Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪುರುಷರು ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಯ ಬಗ್ಗೆ ಇರುವ ಮೂಢನಂಬಿಕೆಗಳಿAದ ಹೊರ ಬರಬೇಕಿದೆ ಎಂದು ಕ್ಷೆತ್ರ ಆರೋಗ್ಯ ಶಿಕ್ಷಣಾಧಿಕಾರಿ ಎ.ಎಸ್.ತೇರದಾಳ ಹೇಳಿದರು.ಪಟ್ಟಣದ ಕಿಲ್ಲಾಗಲ್ಲಿಯ ಮಾರುತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪುರುಷರ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನ.೨೧ರಿಂದ ಡಿಸೇಂಬರ್ ೪ ರವರೆಗೆ ಸಪ್ತಾಹದ ಮೂಲಕ ಎನ್‌ಎಸ್‌ವಿ ಕುಟುಂಬ ಕಲ್ಯಾಣ ಯೋಜನೆ ಕುರಿತು ಪುರುಷ ಸಮುದಾಯದಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಸಪ್ತಾಹದಲ್ಲಿ ಎನ್‌ಎಸ್‌ವಿ ಶಸ್ತ್ರಚಿಕಿತ್ಸೆ ಸೌಲಭ್ಯವನ್ನು ಎಲ್ಲ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಏರ್ಪಡಿಸಲಾಗಿ. ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸುತ್ತ ತಂಬಾಕು ಮುಕ್ತ ಯುವ ಅಭಿಯಾನ ೨.೦ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಮಾತನಾಡಿ, ಪುರುಷರಿಗಾಗಿ ನೋ ಸ್ಕಾಲ್ ಪೆಲ್ ವ್ಯಾಸೆಕ್ಟಮಿ ಎಂಬ ವಿಧಾನ ವಿದ್ದು ಇದು ಸರಳ ಹಾಗೂ ವಿಶ್ವಾಸನೀಯ ಶಸ್ತ್ರ ಚಿಕಿತ್ಸೆ. ಈ ಹೊಸ ವಿಧಾನದಲ್ಲಿ ಗಾಯ, ಹೊಲಿಗೆ ಮಾಡಲಾಗವುದಿಲ್ಲ.…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಗ್ರಾಮದ ಬಾಲಾಜಿ ಶುಗರ್ಸ ಕಂಪನಿಯಲ್ಲಿ ಬುಧವಾರ ಕಬ್ಬು ಸಾಗಾಣಿಕೆ ಮಾಡುವ ವಾಹನಗಳ ಮಾಲೀಕರು ಮತ್ತು ಚಾಲಕರಿಗೆ ಪೊಲೀಸ್ ಇಲಾಖೆಯ ವತಿಯಿಂದ ಡಿವಾಯ್‌ಎಸ್‌ಪಿ ಬಲ್ಲಪ್ಪ ನಂದಗಾವಿ ನೇತೃತ್ವದಲ್ಲಿ ಸಂಚಾರಿ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಬ್ಬು ತುಂಬಿದ ವಾಹನಗಳು ರಸ್ತೆಯ ಅಪ್ ನಲ್ಲಿ ನಿಂತಾಗ ದೊಡ್ಡ ಕಲ್ಲುಗಳ ಸಹಾಯದಿಂದ ವಾಹನ ಹಿಂದೆ ಹೋಗದಂತೆ ಟ್ರಾö್ಯಕ್ಟರ್ ನ ಟ್ರಾಯಲಿಯನ್ನು ತಡೆಯಲಾಗಿರುತ್ತದೆ. ಆದರೆ ಟ್ರಾಯಲಿಯನ್ನು ದಾಟಿಸಿದ ಬಳಿಕ ಆ ಕಲ್ಲುಗಳನ್ನು ಅಲ್ಲಿಯೇ ಬಿಡುವದರಿಂದ ಅಪಘಾತಗಳಾಗುವ ಸಂಭವ ಹೆಚ್ಚಿದ್ದು ಅವುಗಳನ್ನು ಕಡ್ಡಾಯವಾಗಿ ರಸ್ತೆಯ ಪಕ್ಕದಲ್ಲಿ ಇರಿಸುವಂತೆ ಸೂಚಿಸಲಾಯಿತು. ಕಬ್ಬನ್ನು ಹೇರಿದ ಬಳಿಕ ಅದಕ್ಕೆ ಸೂಕ್ತವಾದ ಹಗ್ಗದಿಂದ ಬಿಗಿಯಾಗಿ ಕಟ್ಟುವಂತೆ, ವಾಹನದ ಹಿಂದೆ ಕಟ್ಟಾಯವಾಗಿ ರಿಫ್ಲೆಕಟ್ರ್ ಬ್ಯಾನರ್‌ಗಳನ್ನು ಅಳವಡಿಸುವಂತೆ, ರಸ್ತೆ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಸೂಚಿಸಲಾಯಿತು. ಫ್ಯಾಕ್ಟರಿಯ ಆಡಳಿತ ಮಂಡಳಿ, ವಾಹನಗಳ ಮಾಲೀಕರು ಮತ್ತು ಚಾಲಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನೊಟೀಸು ನೀಡಲಾಯಿತು.ಈ ವೇಳೆ ಸಿಪಿಐ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸಂಬಂಧ ಮುಖ್ಯವಲ್ಲ ಧರ್ಮವೇ ಪ್ರಧಾನ ಎನ್ನುವ ಆದರ್ಶ ಭಗವದ್ಗೀತೆಯ ತತ್ವದಲ್ಲಿ ಅಡಕವಾಗಿದೆ ಎಂದು ಸಾಹಿತಿ, ನಿವೃತ್ತ ಮುಖ್ಯಗುರು ಅಶೋಕ ಮಣಿ ಹೇಳಿದರು.ಪಟ್ಟಣದ ರೇವಣ ಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಯತಿವರೇಣ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೪ ಸಂಬಂಧಿ ಶ್ಲೋಕ ಪಠಣ ಕೇಂದ್ರದಲ್ಲಿ ಅವರು ಮಾತನಾಡಿದರು.ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ಅಧರ್ಮಕ್ಕೆ ಆದ ಅವನತಿಯನ್ನು ನೋಡಬಹುದಾಗಿದೆ. ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸದರೂ ಧರ್ಮ ಜಯವನ್ನೇ ಸಾಧಿಸಿದೆ. ಅಧರ್ಮದ ಕಾರ್ಯವನ್ನು ಮಾಡಬಾರದು. ಅಲ್ಲದೆ ಅಧರ್ಮಕ್ಕೆ ಎಂದೂ ಪ್ರೋತ್ಸಾಹ ಕೊಡಬಾದರು. ಜೀವನದ ಮೌಲ್ಯವನ್ನು ಎತ್ತಿ ಹಿಡಿಯುವುದು ಗೀತೆಯಾಗಿದೆ. ಸ್ತುತಿಗಳಿಂದ ಕ್ಲೇಶ ನಿವಾರಣೆ ಯಾಗುತ್ತದೆ ಎಂದರು.ಮುಖ್ಯಗುರು ಎಚ್.ಎನ್.ಇಟಗಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಅತೀ ಕಷ್ಟದ ಸಮಸ್ಯೆಗಳಿಗೆ ಸುಲಭದ ಮಾರ್ಗದಲ್ಲಿ ಪರಿಹಾರ ಭಗವದ್ಗೀತೆಯಲ್ಲಿದೆ. ಅದನ್ನು ಅರಿಯಬೇಕು ಎಂದರು.ಈ ಸಂದರ್ಭದಲ್ಲಿ ಅಭಿಯಾನದ ಸಂಚಾಲಕ ರಾಮಚಂದ್ರ ಹೆಗಡೆ, ಪ್ರಶಿಕ್ಷಕಿ ರಂಜಿತಾ ಹೆಗಡೆ ಶಿಕ್ಷಕರಾದ ಆರ್.ಎಸ್.ಲಮಾಣಿ.