Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ | ೭೬ ನೇ ಎನ್‌ಸಿಸಿ ರೈಸಿಂಗ್ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ.ತಮ್ಮಲ್ಲಿ ಮೊದಲು ಶಿಸ್ತುನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ವಿಜಯಪುರದ ೩೬ ಕರ್ನಾಟಕ ಬಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಅಧಿಕಾರಿ ಗಿರೀಷ್ ಶಿಂಧೆ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಅಂಜುಮನ್ ಪದವಿ ಕಾಲೇಜು, ಎಸ್.ಎಸ್ ಪಿಯು ಕಾಲೇಜು, ಬಿ.ಎಲ್.ಡಿ.ಇ ವಿದ್ಯಾರ್ಥಿನಿಯರ ಹೈ ಸ್ಕೂಲ್ ಮತ್ತು ವಿಜಯಪುರದ ೩೬ ಕರ್ನಾಟಕ ಬಟಾಲಿಯನ್ ಎನ್‌ಸಿಸಿ ಸಂಯೋಜನೆಯಡಿಯಲ್ಲಿನ ಎನ್ ಸಿ ಸಿ ೭೬ ನೇ ರೈಸಿಂಗ್ ದಿನಾಚರಣೆ ಕಾರ್ಯಕ್ರವನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಾವು ಗುರಿ ಮುಟ್ಟಬೇಕೆಂದರೆ ತಮ್ಮಲ್ಲಿ ಮೊದಲು ತಮ್ಮಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ತಮ್ಮ ಕೆಲಸ ಕಾರ್ಯಗಳನ್ನು ತಾವೇ ಮಾಡಿಕೊಳ್ಳಬೇಕು. ಇದರಿಂದ ನಿಮ್ಮಲ್ಲಿ ಸಮಯ ಪ್ರಜ್ಞೆ…
ಲೇಖನ- ಡಾ.ಶಶಿಕಾಂತ ಪಟ್ಟಣ -ರಾಮದುರ್ಗC-103 SANGRIA APARTMENT, MEGAPOLIS, 3RD PHASE HINJEWADI, PUNE – 411057 MAHARSTRHA. ಉದಯರಶ್ಮಿ ದಿನಪತ್ರಿಕೆ ಈ ಜನಪದ ನುಡಿಯಿಂದಾ ಕೇತಯ್ಯನು ಮಲೆನಾಡಿನ ಬೇಲೂರನವನಾಗಿದ್ದನು ಎಂದು ತಿಳಿದು ಬರುತ್ತದೆ. ಅಲ್ಲದೆ ಆತನು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿ ಶಿವ ಭಕ್ತನಾಗಿದ್ದನು. ದಟ್ಟ ಕಾಡಿನೊಳಗೆ ಅಲೆಯುತ್ತ ಸ್ವಾಭಿಮಾನಿ ಜೀವನ ನಡೆಸಿದನು ಕೇತಯ್ಯ.ಮೇದಾರ ಕೇತಯ್ಯನ ವಚನಾಂಕಿತ “ಗವರೇಶ್ವರ” ಸುಮಾರು ಹದಿನಾಲ್ಕು ವಚನಗಳು ಲಭ್ಯವಾಗಿವೆ. (14 ).ಗವರಗ ಎಂದರೆ ಬಿದಿರು ಕಾಯಕ, ಮೊರ, ಬುಟ್ಟಿ,ತೊಟ್ಟಿಲು, ನಿಚ್ಚಣಿಕೆ ಮುಂತಾದ ಬಿದಿರಿನಿಂದ ಉತ್ಪನ್ನವಾಗುವ ಸಿದ್ಧ ವಸ್ತುಗಳು. ಕೇತಯ್ಯ ತನ್ನ ವಚನಗಳಲ್ಲಿ ಬಸವಣ್ಣ, ಪ್ರಭುದೇವ, ಚೆನ್ನಬಸವಣ್ಣ, ಘಟ್ಟಿವಾಳಯ್ಯ, ಸಿದ್ಧರಾಮ, ಶಂಕರ ದೇವಾ, ಮಡಿವಾಳ ಮಾಚಿದೇವ ಮುಂತಾದ ಶರಣರನ್ನು ಸ್ಮರಿಸುತ್ತಾನೆ. ತಾನು ಮಾಡುವ ಕಾಯಕದ ಮೂಲಕತನ್ನ ಲಿಂಗಾಂಗ ಸಾಮರಸ್ಯ ಕಂಡುಕೊಂಡ ಶ್ರೇಷ್ಠ ಶರಣ.ಕೇತಯ್ಯ ನಿನ್ನ ಮಡದಿ I ಸಾತವ್ವಳೆ೦ಬವಳು |ಜಾತಿ ಮೇದರದು ಕಸುಬಿನಲಿ I ನಾಡೊಳಗೆನೀತಿ ಶಿವಮತದ ಒರೆಗಲ್ಲು||ಕೇತಯ್ಯನ ಮಡದಿ ಸಾತವ್ವ ಮತ್ತು ಅವರ ಮೂಲ ಕಸುಬು…
