ಸಿಂದಗಿ ಅಗಸಿ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣವನ್ನು ಸೌಂದರ್ಯೀಕರಣಗೊಳಿಸಲು ಮತ್ತು ಧೂಳ ಮುಕ್ತ ನಗರವನ್ನಾಗಿ ಮಾಡಲು ನಾನು ಪಣ ತೊಟ್ಟಿದ್ದೇನೆ. ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಮೋರಟಗಿ ರಸ್ತೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಜಯಪುರ ಅನುಷ್ಠಾನ ಕೆ.ಆರ್.ಐ.ಡಿ.ಎಲ್. ಸಿಂದಗಿ ೨೦೨೩-೨೪ ನೇ ಸಾಲಿನ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಅಂದಾಜು ರೂ ೨೫ ಲಕ್ಷಗಳಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಅಗಸಿ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಿಂದಗಿ ಜನತೆಯ ಬಹುದಿನದ ಬೇಡಿಕೆಯಾಗಿರುವ ಅಗಸಿ ಮಹದ್ವಾರ ಬಾಗಿಲು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಾಣಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಪಟ್ಟಣದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, ೨೪*೭ ನೀರಿನ ಯೋಜನೆ, ರಸ್ತೆಯ ವಿದ್ಯುತ್ ಕಂಬಗಳ ನಿರ್ಮಾಣ ಸೇರಿದಂತೆ ಹಲವು ಮೂಲಭೂತ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಉಜ್ಜಯಿನಿ ಸದ್ಧರ್ಮ ಸಿಂಹಾಸನದೀಶ್ವರ ಜಗದ್ಗುರು ಡಾ.ಸಿದ್ದಲಿಂಗರಾಜ ದೇಶಕೇಂದ್ರ ಶಿವಾಚಾರ್ಯ ಭಗವದ್ಪಾದಂಗಳವರು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೊಣ್ಣೂರು ಹೊರಗಿನ ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಸಿಂದಗಿ ಊರಿನ ಹಿರೇಮಠದ ಶಿವಾನಂದ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಆದಿಶೇಷ ಸಂಸ್ಥಾನ ಹಿರೇಮಠದ ರಾಜಯೋಗಿ ನಾಗರತ್ನ ವಿರಾಜೇಂದ್ರ ಮಹಾಸ್ವಾಮಿಗಳು,
ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಅಶೋಕ ವಾರದ, ಸೋಮನಗೌಡ ಬಿರಾದಾರ, ಶ್ರೀಕಾಂತ್ ಬ್ಯಾಕೋಡ, ಬಸವರಾಜ ಯರನಾಳ, ಸಾಯಬಣ್ಣ ಪುರದಾಳ, ಸೈಪನ್ ನಾಟೀಕಾರ, ಶರಣು ಶ್ರೀಗಿರಿ, ಕಾಂತಪ್ಪ ಅಂಬಲಗಿ, ರವಿ ನಾಗೂರ, ಸುನೀಲ ಹಳ್ಳೂರ, ಮಲ್ಲಿಕಾರ್ಜುನ್ ಬಮ್ಮಣ್ಣಿ, ಚನ್ನು ಪಟ್ಟಣಶೆಟ್ಟಿ, ಬಾಬು ಕಮತಗಿ, ಸಂಗನಬಸು ಬಿರಾದಾರ, ಅಜರ್ ನಾಟೀಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

