Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026

ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ

ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹೃದಯವಂತಿಕೆ ನಮ್ಮ ದೇಶದ ಸಂಸ್ಕೃತಿ :ಬಿಇಓ ಯಡ್ರಾಮಿ
(ರಾಜ್ಯ ) ಜಿಲ್ಲೆ

ಹೃದಯವಂತಿಕೆ ನಮ್ಮ ದೇಶದ ಸಂಸ್ಕೃತಿ :ಬಿಇಓ ಯಡ್ರಾಮಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಹಮ್ಮಿಕೊಂಡ ೮ನೇ ಶರಣಾನುಭವ ಕಾರ್ಯಕ್ರಮ

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ವಿದೇಶಗಳಲ್ಲಿ ಬುದ್ಧಿಗೆ ಮಹತ್ವ ನೀಡಿದರೆ, ನಮ್ಮ ಭಾರತದಲ್ಲಿ ಹೃದಯವಂತಿಕೆಗೆ ಮೊದಲು ಆದ್ಯತೆ ನೀಡಲಾಗುತ್ತದೆ. ಇದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದರು.
ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಹಮ್ಮಿಕೊಂಡ ಮಾಸಿಕ ೮ ನೇ ಶರಣಾನುಭವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಾನವನಿಗೆ ವೈಭವದ ಜೀವನಕ್ಕೆ ಬೇಕಾಗುವ ಎಲ್ಲ ಸಂಪತ್ತಿದೆ. ಆದರೆ ಬದುಕಿನಲ್ಲಿ ನೆಮ್ಮದಿಯಿಲ್ಲ. ಏಕೆಂದರೆ ಮಠ-ಮಂದಿರದ ಪರಂಪರೆಯನ್ನು ನಾವು ಮರೆಯುತ್ತಿದ್ದೇವೆ. ಅದಕ್ಕೆ ಎಷ್ಟೇ ಆಸ್ತಿ ಇದ್ದರೂ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತಿಲ್ಲ. ಮಾನವನಿಗೆ ಸಂಸ್ಕೃತಿ, ಸಂಸ್ಕಾರ ಬರಬೇಕಾದರೆ ಮಠ, ಮಂದಿರಕ್ಕೆ ಹೋಗಬೇಕು ಎಂದರು.
ಈ ವೇಳೆ ತಾಲೂಕು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಶ್ರೀಮಠವು ಪ್ರಶಸ್ತಿಯನ್ನು ಆಶೀರ್ವಾದ ರೂಪದಲ್ಲಿ ನೀಡಿ ತಾಯಿ ಮತ್ತು ಮಕ್ಕಳ ಅನುಭವ ಉಂಟುಮಾಡುತ್ತಿದೆ. ಮನೆಗಳೇ ಮಠಗಳಾಗಬೇಕು ಎಂದು ಶರಣರು ಕಂಡ ಕನಸು ಇಂದು ಈ ಮಠದಲ್ಲಿ ನಾ ಕಂಡಿರುವೆ. ಕಾಯಾ ವಾಚಾ ಮಾನಸಾಪೂರ್ವಕವಾಗಿ ಶ್ರೀಮಠದ ನೂತನ ಸಲಹಾ ಸಮಿತಿ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀಮಠದ ಪ್ರಭುಲಿಂಗ ಶರಣರು ಹಾಗೂ ಸಾನಿಧ್ಯವನ್ನು ಸಿಂದಗಿ ಆದಿಶೇಷ ಸಂಸ್ಥಾನ ಮಠದ ನಾಗರತ್ನ ವೀರರಾಜೇಂದ್ರ ಮಹಾಸ್ವಾಮಿಗಳು, ತಾರಾಪುರ ಹಾಜಿ ಮಲಂಗ ದರ್ಗಾದ ಮುರುಳಿ ಮುತ್ಯಾ ವಹಿಸಿಕೊಂಡಿದ್ದರು. ರಾಂಪುರ ಪಿ.ಎ ಷಾ ಹುಸೇನ್ ಭಾಷಾ ದರ್ಗಾದ ಅಮೀರಹ್ಮಜಾ ಮುಜಾವರ ನೇತೃತ್ವ ವಹಿಸಿದ್ದರು.
ಈ ವೇಳೆ ಶಿಕ್ಷಕ, ಸಾಹಿತಿ, ಕನ್ನಡ ಜನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪಡಗಾನೂರ, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಬಿ.ಉಕ್ಕಲಿ ಲಕ್ಷ್ಮಿ ಪೊಲೀಸ್ ಪಾಟೀಲ್ ಸೇರಿದಂತೆ ಅನೇಕರಿಗೆ ಬಸವಶ್ರೀ ರಕ್ಷೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಲಿಂಗಾಯತ ಮಹಾಮಠ ಟ್ರಸ್ಟ್ ಕಮೀಟಿಯ ನೂತನ ಸಲಹಾ ಸಮಿತಿಯ ಸದಸ್ಯರ ಪದಗ್ರಹಣವು ಜರುಗಿತು.
