Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜನೇವರಿ ೦೩ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಇವರ ಜಯಂತಿ. ಅವರ ಸ್ಮರಣೆಗಾಗಿ ಈ ವಿಶೇಷ ಲೇಖನ ಲೇಖನ- ಕಬೂಲ್ ಕೊಕಟನೂರಶಿಕ್ಷಕರು, ದೇವರಹಿಪ್ಪರಗಿ, ವಿಜಯಪುರ ಜಿಲ್ಲೆ.ಮೊ: ೯೯೭೨೧೧೫೫೦೨ ಉದಯರಶ್ಮಿ ದಿನಪತ್ರಿಕೆ “ನಹೀಜ್ಞಾನೇನ ಸದೃಶಂ” ಎನ್ನುವಂತೆ ಜ್ಞಾನಕ್ಕಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಬೇರೊಂದಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ವಾಣಿಯಂತೆ ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದು, ಪರುಷ ಪ್ರದಾನ ಸಮಾಜದಲ್ಲಿ ಸರಿಸಮಾನವಾಗಿ ಬೆಳೆಯಲು ಶಿಕ್ಷಣದಿಂದಲೇ ಮಾತ್ರ ಸಾಧ್ಯವೆಂದು ಸಾರಿದ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಶಿಕ್ಷಕಿಯಾಗಿದ್ದಾರೆ. ಇಂಡಿಯಾಸ ಫಸ್ಟ್ ಲೆಡಿಸ್ ಟೀಚರ್ ಎಂದು ಬ್ರೀಟಿಷರಿಂದ ಬಿರುದು ಪಡೆದು ಸ್ತ್ರೀ ಶಿಕ್ಷಣಕ್ಕಾಗಿ ಇಡೀ ಜೀವಮಾನ ಸವೆಸಿದವರಲ್ಲಿ ಪ್ರಥಮರಾಗಿದ್ದು, ಜನೇವರಿ ೦೩ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಇವರ ಜಯಂತಿಯೆಂದು ನಾವೆಲ್ಲ ಸ್ಮರಣೆ ಮಾಡುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಸಾವಿತ್ರಿಬಾಯಿ ಪುಲೆಯವರ ಬಾಲ್ಯ ಜೀವನ ಮಹಿಳಾ ಲೋಕದ ಮಾಣಿಕ್ಯವೆಂದೆನಿಸಿಕೊಂಡ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಹತ್ತೊಂಬತ್ತನೇ ಶತಮಾನದ ಭಾರತದ ಪ್ರಸಿದ್ಧ ಸಮಾಜ ಸುಧಾರಕಿ, ಕವಿ ಮತ್ತು ಶಿಕ್ಷಣತಜ್ಞರಾಗಿದ್ದರು. ಮಹಿಳಾ…
ಚಿಕ್ಕಪಡಸಲಗಿಯಲ್ಲಿ ಮಾರುತಿ ದೇವರ ಕಾತಿ೯ಕೋತ್ಸವ | ಧರ್ಮ-ಸಂಸ್ಕ್ರತಿ ವಿಶೇಷ ಉಪನ್ಯಾಸ | ಹಾರಿಕಾಳ ನಿರ್ಗಳ ನುಡಿಗಳ ಝೇಂಕಾರಕ್ಕೆ ಜನ ಫಿದಾ! ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ನಿಭ೯ಯತ್ವ ಗುಣಸಂಧಾನ ಹೊಂದಿರುವ ಹನುಮಾನ ಶ್ರೇಷ್ಠತೆ ಸರಣಿಯ ಅನ್ಯೋನ್ಯತೆ ದೇವ. ಉದಾತ್ತ ಪರಿಮಳಯುತ ವಿವೇಚನಾ ಪಳಿಕೆಯುಳ್ಳ ಹನುಮ ಉತ್ಕಟ ವಾಕಪಟುವು ಕೂಡಾ. ವಿದ್ವತ್ತಿನ ಅಗಾಧ ರೂಪ ಲಾವಣ್ಯವೇ ಹನುಮನ ಭಾವಾಂತರದಲ್ಲಿ ನಿಷ್ಕಲ್ಮಶವಾಗಿ ಮಿನುಗಿದೆ. ಕಾರಣ ಹಿಂದುಗಳ ನರನಾಡಿ ಮಿಡಿತಗಳಲ್ಲಿ ಹನುಮನ ಸ್ವರರಾಗದಲ್ಲಿ ರಾಮನ ಪ್ರತಿಬಿಂಬಿಸುವ ಭಕ್ತಿ ಸಂಚಲನ ಎಚ್ಚೇಥ ಹರಿದಾಡಲಿ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.ಇಲ್ಲಿನ ಐತಿಹಾಸಿಕ ಹನುಮಾನ ಮಂದಿರ ಆವರಣದಲ್ಲಿ ಜೈ ಹನುಮಾನ ಯುವ ಮಿತ್ರ ಮಂಡಳಿ ಆಶ್ರಯದಲ್ಲಿ ಶ್ರೀ ಮಾರುತಿ ದೇವರ ಕಾತಿ೯ಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ “ಧರ್ಮ ಮತ್ತು ಸಂಸ್ಕೃತಿ” ಉಪನ್ಯಾಸ ಕಾರ್ಯಕ್ರಮದಲ್ಲಿ ಹನುಮನ ಚರಿತೆ ಹಾಗೂ ಹಿಂದು ಧರ್ಮದ ಸಂಸ್ಕೃತಿ, ಸಂರಕ್ಷಣೆ ಕುರಿತು ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ಹನುಮನಿಲ್ಲದಿದ್ದರೆ ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿ ಪರಿಸ್ಥಿತಿ ಏನಾಗುತ್ತಿತ್ತೆಂದು…
ರಚನೆ- ಜಿ.ಬಿ.ಸಾಲಕ್ಕಿವಿಜಯಪುರ ಉದಯರಶ್ಮಿ ದಿನಪತ್ರಿಕೆ ಹಾರ ಹಾಕೋಳಿಲ್ಲಶಾಲತೊಡಲಿಲ್ಲಜಾಗಟೆ, ಪಲ್ಲಕ್ಕಿ ಮೊದಲೇ ಇಲ್ಲ ಹಾರ ಹಾಕೋಳಿಲ್ಲಶಾಲತೊಡಲಿಲ್ಲಜಾಗಟೆ, ಪಲ್ಲಕ್ಕಿ ಮೊದಲೇ ಇಲ್ಲಕಾವೀನೂ ಧರಿಸಲಿಲ್ಲಜೇಬಿಲ್ಲದ ಶ್ವೇತ ವಸ್ತ್ರಧಾರಿಜ್ಞಾನ ದಾಸೋಹವೇ ಬದುಕಿನ ಆಶೆ ಎಂದವರು. ಅಂತಿಮ ಅಭಿನಂದನೆ ತಿಳಿಸಿ ವಿಶ್ವದಾರ್ಶನಿಕ ಅರಿಸ್ಟಾಟಲ್, ಝೆನ್, ಅಲ್ಲಮ, ಬಸವಣ್ಣನ ಸಾಲಿಗೆ ಹೋದವರು. ಮಂಟಪವೂ ಬೇಡ,ಸ್ಮಾರಕವೂ ಬೇಡವೆಂದುಅಗ್ನಿಗಾಹುತಿಯಾಗಿಆಶ್ರಮದ ಗಿಡ ಗಂಟಿ, ಹೂ,ಟೊಂಗೆಗಳ ಮೇಲಿನ ಹಕ್ಕಿ ಪಕ್ಷಿಗಳೊಂದಿಗೆ ಒಂದಾದ ಅಲ್ಲಮನ ವಾರಸುದಾರ ಶ್ರೀ ಸಿದ್ದೇಶ್ವರ ಶ್ರೀಗಳ ನೆನಹೇ ಮಹಾ ಮಂತ್ರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧೇಶ್ವರ ಅಪ್ಪಗಳ ಗುರುನಮನ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಇಂದು ಗುರುವಾರ ಬೆಳಿಗ್ಗೆ ೬ ಗಂಟೆಗೆ ನಾಡಿನ ಸ್ವಾಮೀಜಿಗಳು, ಮಠಾಧೀಶರು ಹಾಗೂ ಭಕ್ತರು ಅಪ್ಪಗಳವರ ಕುರಿತಾದ ವೇದ ಮೂರ್ತಿ ಜ್ಞಾನ ಜ್ಯೋತಿ ಹಾಡಿನ ಮೂಲಕ ಚಾಲನೆ ನೀಡಿದರು.