Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026

ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ

ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಿಪೆಟ್ದಲ್ಲಿ ಕಳಪೆ ಸ್ಪ್ರಿಂಕ್ಲರ್ ಪೈಪುಗಳ ಗುಣಮಟ್ಟ ಪರೀಕ್ಷಿಸಲು ಆಗ್ರಹ
(ರಾಜ್ಯ ) ಜಿಲ್ಲೆ

ಸಿಪೆಟ್ದಲ್ಲಿ ಕಳಪೆ ಸ್ಪ್ರಿಂಕ್ಲರ್ ಪೈಪುಗಳ ಗುಣಮಟ್ಟ ಪರೀಕ್ಷಿಸಲು ಆಗ್ರಹ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಜ್ಯದ ವಿವಿಧ ನೋಂದಾಯಿತ ಕಂಪನಿಗಳಲ್ಲಿ ತಯಾರಿಸಿದ ಸ್ಪ್ರಿಂಕ್ಲರ್ ಪೈಪುಗಳನ್ನು ರೈತ ಬಾಂಧವರಿಗೆ ರಿಯಾಯತಿ ದರದಲ್ಲಿ ವಿತರಿಸಿದ ಈ ಸ್ಪ್ರಿಂಕ್ಲರ್ ಪೈಪುಗಳು ಕಳಪೆ ಗುಣಮಟ್ಟದಾಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಸ್ ಅವರಿಗೆ ಈಚೆಗೆ ಅಖಂಡ ಕರ್ನಾಟಕ ರೈತ ಸಂಘದಿಂದ ಮುಖಂಡ ಅರವಿಂದ ಕುಲಕರ್ಣಿ ಅವರು ಬೆಂಗಳೂರಿನಲ್ಲಿ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡ ಮೇರೆಗೆ ಬುಧವಾರ ಕೃಷಿ ಇಲಾಖೆಯ ಅಧಿಕಾರಿಗಳು ಹುಲಬೆಂಚಿ, ನಾಗರಾಳಹುಲಿ, ಶರಣಸೋಮನಾಳ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ವಿತರಿಸಿದ ಸ್ಪ್ರಿಂಕ್ಲರ್ ಪೈಪುಗಳನ್ನು ಗುಣಮಟ್ಟ ಪರೀಕ್ಷೆಗೆ ಸಂಗ್ರಹಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ರೈತ ಸಂಘದ ಮನವಿಗೆ ಸ್ಪಂದಿಸಿ ಕೃಷಿ ಇಲಾಖೆಯ ಆಯುಕ್ತರಿಗೆ ರೈತರಿಗೆ ವಿತರಿಸಿದ ಸ್ಪ್ರಿಂಕ್ಲರ್ ಪೈಪುಗಳ ಬಗ್ಗೆ ಹದಿನೈದು ದಿನಗಳಲ್ಲಿ ಮಾಹಿತಿ ಸಂಗ್ರಹಿಸಿ ಕಳಪೆ ಸ್ಪ್ರಿಂಕ್ಲರ್ ಪೈಪುಗಳನ್ನು ವಿತರಿಸಿದ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲು ಹಾಗೂ ಪೈಪುಗಳ ಗುಣಮಟ್ಟ ಪರೀಕ್ಷಿಸಲು ಕ್ರಮ ವಹಿಸಬೇಕೆಂದು ಆದೇಶ ನೀಡಿದ ಮೇರೆಗೆ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಜಯಕುಮಾರ ಅಜೂರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ, ಬಸವನಬಾಗೇವಾಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ, ಮುದ್ದೇಬಿಹಾಳ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಚವ್ಹಾಣ ಅವರು ಹುಲಬೆಂಚಿ, ನಾಗರಾಳಹುಲಿ, ಶರಣಸೋಮನಾಳ ಗ್ರಾಮಗಳಿಗೆ ಭೇಟಿ ನೀಡಿ ರೈತ ಜಮೀನುಗಳಲ್ಲಿರುವ ವಿವಿಧ ಕಂಪನಿಗಳ ಸ್ಪ್ರಿಂಕ್ಲರ್ ಪೈಪುಗಳ ಮಾದರಿಯನ್ನು ಸಿಪೆಟ್ ಸಂಸ್ಥೆಗೆ ಕಳುಹಿಸಲು ಸಂಗ್ರಹಿಸಿದರು.