’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲೆ) ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು,ಬೆಳಗಾವಿ, ಮೊ:೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನಮ್ಮಲ್ಲಿ ಬಹುತೇಕ ಜನರು ಗುರಿ ಮುಟ್ಟದೇ ವಿಫಲರಾಗಲು ಕಾರಣ ಸಂವಹನ ಕಲೆ ಗೊತ್ತಿಲ್ಲದೇ ಇರುವುದು. ಅದರಲ್ಲೂ ಅಪರಿಚಿತರೊಂದಿಗೆ ಮಾತನಾಡಲು ಭಯಗೊಳ್ಳುವುದು ಸಾಮಾನ್ಯ. ಮಾತಿನ ಕಲೆ ತಲೆ ಎತ್ತಿ ನಡೆಯುವುದನ್ನು ದೈರ್ಯವನ್ನು ತುಂಬುತ್ತದೆ. ಕರಗತ ಮಾಡಿಕೊಂಡರೆ ಅಪರಿಚಿತರೊಂದಿಗೆ ಮಾತು ಹೇಗೆ ಆರಂಭಿಸಬೇಕೆಂಬುದು ಸಲೀಸಾಗಿ ಬಿಡುತ್ತದೆ. ನಾಲ್ಕಾರು ಜನರ ಗುಂಪಿನಲ್ಲಿರುವಾಗ ಏನು ಮಾತನಾಡುವುದೆಂದು ತಿಳಿಯದೆ ಆ ಕಡೆ ಈ ಕಡೆ ನೋಡುತ್ತ ನಿಂತು ಬಿಡುತ್ತೇವೆ. ಅವರಲ್ಲಿ ನಾವೂ ಒಬ್ಬರೆಂಬ ಭಾವನೆ ಬರದೇ ಅವರ ಇರುವಿಕೆಯನ್ನು ಸಂತಸದಿಂದ ಕಳೆಯದೆ ಪೇಚಾಡುತ್ತೇವೆ. ಉಸಿರುಗಟ್ಟಿದ ವಾತಾವರಣದಲ್ಲಿ ನಿಂತಂತೆನಿಸಿ ಅಲ್ಲಿಂದ ಹೊರ ನಡೆದರೆ ಸಾಕೆಂದು ಅನಿಸುವುದೂ ಉಂಟು. ಅಂಥ ಸಮಯದಲ್ಲಿ ನೀವೂ ಅವರಲ್ಲೊಬ್ಬರು ಅಂತೆನಿಸಲು ಹೇಗೆ ಮಾತನಾಡಬೇಕೆಂದು ಯೋಚಿಸುತ್ತೀರಿ ಆದರೆ ಮಾತನಾಡಿ ಏನಾದರೂ ತಪ್ಪಾದರೆಂದು ಬಾಯಿ ಮುಚ್ಚಿಕೊಂಡಿರುತ್ತೀರಿ. ನಡೆಯುತ್ತಿರುವ ಸಂಭಾಷಣೆಯಲ್ಲಿ ನೀವೂ ಭಾಗ ತೆಗೆದುಕೊಳ್ಳಬೇಕೆಂದರೆ ಏನು ಮಾಡಬೇಕೆಂಬುದಕ್ಕೆ ಇಲ್ಲಿವೆ ಕೆಲವು ಸಲಹೆಗಳು.ಸಾಮಾನ್ಯವಾದುದನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಕದಾಸ ಬಡಾವಣೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ೧೫೦ ಸಂಖ್ಯಾಬಲಕ್ಕೆ ಅನುಗುಣವಾಗಿ ಹತ್ತು ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯವುಳ್ಳ ಕಟ್ಟಡ ಬಾಡಿಗೆಗಾಗಿ ಅರ್ಜಿ ಆಹ್ವಾನಿಸಿಲಾಗಿದೆ. ವಸತಿ ನಿಲಯಕ್ಕಾಗಿ ಬಾಡಿಗೆ ಕಟ್ಟಡ ಒದಗಿಸಲು ಆಸಕ್ತಿ ಇರುವ ಕಟ್ಟಡ ಮಾಲೀಕರು ದಿನಾಂಕ: ೨೨-೧೧-೨೦೨೪ ರೊಳಗಾಗಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಡಿ. ದೇವರಾಜ್ ಅರಸು ಭವನ, ಜಿಲ್ಲಾ ಪಂಚಾಯತ್ ಕಚೇರಿ ಹತ್ತಿರ ಕನಕದಾಸ ಬಡಾವಣೆ ಇವರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: ೦೮೩೫೨-೨೬೭೯೯೩, ಮೊಬೈಲ್ ೯೬೧೧೫೧೮೪೭೬ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸಕ್ತ ೨೦೨೪-೨೫ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ-ಅತಿವೃಷ್ಟಿಯಿಂದ ವಿಜಯಪುರ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಉಂಟಾದ ಬೆಳ ಹಾನಿ ಪರಿಹಾರವನ್ನು ಪಾವತಿಸಲು ಬೆಳೆ ಹಾನಿಯಾದ ರೈತರ ಪಟ್ಟಿ ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಆಯಾ ತಹಶೀಲ್ದಾರರು, ಆಯಾ ಗ್ರಾಮ ಪಂಚಾಯತ್ ಮತ್ತು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ನವೆಂಬರ್ ೧೯ರಂದು ಪ್ರಕಟಿಸಲಾಗಿದೆ.ಪ್ರಕಟಿತ ಪಟ್ಟಿಗೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ತಹಶೀಲ್ದಾರ-ಕೃಷಿ ತೋಟಗಾರಿಕೆ ಇಲಾಖೆಗಳ ತಾಲೂಕಾ ಕಚೇರಿಗಳಲ್ಲಿ ೦೭ ದಿನಗಳೊಳಗಾಗಿ ದಿ:೨೮-೧೧-೨೦೨೪ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದ್ದು, ಜಿಲ್ಲೆಯ ಅಂತರ್ಜಾಲ ವಿಳಾಸ https://vijayapura.nic.inದಲ್ಲಿಯೂ ಸಹ ಪರಿಶೀಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ವಿಜಯಪುರದಲ್ಲಿ ೨ದಿನಗಳ ಉದ್ಯೋಗ ಮೇಳ | ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಡ ಪ್ರತಿಭಾವಂತ ಐಟಿಐ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಚಿವ ಎಂ.ಬಿ.ಪಾಟೀಲ ಅವರ ಆಶಯದಂತೆ ಟೊಯೊಟಾ ಕಂಪನಿ ವಿಜಯಪುರದಲ್ಲಿಯೇ ಎರಡು ದಿನಗಳ ಉದ್ಯೋಗ ಮೇಳ ಆಯೋಜಿಸಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಂಪನಿಗಳು ಉದ್ಯೋಗ ಮೇಳ ಏರ್ಪಡಿಸಲು ಸಚಿವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ ಎಂದು ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಪಾಲಿಟೆಕ್ನಿಕ್ ನಲ್ಲಿ ಇಂದು ಬುಧವಾರದಿಂದ ಆರಂಭವಾಗಿರುವ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಎಂಜನಿಯರಿಂಗ್ ಮತ್ತಿತರ ಕೋರ್ಸುಗಳಿಗೆ ಪ್ರವೇಶ ಪಡೆಯಲಾಗದೆ ಐಟಿಐ ಮತ್ತು ಡಿಪ್ಲೋಮಾ ಓದುತ್ತಾರೆ. ಈ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಇಂಥ ಉದ್ಯೋಗ ಮೇಳಗಳು ನೆರವಾಗಲಿವೆ. ಟೊಯೊಟಾ ಕಿರ್ಲೋಸ್ಕರ್ ಕಂಪನಿಯವರು ಮಾನವೀಯ ಮೌಲ್ಯಗಳೊಂದಿಗೆ ಸಿಬ್ಬಂದಿಯ ಹಿತ ಕಾಪಾಡುವ…
