ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜಿಲ್ಲೆಯಾದ್ಯಂತ ನನ್ನ ಕಣ್ಣು ಎಂಬ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ಜೊತೆಗೆ ಕನ್ನಡಕ ನೀಡುವ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಟೈಟಾನ್ ಕಂಪನಿಯವರ ಕಾರ್ಯ ಶ್ಲಾಘನೀಯ ಎಂದು ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎಂ.ಎಸ್.ಕವಡಿಮಟ್ಟಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆ, ಟೈನಾನ ಕಂಪನಿ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಓದುವ ಬಹುತೇಕ ಮಕ್ಕಳು ಕಡು ಬಡವರಿರುತ್ತಾರೆ. ಅಂಥವರು ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವದಿಲ್ಲ. ಅಂಥವರನ್ನು ಗುರುತಿಸಿ ಉಚಿತ ಚಿಕಿತ್ಸೆ ನೀಡುವದು ಪುಣ್ಯದ ಕಾರ್ಯ ಎಂದರು.
ಬಿ.ಐ.ಇ.ಆರ್.ಟಿ ಯ ಎಸ್.ಎಸ್.ರಾಮತಾಳ ಅವರು ಮಾತನಾಡಿ ಈ ಶಿಬಿರದಿಂದ ಅದೆಷ್ಟೋ ಬಡ ಮಕ್ಕಳಿಗೆ ಸಹಾಯವಾಗಿದೆ. ಮಕ್ಕಳಿಗೆ ಮಾತ್ರವಲ್ಲದೇ ಶಿಕ್ಷಕರಿಗೆ, ಬಿಸಿಯೂಟದ ಸಿಬ್ಬಂದಿಗೂ ಸಹ ತಪಾಸಣೆ, ಚಿಕಿತ್ಸೆ, ಕನ್ನಡಕ ಜೊತೆಗೆ ಸಾವಿರ ರೂಗಳನ್ನೂ ಸಹ ನೀಡುತ್ತಿದ್ದಾರೆ. ತಾಲೂಕಿನಲ್ಲಿ ಒಟ್ಟು ೩೧೫ ಶಾಲೆಗಳನ್ನು ತಪಾಸಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ೫೯೦ ಕನ್ನಡಕಗಳನ್ನು ನೀಡಲಾಗಿದೆ. ೩೪೫ ಮಕ್ಕಳನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಈ ಸಹಾಯ ನಮ್ಮ ಇಲಾಖೆಗೆ ವರದಾನವಾಗಿದೆ ಎಂದರು.
ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ.ಜಗದೀಶ ಎಸ್, ವಿಗ್ನೇಶ ಎಸ್, ಸಂಯೋಜಕ ಚಂದ್ರಪ್ಪ, ಕನ್ನಡಕ ವಿತರಕ ಪೊನ್ನಣ್ಣ.ಸಿ.ಟಿ, ಸಿಬ್ಬಂದಿಗಳಾದ ಅನೀಲಕುಮಾರ ಎನ್, ಅಮರ ಮೋರೆ, ಎನ.ಎಂ.ಕಾವಲಿ ಬೋಧಕ ಸಿಬ್ಬಂದಿಗಳಾದ ಎ.ಎಸ್.ಬಾಗವಾನ, ಅಪ್ಪು ಪವಾರ, ರಿಯಾನಾ ಬೇಗಂ, ಸುರೇಶ ಬಾಬು, ಎಂ.ಎಸ್.ಚಟ್ಟೇರ ಸೇರಿದಂತೆ ಮತ್ತೀತರರು ಇದ್ದರು.