…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜಿಲ್ಲೆಯಾದ್ಯಂತ ನನ್ನ ಕಣ್ಣು ಎಂಬ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ಜೊತೆಗೆ ಕನ್ನಡಕ ನೀಡುವ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಟೈಟಾನ್ ಕಂಪನಿಯವರ ಕಾರ್ಯ ಶ್ಲಾಘನೀಯ ಎಂದು ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎಂ.ಎಸ್.ಕವಡಿಮಟ್ಟಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆ, ಟೈನಾನ ಕಂಪನಿ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.ಸರ್ಕಾರಿ ಶಾಲೆಯಲ್ಲಿ ಓದುವ ಬಹುತೇಕ ಮಕ್ಕಳು ಕಡು ಬಡವರಿರುತ್ತಾರೆ. ಅಂಥವರು ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವದಿಲ್ಲ. ಅಂಥವರನ್ನು ಗುರುತಿಸಿ ಉಚಿತ ಚಿಕಿತ್ಸೆ ನೀಡುವದು ಪುಣ್ಯದ ಕಾರ್ಯ ಎಂದರು.ಬಿ.ಐ.ಇ.ಆರ್.ಟಿ ಯ ಎಸ್.ಎಸ್.ರಾಮತಾಳ ಅವರು ಮಾತನಾಡಿ ಈ ಶಿಬಿರದಿಂದ ಅದೆಷ್ಟೋ ಬಡ ಮಕ್ಕಳಿಗೆ ಸಹಾಯವಾಗಿದೆ. ಮಕ್ಕಳಿಗೆ ಮಾತ್ರವಲ್ಲದೇ ಶಿಕ್ಷಕರಿಗೆ, ಬಿಸಿಯೂಟದ ಸಿಬ್ಬಂದಿಗೂ ಸಹ ತಪಾಸಣೆ, ಚಿಕಿತ್ಸೆ, ಕನ್ನಡಕ ಜೊತೆಗೆ ಸಾವಿರ ರೂಗಳನ್ನೂ ಸಹ…
ಮಾನವ ಸರಪಳಿ: ನಾವೀನ್ಯತೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ಬಾಗಲಕೋಟೆ ಜಿಲ್ಲೆಯ ಗಡಿ ಭಾಗದ ಆಲಮಟ್ಟಿಯವರೆಗಿನ ಸುಮಾರು ೬೨ ಕಿ.ಮೀ.ವರೆಗೆ ಯಶಸ್ವಿಯಾಗಿ ಹಮ್ಮಿಕೊಂಡ ಮಾನವ ಸರಪಳಿ ನಿರ್ಮಾಣಕ್ಕೆ ಮಾನವ ಸರಪಳಿ ನಾವೀನ್ಯತೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ.ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಬೀದರನಿಂದ ಚಾಮರಾಜನಗರವರೆಗೆ ಮಾನವ ಸರಪಳಿ ನಿರ್ಮಾಣ ಹಾಗೂ ವಿಶಿಷ್ಟ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಲ್ಡ್ ಆಫ್ ಬುಕ್ ರೆಕಾರ್ಡ ಸೇರ್ಪಡೆಗೊಂಡಿದ್ದು, ಈ ಪೈಕಿ ವಿಜಯಪುರ ಜಿಲ್ಲೆಗೆ ನಾವೀನ್ಯತೆ ವಿಭಾಗದಲ್ಲಿ ಪ್ರಥಮ ಸ್ಥಾನ ಸಂದಿರುವ ಹಿನ್ನಲೆಯಲ್ಲಿ ನವೆಂಬರ್ ೨೬ ರಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಂದ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಶಸ್ತಿ ಸ್ವೀಕರಿಸಿದರು.