ಇಂದು (ನ.೨೧) ‘ವಿಶ್ವ ಮೀನುಗಾರಿಕಾ ದಿನ’ ನಿಮಿತ್ತ ಈ ವಿಶೇಷ ಲೇಖನ ಲೇಖನಡಾ.ಗೌತಮ್ ಆರ್. ಚೌಧರಿರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ ಉದಯರಶ್ಮಿ ದಿನಪತ್ರಿಕೆ ಸಮುದ್ರ ಬಹುರತ್ನಾ ವಸುಂಧರಾ. ಮುತ್ತು, ರತ್ನ, ವಜ್ರ, ವೈಡೂರ್ಯ ಇತ್ಯಾದಿ ಹಲವು ಅಮೂಲ್ಯ ಹರಳುಗಳಿಗೆ ಆಗರ ಈ ಸಾಗರ. ಜೊತೆಗೇ ಮೀನೂ ಸೇರಿದಂತೆ ದೊಡ್ಡ ಮಟ್ಟದ ಸಮುದ್ರಜೀವಿಗಳ ರಾಶಿಯೂ ಇಲ್ಲಿದೆ. ಇದು ಬಹುದೊಡ್ಡ ಮಾನವ ಸಮುದಾಯವನ್ನೂ ಪೊರೆಯುತ್ತಿದೆ. ಸಮುದ್ರದ ಒಡಲು ಇಷ್ಟು ಮೌಲ್ಯವಾದುದೇನೋ ನಿಜ. ಹಾಗಂತ, ಸಾಗರ ಎಲ್ಲ ಮಾಲಿನ್ಯಕಾರಕ ವಸ್ತುಗಳಿಗೂ ಆಕರ ಎಂದೇನಲ್ಲ. ಮನುಷ್ಯನ ಚಟುವಟಿಕೆಗಳ ಪರಿಣಾಮವಾಗಿ ಈ ರತ್ನಗರ್ಭೆ ಇಂದು ‘ಮಲಿನಗರ್ಭೆ’ಯಾಗುತ್ತಿದೆ. ಹೀಗಾಗದಂತೆ ಎಚ್ಚರಿಸಿ, ವಿವೇಕಯುತ ಮೀನುಗಾರಿಕೆಗೆ ಪ್ರೇರೇಪಿಸುವ ದಿನವೇ ನ.೨೧ ರ ‘ವಿಶ್ವ ಮೀನುಗಾರಿಕಾ ದಿನ’.ಈ ದಿನವು ನಮಗೆ ಸಮುದ್ರದ ಸಂಪತ್ತನ್ನು ರಕ್ಷಿಸುವ ಮತ್ತು ಮೀನುಗಾರಿಕೆ ಉದ್ಯಮದ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಅಗತ್ಯತೆಯನ್ನು ನೆನಪಿಸುತ್ತದೆ. ನಾವು ಒಟ್ಟಾಗಿ ಸುಸ್ಥಿರ ಮೀನುಗಾರಿಕೆ ಪದ್ಧತಿಗಳನ್ನು ಅನುಸರಿಸುವುದು, ಸಮುದ್ರ ಮಾಲಿನ್ಯವನ್ನು ತಡೆಗಟ್ಟುವುದು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂತ ಕನಕದಾಸರ ಸಮಾನತೆಯ ಕಳಕಳಿಯುಳ್ಳ ಚಿಂತನೆಗಳು ಸರ್ವಕಾಲಕ್ಕೂ ಶ್ರೇಷ್ಠವಾಗಿದ್ದು, ಅವರ ಬದುಕೇ ನಮಗೆಲ್ಲ ಆದರ್ಶದ ಹೊತ್ತಿಗೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶ್ರೀ ಭೀರದೇವರ ದೇವಸ್ಥಾನ ಸಮೀತಿ ವತಿಯಿಂದ ಹಮ್ಮಿಕೊಂಡ ಸಂತ ಕನಕದಾಸರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.ದಾಸರು ಹೊಸಗನ್ನಡ ಸಾಹಿತ್ಯ ಕೋಗಿಲೆಯಾಗಿ, ಸಮಾಜದಲ್ಲಿದ್ದ ಮೇಲು-ಕೀಳು, ಬಡವ-ಬಲ್ಲಿದ ಎಂಬ ಬೇಧಭಾವ ದೂರ ಮಾಡಿ ಸಮಸಮಾಜ ನಿರ್ಮಿಸಿದ ವಿಶ್ವಬಂಧು ಸಂತಕವಿಯಾಗಿದ್ದಾರೆ. ಅವರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಅರಕೇರಿ ಮಾತನಾಡಿ, ಸರಳ ಕನ್ನಡದಲ್ಲಿ ಕೀರ್ತನೆಗಳನ್ನು ರಚನೆ ಮಾಡಿ, ಸಮಾಜದಲ್ಲಿರುವ ಮೂಢ ನಂಬಿಕೆ, ಮೌಢ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ ಕನಕರ ಚಿಂತನೆ ಇಂದಿಗೂ ಪ್ರಸ್ತುತ ಎಂದು ಹೇಳಿದರು.