ಈ ಸಂದರ್ಭದಲ್ಲಿದ್ದ ರೈತ ಮುಖಂಡ ಅರವಿಂದ ಕುಲಕರ್ಣಿ ಅವರು ಸ್ಪ್ರಿಂಕ್ಲರ್ ಪೈಪುಗಳ ಮಾದರಿಗಳನ್ನು ಸಿಪೆಟ್ ಸಂಸ್ಥೆಯ ಲ್ಯಾಬ್ನಲ್ಲಿ ಗುಣಮಟ್ಟ ಪರೀಕ್ಷಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ರೈತ ಮುಖಂಡರ ಸಮ್ಮುಖದಲ್ಲಿ ಲ್ಯಾಬ್ ಟೆಸ್ಟ್ ನಡೆಸಬೇಕೆಂದು ಅಧಿಕಾರಿಗಳ ಗಮನಕ್ಕೆ ತಂದ ಅವರು, ರಾಜ್ಯದಲ್ಲಿ ೬೭ ನೋಂದಾಯಿತ ಕಂಪನಿಗಳಿದ್ದು. ಬಹುತೇಕ ಕಂಪನಿಗಳು ಕಳಪೆ ಮಟ್ಟದಲ್ಲಿ ಸ್ಪ್ರಿಂಕ್ಲರ್ ಪೈಪುಗಳನ್ನು ತಯಾರು ಮಾಡಿ ಕೃಷಿ ಇಲಾಖೆಯ ಮುಖಾಂತರ ರೈತರಿಗೆ ವಿತರಿಸಿ ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ಸಿಪೆಟ್ ಸಂಸ್ಥೆಗೆ ಗುಣಮಟ್ಟ ಪರೀಕ್ಷಿಸಲು ಕಳಿಸುವ ಮುಂಚೆ ರೈತರ ಜಮೀನಿನಲ್ಲಿ ಪೈಪ್ ಅಳವಡಿಸಿದ ಜಿಪಿಎಸ್ ಮಾಡಿದ ಭಾವಚಿತ್ರ,ವಿಡಿಯೋ ಸಾಕ್ಷಿ ಕಲೆ ಹಾಕಬೇಕು. ನಂತರ ಸಿಪೆಟ್ ಸಂಸ್ಥೆಗೆ ಗುಣಮಟ್ಟ ಪರೀಕ್ಷಿಸಲು ರವಾನಿಸಬೇಕೆಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಜಯಕುಮಾರ ಅಜೂರ ಅವರು, ಇಂದು ಸಂಗ್ರಹಿಸಿದ ಪೈಪುಗಳ ಮಾದರಿಯನ್ನು ಪರೀಕ್ಷಿಸಲು ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನ್ಯಾಯಯುತವಾಗಿ ಕ್ರಮ ತೆಗೆದುಕೊಳ್ಳಲಾಗುವದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಠ್ಠಲ ಬಿರಾದಾರ, ಲಾಲಸಾಬ ಹಳ್ಳೂರ, ಸಂತೋಷ ಬಿರಾದಾರ,ರಾಜು ವಂದಾಲ, ಪುಲಿಗೆಪ್ಪ ಸಾಸನೂರ, ಪುಲಿಗೆಪ್ಪ ಬಂಡಿವಡ್ಡರ ಇತರರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026

ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ

ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ

ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026
    In ದಿನಪತ್ರಿಕೆ
  • ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ
    In (ರಾಜ್ಯ ) ಜಿಲ್ಲೆ
  • ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ
    In (ರಾಜ್ಯ ) ಜಿಲ್ಲೆ
  • ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮಾ.೨೬ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಭೇಟಿ, ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ ಜಿಪಂ ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
  • ಸೇತುವೆ ಕಾರ್ಯ: ಮಾರ್ಗ ಬದಲಾವಣೆ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗೃತೆವಹಿಸಿ
    In (ರಾಜ್ಯ ) ಜಿಲ್ಲೆ
  • ಕ್ಷಯರೋಗ ಗುಣವಾಗಬಹುದಾದ ಕಾಯಿಲೆ :ಡಾ.ರಾಜೇಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.