Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ವೀರಶೈವರು ಲಿಂಗಾಯತರೆನ್ನಬಹುದು ಆದರೆ ಲಿಂಗಾಯತರು ವೀರಶೈವರೆನ್ನಲಾಗದು
ವಿಶೇಷ ಲೇಖನ

ವೀರಶೈವರು ಲಿಂಗಾಯತರೆನ್ನಬಹುದು ಆದರೆ ಲಿಂಗಾಯತರು ವೀರಶೈವರೆನ್ನಲಾಗದು

By Updated:No Comments9 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಅಭಿಮತ

– ಡಾ. ಶಶಿಕಾಂತ ಪಟ್ಟಣ
ರಾಮದುರ್ಗ ಮೊ: 9552002338

ಉದಯರಶ್ಮಿ ದಿನಪತ್ರಿಕೆ

ವೀರಶೈವ ಪದವು 15 ನೇ ಶತಮಾನದ ವೇಳೆಗೆ ಆಂಧ್ರ ಮೂಲದಿಂದ ಬಂಡ ಒಂದು ವೃತ ಮಾತ್ರ. ವೀರಶೈವರು ಲಿಂಗಾಯತರ ಆಚರಣೆ ಲಿಂಗ ತತ್ವಕ್ಕೆ ಮಾರು ಹೋಗಿ ತಮ್ಮ ಪೌರೋಹಿತ್ಯದ ಪಾರುಪತ್ಯವನ್ನು ಇಲ್ಲಿಯೂ ಸ್ಥಾಪಿಸಿದ್ದು ದುರ್ದೈವದ ಸಂಗತಿ.

ವೀರಶೈವ ಒಂದು ವೃತ – ಲಿಂಗಾಯತ ಸ್ವತಂತ್ರ ಧರ್ಮ.

ವೀರಶೈವ ಮತ್ತು ಲಿಂಗಾಯತ ಇವು ಬಸವ ಪೂರ್ವ ಮತ್ತು ನಂತರದ ಚರ್ಚೆಗಳಿಗೆ ಗ್ರಾಸವಾದ ವಿಷಯಗಳು. ಗುರು ವಿರಕ್ತ ಪರಂಪರೆ ವಾದ ಹೇಗೆ ಮತ್ತು ಏಕೆ ಹುಟ್ಟಿಕೊಂಡವು? ಎಂಬುದು ಒಂದು ಜಿಜ್ಞಾಸೆಯ ಚರ್ಚೆಯಾಗಿದೆ.
ಬಸವಣ್ಣನವರು 12 ನೆ ಶತಮಾನದಲ್ಲಿ ಜಾಗತಿಕ ಮಟ್ಟದಲ್ಲಿ ಸರ್ವಕಾಲಿಕ ಸಮಕಾಲೀನ ಸಮಾನತೆ ಸಾರುವ ಅತ್ಯಂತ ವೈಜ್ಞಾನಿಕ ಧರ್ಮವನ್ನು ಸ್ಥಾಪಿಸಿದರು. ಶ್ರೇಣಿಕ್ರತವಲ್ಲದ ಲಿಂಗ ಆಶ್ರಮ ವರ್ಗ ವರ್ಣ ಬೇಧ ಹೊರೆತು ಪಡೆಸಿದ ಜಗತ್ತಿನ ಎಲ್ಲಾ ವಿದ್ವಾ೦ಸರಿಂದ ಮೆಚ್ಚುಗೆಗೆ ಪಾತ್ರವಾದ ಲಿಂಗಾಯತ ಧರ್ಮ.
ಹೇಗೆ ತನ್ನ ಅಸ್ತಿತ್ವ ಕಳೆದು ಕೊಳ್ಳಹತ್ತಿತು ಮತ್ತು ಆಂಧ್ರ ಮೂಲದಿಂದ ಬಂದ ವೀರಶೈವ ವೃತ ಆಚರಣೆಯು ಹೇಗೆ ಲಿಂಗಾಯತ ಧರ್ಮವನ್ನು ಅತಿಕ್ರಮಿಸಿ ಅದರ ಮೂಲ ತತ್ವಗಳನ್ನು ನುಂಗಿ ಹಾಕಲು ಪ್ರಯತ್ನಿಸಿತು ಎಂಬುದರ ಪೂರ್ಣ ಸಾಕ್ಷಿ ದಾಖಲೆ ಸಮೇತ ಸಾದರಪಡಿಸಿದ ಒಂದು ಲೇಖನ.

“ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು
ಮೊಗ್ಗು ಮಲ್ಲಿಗೆ ಅರಳ್ಯಾವ
ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ”

