ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ವಾರ್ಡ ನಂ ೮ ರಲ್ಲಿನ ಸಿ.ಸಿ. ರಸ್ತೆ ಕಾಮಗಾರಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರಿ ದೇವಣಗಾಂವ ಹಾಗೂ ಉಪಾಧ್ಯಕ್ಷ ರಮೇಶ ಮಸಬಿನಾಳ ಭೂಮಿಪೂಜೆ ನೆರವೇರಿಸಿದರು.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕೆ.ಆರ್.ಐ.ಡಿ.ಎಲ್‌ನಡಿ ೨೦೨೪-೨೫ನೇ ಸಾಲಿನ ಅಲ್ಪ ಸಂಖ್ಯಾತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಅನುದಾನದ ಯೋಜನೆಯಡಿ ವಾರ್ಡ ನಂ ೮ರಲ್ಲಿ ರಿಯಾಜ್ ತಾಂಬೋಳಿ ಮನೆಯಿಂದ ಮಮ್ಮದಿಯಾ ಮಸೀದಿವರೆಗೆ ಹಾಗೂ ಲತೀಫ್ ನದಾಫ್ ಮನೆಯಿಂದ ಬಬ್ಲೂ ಯಲಗಾರ ಮನೆಯವರೆಗಿನ ಅಂದಾಜು ಮೊತ್ತ ೨೦೦ ಲಕ್ಷಗಳ ವೆಚ್ಚದ ಸಿ.ಸಿ.ರಸ್ತೆಗಳ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.
ಜನತಾದಳದ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಕಾಶೀನಾಥ ಜಮಾದಾರ, ಸುಮಂಗಲಾ ಸೆಬೇನವರ, ಶಾಂತಯ್ಯ ಜಡಿಮಠ, ಕುದರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ, ಕೆಆರ್‌ಆಯ್‌ಡಿಎಲ್ ಸಿಂದಗಿ ಎಇಇ ರಾಜಶೇಖರ, ಗುತ್ತಿಗೆದಾರ ಎಮ್.ಎ.ಕಾಚಾಪೂರ , ಸಚೀನಗೌಡ ಪಾಟೀಲ, ಸುಭಾಸ್ ಜಾಧವ, ಎ.ಡಿ.ಮುಲ್ಲಾ, ಬಸವರಾಜ ಬಬಲೇಶ್ವರ, ಕಾಶೀನಾಥ ವಡ್ಡೋಡಗಿ, ಸೋಮು ದೇವೂರ, ಕಾಶೀನಾಥ ಕಡ್ಲೇವಾಡ, ವಿನೋದ ಚವ್ಹಾಣ, ವೀರೇಶ ಕುದರಿ, ಪ್ರಕಾಶ ಮಲ್ಲಾರಿ ಸಹಿತ ವಿವಿಧ ಸಮುದಾಯಗಳ ಪ್ರಮುಖರು ಇದ್ದರು.

