ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಗ್ರಾಮದ ಬಾಲಾಜಿ ಶುಗರ್ಸ ಕಂಪನಿಯಲ್ಲಿ ಬುಧವಾರ ಕಬ್ಬು ಸಾಗಾಣಿಕೆ ಮಾಡುವ ವಾಹನಗಳ ಮಾಲೀಕರು ಮತ್ತು ಚಾಲಕರಿಗೆ ಪೊಲೀಸ್ ಇಲಾಖೆಯ ವತಿಯಿಂದ ಡಿವಾಯ್‌ಎಸ್‌ಪಿ ಬಲ್ಲಪ್ಪ ನಂದಗಾವಿ ನೇತೃತ್ವದಲ್ಲಿ ಸಂಚಾರಿ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಬ್ಬು ತುಂಬಿದ ವಾಹನಗಳು ರಸ್ತೆಯ ಅಪ್ ನಲ್ಲಿ ನಿಂತಾಗ ದೊಡ್ಡ ಕಲ್ಲುಗಳ ಸಹಾಯದಿಂದ ವಾಹನ ಹಿಂದೆ ಹೋಗದಂತೆ ಟ್ರಾö್ಯಕ್ಟರ್ ನ ಟ್ರಾಯಲಿಯನ್ನು ತಡೆಯಲಾಗಿರುತ್ತದೆ. ಆದರೆ ಟ್ರಾಯಲಿಯನ್ನು ದಾಟಿಸಿದ ಬಳಿಕ ಆ ಕಲ್ಲುಗಳನ್ನು ಅಲ್ಲಿಯೇ ಬಿಡುವದರಿಂದ ಅಪಘಾತಗಳಾಗುವ ಸಂಭವ ಹೆಚ್ಚಿದ್ದು ಅವುಗಳನ್ನು ಕಡ್ಡಾಯವಾಗಿ ರಸ್ತೆಯ ಪಕ್ಕದಲ್ಲಿ ಇರಿಸುವಂತೆ ಸೂಚಿಸಲಾಯಿತು. ಕಬ್ಬನ್ನು ಹೇರಿದ ಬಳಿಕ ಅದಕ್ಕೆ ಸೂಕ್ತವಾದ ಹಗ್ಗದಿಂದ ಬಿಗಿಯಾಗಿ ಕಟ್ಟುವಂತೆ, ವಾಹನದ ಹಿಂದೆ ಕಟ್ಟಾಯವಾಗಿ ರಿಫ್ಲೆಕಟ್ರ್ ಬ್ಯಾನರ್‌ಗಳನ್ನು ಅಳವಡಿಸುವಂತೆ, ರಸ್ತೆ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಸೂಚಿಸಲಾಯಿತು. ಫ್ಯಾಕ್ಟರಿಯ ಆಡಳಿತ ಮಂಡಳಿ, ವಾಹನಗಳ ಮಾಲೀಕರು ಮತ್ತು ಚಾಲಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನೊಟೀಸು ನೀಡಲಾಯಿತು.
ಈ ವೇಳೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ತಾಳಿಕೋಟೆ ಪಿಎಸ್‌ಐ ರಾಮನಗೌಡ ಸಂಕನಾಳ ಸೇರಿದಂತೆ ೫೦ಕ್ಕೂ ಹೆಚ್ಚು ವಾಹನಗಳ ಚಾಲಕರು ಹಾಗೂ ಮಾಲೀಕರು ಹಾಗೂ ಫ್ಯಾಕ್ಟರಿಯ ಸಿಬ್ಬಂದಿ ಭಾಗಿಯಾಗಿದ್ದರು.

