ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕ ಘಟಕದ 2025-2030 ರ ಅವಧಿಗೆ ಕೃಷಿಕ ಸಮಾಜದ ತಾಲ್ಲೂಕ ಅಧ್ಯಕ್ಷರಾಗಿ ಪೀರಗೊಂಡ ಗದ್ಯಾಳ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶ್ರೀಶೈಲ ತುಳಜನ್ನವರ, ಗೌರವ ಕಾರ್ಯದರ್ಶಿ ರಾಮಗೊಂಡ ಬಿರಾದಾರ, ಖಜಾಂಚಿ ಜಗದೀಶ ಬಿರಾದಾರ, ಜಿಲ್ಲಾ ಪ್ರತಿನಿಧಿ ಮಹಾವೀರ ಕುಸನಾಳ, ಸದಸ್ಯರಾಗಿ ಸಿದರಾಯ ಗದ್ಯಾಳ, ಶಿವಾನಂದ ಚೌಧರಿ, ಬಸಗೊಂಡ ಗುರ್ಕಿ, ಪ್ರಕಾಶ ಗಣಿ, ಅರ್ಜುನ ಧನಗೊಂಡ, ಈರಪ್ಪ ಕೊಂಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರೇಷ್ಮಾ ಸುತಾರ ತಿಳಿಸಿದ್ದಾರೆ.