ಬಸವಣ್ಣನ ಆಗಮನವನ್ನು ಜನಪದಿಗರು ತುಂಬು ಮನದಿಂದ ಸ್ವಾಗತಿಸಿದ್ದಾರೆ.
ಸನಾತನದ ಶೈವ ಪ್ರಭೆದಗಳಾಗಿದ್ದ ಕಾಪಲಿಕ ಕಾಳಮುಖಿ ಲಕುಲಿಶ ಹೀಗೆ ಬೇರೆ ಬೇರೆ ಪ್ರಬೇಧಗಳಿದ್ದವು. ಉತ್ತರಾಗಮದ ಭಾಗವಾಗಿ ೧೮ ಮತ್ತು ೧೯ ನೆ ಶತಮಾನದಲ್ಲಿ ಆಂಧ್ರ ಮೂಲದಿಂದ ಬಂದ ವೀರಶೈವವೆಂಬ 60 ವೃತಗಳ ಸಂಪ್ರದಾಯ ಮುಂದೆ ಒಂದು ಪುರೋಹಿತ ಮಾಹೇಶ್ವರ ವರ್ಗವನ್ನು ನಿರ್ಮಿಸುವ ಕುತಂತ್ರದಿಂದ ಬಸವ ಧರ್ಮಿಯರ ಮೇಲೆ ವೀರಶೈವ ತನ್ನ ಸವಾರಿ ನಡೆಸಿತು.
ಬಸವ ಧರ್ಮ ಇದು ಸ್ವತಂತ್ರ ಧರ್ಮ ಅಪ್ಪ ಬಸವಣ್ಣನವರು ಕೊಟ್ಟ ಗುರು ಲಿಂಗ ಜಂಗಮ -ಕಾಯಕ ದಾಸೋಹ ತತ್ವಗಳ ಮೂಲಕ ಸರ್ವರೊಳಗೆ ಸಮಾನತೆ ತಂದ ಶ್ರೇಷ್ಠ ಧರ್ಮ.
ಕಲ್ಲಿನಿಂದ ಮನುಜ ಹುಟ್ಟ ಬುಹುದೇ? ಹುಟ್ಟಿದರೂ ಅವರು (ಲಿಂಗೋದ್ಭವಿಗಳು ) ಮಂಗೋಲಿಯನ್, ಕರೆಬಿಯಾನ್, ಆಫ್ರಿಕನ್, ನಿಗ್ರೋ, ಪಿಗ್ಮಿ ಹೀಗೆ ಯಾವ ಜನಾಂಗವನ್ನು ಹೋಲುತ್ತಿದ್ದರು? ಇದೊಂದು ಕಾಲ್ಪನಿಕ ಅವೈಜ್ಞಾನಿಕ ಕಟ್ಟು ಕಥೆ.
ವಚನ ಸಾಹಿತ್ಯಗಳು ಸಂಕಲನಕಾರ ಸಮಯದಲ್ಲಿ ಬೇರೆ ಬೇರೆ ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಪ್ರಕ್ಷಿಪತತೆಯಾಗಿದ್ದು. ಪರ್ಯಾಯ ಪದಗಳ ಸೇರಿಕೆ, ಸಂದರ್ಭ ಸಂಗತಿಗಳನ್ನು ಮುಂದು ಮಾಡಿ ಕೆಲವು ಪದಗಳ ಕೂಡಿಸುವ, ಪಾಠಾ೦ತರ ಸಮಯದಲ್ಲಿ ತಿಳಿದೊ ತಿಳಿಯದೋ ಮಾಡಿದ ವಾಕ್ಯ ಸಂಯೋಜನೆ.
ವೈಭವಿಸುವ ಉದ್ಧೇಶದಿಂದ ಒಮ್ಮೊಮ್ಮೆ ವಚನಗಳಲ್ಲಿ ಇಂತಹ ಪ್ರಕ್ಷಿಪಾತತೆ ಕಂಡು ಬಂದಿದೆ.

12 ನೆ ಶತಮಾನದ ನಂತರ 15 ನೆ ಶತಮಾನದಲ್ಲಿ ಸಂಕಲನ ಪರಿಷ್ಕರಣೆ ನಡೆಯಿತು.

ಎಡೆಯೂರ ಶ್ರೀ ಸಿದ್ಧಲಿಂಗ ಯತಿಗಳು ಸುಮಾರು ಮೂರು ಶತಮಾನದವರೆಗೆ ಭೂಗರ್ಭ ಸೇರಿದ ವಚನಗಳ ಹೆಕ್ಕಿ ಅವಗಳ ಪಾಠಾನ್ತರ ಮತ್ತು ಪರಿಶಕರಣೆ ಕಾರ್ಯ ನಡೆಸಿದರು. ಈ ಕಾಲವನ್ನು ವಚನಗಳ ಜೀವನ್ಮುಕ್ತಿಯ ಕಾಲವೆಂದೆ ಹೇಳಬಹುದು.
ನಂತರ 16 ನೆ ಶತಮಾನದಲ್ಲಿ ಉದ್ದೇಶ ಪೂರಿತ ಪ್ರಕ್ಷಿಪ್ತತೆ ನಡೆಯಿತು.
ಅಂದಿನ ಕವಿಗಳು ಆಚಾರ್ಯ ಮೂಲದಿಂದ ಬಂದವರಾಗಿದ್ದರಿಂದ ಸಂಸ್ಕೃತ ಮತ್ತು ವೀರಶೈವ ಪದಗಳನ್ನು ಅನಗತ್ಯವಾಗಿ ವಚನಗಳಲ್ಲಿ ಸೇರ್ಪಡಿಸಲಾಯಿತು.
ಆರಾಧ್ಯ ಪರಂಪರೆಯವರು ಶರಣ ಸಾಹಿತ್ಯವನ್ನು ತಿರುಚಲು ವಿರೂಪಗೊಳಿಸಲು ಯತ್ನಿಸಿದ್ದಾರೆ. ಅಚ್ಚ ಕನ್ನಡದಲ್ಲಿಯೇ ಸಾಹಿತ್ಯ ರಚಿಸಿದ ಶರಣರಿಗೆ ಸಂಸ್ಕೃತದ ವ್ಯಾಮೊಹವೆಕೆ? ಇದೊಂದು ಅಪ್ಪಟ ಸುಳ್ಳು ಮತ್ತು ಕೃತ್ರಿಮತೆ.

ವೀರಶೈವ ಧರ್ಮವೆನ್ನುವವರಿಗೆ ನನ್ನ ಪ್ರಶ್ನೆ?

