ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹೊಲದ ಭಾವಿಯೊಂದರಲ್ಲಿ ಬಿದ್ದಿರುವ ಹಸುವನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಸಫಲರಾಗಿದ್ದಾರೆ.
ತಾಲೂಕಿನ ಅಗಸಬಾಳ ಗ್ರಾಮದ ಜಮೀನೊಂದರ ಅಂದಾಜು ೬೦ ಅಡಿ ಭಾವಿಯೊಳಗೆ ರಾತ್ರಿ ವೇಳೆ ಹಸು ಬಿದ್ದು ಒದ್ದಾಡುತ್ತಿದ್ದು. ಈ ವಿಷಯ ತಿಳಿದ ಕೆಲ ಗ್ರಾಮಸ್ಥರು ಅದನ್ನು ಹೊರತೆಗೆಯಲು ಪಯತ್ನಪಟ್ಟು ಸಫಲವಾಗದಿದ್ದಾಗ, ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಠಾಣಾಧಿಕಾರಿ ಪ್ರಮೋದ ಸುಂಕದ ಸಿಬ್ಬಂದಿಗಳಾದ ಸಿದ್ದಣ್ಣ ಪೊಲೇಶಿ, ಸಂತೋಷ ಲಮಾಣಿ, ಮಹೇಶ ಕರಡ್ಡಿ, ಮಂಜುನಾಥ ಬಳಿಗಾರ, ರವೀಂದ್ರ ರತ್ನಾಕರ, ಸುನೀಲ ನಾಯಕ ಕಾರ್ಯಾಚರಣೆ ನಡೆಸಿ ಹಸುವನ್ನು ರಕ್ಷಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

