ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕರಾಟೆ ತರಬೇತುದಾರ ಶಿವುಕುಮಾರ ಶಾರದಳ್ಳಿ ಅವರಿಗೆ ಏಕಲವ್ಯ ಅಕಾಡೆಮಿ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಪಾಲಕರ ಮುಖಂಡ ಅರವಿಂದ ಕೊಪ್ಪ ಅವರು ಮಾತನಾಡಿ, ಬಡತನದಲ್ಲಿದ್ದರೂ ವಿಶಾಲ ಹೃದಯ ಹೊಂದಿದ ಶಿವುಕುಮಾರರಂಥ ಶಿಕ್ಷಕರನ್ನು ಪಡೆದದ್ದು ಈ ಭಾಗದ ಜನತೆಯ ಭಾಗ್ಯ. ತಮ್ಮಲ್ಲಿರುವ ಕಲೆಯನ್ನು ನಿಸ್ವಾರ್ಥದಿಂದ ಇತರರಿಗೆ ಧಾರೆ ಎರೆಯುತ್ತಿರುವ ಅವರ ಸೇವೆಗೆ ಮೆಚ್ಚಿ ಈ ಹುದ್ದೆ ಅವರಿಗೆ ನೀಡಿದ್ದು ಸಂತಸ ತಂದಿದೆ. ನಮ್ಮ ಭಾಗದ ಮಕ್ಕಳು ರಾಜ್ಯ ರಾಷ್ಟç ಮಟ್ಟದಲ್ಲಿ ಮಿಂಚುವಷ್ಟು ಎತ್ತರಕ್ಕೆ ಏಕಲವ್ಯ ಅಕಾಡಮಿ ಬೆಳೆಯಲಿ. ಇನ್ನಷ್ಟು ಹುದ್ದೆಗಳು ಶಾರದಳ್ಳಿ ಅವರನ್ನ ಹುಡುಕಿಕೊಂಡು ಬರಲಿ ಎಂದರು.
ಈ ವೇಳೆ ವಿದ್ಯಾರ್ಥಿಗಳ ಪಾಲಕರಾದ ನಾಗೇಂದ್ರ ಶಿವಶಿಂಪಿ, ಮಹಾಂತೇಶ ಬೂದಿಹಾಳಮಠ, ಬಸವರಾಜ ನಾಗೂರ, ವಿಜಯಕುಮಾರ ಸೋನಾರ, ಮಲ್ಲನಗೌಡ ಕಡಕಲ್ಲ ಸೇರಿದಂತೆ ಮತ್ತೀತರರು ಇದ್ದರು.