ಆಶ್ರಮದ ಅಧ್ಯಕ್ಷ ಗುರುಗಳಾದ ಪೂಜ್ಯ ಬಸವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಜಪಯಜ್ಞದ ಮೂಲಕ ಗುರುವಿಗೆ ನಮಸ್ಕಾರಗಳು, ಶಿವನಿಗೆ ಆರಾಧನೆ ಎನ್ನುವ ಅರ್ಥವನ್ನು ಕೊಡುವ ಶಿವಾಯ ನಮಃ ಓಂ, ಶಿವಾಯ ನಮಃ ಓಂ’ ಎಂಬ ಮಂತ್ರವನ್ನು ಪಠಿಸಲಾಯಿತು. ನಂತರ ಒಂದು ನಿಮಿಷದ ಮೌನ ಧ್ಯಾನ ಸಲ್ಲಿಸಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಅತ್ಯಂತ ಭಕ್ತಿಯಿಂದ ಸ್ಮರಿಸಲಾಯಿತು. ಜ್ಯೋತಿ…ಬೆಳಗುತ್ತಿದೆ, ವಿಮಲಪರಂ ಜ್ಯೋತಿ…ಬೆಳಗುತ್ತಿದೆ’ ಮಂತ್ರದೊಂದಿಗೆ ಜಪಯಜ್ಞವನ್ನು ಪೂರ್ಣ ವಿರಾಮ ನೀಡಲಾಯಿತು. ಸಾವಿರಾರು ಭಕ್ತರು ಜಪಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುದೇವ ಶ್ರೀ ಸಿದ್ಧೇಶ್ವರ ಅಪ್ಪಗಳವರಿಗೆ ಶ್ರದ್ಧೆ-ಭಕ್ತಿಯ ನಮನಗಳನ್ನು ಸಲ್ಲಿಸಿದರು. ನಂತರ ಶ್ರೀ ಸಿದ್ಧೇಶ್ವರ ಸ್ವಾಮೀಜಿಳ ವಿಡಿಯೋ ಪ್ರವಚನ ಪ್ರಸಾರಗೊಳಿಸಲಾಯಿತು.ಬೆಳಿಗ್ಗೆ ೮ ಗಂಟೆಗೆ ಶ್ರೀ ಮಲ್ಲಿಕಾಜುನ ಶಿವಯೋಗಿಗಳವರ…
ಅಭಿಮತ – ಡಾ. ಶಶಿಕಾಂತ ಪಟ್ಟಣರಾಮದುರ್ಗ ಮೊ: 9552002338 ಉದಯರಶ್ಮಿ ದಿನಪತ್ರಿಕೆ ವೀರಶೈವ ಪದವು 15 ನೇ ಶತಮಾನದ ವೇಳೆಗೆ ಆಂಧ್ರ ಮೂಲದಿಂದ ಬಂಡ ಒಂದು ವೃತ ಮಾತ್ರ. ವೀರಶೈವರು ಲಿಂಗಾಯತರ ಆಚರಣೆ ಲಿಂಗ ತತ್ವಕ್ಕೆ ಮಾರು ಹೋಗಿ ತಮ್ಮ ಪೌರೋಹಿತ್ಯದ ಪಾರುಪತ್ಯವನ್ನು ಇಲ್ಲಿಯೂ ಸ್ಥಾಪಿಸಿದ್ದು ದುರ್ದೈವದ ಸಂಗತಿ. ವೀರಶೈವ ಒಂದು ವೃತ – ಲಿಂಗಾಯತ ಸ್ವತಂತ್ರ ಧರ್ಮ. ವೀರಶೈವ ಮತ್ತು ಲಿಂಗಾಯತ ಇವು ಬಸವ ಪೂರ್ವ ಮತ್ತು ನಂತರದ ಚರ್ಚೆಗಳಿಗೆ ಗ್ರಾಸವಾದ ವಿಷಯಗಳು. ಗುರು ವಿರಕ್ತ ಪರಂಪರೆ ವಾದ ಹೇಗೆ ಮತ್ತು ಏಕೆ ಹುಟ್ಟಿಕೊಂಡವು? ಎಂಬುದು ಒಂದು ಜಿಜ್ಞಾಸೆಯ ಚರ್ಚೆಯಾಗಿದೆ.