Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026

ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ

ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಏಕತೆ ಮತ್ತು ಒಕ್ಕಟ್ಟು ಸಮಾಜದ ಆಭಿವೃದ್ದಿಗೆ ಪೂರಕ
(ರಾಜ್ಯ ) ಜಿಲ್ಲೆ

ಏಕತೆ ಮತ್ತು ಒಕ್ಕಟ್ಟು ಸಮಾಜದ ಆಭಿವೃದ್ದಿಗೆ ಪೂರಕ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ ದಲ್ಲಿ ನಡೆದ ರಾಜ್ಯ ಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶದ ಸಮಾರೋಪದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಒಂದು ಸುಂದರ ಸಮಾಜ ನಿರ್ಮಾಣವಾಗಲು ಒಕ್ಕಟ್ಟು, ಏಕತೆ ಅವಶ್ಯಕ, ಅಂತಹ ಸಮಾಜವನ್ನು ಇಂದು ಕಾಣುತ್ತಿದ್ದೇನೆ, ತಾವು ಕೈಕೊಂಡ ಬ್ರಾಹ್ಮಣ ವಧು-ವರಾನ್ವೇಷಣ ಕಾರ್ಯಕ್ರಮ ಯಶಸ್ವಿಯಾಗಿ ಹಿಂದು ಸಂಸ್ಕೃತಿ ಉಳಿಯಲಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಂಗಳಸೂತ್ರ ಫೌಂಡೇಶನ್ ನಗರದ ಶ್ರೀ ಚಿದಂಬರ ಸೇವಾ ಸಮಿತಿ ಸಹಯೋಗದಲ್ಲಿ ಶ್ರೀ ಚಿದಂಬರೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆದ ೬೮ನೇ ರಾಜ್ಯ ಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶದ ಸಮಾರೋಪ ಹಾಗೂ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಹಿಂದು ಸಮಾಜದ ಸ್ಥಾಪನೆಗೆ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರ, ಅವರಿಂದಲೇ ಹಿಂದುತ್ವ ಉಳಿದು ಸಮಾಜಗಳ ಪರಿವರ್ತನೆಗಳಲ್ಲಿ ಅವರ ಪಾತ್ರ ಅಮೋಘ ಎಂದು ಹೇಳಿದರು.
ಪಾಲಕರಾದವರು ಮಕ್ಕಳನ್ನು ಮದುವೆಗೆ ಸಿದ್ದತೆ ಮಾಡಿರಿ, ಹೆಣ್ಣು ಮಕ್ಕಳು ಜಾಗೃತರಾಗಬೇಕು ಎಂದು ಹೇಳಿದ ಅವರು ಯಾವುದೇ ಅಮೀಶಕ್ಕೆ ಬಲಿ ಬೀಳದೇ ಸುಂದರ ಸಮಾಜ ನಿರ್ಮಿಸಲು ಹಿರಿಯರು ಹಾಕಿದ ಮಾರ್ಗದಲ್ಲಿ ಮುನ್ನಡೆದು ಬದುಕಿನ ಜೀವನ ಆಯ್ಕೆ ಮಾಡಿಕೊಳ್ಳಬೇಕು ಎಂದರು. ಬ್ರಾಹ್ಮಣ ಸಮಾಜ ನಾನು ಈ ಮಟ್ಟಕ್ಕೆ ನಿಲ್ಲಲು ಮಾಡಿದ ಕಾರ್ಯ ಅಪಾರ, ಸಮಾಜದ ಸೇವೆ ಸಲ್ಲಿಸುವ, ಋಣ ತೀರಿಸಲು ಸದಾ ಸಿದ್ದನಿದ್ದೇನೆ ಎಂದವರು ಹೇಳಿದರು.
ಮತದಾನಕ್ಕೆ ಬೆಲೆ ಕೊಡಿರಿ ಅಂದಾಗ ಮಾತ್ರ ಹಿಂದುತ್ವದ ಬದುಕು ಕಾಣಲು ಸಾಧ್ಯ, ತಾವು ಎಲ್ಲವುದನ್ನು ದೂರವಿಟ್ಟು ಮತ ಮಾಡುವದರಲ್ಲಿ ಜಾಗೃತರಾಗಿರಿ ಅಂದಾಗ ಹಿಂದು ಸಮಾಜ ಉಳಿಯಲು ಸಾಧ್ಯ ಎಂದರು.
ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿ ಪಂ. ಮದ್ವಾಚಾರ್ಯ ಮೊಕಾಶಿ ಅವರು ಮಾತನಾಡಿ ವಧು-ವರಾನ್ವೇಶಕರು ೬ ತತ್ವಗಳನ್ನು ಮೈಗೂಡಿಸಿಕೊಂಡು ಉತ್ತಮ ವರನಿಗೆ ಧಾರೆ ಎರೆದುಕೊಡಿರಿ ಎಂದ ಅವರು ದೈವಿ ಪ್ರಯತ್ನ ಬೇಕು, ಪಾಲಕರು ಸಂಬಂದ ಬೆಸೆಯುವ ಕೆಲಸ ಮಾಡಲಿ, ಬಡತನ-ಶ್ರೀಮಂತ ಎಂದೆನ್ನದೇ ಉತ್ತಮ ಸುಸಂಸ್ಕೃತ ಕುಟುಂಬ ಸಂಬಂಧ ಬೆಳೆಸಿ ಹಿಂದು ಸಂಸ್ಕೃತಿಯಲ್ಲಿ ಬ್ರಾಹ್ಮಣ ಸಂತತಿ ಬೆಳೆಯುವಂತೆ ಮಾಡಿರಿ ಎಂದು ವಧು-ವರರ ಪಾಲಕರಲ್ಲಿ ಕರೆ ನೀಡಿದರು.