ಆಂಧ್ರದ ಕೊಲ್ಲಿಪಾಕಿನಲ್ಲಿ ಉಧ್ಭವವಾದ ರೇಣುಕಾಚಾರ್ಯರು ಮತ್ತು ಇತರ ಶಿವಾಚಾರ್ಯರು
ಏಕ ಕಾಲಕ್ಕೆ ಕೇದಾರ ಶ್ರೀಶೈಲ ಉಜ್ಜೈನಿ ಮತ್ತು ಕಾಶಿಯ ಶ್ರೀಗಳು ಜನ್ಮ ತಾಳಿದರೆ? ಅಥವಾ ಒಬ್ಬೊಬ್ಬರಾಗಿ ಕಲ್ಲು ಸೀಳಿ ಹುಟ್ಟಿ ಬಂದರೆ? .
ವೀರಶೈವ ವೃತ – ಅದಕ್ಕೆ ಧರ್ಮ ಗುರುವಿಲ್ಲ ಕಾಲ್ಪನಿಕ ಕಟ್ಟು ಕಥೆ. ಧರ್ಮ ಗ್ರಂಥವಿಲ್ಲ, ಕಾರಣ ಸಿದ್ಧಾಂತ ಸಿಖಾಮಣಿ ಇದು ಬಸವೊತ್ತರದ ಕೃತಿಯೆಂದು ಸಿದ್ದವಾಗಿದೆ. ಅಷ್ಟೆ ಏಕೆ ಆ ಕೃತಿಯ ಮೊದಲನೆಯ ಪುಟದಲ್ಲಿ ಓಂ ಶ್ರೀ ಗುರು ಬಸವಲಿಂಗಾಯನಮ: ಎಂದು ದಾಖಲಿಸಲಾಗಿದೆ.
ಬಹುದೇವೊಪಾಸನೆಯನ್ನು ಆಚರಿಸುವ ವೀರಶೈವ ಹೇಗೆ ಧರ್ಮವಾಗುತ್ತದೆ. ವೀರಶೈವ ವೃತಕ್ಕೆ ಧರ್ಮ ಸೂತ್ರಗಳಿಲ್ಲ. 15 -16 ನೆ ಶತಮಾನದಲ್ಲಿ ವೀರಶೈವ ಪದ ಬಳಕೆಯಲ್ಲಿ ಬಂತು.
1886 ರ ವೇಳೆಗೆ ಲಿಂಗಾಯತ ಮುಖಂಡರನ್ನು ನಂಬಿಸಿ ಕೃತಕ ವೀರಶೈವ ಸಾಹಿತ್ಯ ಹುಟ್ಟು ಹಾಕಿದರು. ಅವರಲ್ಲಿ..
1 ) ಹುಬ್ಬಳ್ಳಿಯ ಚೆನ್ನವೀರಸ್ವಾಮಿಗಳು.
2) ಬಾರ್ಸಿಯ ಪ್ರಭುಲಿಂಗಯ್ಯನವರು
3) ಸೀತಾರಾಮ ಶಾಸ್ತ್ರಿ ರೆತ್ರೆಕರ ( ಬರ್ಸಿ) ಸಂಸ್ಕೃತ ಪಂಡಿತ.
4 ) ದಡ್ಡಿರಗಪ್ಪರಗಶೆಟ್ಟಿ
5 ) ಯಜಮಾನ ವೀರಸಂಗಪ್ಪನವರು.
ಇವರು ಕೃತ್ರಿಮವಾಗಿ ರಚಿಸಿದ ಸಾಹಿತ್ಯವನ್ನು ಚಿಕ್ಕಬಳ್ಳಾಪುರದ 1) ವಿರುಪಾಕ್ಷ ಶಾಸ್ತ್ರಿಗಳು 2 ) ರಾಯಚೂರು ಕೃಷ್ನಾಮಾಚಾರ 3 ) ಫಕೀರ ಪರ್ವತ ಬಸವಲಿಂಗ ಶಿವ ಬಸವ ಶಾಸ್ತ್ರಿಗಳು 4) ಕರವೇ ವೆಂಕಟ ರಂಗೋ ಇವರ ಸಹಾಯದಿಂದ ರಚಿಸಿ ಪರಿಶೀಲಿಸಿ ತಾವು ಲಿಂಗಿ ಬ್ರಾಹ್ಮಣ ಎಂದು ಸಾಧಿಸ ಹೊರಟಿದ್ದು ಮೊದಲನೆಯ ತಪ್ಪು. ಇದನ್ನು 1886 ರಲ್ಲಿ ಸೆಪ್ಟೆಂಬರ್11 ರಿಂದ 25 ವರೆಗೆ ಬೆಳಗಾವಿಯ ಶಿವಾನಂದ ಥೀಯೇಟರ್ ಬಳಿಯ ಶಿವಾನಂದ ಪ್ರಿ೦ಟಿಂಗ್ ಪ್ರೆಸ್ಸಿನಲ್ಲಿ ಪ್ರಕಟ ಗೊಳಿಸಿದ್ದಾರೆ. “ವೀರಶೈವ ನಿರ್ಣಯ ಚಿಂತಾಮಣಿ “ಇದರಲ್ಲಿ ಈ ವಿಷಯವನ್ನು ಕಾಣಬಹುದು.
ಪರಳಿ ವೈಜನಾಥ ದೇವಸ್ಥಾನಕ್ಕೆ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳ ಪ್ರವೇಶ ನಿರಾಕರಣೆಯ ಹಿನ್ನೆಲೆಯಲ್ಲಿ ಅಂದಿನ ಹಿರಿಯ ಮುಖಂಡರಾದ ಶ್ರೀ ವಾರದ ಮಲ್ಲಪ್ಪನವರಿಂದ ಸಿದ್ದರಾಮಪ್ಪ ಪಾವಟೆ ಅವರ ಕಾನೂನಿನ ನೆರವಿಂದ ಲಿಂಗಾಯತರು “ಲಿಂಗಿ ಬ್ರಾಹ್ಮಣ” ಎಂದು ವಾದಿಸಿ ತಾವು ಬ್ರಾಹ್ಮಣರಿಗೆ ಸಮಾನರು ಶೂದ್ರರಲ್ಲ ಅಂತಾ ಸಾಧಿಸಿದರು, ಇದು ಲಿಂಗಾಯತ ಧರ್ಮಕ್ಕೆ ಬಿದ್ದ ಇನ್ನೊಂದು ದೊಡ್ಡ ಪೆಟ್ಟು..
1904 ರಲ್ಲಿ ಹಾನಗಲ್ಲ ಕುಮಾರ ಸ್ವಾಮೀಗಳು ಅಖಿಲ ಭಾರತ ವೀರಶೈವ ಮಹಾ ಸಭೆ ಸ್ಥಾಪಿಸಿದ್ಧು ಲಿಂಗಾಯತ ಧರ್ಮಕ್ಕೆ ಕೊನೆಯ ಏಟು.
1910 ರಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳು ಬಾದಾಮಿಯ ಬಳಿ ಸ್ಥಾಪಿಸಿದ ಶ್ರೀ ಶಿವಯೋಗ ಮಂದಿರ ಮತ್ತು ಸಂಸ್ಕೃತ ಶಾಲೆ ಬಸವ ಧರ್ಮೀಯರಿಗೆ ಮಾಡಿದ ಘೋರ ಅನ್ಯಾಯ.
