ ‘ರಾಜ್ಯ ಸಂಗೀತ ವಿದ್ವಾನ’ ಪಂ. ಬಸವರಾಜ ಹೆಡಿಗ್ಗೊಂಡ, ರಂಗಾಯಣದ ನೂತನ ನಿರ್ದೇಶಕರಾದ ರಾಜು ತಾಳಿಕೋಟಿ ಧಾರವಾಡ, ಎಸ್. ಎಸ್. ಪಾಟೀಲ್ ಸಂಪಾದಕರು: ವಿಶ್ವದರ್ಶನ ದಿನಪತ್ರಿಕೆ, ಧಾರವಾಡ, ಅಂದಾನೆಪ್ಪ ವಿಭೂತಿ ಸಂಪಾದಕರು ವಿಭೂತಿ ಮಾಸ ಪತ್ರಿಕೆ, ಗದಗ ಇವರುಗಳು ಆಗಮಿಸಲಿದ್ದಾರೆ.
ಪೂಜ್ಯ ಗುರು ಪುಟ್ಟರಾಜರ ಸಾಹಿತ್ಯ ಸೇವಾ ಸ್ಮರಣೆಯಲ್ಲಿ ೨೪ ವರ್ಷಗಳಿಂದ ನೀಡುತ್ತಾ ಬಂದಿರುವ, ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಗೆ, ಕರ್ನಾಟಕದ ಸಾಧನೆ ಸಂಪನ್ನರು ಕೃತಿ ಆಯ್ಕೆಯಾಗಿದ್ದು, ಈ ಕೃತಿಕರ್ತ ಎಚ್. ಎಸ್. ಸಿದ್ಧಗಂಗಪ್ಪ, ಬೆಂಗಳೂರು ಇವರಿಗೆ ಪ್ರಶಸ್ತಿ ಪ್ರದಾನಿಸಲಾಗುವುದು. ಈ ಪ್ರಶಸ್ತಿಯು ನಗದು ಬಹುಮಾನ ಮತ್ತು ಫಲ ಪುಷ್ಪ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ಇದೇ ಸಂದರ್ಭದಲ್ಲಿ, ಭಾತ್ರಂಬದ ಪೂಜ್ಯ ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳ ಆತ್ಮಾನುಭವದ ಬುತ್ತಿ (ಆಧುನಿಕ ವಚನ ಸಂಕಲನ), ಬೆಳಗಾವಿಯ, ಡಾ. ಪಿ. ನಾಗರಾಜರ ವಚನ ನಿರ್ವಚನ (ಸೃಷ್ಠಿ ಶೀಲ ಸಂಕಲನಗಳ ಕಟ್ಟು) ಚಿಂಚನಸೂರನ ಶಿವಪುತ್ರ ಕಂಠಿ ರವರ ಸಾಧನೆಯ ಶಿಖರವನ್ನೇರಿದ ಶಿವಶರಣರು (ಚರಿತ್ರೆ), ಕಲಬುರ್ಗಿಯ ಡಾ. ಅಂಬುಜಾ ಎನ್. ಮಳಖೇಡಕರವರ ಮನ ಹರಿ ಧ್ಯಾನ ಮಂದಿರ (ಭಕ್ತಿಗೀತೆ ಸಂಕಲನ), ಬಾದಾಮಿ ಸುರೇಶ ಅರಳಿಮರರವರ ಹೀಗೇ ಒಂದಿಷ್ಟು (ಕವನ ಸಂಕಲನ), ಹುಬ್ಬಳಿಯ ಪದ್ಮಜಾ ಜಯತೀರ್ಥ ಉಮರ್ಜಿ ಭೃಂಗದ ಬೆನ್ನೇರಿ (ಕಥಾ ಸಂಕಲನ), ಧಾರವಾಡದ ಡಾ. ಈರಣ್ಣ ಇಂಜಗನೇರಿ ಇವರ ಫ್ರೀಡಮ್ (ಕಾದಂಬರಿ), ಭೈರಾಪೂರದ ಯಲ್ಲಪ್ಪ ಮ. ಹರ್ನಾಳಗಿ ಇವರ, ತಿರುವು (ಬದುಕು ಬದಲಿಸುವ ಬರಹಗಳು), ಧಾರವಾಡದ ಸರಸ್ವತಿ ರಾ. ಬೋಸಲೆ, ಮೂರನೇ ಕಾಲು (ಮಕ್ಕಳ ಕಥೆಗಳು ಸಂಕಲನ), ಧಾರವಾಡದ ಡಾ. ವೀಣಾ ಸಂಕನಗೌಡರ ಇವರ ಮೂರು ಮತ್ತೊಂದು ನಾಟಕಗಳು, ಆಯ್ದ ವಿವಿಧ ಪ್ರಕಾರದ ೧೦ ಕೃತಿಗಳಿಗೆ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ‘ವರ್ಷದ ಶೇಷ್ಠ ಕೃತಿ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಮಧ್ಯಾಹ್ನದ ಭೋಜನದ ವಿರಾಮದ ನಂತರ ಶ್ರೀ ಎಂ. ಪಿ. ಎಂ. ಕೊಟ್ರಯ್ಯ ನಿವೃತ್ತ ಪ್ರಾಧ್ಯಾಪಕರು, ಹೂವಿನ ಹಡಗಲಿ ಇವರ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ಏರ್ಪಡಿಸಲಾಗಿದೆ, ಜಯಶ್ರೀ ಬೆರಗುಡ ಹಳಿಯಾಳ. ಕಸ್ತೂರಿ ಗಂಜಿಗಟ್ಟಿ. ಪ್ರೊ. ಪ್ರವೀಣ್ ಕುಲಕರ್ಣಿ ಜಮಖಂಡಿ. ವನಶ್ರೀ ಶಿಂಧೆ, ಹಳಿಯಾಳ. ಶಿವರಾಜ ಅರಳಿ, ಮೇಲ್ಮರಿ. ಜಯಶ್ರೀ ಹಿರೇಮಠ, ಧಾರವಾಡ. ಬಸವರಾಜ ಎನ್ ಹಡಪದ, ಹಳಿಯಾಳ. ಶಾಂತಾ ಹೆಚ್, ಹರಪನಹಳ್ಳಿ. ಡಾ. ಅಂಬುಜಾ ಎನ್. ಮಳಖೇಡಕರ, ಕಲಬುರಗಿ, ಬಸವಂತಿ ಇಂಗಳಳ್ಳಿ ಧಾರವಾಡ ಇವರುಗಳು ತಮ್ಮ ಕವನ ವಾಚನ ಮಾಡಲಿದ್ದಾರೆ.
ಸಂಜೆ ೪.೦೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಜಗದ್ಗುರು ಶಿವಯೋಗೀಶ್ವರ ಮಹಾ ಸ್ವಾಮಿಗಳು ಜಗದ್ಗುರು ನಿರಂಜನ ಸಂಸ್ಥಾನ ಮಠ ಭಾತಂಬ್ರಾ – ಭಾಲ್ಕಿ ಇವರು ವಹಿಸಿಕೊಳ್ಳುವರು. ಅಧ್ಯಕ್ಷತೆಯನ್ನು ಪೂಜ್ಯ ಶ್ರೀ ಶಿವಪಂಚಾಕ್ಷರಿ ಸ್ವಾಮೀಜಿ ಶ್ರೀಗುರು ಮಡಿವಾಳೇಶ್ವರ ಮಠ, ಬುಡರಕಟ್ಟಿ ಇವರು ವಹಿಸಿಕೊಳ್ಳುವರು. ಸಂಗಮೇಶ ಬಬಲೇಶ್ವರ. ಅಧ್ಯಕ್ಷರು: ಬಾಲವಿಕಾಸ ಅಕಾಡೆಮಿ, ಧಾರವಾಡ, ಶಂಕರ ಹಲಗತ್ತಿ ಕಾರ್ಯದರ್ಶಿಗಳು, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ಮಲ್ಲಿಕಾರ್ಜುನ ಎಂ. ಚಿಕ್ಕಮಠ ಶಿಕ್ಷಣ ತಜ್ಞರು, ಧಾರವಾಡ, ಸಿದ್ಧಲಿಂಗೇಶ ಉ. ಸಜ್ಜನ ಶೆಟ್ಟರ ಕನ್ನಡ ಸಹಾಯಕ ಪ್ರಾಧ್ಯಾಪಕರು ಸ. ಪ್ರ. ದ. ಮ. ಕಾಲೇಜು, ಗದಗ. ಡಾ. ವಿನಾಯಕ ರಾ. ಕಮತದ ಮಕ್ಕಳ ಸಾಹಿತಿಗಳು ಗದಗ, ಅತಿಥಿಗಳಾಗಿ ಆಮಿಸಲಿದ್ದಾರೆ.