ಬಸವಣ್ಣನವರು 12 ನೆ ಶತಮಾನದಲ್ಲಿ ಜಾಗತಿಕ ಮಟ್ಟದಲ್ಲಿ ಸರ್ವಕಾಲಿಕ ಸಮಕಾಲೀನ ಸಮಾನತೆ ಸಾರುವ ಅತ್ಯಂತ ವೈಜ್ಞಾನಿಕ ಧರ್ಮವನ್ನು ಸ್ಥಾಪಿಸಿದರು. ಶ್ರೇಣಿಕ್ರತವಲ್ಲದ ಲಿಂಗ ಆಶ್ರಮ ವರ್ಗ ವರ್ಣ ಬೇಧ ಹೊರೆತು ಪಡೆಸಿದ ಜಗತ್ತಿನ ಎಲ್ಲಾ ವಿದ್ವಾ೦ಸರಿಂದ ಮೆಚ್ಚುಗೆಗೆ ಪಾತ್ರವಾದ ಲಿಂಗಾಯತ ಧರ್ಮ.ಹೇಗೆ ತನ್ನ ಅಸ್ತಿತ್ವ ಕಳೆದು ಕೊಳ್ಳಹತ್ತಿತು ಮತ್ತು ಆಂಧ್ರ ಮೂಲದಿಂದ…
ವಿಜಯಪುರ ಪೊಲೀಸರ ಸಾಧನೆ | 500 ರೂ. ಮುಖ ಬೆಲೆಯ ಒಟ್ಟು ರೂ.1.22,500/- ಮೊತ್ತದ 245 ಖೋಟಾ ನೋಟುಗಳು ಜಪ್ತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದನಾಲ್ಕು ಜನರನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.ನಗರದ ವಜ್ರ ಹನುಮಾನ ನಗರದ ನಿವಾಸಿ, ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಆಗಿರುವ ರಿಯಾಜ್ ಕಾಶಿಮಸಾಬ ವಾಲಿಕಾರ (44 ವರ್ಷ) ಡಿ.28 ರಂದು ರಾತ್ರಿ ವಾಟರ್ ಟ್ಯಾಂಕ್ ಹತ್ತಿರದ ಹಾಲಿನ ಅಂಗಡಿಯಲ್ಲಿ 500 ರೂ. ಮುಖ ಬೆಲೆಯ ಖೋಟಾ ನೋಟು ಕೊಡುತ್ತಿರುವ ಬಗ್ಗೆ ಮಾಹಿತಿ ಅರಿತ ಗಾಂಧಿಚೌಕ ಪಿಎಸ್‌ಐ ರಾಜು ಮಮದಾಪೂರ ಅವರು ಸಿಬ್ಬಂದಿಯೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು, ಆತನ ಹತ್ತಿರವಿದ್ದ 500 ರೂ. ಮುಖ ಬೆಲೆಯ 5 ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.ಈ ಕುರಿತು ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಪ್ರಕರಣದ ಬೆನ್ನತ್ತಿದ ವಿಜಯಪುರ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಪ್ರಕರಣದ ತನಿಖೆಗಾಗಿ ಪಿಎಸೈ ಪ್ರದೀಪ ತಳಕೇರಿ ನೇತೃತ್ವದಲ್ಲಿ ತನಿಖಾ ತಂಡವನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಗೌಳಿ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಸಿದ್ದಾಜಿ ಅಪ್ಪಾ ಅವರ ೧೪೩ನೇ ಜಯಂತಿ ಆಚರಣೆ ಅಂಗವಾಗಿ ಉಪ್ಪಲಿ ಬುರ್ಜದಿಂದ ಕೆಳಗಡೆ ಬಂದು ಆಝಾದ್ ರಸ್ತೆಗೆ ಸೇರುವ ಮಧ್ಯೆ ಭಾಗದಲ್ಲಿ ನೂತನವಾಗಿ ಶ್ರೀ ಸಿದ್ದಾಜಿ ಅಪ್ಪಾ ವೃತ್ತ ಉದ್ಘಾಟನೆ ಕಾರ್ಯಕ್ರಮ ಜರುಗಿತು.ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಶ್ರೀ ಸಿದ್ದಾಜಿ ಅಪ್ಪಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಇದೆ ಸಂದರ್ಭದಲ್ಲಿ ೨೦೨೫ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು,ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ರಾಜಶೇಖರ ಮಗಿಮಠ, ಅಶೋಕ್ ನ್ಯಾಮಗೊಂಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರು ಪರುಶುರಾಮ ರಜಪುತ, ಅಬ್ದುಲ್ ರಜಾಕ ಹೊರ್ತಿ, ಉಮೇಶ್ ವಂದಾಲ ಹಾಗೂ ಗೌಳಿ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಗೌಳಿ ಸಮಾಜದ ಗುರು ಹಿರಿಯರು ಸಮಾಜ ಬಾಂಧವರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕ ಘಟಕದ 2025-2030 ರ ಅವಧಿಗೆ ಕೃಷಿಕ ಸಮಾಜದ ತಾಲ್ಲೂಕ ಅಧ್ಯಕ್ಷರಾಗಿ ಪೀರಗೊಂಡ ಗದ್ಯಾಳ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶ್ರೀಶೈಲ ತುಳಜನ್ನವರ, ಗೌರವ ಕಾರ್ಯದರ್ಶಿ ರಾಮಗೊಂಡ ಬಿರಾದಾರ, ಖಜಾಂಚಿ ಜಗದೀಶ ಬಿರಾದಾರ, ಜಿಲ್ಲಾ ಪ್ರತಿನಿಧಿ ಮಹಾವೀರ ಕುಸನಾಳ, ಸದಸ್ಯರಾಗಿ ಸಿದರಾಯ ಗದ್ಯಾಳ, ಶಿವಾನಂದ ಚೌಧರಿ, ಬಸಗೊಂಡ ಗುರ್ಕಿ, ಪ್ರಕಾಶ ಗಣಿ, ಅರ್ಜುನ ಧನಗೊಂಡ, ಈರಪ್ಪ ಕೊಂಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರೇಷ್ಮಾ ಸುತಾರ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ವಾರ್ಡ ನಂ ೮ ರಲ್ಲಿನ ಸಿ.ಸಿ. ರಸ್ತೆ ಕಾಮಗಾರಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರಿ ದೇವಣಗಾಂವ ಹಾಗೂ ಉಪಾಧ್ಯಕ್ಷ ರಮೇಶ ಮಸಬಿನಾಳ ಭೂಮಿಪೂಜೆ ನೆರವೇರಿಸಿದರು.ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕೆ.ಆರ್.ಐ.ಡಿ.