ವೀರಶೈವರಿಗೆ ಅರವತ್ತು ಆಚರಣೆಗಳಿವೆ. ಅವು ಯಾವೂ ಬಸವ ತತ್ವಕ್ಕೆ ಸರಿ ಬಾರವು. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕನೆಂದು ಸಮಕಾಲೀನ ವಚನಕಾರರು ನಂತರದ ಕವಿಗಳು ಮತ್ತು ಜನಪದ ಕವಿಗಳು ಅನೇಕ ಸಾಧಕರು ಜನ ಗಣತಿಯ ಸೆನ್ಸಸ್ ಹಾಗು ಕೋರ್ಟ್ ಆದೇಶಗಳು ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ಹೇಳುವಲ್ಲಿ ಸಹಾಯಕವಾಗಿವೆ.
ವೀರಶೈವರ ಅರವತ್ತು ಆಚರಣೆಗಳಲ್ಲಿ ತಲೆ ಕೂದಲು ಸುಟ್ಟು ಕೊಳ್ಳುವುದು, ಬೆಂಕಿ ಹಾಯುವುದು, ಮುಳ್ಳಾವುಗೆಯ ಮೇಲೆ ನಿಲ್ಲುವುದು, ಅಸ್ತ್ರಗಳನ್ನು ಮೈಗೆ ಚುಚ್ಚಿ ಕೊಳ್ಳುವುದು ಹೀಗೆ ಹಿ೦ಸೆಯನ್ನು ಆಚರಿಸುವ ಒಂದು ಉಪಕ್ರಮ ಮಾತ್ರ. ಅವರಲ್ಲಿ ಕೆಲವರು ಪೌರೋಹಿತ್ಯರಿಗೆ ನೆರವಾಗುವ ಕಾಯಕ ಮಾಡುತ್ತಿದ್ದರು.
ಅನೇಕ ಖೊಟ್ಟಿ ದಾಖಲೆಗಳನ್ನು ಮುಂದು ಮಾಡಿ ಮುಂದೆ ಹಾನಗಲ್ ಕುಮಾರ ಸ್ವಾಮೀಗಳು ಅವರು ಬ್ಯಾಡಗಿ ವಿರಕ್ತ ಮಠದ ಶ್ರೀ ಮನಿಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ವೀರಶೈವ ಚರಿತ್ರೆ ಬರೆಯಲು ಆಜ್ಞಾಪಿಸಿದರು. ಬ್ಯಾಡಗಿ ವಿರಕ್ತ ಮಠದ ಶ್ರೀ ಮನಿ ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅನೇಕ ಗ್ರಂಥಗಳನ್ನು ಅಭ್ಯಾಸ ಮಾಡಿ ವೀರಶೈವ ಪಂಚಾಚಾರ್ಯರ ಚರಿತ್ರೆ ಎಂಬ ಕೃತಿಯನ್ನು 1958 ರಲ್ಲಿ ರಚಿಸಿದ್ದಾರೆ. ಅದರಲ್ಲಿ ಅವರು ಸ್ಪಷ್ಟವಾಗಿ ರೇಣುಕ ಒಂದು ಕಲ್ಪನೆ, ಆದರೆ ರೇವುಣಸಿದ್ಧರೆ ರೇಣುಕರು ಎಂದು ವಾದಿಸಿದ್ದಾರೆ. ಪುಟ 157 -159.
ಮುಂದೆ ಕಾಶಿನಾಥ ಶಾಸ್ತ್ರಿಗಳಿಗೆ ಚಿತ್ರದುರ್ಗ ಮಠದ ಪೀಠ ತಪ್ಪುವುದೋ ಅಂದೇ ಅವರು ಗುರು ವಿರಕ್ತ ಪಂಚ ಪೀಠ ವಿವಾದ ಹುಟ್ಟು ಹಾಕುತ್ತಾರೆ. ಈ ಹಿಂದೆ ವ್ಯವಸ್ಥಿತವಾಗಿ ಕ್ರೊಡಿಕರಿಸಿದ ಕೊಟ್ಟಿ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಮೊಂಡುವಾದವನ್ನು ಪ್ರದರ್ಶಿಸುತ್ತ ಬಂದಿದ್ದಾರೆ.
1872ರಿಂದ -1989 ವರೆಗಿನ ಎಲ್ಲ ಗೆಜೆಟ್ಟಗಳಲ್ಲಿ ಲಿಂಗಾಯತ ಎಂದು ನಮೂದಿಸಲಾಗಿದೆ. ಕೆಲವು ಕಡೆ ವೀರಶೈವ ಅಂತಾ ದಾಖಲಾದರೂ ಸಹಿತ ಅದು ಲಿಂಗಾಯತ ಧರ್ಮದ ಒಂದು ಒಳ ಪಂಗಡ ಎಂದು ಹೇಳಲಾಗಿದೆ.
ಇನ್ನು ಪಂಚಪೀಠದವರೊಬ್ಬಲಾದ ಶ್ರೀಶೈಲ ಪೀಠದ ಆದಿ ಜಗದ್ಗುರು ಮಲ್ಲಿಕಾರ್ಜುನ ಪಂಡಿತರು ಬಸವಣ್ಣನವರನ್ನು ಭೇಟಿ ಆಗಲು ಕಲ್ಯಾಣಕ್ಕೆ ಬರುತಿರಲು ಬಸವಣ್ಣನವರು ಐಕ್ಯವಾದ ಸುದ್ಧಿ ಕೇಳಿ ಮಲ್ಲಿಕಾರ್ಜುನ ಪಂಡಿತರು ಐಕ್ಯವಾದ ಘಟನೆ ತೆಲುಗು ಶಾಸನ 1190 ರಲ್ಲಿ ದಾಖಲಾಗಿದೆ. ಮಲ್ಲಿಕಾರ್ಜುನ ಪಂಡಿತರು ತಮ್ಮ ವಚನಗಳಲ್ಲಿ ಬಸವಣ್ಣ ತಮ್ಮ ಆರಾಧ್ಯ ಧೈವವೆಂದು ಹೊಗಳಿದ್ದಾರೆ.