ನಿಜವಾದ ’ಉದಯರಶ್ಮಿ’ ಪತ್ರಿಕೆ ವರದಿಯ ನಿರೀಕ್ಷೆ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದಲ್ಲಿ ಡಿ.೨ ರಂದು ಹಮ್ಮಿಕೊಂಡಿರುವ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮನಗೂಳಿ ಪಟ್ಟಣದ ಸಾಹಿತಿ, ಶಿಕ್ಷಕ ಸಿದ್ದರಾಮ ಈರಗೊಂಡಪ್ಪ ಬಿರಾದಾರ ಅವರನ್ನು ಬುಧವಾರ ಸಂಜೆ ಸ್ಥಳೀಯ ಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ತಾಲೂಕು ಕಸಾಪ ಕಾರ್ಯಾಲಯದಲ್ಲಿ ಜರುಗಿದ ಆಯ್ಕೆ ಸಮಿತಿಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಎಂಟು ಸಾಹಿತಿಗಳು ಅರ್ಜಿ ಸಲ್ಲಿಸಿದ್ದರು. ಎಂಟು ಅರ್ಜಿಗಳನ್ನು ಆಯ್ಕೆ ಸಮಿತಿ ಪರಿಶೀಲನೆ ಮಾಡಿದಾಗ ಸಿದ್ದರಾಮ ಬಿರಾದಾರ ಉಳಿದ ಸಾಹಿತಿಗಳಿಗಿಂತ ಸಾಹಿತಿಕವಾಗಿ, ಶೈಕ್ಷಣಿಕವಾಗಿ ಸೇರಿದಂತೆ ಇತರೇ ವಿಷಯಗಳ ಕುರಿತು ಹೆಚ್ಚು ಪುಸ್ತಕಗಳನ್ನು ರಚಿಸಿದ್ದು ಪರಿಗಣಿಸಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮ್ಮೇಳನ ಸರ್ವಾಧ್ಯಕ್ಷತೆಗೆ ಸಿದ್ದರಾಮ ಬಿರಾದಾರ ಅವರ ಹೆಸರನ್ನು ಹಾಸಿಂಪೀರ ವಾಲೀಕಾರ,…
ಸಿಂದಗಿ ಪುರಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಒಳಚರಂಡಿ ಕಾಮಗಾರಿಗೆ ನೀಡಿದ ಅವಧಿ ಮುಗಿದರೂ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಅವರಿಗೆ ನೊಟೀಸ್ ನೀಡಿ ಎಂದು ಈಗಾಗಲೇ ತಿಳಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ನಿಮಗೆ ಯಾವುದಾದರೂ ತೊಂದರೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಾಮಗಾರಿ ಮಾಡಿದರೇ ಆಗದು ಎಂದು ಒಳಚರಂಡಿ ಇಲಾಖೆಯ ಅಧಿಕಾರಿ ಎಂ.ಎಲ್.ಹೋನಕಟ್ಟಿ ಅವರಿಗೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಎಚ್ಚರಿಸಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಮಾಡಲಾಗಿದೆ. ನೀವು ಅಂದು ಎಲ್ಲಿಗೆ ರಸ್ತೆ ಇದೆಯೋ ಅದರ ಪಕ್ಕದಲ್ಲಿ ಅರಣ್ಯ ಇಲಾಖೆ ಗಿಡಗಳು ಹಚ್ಚಿದರೆ, ವಿದ್ಯುತ್ ಇಲಾಖೆಯವರು ವಿದ್ಯುತ್ ಕಂಬಗಳು ಪಕ್ಕದಲ್ಲಿ ಹಾಕಿದ್ದಾರೆ. ಹಾಕುವ ಮುಂಚೆ ಯೋಚಿಸಿದರೆ ಇಂದು ರಸ್ತೆ ಮಧ್ಯದಲ್ಲಿ ಕಂಬಗಳು ಬರುತ್ತಿರಲಿಲ್ಲ. ಇದೀಗ ರಸ್ತೆಯ ಮೇಲಿರುವ ಕಂಬಗಳನ್ನು ಸ್ಥಳಾಂತರಿಸಬೇಕಾದರೆ ಅದಕ್ಕೆ ಪುರಸಭೆ ಹಣ ಪಾವತಿಸಬೇಕು…
