ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಗೌಳಿ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಸಿದ್ದಾಜಿ ಅಪ್ಪಾ ಅವರ ೧೪೩ನೇ ಜಯಂತಿ ಆಚರಣೆ ಅಂಗವಾಗಿ ಉಪ್ಪಲಿ ಬುರ್ಜದಿಂದ ಕೆಳಗಡೆ ಬಂದು ಆಝಾದ್ ರಸ್ತೆಗೆ ಸೇರುವ ಮಧ್ಯೆ ಭಾಗದಲ್ಲಿ ನೂತನವಾಗಿ ಶ್ರೀ ಸಿದ್ದಾಜಿ ಅಪ್ಪಾ ವೃತ್ತ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಶ್ರೀ ಸಿದ್ದಾಜಿ ಅಪ್ಪಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಇದೆ ಸಂದರ್ಭದಲ್ಲಿ ೨೦೨೫ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು,
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ರಾಜಶೇಖರ ಮಗಿಮಠ, ಅಶೋಕ್ ನ್ಯಾಮಗೊಂಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರು ಪರುಶುರಾಮ ರಜಪುತ, ಅಬ್ದುಲ್ ರಜಾಕ ಹೊರ್ತಿ, ಉಮೇಶ್ ವಂದಾಲ ಹಾಗೂ ಗೌಳಿ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಗೌಳಿ ಸಮಾಜದ ಗುರು ಹಿರಿಯರು ಸಮಾಜ ಬಾಂಧವರು ಉಪಸ್ಥಿತರಿದ್ದರು.