ಭೀರದೇವರ ಪಟ್ಟದ ಪೂಜಾರಿ ಗೂಳಪ್ಪ ಪೂಜಾರಿ, ಪೂಜಣ್ಣ ಪೂಜಾರಿ, ಸಮಿತಿಯ ಕಾರ್ಯದರ್ಶಿ ಸುರೇಶ ಗಿರಿಸಾಗರ, ಸದಸ್ಯ ಬಸವರಾಜ ಹೊಸಟ್ಟಿ, ವಿಶ್ವನಾಥ ಕಲಗೊಂಡ, ಗ್ರಾಪಂ…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುಧಾನಿತ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ಸಿಂದಗಿಯ ಆರ್ ಡಿ ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ೨೦೨೪-೨೫ ನೇ ಸಾಲಿನ ಮತದಾರರ ಸಾಕ್ಷರತಾ ಸಂಘದ ಅಡಿಯಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ ಹಾಗೂ ಇಂಗ್ಲೀಷ ಪ್ರಭಂದ ಸ್ಪರ್ಧೆಗಳಲ್ಲಿ ಕುಮಾರಿ ಗುರುಬಾಯಿ ಕರಗಾರ ಹಾಗೂ ಲಕ್ಷ್ಮೀ ತೊಗಾಯಿ ಪ್ರಥಮ ಸ್ಥಾನ ಹಾಗೂ ಇಂಗ್ಮೀಷ ಪ್ರಬಂದ ಸ್ಪರ್ಧೆಯಲ್ಲಿ ಕುಮಾರಿ ಮಲ್ಲಿಕಾ ಪಡೇಕನೂರ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ವಿಧ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು, ಇಎಲ್‌ಸಿ ಕ್ಲಬ್ ಸಂಚಾಲಕ ಬಸವರಾಜ್ ಕುಂಬಾರ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
ಜಗನ್ಮಾತಾ ಶ್ರೀ ಕಾಳಿಕಾದೇವಿ ದೇವಸ್ಥಾನ ಭೂಮಿ ಪೂಜಾ ಸಮಾರಂಭ | ಧರ್ಮಸಭೆ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಕಾಯಕ ತತ್ವದಲ್ಲಿ ನಂಬಿಕೆ ಇಟ್ಟ ವಿಶ್ವಕರ್ಮ ಸಮಾಜದ ಬಾಂಧವರು ಎಲ್ಲರನ್ನೂ ಪ್ರೀತಿಸುವ ವಿಶಾಲ ಹೃದಯ ಹೊಂದಿದವರಾಗಿದ್ದು, ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ದೇವರಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲೊಡಗಿ ಹೇಳಿದರು.ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನ ಸಮಿತಿ ವತಿಯಿಂದÀ ಹಮ್ಮಿಕೊಂಡ ದೇವಸ್ಥಾನ ಭೂಮಿ ಪೂಜಾ ಮತ್ತು ಧರ್ಮಸಭೆ ಸಮಾರಂಭದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಜಗನ್ಮಾತೆ ಶ್ರೀ ಕಾಳಿಕಾದೇವಿ ದೇವಸ್ಥಾನದ ಭೂಮಿ ಪೂಜೆ ನೆರವೇರಿಸಿದ್ದು ನನ್ನ ಸೌಭಾಗ್ಯವಾಗಿದೆ. ದೇವಸ್ಥಾನ ನಿರ್ಮಾಣಕ್ಕಾಗಿ ನನ್ನ ಅನುದಾನದ ಜೊತೆಗೆ ವೈಯಕ್ತಿಕವಾಗಿಯೂ ನಾನು ಆರ್ಥಿಕ ಸಹಾಯ ಮಾಡುತ್ತೇನೆ ಎಂದರು.ನಂತರ ನಡೆದ ಧರ್ಮಸಭೆಯಲ್ಲಿ ಶ್ರೀ ಕಾಳೀಕಾದೇವಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಜಗವೆಲ್ಲ ನಗುತಿರಲು ಜಗದ ನೋವು ನನಗಿರಲಿ ಎಂಬಂತೆ ಎಲ್ಲಾ ಸಮುದಾಯಗಳ ಸಂತೋಷವನ್ನು ಬಯಸುವ…