ಹಿರಿಯ ಪತ್ರಕರ್ತರಾದ ಗೋಪಾಲ ನಾಯಕ ಮಾತನಾಡಿ, ಬ್ರಾಹ್ಮಣ ಸಮಾಜ ಅನಿಷ್ಠ ಹೋಗಲಾಡಿಸಲು ಸನಾತನ ಧರ್ಮದ ಪಾಲನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ವಧು-ವರರ ಸಮಾವೇಷ ಜನಪರ ಹಾಗೂ ಪ್ರಭಾವ ಬೀರುವ ಸಂಘಟನೆ ಶಕ್ತಿಯಾಗಿದೆ. ಇದರ ಸದುಪಯೋಗ ಸಮಾಜದ ಪಾಲಕರು ಪಡೆದುಕೊಂಡು ಬ್ರಾಹ್ಮಣ ಉದ್ಧರಿಸುವ ಕೆಲಸ ಮಾಡಲಿ ಎಂದು ಸಮಾಜದ ಮುಖಂಡರಲ್ಲಿ ಕರೆ ನೀಡಿದರು.
ಹರಿದಾಸ ಸಾಹಿತ್ಯ ಪ್ರಕಟಿಸುವ ಕೆಲಸ ಮಂತ್ರಾಲಯ ಮಠ ಸಂಪೂರ್ಣ ಸನ್ನದ್ದವಾಗಿದ್ದು, ಅಕ್ಕ ಪಕ್ಕದ ರಾಜ್ಯಗಳ ವಧು-ವರನ್ವೇ಼ಷಣ ಮಂತ್ರಾಲಯದಲ್ಲಿ ಮಾಡುವ ಯೋಜನೆಗೆ ಸಹಕಾರ ನೀಡಿ ಸಂಘಟಿಸುವ ಭರವಸೆ ನೀಡಿದರು.
ಕನ್ಯಾ ಇವೆ ಆದರೆ ಅದಕ್ಕೆ ಜವಾಬ್ದಾರಿ ತಗೆದುಕೊಂಡು ಸಾಧಿಸುವ ಮುಖಂಡರ ಸಂಘಟನೆ ಬೇಕಿದೆ, ಈಗ ಅದು ನಡೆಯತ್ತಿದೆ, ಇದರ ಫಲ ಇಷ್ಟರಲ್ಲಿಯೇ ಸಿಗಲಿದೆ ಎಂದು ಅಗಡಿ ಶ್ರೀಗಳಾದ ವಿಶ್ವನಾಥ್ ಚಕ್ರವರ್ತಿ ಗುರುಗಳು ಹಿತನುಡಿ ಹೇಳಿದರು. ಚೌಕಸಿ ಮಾಡದೇ ಉತ್ತಮ ವರನಿಗೆ ತಮ್ಮ ಮಗಳನ್ನು ಧಾರೆ ಎರೆದುಕೊಟ್ಟು ಭದ್ರ ಸಮಾಜ ನಿರ್ಮಿಸಲು ಪಾಲಕರು ಮುಂದಾಗಲಿ ಎಂದು ಕನ್ನೂರ ಮಠದ ಶ್ರೀಕೃಷ್ಣ ಸಂಪಗಾಂವಕರ ಹೇಳಿದರು.
ಆನಂದ ಜೋಶಿ, ಪ್ರಕಾಶ ಅಕ್ಕಲಕೋಟ, ಜೋಶಿ ಅವರುಗಳು ಮಾತನಾಡಿ ಹಿಂದು ಭದ್ರತೆಗೆ, ಸದೃಡ ಸಮಾಜಕ್ಕೆ ಸಂತಾನ ಅಭಿವೃದ್ದಿ ಅವಶ್ಯ ಈ ನಿಟ್ಟಿನಲ್ಲಿ ಇಂತಹ ಅನ್ವೇಷಣೆ ಕಾರ್ಯಕ್ರಮ ಅವಶ್ಯ, ಮಕ್ಕಳಿಗೆ ತಿಳಿಸಿ ಹೇಳಿ ಸಂಬಂಧ ಉಳಿಸಿ ಬೆಳೆಸಿ ಎಂದು ಸಮಾಜಕ್ಕೆ ಕರೆ ನೀಡಿದರು. ಶ್ರೀ ಚಿದಂಬರ ಸೇವಾ ಸಮಿತಿ ಅಧ್ಯಕ್ಷರಾದ ಲಕ್ಷ್ಮೀಕಾಂತ ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಳೇದ ಎರಡು ದಿನಗಳಿಂದ ನಡೆದ ಬ್ರಾಹ್ಮಣ ವಧು-ವರಾನ್ವೇಷಣದಲ್ಲಿ ಸುಮಾರು ವಧು ಹಾಗೂ ವರ ಮತ್ತು ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಮಂಗಳಸೂತ್ರ ಫೌಂಡೇಶನ್‌ದ ಶ್ರೀನಿವಾಸ ಭಾರದ್ವಾಜ ಹಾಗೂ ಶ್ರೀನಿವಾಸ ಅವರು ಕೈಕೊಂಡ ಈ ವಧು-ವರನ್ವೇಷಣ ಕಾರ್ಯಕ್ರಮದ ಬಗ್ಗೆ ಸರ್ವರು ಅವರುಗಳನ್ನು ಹೊಗಳಿದರು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವೇದಿಕೆಯ ಮೇಲೆ ಇದ್ದ ಸರ್ವರನ್ನು ಹಾಗೂ ವಿವಿಧ ರಂಗಗಲ್ಲಿ ಸಾಧನೆ ಮಾಡಿದ ಹಿರಿಯರನ್ನು ಸಾಧಕರನ್ನು ಸತ್ಕರಿಸಿದರು.
ವೇದಿಕೆಯ ಮೇಲೆ ಸಂಚಾಲಕ ಸತೀಶ ಕುಲಕರ್ಣಿ, ವಿಜಯ ಜೋಶಿ, ವಿಕಾಸ ಪದಕಿ,ಶ್ರೀ ಅಭಿನವ ವಿಶ್ವನಾಥ ಗುರೂಜಿ ಆನಂದ ವನ ಮುಕುಂದ ಕುಲ್ಕರ್ಣಿ ವೆಂಕಟೇಶ ಜೋಶಿ. ಆನಂದ ಜೋಶಿ ಶ್ರೀ ಶಂಕರ ಭಟ್ಟ ಅಗ್ನಿಹೋತ್ರೀ ಮಧುಸೂಧನ ಆಚಾರ್ಯ ಜೋಶಿ, ಶ್ರೀಮತಿ ಸವೀತಾ ಗಲಗಲಿ, ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀ ಗುರುರಾಜ ಜೋಶಿ ಆನಂದ ಕುಲಕರ್ಣಿ ಕೆ ಬಿ ಕುಲಕರ್ಣಿ ಗೋವಿಂದರಾಜ ರಾ ದೇಶಪಾಂಡೆ ಶ್ರೀಮತಿ ಪಲ್ಲವಿ ಜೋಶಿ
ಶ್ರೀಮತಿ ಜಯಶ್ರೀ ಕನ್ನೂರ ಪ್ರಾರಂಭದಲ್ಲಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಗೋವಿಂದರಾಜ ದೇಶಪಂಡೆ ಮಾಡಿದರು.
ನಂತರದಲ್ಲಿ ಸುಮಾರು ಹೊತ್ತಿನವರೆಗೆ ಗಿರೀಜಾ ಕಲ್ಯಾಣ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡದವು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026

ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ

ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ

ಇಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026
    In ದಿನಪತ್ರಿಕೆ
  • ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ
    In (ರಾಜ್ಯ ) ಜಿಲ್ಲೆ
  • ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ
    In (ರಾಜ್ಯ ) ಜಿಲ್ಲೆ
  • ಇಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ
    In (ರಾಜ್ಯ ) ಜಿಲ್ಲೆ
  • ಪಿಓಪಿ ಗಣೇಶ ಬದಲು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ
    In (ರಾಜ್ಯ ) ಜಿಲ್ಲೆ
  • ಪ್ರಧಾನಿ ಮೋದಿ ಸಮ್ಮುಖದಲ್ಲಿ ಶಿಫಾ ಜಮಾದಾರ ವಿಚಾರ ಮಂಡನೆ
    In (ರಾಜ್ಯ ) ಜಿಲ್ಲೆ
  • ಕ್ರೀಡೆ ನಾಯಕತ್ವ, ಆತ್ಮವಿಶ್ವಾಸ ಬೆಳೆಸುವ ಸಾಧನ :ಡಾ.ಕಾಗವಾಡೆ
    In (ರಾಜ್ಯ ) ಜಿಲ್ಲೆ
  • ಬೇಕಾಬಿಟ್ಟಿಯಾಗಿ ಬರಗಾಲ ಪರಿಸ್ಥಿತಿ ನಿಭಾಯಿಸುತ್ತಿರುವ ಸರ್ಕಾರ
    In (ರಾಜ್ಯ ) ಜಿಲ್ಲೆ
  • ತಂತ್ರಜ್ಞಾನ ಮಿತವಾಗಿ ಬಳಸಿ, ನೈಜ ಸಂಬಂಧಗಳಿಗೆ ಒತ್ತು ನೀಡಿ
    In (ರಾಜ್ಯ ) ಜಿಲ್ಲೆ
  • ಕೂಡಲೇ ಬೆಳೆ ನಷ್ಟ ಪರಿಹಾರ ಬಿಡುಗಡೆಗೆ ರೈತರ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.