ಸಿಂದಗಿ ಅಗಸಿ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣವನ್ನು ಸೌಂದರ್ಯೀಕರಣಗೊಳಿಸಲು ಮತ್ತು ಧೂಳ ಮುಕ್ತ ನಗರವನ್ನಾಗಿ ಮಾಡಲು ನಾನು ಪಣ ತೊಟ್ಟಿದ್ದೇನೆ. ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಮೋರಟಗಿ ರಸ್ತೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಜಯಪುರ ಅನುಷ್ಠಾನ ಕೆ.ಆರ್.ಐ.ಡಿ.ಎಲ್. ಸಿಂದಗಿ ೨೦೨೩-೨೪ ನೇ ಸಾಲಿನ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಅಂದಾಜು ರೂ ೨೫ ಲಕ್ಷಗಳಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಅಗಸಿ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಸಿಂದಗಿ ಜನತೆಯ ಬಹುದಿನದ ಬೇಡಿಕೆಯಾಗಿರುವ ಅಗಸಿ ಮಹದ್ವಾರ ಬಾಗಿಲು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಾಣಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಪಟ್ಟಣದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, ೨೪*೭ ನೀರಿನ ಯೋಜನೆ, ರಸ್ತೆಯ ವಿದ್ಯುತ್ ಕಂಬಗಳ ನಿರ್ಮಾಣ ಸೇರಿದಂತೆ ಹಲವು ಮೂಲಭೂತ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ಉಜ್ಜಯಿನಿ ಸದ್ಧರ್ಮ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ. ರುದ್ರಮುನಿ ಶಿವಾಚಾರ್ಯರ ೪೭ನೇ ಪುಣ್ಯಾರಾಧನೆ ನಿಮಿತ್ತ ನಂ.೨೮ ರಿಂದ ಡಿ.೯ ರವರೆಗೆ ಪ್ರತಿದಿನ ರಾತ್ರಿ ೮ ಗಂಟೆಗೆ ಉಜ್ಜಯಿನಿ ಶ್ರೀಮದ್ ಸಿದ್ದಲಿಂಗ ಜಗದ್ಗುರುಗಳ ಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ.ಪುರಾಣ ಪ್ರಾರಂಭೋತ್ಸವದ ದಿವ್ಯ ಸಾನಿಧ್ಯವನ್ನು ಮುಧೋಳ ಗಂಜಿಗಟ್ಟಿ ಶ್ರೀಮಠದ ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯರು, ಮಳ್ಳಿಯ ರುದ್ರಮುನಿ ಶಿವಾಚಾರ್ಯರು ವಹಿಸಿಕೊಳ್ಳುವರು. ಕಾರ್ಯಕ್ರಮದ ನೇತೃತ್ವವನ್ನು ರೋಡಗಿ ವಿರಕ್ತಮಠದ ಅಭಿನವ ಶಿವಲಿಂಗೇಶ್ವರ ಸ್ವಾಮಿಗಳು, ಕಡಕೋಳ ಹಿರೇಮಠದ ರಾಜಗುರು ಮಹಾಲಿಂಗ ಸ್ವಾಮಿಗಳು, ಕೋರವಾರ ಚೌಕಿಮಠದ ಸದ್ಗುರು ಶಂಕರಾ ನಂದ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಚಳಕಾಪುರ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಮಹಾಸ್ವಾಮಿಗಳು, ನಾಲತವಾಡ ಹಿರೇಮಠದ ಶ್ರೀಗಳು, ಖಾನಾಪುರ ಶ್ರೀಮಠದ ಶ್ರೀಗಳು, ಹೊನ್ನಳ್ಳಿ ಶ್ರೀಮಠದ ಶ್ರೀಗಳು, ಅಲ್ಲಾಪುರ್ ಶ್ರೀ ಮಠದ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಉದ್ದಿಮೆದಾರ ವೆಂಕಟೇಶ ಗುತ್ತೇದಾರ, ಚಿಕ್ಕರೂಗಿ ಈರಣ್ಣ ಶಾಸ್ತ್ರಿಗಳು ನೆರವೇರಿಸಲಿದ್ದಾರೆ. ಪುರಾಣ ಪ್ರವಚನವನ್ನು ಅಮರೇಶ್ವರ ಶಾಸ್ತ್ರಿಗಳು ಉಣಬಡಿಸುವರು. ಸಂಗೀತ ಸೇವೆಯನ್ನು ಪಡದಳ್ಳಿ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕೊಂಡಗೂಳಿ ಗ್ರಾಮದಲ್ಲಿ ಹವಾಮಾನ ವೈಪರಿತ್ಯದಿಂದ ಹಾಳಾದ ತೊಗರಿ ಬೆಳೆಯ ಜಮೀನುಗಳಿಗೆ ಸಿಂದಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ವೈ.ಸಿಂಗೆಗೋಳ ಹಾಗೂ ವಿಮೆ ಕಂಪನಿಯ ರಾಜೇಶ ಭೇಟಿ ನೀಡಿ ವೀಕ್ಷಿಸಿ, ಪರಿಶೀಲಿಸಿದರು.ಕೊಂಡಗೂಳಿ ರೈತ ಸಮುದಾಯ ನಿನ್ನೆಯಷ್ಟೇ ಗ್ರಾಮದ ತೊಗರಿ ಬೆಳೆ ಹವಾಮಾನ ವೈಪರಿತ್ಯದಿಂದ ಸಂಪೂರ್ಣ ಹಾಳಾದ ಕುರಿತು ಹಾಗೂ ತಕ್ಷಣವೇ ರೈತರಿಗೆ ಬೆಳೆ ಹಾನಿಗೆ ಸಂಪೂರ್ಣ ವಿಮೆ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದ್ದರು. ರೈತರ ಮನವಿಗೆ ಸ್ಪಂದಿಸಿದ ಸಹಾಯಕ ಕೃಷಿ ನಿರ್ದೇಶಕ ಸಿಂಗೆಗೋಳ ಬುಧವಾರ ಬೆಳಿಗ್ಗೆ ವಿಮೆ ಕಂಪನಿಯ ಸಿಬ್ಬಂದಿಯೊಂದಿಗೆ ಕೊಂಡಗೂಳಿ ಗ್ರಾಮದ ತೊಗರಿ ಬೆಳೆಗಳು ಹಾಳಾದ ಜಮೀನುಗಳಿಗೆ ತೆರಳಿ ವೀಕ್ಷಣೆ ಮಾಡಿ, ಪರಿಶೀಲಿಸಿದರು. ನಂತರ ರೈತರೊಂದಿಗೆ ಮಾತನಾಡಿ, ಬೆಳೆಯ ವಾಸ್ತವಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ರೈತರ ನೆರವಿಗೆ ನಿಂತು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ರೈತರಾದ ವೀರಘಂಟಯ್ಯಾ ಗದ್ದಿಗೆಮಠ, ಸಿದ್ದಣ್ಣ ಸಿಂದಗೇರಿ, ಅಪ್ಪಾಸಾಹೇಬ ಬಸರಕೋಡ, ಈರಣ್ಣ ತಾವರಖೇಡ, ಕಾಶೀಲಿಂಗ…