ಪಾಶ್ಚಿಮಾತ ಸಂಶೋಧಕರಾದ ಎಂತ್ಹೊವಾನ್, ಕ್ಯಾಂಪ ಬೆಲ್, ಆರ್ ಸಿ ಕಾರ್, ಅರ್ಥರ್ ಮೈಲ್ಸ್, ಥರ್ಸ್ಟನ್ ಮುಂತಾದ ನೂರಾರು ಜನರು ಬಸವಣ್ಣನೆ ಲಿಂಗಾಯತ ಧರ್ಮದ ಸ್ಥಾಪಕ ಎಂದು ಸ್ಪಷ್ಟ ಪಡಿಸುತ್ತಾರೆ. 1966 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಶ್ರೀ ಪಿ ಬಿ ಗಜೇಂದ್ರಗಡಕರ ಅವರು Buddhism Is started by Buddha Jainisam started by Mahaveera Basavanna became The founder of Lingayat Religion ಎಂಬ ಸ್ಪಷ್ಟ ಅಭಿಮತಕ್ಕೆ ಬಂದಿದ್ದಾರೆ.
ವಸ್ತು ಸ್ಥಿತಿ ಹೀಗಿರುವಾಗ ಕೆಲ ಅರೆ ಬರೆ ಜ್ಞಾನಿಗಳು ಸ್ವಾಮೀಗಳು ತಾವೇ ವೀರಶೈವ ಮತ ಸ್ಥಾಪಕರೆಂದು ಅದು ಬಸವ ಪೂರ್ವ ಧರ್ಮವೆಂದು ಬೊಗಳೆ ಬಿಡುತ್ತಾರೆ.
ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಅವರ ವಚನ ಸಂಕಲನ ಪರಿಸ್ಕರಣೆಯಲ್ಲಿ ಕೆಲ ಜಾತಿವಾದಿ ಮೂಲಭೂತ ವಾದಿಗಳು ಅನಗತ್ಯ ಖೊಟ್ಟಿ ವೀರಶೈವ ಪದಗಳನ್ನು ಸೇರಿಸಿ ಕೊಟ್ಟರು. ಇದರ ಅರಿವಿಲ್ಲದ ಮುಗ್ಧ ಡಾ. ಹಳಕಟ್ಟಿ ಅವರಿಂದ ಕೆಲ ಅನೇಕ ತಪ್ಪು ಪದಗಳ ಜೋಡಣೆಯಾದವು. ಅವುಗಳಲ್ಲಿ ಸಂಸ್ಕೃತ ಪದ ಮತ್ತು ವೀರಶೈವ ಪದಗಳು.
ವೀರಶೈವ ಆಚರಣೆಯು ವೇದ ಶಾಸ್ತ್ರ ಆಗಮ ಮಾನ್ಯತೆಯಂತೆ ನಡೆಯುತ್ತವೆ. ಅಲ್ಲಿ ಹವನ, ಹೋಮ, ಯಜ್ಞಗಳ ಆಚರಣೆ ಇವೆ. ವೀರಶೈವವು ಪುನರ್ಜನ್ಮ ಕರ್ಮ ಸಿದ್ಧಾಂತವನ್ನು ಒಪ್ಪುತ್ತದೆ. ಬಸವಣ್ಣ ಸ್ಥಾಪಿತ ಲಿಂಗಾಯತ ಧರ್ಮವು ವೇದ ಆಗಮ ಶಾಸ್ತ್ರಗಳನ್ನು ಧಿಕ್ಕರಿಸುತ್ತದೆ. ವೀರಶೈವ ಆಚರಣೆಯಲ್ಲಿ ನಂದಿ, ಗಣಪತಿ, ವೀರಭದ್ರ, ಪರಶಿವ, ಪಾರ್ವತಿಯ ಪೂಜೆಗೆ ಅವಕಾಶವಿದೆ. ಲಿಂಗಾಯತ ಧರ್ಮವು ಇದನ್ನು ಉಗ್ರವಾಗಿ ವಿರೋಧಿಸುವದಲ್ಲದೆ ಗುಡಿ ಗುಂಡಾರ ಸಂಸ್ಕೃತಿಯನ್ನು ತಳ್ಳಿ ಹಾಕುತ್ತದೆ. ಲಿಂಗಾಯತ ಧರ್ಮದಲ್ಲಿ ಜೀವಾತ್ಮನೇ ಪರಮಾತ್ಮನು. ನರನೊಳಗೆ ಹರನನ್ನು ಕಾಣುವ ಸೂಕ್ಷ್ಮ ಹಾಗು ಮುಕ್ತ ಧರ್ಮವೇ ಲಿಂಗಾಯತ ಧರ್ಮವು. ಲಿಂಗಾಯತ ಧರ್ಮವು ಸನ್ಯಾಸತ್ವವನ್ನು ಒಪ್ಪುವದಿಲ್ಲ‌. ಸಹಜ ದಾಂಪತ್ಯವನ್ನು ಪುರಸ್ಕರಿಸುತ್ತದೆ. ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಇನ್ನು ಸುಂದರ ಸರಳ ಧರ್ಮದ ಮೂಲ ನೀತಿ ಕಾಯಕ ದಾಸೋಹ ಮತ್ತು ದಯೆ ಪ್ರೀತಿ ಸಮಾನತೆ ಸ.
ಇನ್ನು ಲಿಂಗಾಯತರಿಗೆ ಮಠಗಳ ವ್ಯವಸ್ಥೆ ಇಲ್ಲ. ಭಕ್ತರ ಮನೆಗಳೇ ಮಹಾ ಮನೆಗಳು (ಮಠಗಳು). ಮಠಗಳು ಭಕ್ತರನ್ನು ದಾಸ್ಯತ್ವಕ್ಕೆ ತಳ್ಳುತ್ತವೆ. ಭಕ್ತ ಪ್ರಧಾನ ಧರ್ಮವೇ ಲಿಂಗಾಯತ ಬಸವ ಧರ್ಮ. ಗುಲಾಮಗಿರಿಯ ಧರ್ಮವಲ್ಲ. ವೀರಶೈವ ಒಂದು ಆಚರಣೆ ಹಾಗೂ ವೃತ ಆದರೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಒಂದು ಸ್ವತಂತ್ರ ಪರಿಪೂರ್ಣ ಧರ್ಮ.