ಎಫ್. ಎ. ಹಿರೇಮಠ (ಬೆಳ್ಳಟ್ಟಿ) ಅಧ್ಯಕ್ಷರು: ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಗದಗ, ದೇವು ಹಡಪದ ಪ್ರ. ಕಾರ್ಯದರ್ಶಿ: ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಗದಗ, ‘ವಿದುಷಿ’ ದೇವಿಕಾ ಜೋಗಿ, ಹೊಸಪೇಟೆ. ರಾಜ್ಯ ಸಂಘಟನಾ ಕಾರ್ಯದರ್ಶಿ: ರಾಜ್ಯ ಮಹಿಳಾ ಘಟಕ, ಡಾ.ಪಂ.ಪು.ಸೇವಾ ಸಮಿತಿ, ಗದಗ, ಸೌಮ್ಯ ಸುರೇಶ ಧಾರವಾಡ ಜಿಲ್ಲಾ ಅಧ್ಯಕ್ಷರು: ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಮಹಿಳಾ ಘಟಕ, ದಾವಣಗೆರೆ ಇವರುಗಳು ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ತೀರ್ಪುಗಾರರ ಮೆಚ್ಚಿನ ಅಭಿನಂದನಾ ಪ್ರಶಸ್ತಿ’ಗೆ ಭಾಜನವಾದ ‘ಕುಲುಮೆಯೊಳಗಿನ ಕವಿತೆಗಳು’ (ಕವನ ಸಂಕಲ) ಲೇಖಕರು: ಮಹಾಂತೇಶ ಕುಂಬಾರ (ಎಮ್ಮಾರ್ಕೆ) ರನ್ನ ಬೆಳಗಲಿ, ‘ಶೂನ್ಯದಿಂದತ್ತತ್ತ’ (ಕಥಾ ಸಂಕಲನ) ಲೇಖಕರು: ಎ. ಆರ್. ಪಂಪಣ್ಣ, ವಟ್ಟಮ್ಮನಹಳ್ಳಿ, ‘ಮುಡಿಪು’ (ಕಾದಂಬರಿ) ಲೇಖಕರು: ರೂಪಾದೇವಿ ಬಂಗಾರ, ಸೇಡಂ, ‘ಕಾಡು ಮೇಡು’ (ಲೇಖನಗಳು ಸಂಕಲನ) ಲೇಖಕರು: ಮಾಲತೇಶ ಅಂಗೂರ, ಹಾವೇರಿ, ‘ಪುಟ್ಟೇ ಸೋನುವಿನ ತರಲೆ ಕಥೆಗಳು’ (ಮಕ್ಕಳ ಕಥೆಗಳು ಸಂಕಲನ) ಶ್ರೀಮತಿ ರಂಜಿತಾ ಮಹಾಜನ, ‘ನಾತಿಚರಾಮಿ’ (ಚರಿತ್ರೆ) ಶ್ರೀಮತಿ ವಿನುತ ಹಂಚಿನಮನಿ ಧಾರವಾಡ, ಇವರುಗಳಿಗೆ ಅಭಿನಂದಿಸಲಾಗುವುದು.
