ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪುರುಷರು ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಯ ಬಗ್ಗೆ ಇರುವ ಮೂಢನಂಬಿಕೆಗಳಿAದ ಹೊರ ಬರಬೇಕಿದೆ ಎಂದು ಕ್ಷೆತ್ರ ಆರೋಗ್ಯ ಶಿಕ್ಷಣಾಧಿಕಾರಿ ಎ.ಎಸ್.ತೇರದಾಳ ಹೇಳಿದರು.
ಪಟ್ಟಣದ ಕಿಲ್ಲಾಗಲ್ಲಿಯ ಮಾರುತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪುರುಷರ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನ.೨೧ರಿಂದ ಡಿಸೇಂಬರ್ ೪ ರವರೆಗೆ ಸಪ್ತಾಹದ ಮೂಲಕ ಎನ್‌ಎಸ್‌ವಿ ಕುಟುಂಬ ಕಲ್ಯಾಣ ಯೋಜನೆ ಕುರಿತು ಪುರುಷ ಸಮುದಾಯದಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಸಪ್ತಾಹದಲ್ಲಿ ಎನ್‌ಎಸ್‌ವಿ ಶಸ್ತ್ರಚಿಕಿತ್ಸೆ ಸೌಲಭ್ಯವನ್ನು ಎಲ್ಲ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಏರ್ಪಡಿಸಲಾಗಿ. ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸುತ್ತ ತಂಬಾಕು ಮುಕ್ತ ಯುವ ಅಭಿಯಾನ ೨.೦ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಮಾತನಾಡಿ, ಪುರುಷರಿಗಾಗಿ ನೋ ಸ್ಕಾಲ್ ಪೆಲ್ ವ್ಯಾಸೆಕ್ಟಮಿ ಎಂಬ ವಿಧಾನ ವಿದ್ದು ಇದು ಸರಳ ಹಾಗೂ ವಿಶ್ವಾಸನೀಯ ಶಸ್ತ್ರ ಚಿಕಿತ್ಸೆ. ಈ ಹೊಸ ವಿಧಾನದಲ್ಲಿ ಗಾಯ, ಹೊಲಿಗೆ ಮಾಡಲಾಗವುದಿಲ್ಲ. ಲೈಂಗಿಕ ಆಸಕ್ತಿ ಕಡಿಮೆಯಾಗುವುದಿಲ್ಲ. ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ಪುರುಷ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಬಗ್ಗೆ ಹಲವರಲ್ಲಿ ಅನುಮಾನಗಳಿವೆ. ಪುರುಷರು ಈ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗಬಹುದು ಎನ್ನುವ ಅನುಮಾನ ಬರಬೇಕಾಗಿಲ್ಲ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಕಿಲ್ಲಾಗಲ್ಲಿಯ ಸುರೇಶ್ ಆಚಾರ್ಯರು ಮಾತನಾಡಿ ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ಪ್ರತಿಯೊಬ್ಬರು ಮಾಹಿತಿ ಹೊಂದಬೇಕ. ಚಿಕ್ಕ ಕುಟುಂಬಕ್ಕೆ ಆದ್ಯತೆ ನೀಡಬೇಕು ಹಾಗೂ ಪುರುಷ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯ ಹೊಂದಲು ಪುರುಷರು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ವಹಿಸಿದ್ದರು. ಮಾಜಿ ಅಧ್ಯಕ್ಷೆ ಶಕುಂತಲಾ ಹಿರೇಮಠ, ಆರೋಗ್ಯ ಇಲಾಖೆಯ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಐ.ಸಿ.ಮಾನಕರ, ಆಶಾ ಕಾರ್ಯತೆಯರಾದ ಸಾವಿತ್ರಿ ಹಿರೇಮಠ, ಅಕ್ಕಮ್ಮ ಸಂಗಾರಡ್ಡಿ, ಸುನಂದಾ ಖ್ಯಾತಣ್ಣವರ, ಮಹಾಲಿಂಗಮ್ಮ ಕಡಿ, ನಸೀಮಾ ಏಕಿನ್ ಇದ್ದರು.