ಮಠ ಪೀಠ ಆಶ್ರಮ ಒಪ್ಪದ ಕಲ್ಯಾಣ ಶರಣರು

ಹನ್ನೆರಡನೆಯ ಶತಮಾನದ ಜಾಗತಿಕ ಮಟ್ಟದಲ್ಲಿ ಬಹು ದೊಡ್ಡ ಕ್ರಾಂತಿ. ಕರ್ನಾಟಕದ ಕಲ್ಯಾಣದಲ್ಲಿ ನಡೆಯಿತು. ಅದು ಚಾಲುಕ್ಯರ ಕಳಚೂರ ಆಡಳಿತದ ಕಾಲ. ಸಮಗ್ರ ಬದಲಾವಣೆ ಪರಿವರ್ತನೆ ಮಾಡುವ ಕೆಲಸ ಬಸವಾದಿ ಪ್ರಮಥರಿಂದ ನಡೆಯಿತು.
ಶರಣರು ಅಂದಿನ ಸನಾತನ ವ್ಯವಸ್ಥೆಯನ್ನು ಧಿಕ್ಕರಿಸಿ ತಮ್ಮದೇ ಆದ ಸರಳ ಶುದ್ಧ ಮಾರ್ಗ ಸೂತ್ರ ಕಂಡು ಕೊಂಡರು. ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಾರ್ವಕಾಲಿಕ ಸಮಾನತೆ ಸ್ವಾತಂತ್ರ್ಯ ಸಾಧಿಸಿದ ಶ್ರೇಷ್ಠರು. ಅವರ ವಚನ ಸಾಹಿತ್ಯ ವೈಚಾರಿಕತೆಯ ಉನ್ನತ ವಿಚಾರಗಳ ಕೂಟ.
ಮಠ ಪೀಠ ಆಶ್ರಮ ಒಪ್ಪದ ಕಲ್ಯಾಣ ಶರಣರು. ಯಾವೊಬ್ಬ ವಚನಕಾರರು ಸಾಂಸ್ಥಿಕರಣ ಶ್ರೇಷ್ಟತೆಯ ವ್ಯವಸ್ಥೆಯನ್ನು ಟೀಕಿಸಿ ಧಿಕ್ಕರಿಸಿ ಕೌಟುಂಬಿಕ ದಾಂಪತ್ಯ ಮಹಾಮನೆ ಆವರಣದಲ್ಲಿ ಜೀವನಾನುಭವ ಚಿಂತನೆ ನಡೆದವು. ಅನುಭವ ಮಂಟಪ ಕೂಡ ಸಂಸ್ಥಿಕರಣವಲ್ಲ. ಅಲ್ಲಿದ್ದ ಫಿರ್ ಪಾಷಾ ಬಂಗಲೆ ಕಲ್ಯಾಣದ ಚಾಲುಕ್ಯರ ಕಾಲದ ಒಂದು ಶೈವ ಸಮುದಾಯದವರ ಪ್ರಾರ್ಥನಾ ಸ್ಥಳ ಆಗಿರ ಬಹುದು. ಲಿಂಗಾಯತ ಧರ್ಮ ನೀತಿ ತತ್ವಗಳು ಪ್ರಖರ ಸದಾಶಯ ಹೊಂದಿದ ಅನುಸಂಧಾನದ ಶ್ರೇಷ್ಠ ಸಿದ್ಧಾಂತ ಮಾರ್ಗವಾಗಿ ಪರಿಣಮಿಸಿದಾಗ ಶೈವರ ಕಾಳಾ ಮುಖಿ ಲಕುಲಿಶ ಪಾಶುಪತ ಪಂಥಗಳು ತಮ್ಮ ಆಚರಣೆ ಬಿಟ್ಟು ಶರಣ ಧರ್ಮ ಸೇರಿಕೊಂಡರು. ಅಂತಹ ಸಂದರ್ಭದಲ್ಲಿ ಅನುಭವ ಮಂಟಪ ಸ್ಥಾಪನೆಯಾಯಿತು. ಅನುಭವ ಮಂಟಪ ಇದ್ದದ್ದು ಸತ್ಯ ಆದರೆ ಶರಣೆ ಅನುಭವ ಮಂಟಪ ಕಟ್ಟಿದರು ಎಂಬುದನ್ನು ಪರಾಮರ್ಶೆ ನಡೆಸಬೇಕು. ಕಾರಣ ಶರಣರು ಸ್ಥಾವರ ವಿರೋಧಿ ಜಂಗಮ ಪ್ರೇಮಿಗಳು.
ಇನ್ನೂರು ವರ್ಷ ವಚನ ಚಳುವಳಿ ಭೂಗರ್ಭದಲ್ಲಿ ಮರೆತು ಹೋಯಿತು. ಮುಂದೆ ಹಂಪಿಯ ಪ್ರೌಢ ದೇವರಾಯನ ಕಾಲದಲ್ಲಿ ವಚನಗಳ ಸಂಕಲನ ನಡೆಯಿತು ನಂತರದಲ್ಲಿ ಶೂನ್ಯ ಸಂಪಾದನೆ ಕಾಲದಲ್ಲಿ ವಚನಗಳ ಪ್ರತಿ ಪಾಠಾಂತರ ನಡೆದವು.
ಅಂದಿನ ಶೈವ ವೈಷ್ಣವ ಜೈನ ಸನಾತನ ಧರ್ಮದವರ ಧಾರ್ಮಿಕ ಆಚರಣಾ ಪದ್ಧತಿ ತುಂಬಾ ರಂಜನೀಯ ಆಕರ್ಷಕ ಪೌರಾಣಿಕ ಪವಾಡಗಳಿಂದ ಜನರನ್ನು ರಂಜಿಸುತ್ತಿದ್ದವು. ಇವರ ಜೊತೆಗೆ ಪೈಪೋಟಿಗೆ ಇಳಿದ ಅಂದಿನ ಲಿಂಗಾಯತ ಧರ್ಮ ಸಾಹಿತಿಗಳು ತಮ್ಮ ಪ್ರಾಬಲ್ಯ ಕಳೆದು ಕೊಂಡಿದ್ದರು. ಕಲ್ಲು ಮಠದ ಪ್ರಭು ಸ್ವಾಮಿಗಳನ್ನು ಹೊರತು ಪಡಿಸಿದರೆ ಬಹುತೇಕರು ಜೈನ ವೈಷ್ಣವ ಶೈವ ಸಂಪ್ರದಾಯಗಳ ಪ್ರಭಾವಕ್ಕೆ ಒಳ ಪಟ್ಟು ಅಲ್ಲಿನ ಆಚರಣೆಗಳನ್ನು ಶರಣ ಚಳುವಳಿಯ ಸಾಹಿತ್ಯ ಆಚರಣೆಯ ರೂಪದಲ್ಲಿ ದಾಖಲಿಸಿದರು.
ಹರಿಹರನ ರಗಳೆಗಳು ಶರಣರ ಆಶಯ ಹೇಳುತ್ತಾ ವೈಭವೀಕರಿಸಿ ಪವಾಡ ಪುಣ್ಯ ಕಥೆಗಳ ಕಥಾ ವಸ್ತುವಾಗಿ ಬಿಂಬಿಸಿದನು. ಮುಂದೆ
ಭೈರವೇಶ್ವರ ಕಥಾ ರತ್ನಾಕರ ಸೂತ್ರ ಇಂತಹ ಪವಾಡ ಪ್ರಧಾನವಾದ ಕಥಾ ರೂಪದ ಪುರಾಣಗಳು ರಚನೆಯಾಗಿವೆ. ಇಲ್ಲಿ ತತ್ವಕ್ಕಿಂತ ರಂಜನೀಯ ಪವಾಡಗಳು ಹೆಚ್ಚು ಹೆಚ್ಚು ಪರಿಣಾಮಕಾರಿ ಸಾಹಿತಿಕ ರೂಪದಲ್ಲಿ ಮೂಡಿ ಬಂದವು