‘ವಿದುಷಿ’ ರೋಹಿಣಿ ಇಮಾರತಿ ಶ್ರೀ ಗಣೇಶ ನೃತ್ಯ ಶಾಲೆ, ಧಾರವಾಡ ‘ವಿದುಷಿ’ ಡಾ. ಸುಮಾ ಹಡಪದ ಹಳಿಯಾಳ ಪಂ. ಪುಟ್ಟರಾಜ ಸಂಗೀತ ಶಾಲೆ, ಧಾರವಾಡ ‘ವಿದುಷಿ’ ವಿಜಯಲಕ್ಷ್ಮಿ ಬಸಯ್ಯ ಬನ್ನಿಗೋಳಮಠ, ನಾಟ್ಯ ಲೋಕ ಕಲೆ ಹಾಗೂ ಸಾಂಸ್ಕೃತಿಕ ಸಂಸ್ಥೆ, ಹುಬ್ಬಳ್ಳಿ ಸಂಗೀತ ನೃತ್ಯ ಸೇವಾ ಶ್ರೀ ಗೌರವ ಸಲ್ಲಿಸಲಾಗುವುದು.
ಭೂಮಿಕಾ ಮಹಿಳಾ ಸಮಾಜ, ಗದಗ ಅಧ್ಯಕ್ಷರು ಪ್ರೇಮಾ ಕಡೆಮನಿ. ಅಭಿವ್ಯಕ್ತಿ ಕಲಾ ತಂಡ ಧಾರವಾಡ ‘ವಿದುಷಿ’ ಸೀತಾ ಡಿ. ಛಪ್ಪರ, ಧಾರವಾಡ. ಶ್ರೀ ಗಣೇಶ ನೃತ್ಯ ಶಾಲೆ ಧಾರವಾಡ ‘ವಿದುಷಿ’ ರೋಹಿಣಿ ಇಮಾರತಿ. ಪಂ. ಪುಟ್ಟರಾಜ ಸಂಗೀತ ಶಾಲೆ ಧಾರವಾಡ ಡಾ. ಸುಮಾ ಹಡಪದ ಹಳಿಯಾಳ. ಕಲಾ ವೈಭವ ಸಂಸ್ಥೆ, ಲಕ್ಷ್ಮೇಶ್ವರ ಭವ್ಯ ಎಸ್. ಕತ್ತಿ. ಬೆಳ್ಳಿಚುಕ್ಕಿ ಸಂಸ್ಕೃತಿಕ ಅಕಾಡೆಮಿ, ಬೆಳಗಾವಿ ಮಂಜುಳಾ ಪಟಗುಡಿ. ನಾಟ್ಯ ಲೋಕ ಕಲೆ ಹಾಗೂ ಸಾಂಸ್ಕೃತಿಕ ಸಂಸ್ಥೆ ಹುಬ್ಬಳ್ಳಿ ‘ವಿದುಷಿ’ ವಿಜಯಲಕ್ಷ್ಮಿ ಬಸಯ್ಯ ಬನ್ನಿಗೋಳಮಠ, ವಿಶಾರದ ನೃತ್ಯಾಲಯ ಹುಬ್ಬಳ್ಳಿ ‘ನಾಟ್ಯವಿಶಾರದ’ ಕು. ವಿಶಾರದ ಬಸವರಾಜ ಮುಳಗುಂದ. ಸ್ವರಾಮೃತ ಸಾಂಸ್ಕೃತಿ ಸಂಸ್ಥೆ ಶ್ರೀ ಬಸವರಾಜ ಮುಂಡರಗಿ ಎನ್. ಎಸ್. ಡಂಬಳ, ಅಖಿಲ ಭಾರತ ಕನ್ನಡ ಮಕ್ಕಳ ಮನೆ, ಗದಗ ಅರ್ಚನಾ ಹಿರೇಮಠ ಗದಗ. ಇವರುಗಳಿಂದ ಸಂಗೀತ ನೃತ್ಯ ಕಾರ್ಯಕ್ರಮಗಳು ನಡೆಯುವವು ಎಂದು ಸಾಹಿತೋತ್ಸವದ ಉಸ್ತುವಾರಿ ವಹಿಸಿಕೊಂಡ ಮತ್ತು ಡಾ.ಸುರೇಶ ಕಳಸಣ್ಣವರ ಅಧ್ಯಕ್ಷರು: ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಕಲಘಟಗಿ ಮತ್ತು ಹಳಿಯಾಳ ತಾಲೂಕಾ ಸಂಚಾಲಕ ಬಸವರಾಜ ಹಡಪದ ಇವರು ಜಂಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