ಕಾರ್ಯಕ್ರಮದಲ್ಲಿ ಆನಂದ ಶಾಬಾದಿ, ಸುನಂದಾ ಯಂಪುರೆ, ಪಂಡಿತ ಯಂಪುರೆ, ಮಲ್ಲಿಕಾರ್ಜುನ ಬಿರಾದಾರ, ಶಂಕರ ಬೈಚಬಾಳ, ದೇವರ ಹಿಪ್ಪರಗಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಗುರುರಾಜ ಆಕಳವಾಡಿ, ಮಲಕಪ್ಪ ತಳವಾರ, ಶೌಕತಲಿ ಮುಜಾವರ, ಅಂಬಿಕಾ ಪಾಟೀಲ್, ಮೇಘಾ ಗುಣಾರಿ, ಸಂತೋಷಕುಮಾರ ಕುಂಬಾರ, ಶರಣಪ್ಪ ಹಡಪದ, ಅಮೃತ ಮರಬದ, ಗೊಲ್ಲಾಳಪ್ಪ ಚೌಧರಿ, ದತ್ತಾತ್ರೇಯ ಪಾಟೀಲ, ಸಂಗಣ್ಣ ಬ್ಯಾಕೋಡ, ಶರಣಪ್ಪ ಖಜೂರಗಿ, ಪುಂಡಲೀಕ ಬಡಿಗೇರ, ಸಿದ್ದರಾಮ ಪಟ್ಟಣಶೆಟ್ಟಿ, ಪ್ರಕಾಶ ಬಿರಾದಾರ, ಶಾಂತವ್ವ ಚಟ್ಟರಕಿ, ಗಿರಿಜಾ ಚೌಧರಿ, ರವಿ ಐರೋಡಗಿ, ಸಿದ್ದನಗೌಡ ಪಾಟೀಲ, ಶರಣಮ್ಮ ನಾಯಕ, ಚನ್ನಪ್ಪಗೌಡ ಹಚಡದ, ನಾಡಗೌಡ ಕಲಹಳ್ಳಿ, ಡಾ.ಶಿವಾನಂದ ಹೊಸಮನಿ, ನಾಗಿಣಿ ಹೊಸಮನಿ, ಶ್ರೀಮಂತ ಹಿರೇಗೌಡರ, ರಾಮನಗೌಡ ಅಸ್ಕಿ, ಗೋಲ್ಲಾಳಪ್ಪಗೌಡ ಯರಗಲ್, ಶಾಂತಪ್ಪ ಹಿಕ್ಕನಗುತ್ತಿ, ಎಂ.ಬಿ.ಅಲ್ದಿ, ಸಂಗಣ್ಣ ಬ್ಯಾಕೋಡ, ಮಲಕಣ್ಣ ತಳವಾರ, ಕೋರವಾರದ ರಮೇಶ ಶರಣರು ಸೇರಿದಂತೆ ಶ್ರೀಮಠದ ಭಕ್ತರಿದ್ದರು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026

ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ

ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ

ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026
    In ದಿನಪತ್ರಿಕೆ
  • ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ
    In (ರಾಜ್ಯ ) ಜಿಲ್ಲೆ
  • ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ
    In (ರಾಜ್ಯ ) ಜಿಲ್ಲೆ
  • ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮಾ.೨೬ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಭೇಟಿ, ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ ಜಿಪಂ ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
  • ಸೇತುವೆ ಕಾರ್ಯ: ಮಾರ್ಗ ಬದಲಾವಣೆ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗೃತೆವಹಿಸಿ
    In (ರಾಜ್ಯ ) ಜಿಲ್ಲೆ
  • ಕ್ಷಯರೋಗ ಗುಣವಾಗಬಹುದಾದ ಕಾಯಿಲೆ :ಡಾ.ರಾಜೇಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.