ಹದಿನಾರನೆಯ ಶತಮಾನದಲ್ಲಿ ಸಕಲ ಪುರಾತನರ ವಚನಗಳ ಕಟ್ಟು ವಚನ ಸಂಕಲನಗಳಿಗೆ ಪ್ರಧಾನ ಆಕರವಾದವು.
ತೋಂಟದ ಸಿದ್ಧಲಿಂಗ ಯತಿ ಶ್ರೀಗಳು ಸ್ವತಃ 701 ವಚನಗಳನ್ನು ರಚಿಸಿದರು. ಇವರ ವಚನ ರಚನಾ ಕಾಲದಲ್ಲಿ ಆಗಲೇ ವೀರಶೈವ ಪದ 1368 ರ ಭೀಮ ಕವಿಯ ತೆಲುಗು ಬಸವ ಪುರಾಣದ ಕನ್ನಡ ಭಾಷಾಂತರ ಮಾಡುವಲ್ಲಿ ವೀರಶೈವ ಸೇರ್ಪಡೆಗೊಂಡಿತ್ತು. ಆಂಧ್ರ ಮೂಲದ ಆರಾಧ್ಯರು ಬ್ರಾಹ್ಮಣರು ವೀರಶೈವ ವೃತ ಆಚರಿಸುವವರು ಲಿಂಗಾಯತ ಧರ್ಮದಲ್ಲಿ ನುಸುಳಿ ಶರಣರ ಆಶಯಕ್ಕೆ ಪೆಟ್ಟು ಕೊಟ್ಟರು.
ಶ್ರಿ ಸಿದ್ಧಲಿಂಗ ಸ್ವಾಮಿಗಳು ಯತಿಗಳ ಶಿಷ್ಯ ವರ್ಗದಲ್ಲಿ ಬೊಳ ಬಸವರು ಘನಲಿಂಗಿಗಳು ಗುಮ್ಮಳಪೂರದ ಸಿದ್ಧಲಿಂಗ ಶ್ರೀಗಳು ಜಿಗುನಿ ಮರುಳಾಚಾರ್ಯರು ಹಿರಣ್ಯದೇವ ಹೀಗೆ 700 ವಿರಕ್ತರು ಶ್ರಿ ಎಡೆಯೂರ ಸಿದ್ಧಲಿಂಗ ಯತಿಗಳ ಶಿಷ್ಯರು ಇದ್ದರೆಂದು ಪಾರಂಪರಿಕ ಹೇಳಿಕೆಗಳ ಮೂಲಕ ತಿಳಿದು ಬರುತ್ತದೆ.ಮುಂದೆ ಶ್ರಿ ಸಿದ್ಧಲಿಂಗ ಯತಿಗಳ ಬಗ್ಗೆಯೂ ಅನೇಕ ಪವಾಡ ಕಥನ ಉಳ್ಳ ಜೀವನ ಚರಿತ್ರೆ ಹುಟ್ಟಿಕೊಂಡವು. ಇವೆಲ್ಲ ಶೈವ ಪ್ರಜ್ಞೆ ಹೊಂದಿದ ಕಥಾ ವಸ್ತು. ಬಹುಶ ಇದೆ ಸಂದರ್ಭದಲ್ಲಿ ಶೂನ್ಯ ಸಂಪಾದನೆ ರಚನೆಗೊಂಡ ಕಾಲ ಎಂದು ನಿರ್ಧರಿಸಲು ಸಾಧ್ಯ.ಗುಮ್ಮಳಪುರದ ಸಿದ್ಧಲಿಂಗ ರು ಶೂನ್ಯ ಸಂಪಾದನೆ ಕರ್ತರಲ್ಲಿ ಒಬ್ಬರು ಇದರ ಸಂಪಾದನೆ ಬೇರೆ ಬೇರೆಯವರ ಕಾಲದಲ್ಲಿ ನಡೆದು ಶರಣರ ಆಶಯ ಚಿಂತನೆಗೆ ಸಂಪೂರ್ಣ ವಿರುದ್ಧವಾದ ಆಚರಣೆಗಳು ತನ್ಮೂಲಕ ಹುಟ್ಟಿ ಕೊಂಡವು ಏಡೆಯೂರ ಶ್ರಿ ಸಿದ್ಧಲಿಂಗ ಯತಿಗಳು ಮಠ ಪೀಠ ಸ್ಥಾಪಿಸಲಿಲ್ಲ. ಬದಲಾಗಿ ಒಂದು ಸುಂದರ ವಿರಕ್ತ ಪರಂಪರೆಯನ್ನು ಸಿದ್ಧ ಗೊಳಿಸಿದರು. ಇವರೆಲ್ಲ ಶಿವ ಯೋಗ ಸಾಧಕರು. ಆಚರಣೆ ಪೂಜೆ ಆ ಸಂಪ್ರದಾಯಗಳನ್ನು ಬದಿಗಿಟ್ಟು ಶ್ರಮ ಸಂಸ್ಕೃತಿಯ ವಕ್ತಾರರಾದ ಶರಣರ ಆಶಯಗಳನ್ನು ಸಂಪೂರ್ಣ ವಿರೂಪಗೊಳಿಸುವ ಕುತಂತ್ರ ಹುನ್ನಾರ ವೀರಶೈವರು ಕೈಗೊಂಡರು.
ಮುಂದೆ 17 ನೆಯ ಶತಮಾನದ ಆರಂಭದಲ್ಲಿ ಕಟ್ಟಿಗೆ ಹಳ್ಳಿ ಶ್ರಿ ಸಿದ್ಧಲಿಂಗ ಶ್ರೀಗಳು ಈ ಮಠದ ಪರಂಪರೆ ಅಧಿಕೃತವಾಗಿ ಆರಂಭಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಬಸವಣ್ಣ ಅಲ್ಲಮ ಅಕ್ಕ ಮಹಾದೇವಿ ಮತ್ತು ಎಲ್ಲಾ ವಚನಕಾರರ ವಚನಗಳು ತತ್ವ ಸಿದ್ಧಾಂತಗಳು ಹೆಚ್ಚು ಹೆಚ್ಚು ವಾಸ್ತವಿಕವಾಗಿ ಕಂಡು ಬಂದರೂ ಸಹಿತ ಶರಣರ ಆಶಯ ಚಿಂತನೆಗೆ ಕೊಡಲಿ ಪೆಟ್ಟು ಕೊಟ್ಟವರು ಶೈವ ವಾದಿಗಳು, ವೀರಶೈವ ವಾದಿಗಳು. ಶರಣ ಧರ್ಮ ಅತಿಕ್ರಮಣ ಪ್ರವೇಶ ಮಾಡಿ ಯಾಮಾರಿಸಿ ಇಲ್ಲಿನ ಆಶಯ ಚಿಂತನೆಗಳನ್ನು ಸಮಾಧಿ ಮಾಡಿ. ಅಂತಹ ಸಮಾಧಿಯ ಸ್ಥಳದಲ್ಲಿ ಮಠಗಳನ್ನು ಕಟ್ಟಿದರು ಶೈವವಾದಿಗಳು.
ಜೇವರ್ಗಿ ಷಣ್ಮುಖ ಶಿವಯೋಗಿಗಳು, ಅಥಣಿಯ ಶ್ರಿ ಮುರಗೆಂದ್ರ ಯೋಗಿಗಳು, ಮುರುಗೊಡದ ಶ್ರಿ ಮಹಾಂತ ಸ್ವಾಮಿಗಳು, ಧಾರವಾಡದ ಮೃತ್ಯುಂಜಯ ಸ್ವಾಮಿಗಳು, ಶರಣ ಚಳುವಳಿಯ ನೈಜ ಆಶಯಗಳು ಚಿಂತನೆಗಳನ್ನು ಬೆಳಸಲು ಪ್ರಸಾರ ಮಾಡಲು ಶ್ರಮಿಸಿದ್ದಾರೆ. ಇಂದು ಮಠಗಳು ವಾಣಿಜ್ಯ ಕಟ್ಟಡ ಅರಮನೆ, ಸಾಮಾಜಿಕ ರಾಜಕೀಯ ವೋಟ್ ಬ್ಯಾಂಕ್ ಆಗಿ ಪರಿಣಮಿಸಿವೆ.