ಎಲ್‌ನಡಿ ೨೦೨೪-೨೫ನೇ ಸಾಲಿನ ಅಲ್ಪ ಸಂಖ್ಯಾತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಅನುದಾನದ ಯೋಜನೆಯಡಿ ವಾರ್ಡ ನಂ ೮ರಲ್ಲಿ ರಿಯಾಜ್ ತಾಂಬೋಳಿ ಮನೆಯಿಂದ ಮಮ್ಮದಿಯಾ ಮಸೀದಿವರೆಗೆ ಹಾಗೂ ಲತೀಫ್ ನದಾಫ್ ಮನೆಯಿಂದ ಬಬ್ಲೂ ಯಲಗಾರ ಮನೆಯವರೆಗಿನ ಅಂದಾಜು ಮೊತ್ತ ೨೦೦ ಲಕ್ಷಗಳ ವೆಚ್ಚದ ಸಿ.ಸಿ.ರಸ್ತೆಗಳ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.ಜನತಾದಳದ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಕಾಶೀನಾಥ ಜಮಾದಾರ, ಸುಮಂಗಲಾ ಸೆಬೇನವರ, ಶಾಂತಯ್ಯ ಜಡಿಮಠ, ಕುದರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ, ಕೆಆರ್‌ಆಯ್‌ಡಿಎಲ್ ಸಿಂದಗಿ ಎಇಇ ರಾಜಶೇಖರ, ಗುತ್ತಿಗೆದಾರ ಎಮ್.ಎ.ಕಾಚಾಪೂರ , ಸಚೀನಗೌಡ ಪಾಟೀಲ, ಸುಭಾಸ್ ಜಾಧವ, ಎ.ಡಿ.ಮುಲ್ಲಾ, ಬಸವರಾಜ ಬಬಲೇಶ್ವರ, ಕಾಶೀನಾಥ ವಡ್ಡೋಡಗಿ, ಸೋಮು…
ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಶ್ರೀಗಳ ಗುರುನಮನ ಮಹೋತ್ಸವದಲ್ಲಿ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶ್ರೀ ಸಿದ್ಧೇಶ್ವರ ಶ್ರಿಗಳು ಒರ್ವ ವ್ಯಕ್ತಿ ಅಲ್ಲ, ಅವರೊಬ್ಬ ದಾರ್ಶನಿಕ ಶಕ್ತಿ. ಅವರೊಬ್ಬ ದೈವಿರೂಪವಾಗಿದ್ದರು ಎಂದು ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ “ಗುರುದೇವರ ಬದುಕು” ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ನಾವು ತಾಯಿ ಗರ್ಭದಲ್ಲಿ ಇದ್ದಾಗಲೇ ಹುಟ್ಟು ಸಾವಿನ ಬಗ್ಗೆ ಚರ್ಚೆ ನಡೆಯುತ್ತದೆ. ಹಣ ಆಸ್ತಿಗಳು, ಸಂಪತ್ತು ನಮ್ಮ ಜೀವನದಲ್ಲಿ ಬಹು ಮುಖ್ಯ ಎಂದು ಭಾವಿಸುತ್ತೇವೆ. ಹಾಗೆ ಭಾವಿಸಿದರೆ ನಾವು ಸಂತೋಷವನ್ನು ಕಾಣಲು ಸಾಧ್ಯವಿಲ್ಲ. ನಾವು ಸಾವನ್ನು ಗಂಭಿರವಾಗಿ ಪರಿಗಣಿಸಿದರೆ ಬದುಕನ್ನು ಕೂಡ ಗಂಭಿರವಾಗಿ ಪರಿಗಣಿಸುತ್ತೇವೆ ಸಿದ್ಧೇಶ್ವರ ಶ್ರೀಗಳ ವಿಚಾರಧಾರೆಗಳು ಅತ್ಯಂತ ವಿಶಾಲವಾಗಿದ್ದವು. ಅವರು ಸಾವಿನೊಂದಿಗೆ ಸಂವಾದ ನಡೆಸಿದವರು, ಸಾವನ್ನು ಸ್ವಾಗತಿಸಿದವರು. ಈ ಬಗೆಯ ಚಿಂತನೆ ನಮ್ಮ ಬದುಕನ್ನು ಅರ್ಥಪುರ್ಣವಾಗಿಸುತ್ತದೆ ಎಂದರು.ಬದುಕಿನ ಅಂತಿಮ…