ಲಿಂಗಾಯತ ಸಮುದಾಯಕ್ಕೆ ಮಠಗಳಿಲ್ಲ

       ಇಂದು ಜಾತಿಗೊಂದು ಪೀಠ ಮಠ ಹುಟ್ಟಿಕೊಂಡು ಶರಣರ ಆಶಯ ಚಿಂತನೆಗಳನ್ನು ಕಗ್ಗೊಲೆ ಮಾಡುತ್ತಿವೆ. ಬಸವ ಭಕ್ತರು ಎಚ್ಚರಗೊಳ್ಳಬೇಕು ಡಾ. ಎಂ ಎಂ ಕಲಬುರ್ಗಿ ಅವರ ಹತ್ಯೆಯ ಹಿಂದೆ ಇಂತಹ ಮಠ ಪೀಠಗಳ ಕಾಣದ ಕೈ ಕಾಣುತ್ತವೆ. ಸತ್ಯ ಹೇಳುವವರನ್ನು ಹತ್ಯೆಗೈದು ತಮ್ಮ ಸಂಪ್ರದಾಯ ಆಚರಣೆ ಉಳಿಸಿಕೊಳ್ಳುವ ಪ್ರಯತ್ನ ಇಂದಿನ ಎಲ್ಲಾ ಬಸವ ತತ್ವ ಮಠಗಳು ನಡೆಸಿಕೊಂಡು ಬಂದಿವೆ.          
 ಬಸವ ಪರ ಅಥವಾ ವಿರಕ್ತ ಮಠ ಪಂಚ ಪೀಠ ಮೇಲ್ನೋಟಕ್ಕೆ ಸಂಘರ್ಷ. ಒಂದೇ ಕುಟುಂಬದ ಅಣ್ಣ ತಮ್ಮ ಈ ಪೀಠಗಳನ್ನು ಅಲಂಕರಿಸಿ ಬಸವ ಭಕ್ತರನ್ನು ದಾರಿ ತಪ್ಪಿಸುತ್ತಾರೆ, ಇಂದಿನ ಎಲ್ಲಾ ಮಠಗಳು ವೈದಿಕ ಸಂಸ್ಕೃತಿಯ ಆಚರಣೆಯನ್ನು ರೂಢಿಸಿಕೊಂಡು ಭಕ್ತರನ್ನು ವೈದಿಕರನ್ನಾಗಿ ಮಾಡುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಬಸವ ತಿಳುವಳಿಕೆ ತತ್ವಗಳಲ್ಲಿ ಮಠ ಪೀಠ ಆಶ್ರಮ ಪರಂಪರೆ ಇಲ್ಲ . ಇದರ ಬಗ್ಗೆ ನಾನು ಯಾವುದೇ ಲಿಂಗಾಯತ ಮಠಗಳ ಜೊತೆಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ವಿನಮ್ರವಾಗಿ ಹೇಳುತ್ತೇನೆ. 
 ಮಠ ಪೀಠ ಆಶ್ರಮ ಒಪ್ಪದ ಕಲ್ಯಾಣ ಶರಣರು ಆದರೆ ಇಂದು ಇಂತಹ ಮಠ ಪೀಠ ಆಶ್ರಮ ಲಾಂಚನಕ್ಕೆ ಜೋತು ಬಿದ್ದ ಬಸವ ಭಕ್ತರು ಲಿಂಗಾಯತ ಧರ್ಮದಲ್ಲೀ ಕಾವಿ ಇಲ್ಲ.

ಆಕರಗಳು

  • ಬಸವಣ್ಣನವರ ವಚನಗಳು ಮರಿ ಶಂಕರದ್ಯಾವರು 1889
  • ಶ್ರಿ ಬಸವೇಶ್ವರ ವಚನಗಳು ಡಾ ಫ ಗು ಹಳಕಟ್ಟಿ 1923
  • ಬಸವಣ್ಣನವರ ಷಟಸ್ಥಳದ ವಚನಗಳು ಪ್ರೊ ಶೀ ಶೀ ಬಸವನಾಳ 1951
  • ಭಕ್ತಿ ಭಂಡಾರಿ ಬಸವಣ್ಣನವರ ವಚನಗಳು ಡಾ ಆರ್ ಸಿ ಹಿರೇಮಠ 1968
  • ಬಸವಣ್ಣನವರ ಟೀಕಿನ ವಚನಗಳು ಡಾ. ಎಂ ಎಂ ಕಲಬುರ್ಗಿ
    1981
  • ಬಸವಣ್ಣನವರ ಷಟಸ್ಥಲದ ವಚನಗಳು ಡಾ. ಎಲ್ ಬಸವರಾಜ 1990
  • ಬಸವಣ್ಣನವರ ವಚನ ಸಂಪುಟ ಡಾ. ಎಂ ಎಂ ಕಲಬುರ್ಗಿ 1993
BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.