ಅಪ್ರತಿಮ ಮಹಿಳೆ
ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ
ಬಚೇಂದ್ರಿ ಪಾಲ್ 1954 ರಲ್ಲಿ ಗದ್ವಾಲನ ನಕೋರಿ ಎಂಬ ಗ್ರಾಮದಲ್ಲಿ ಅತ್ಯಂತ ಸೀಮಿತ ಆರ್ಥಿಕ ಆದಾಯದ ಸ್ಥಿತಿಯ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕಿಶನ್ ಸಿಂಗ್ ಪಾಲ್ ಸಣ್ಣ ಪ್ರಮಾಣದ ವ್ಯಾಪಾರಿಯಾಗಿದ್ದರು. ಇವರು ಗೋದಿಹಿಟ್ಟು ಮತ್ತು ಅಕ್ಕಿಯಂತಹ ದಿನಸಿ ಪದಾರ್ಥಗಳನ್ನು ಭಾರತದಿಂದ ಟಿಬೆಟ್ ಕಡೆಗೆ ಹೇಸರಗತ್ತೆ ಮತ್ತು ಮೇಕೆಗಳ ಮೇಲೆ ಸಾಗಿಸುತ್ತಿದ್ದರು. ಅಂತಿಮವಾಗಿ ಅವರು ಉತ್ತರ ಕಾಶಿಯಲ್ಲಿ ನೆಲೆಸಿದರು. ಅಲ್ಲಿ ಅವರಿಗೆ ವಿವಾಹವಾಗಿ ಐವರು ಮಕ್ಕಳಾದರು. ಇವರಲ್ಲಿ ಬಚೇಂದ್ರಿ ಪಾಲ್ ಮೂರನೆಯವರು. ಬಾಲ್ಯದಲ್ಲಿ ಬಚೇಂದ್ರಿ ಪಾಲ್ ಬಹಳ ಚುರುಕಿನಿಂದ ಇರುತ್ತಿದ್ದರು. ಅವರು ಶಾಲಾ ವ್ಯಾಸಂಗ ಹಾಗೂ ಕ್ರೀಡೆಗಳಲ್ಲಿ ಮುಂದಿದ್ದರು. ಆದರೂ ಕೆಲವೊಮ್ಮೆ ಸಣ್ಣಪುಟ್ಟ ತರಲೆ ಕೃತ್ಯಗಳಿಗಾಗಿ ಒಂಟಿಯಾಗಿರುತ್ತಿದ್ದರಲ್ಲದೆ ದಂಡನೆಗೆ ಗುರಿಯಾಗುತ್ತಿದ್ದರು.
ಬಚೇಂದ್ರಿ ಪಾಲ್ ತಮ್ಮ 12ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪರ್ವತಾರೋಹಣ ಮಾಡಿದರು ತಮ್ಮ ಸಹಪಾಠಿಗಳನ್ನೇ ಶಾಲೆಯಿಂದ ವಿಹಾರ ಪ್ರವಾಸ ಹೋಗಿದ್ದಾಗ 1323 ಅಡಿ ಎತ್ತರದ ಶಿಖರವನ್ನೇರಿದರು ಆಗಲೇ ಕತ್ತಲು ಆವರಿಸಿದ್ದ ಕಾರಣ ಈ ಗುಂಪು ಅವರೋಹಣ ಮಾಡಲಾಗಲಿಲ್ಲ ಆಹಾರ ಇಲ್ಲದೆ ಆ ರಾತ್ರಿ ಅವರು ಕಳೆಯಬೇಕಾಯಿತು ಈ ಅನುಭವವು ಬಚೇಂದ್ರಿಯ ಮನದಲ್ಲಿ ಅಚ್ಚಳಿಯದೆ ಉಳಿದಿತ್ತು. ಸಾಹಸ ಮತ್ತು ಪರ್ವತಗಳ ಬಗ್ಗೆ ಒಲವನ್ನು ಹೆಚ್ಚಿಸಿತು. ಬಹಳಷ್ಟು ಅಡ್ಡಿ ಇತಿಮಿತಿಗಳಿದ್ದರೂ ಬಚೇಂದ್ರಿ ಪಾಲ್ ಶಾಲಾ ವ್ಯಾಸಂಗ ಮುಂದುವರೆಸಿ ಸಂಪೂರ್ಣಗೊಳಿಸಿದರು. ಆ ಶಾಲೆಯ ಪ್ರಾಂಶುಪಾಲರ ಒತ್ತಾಯದ ಮೇರೆಗೆ ಬಚೇಂದ್ರಿಯವರನ್ನು ಅವರ ಹೆತ್ತವರು ಕಾಲೇಜ್ ವಾಸಂಗಕ್ಕೆ ಸೇರಿಸಿದರು. ವ್ಯಾಸಂಗ ಮುಗಿಸಿ ಪದವಿ ಪಡೆಯುವಲ್ಲಿ ಬಚೇಂದ್ರಿ ತಮ್ಮ ಗ್ರಾಮದ ಮೊದಲ ವ್ಯಕ್ತಿಯಾದರು. ತಮ್ಮ ಪದವಿ ವ್ಯಾಸಂಗ ನಡೆಸುತ್ತಿರುವಾಗಲೇ ಬಂದೂಕು ಗುರಿ ಇಡುವ ಸ್ಪರ್ಧೆಯಲ್ಲಿ ಇತರ ಪುರುಷರು
ಮತ್ತು ಮಹಿಳೆಯರನ್ನು ಹಿಂದಿಕ್ಕಿ ಅಗ್ರಸ್ಥಾನ ಗಳಿಸಿಕೊಂಡರು. ಆನಂತರ ಅವರು ಕಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಶಿಕ್ಷಣ ವಿಷಯದಲ್ಲಿ ಪದವಿ ಸಹ ಗಳಿಸಿದರು.
ಬಚೇಂದ್ರಿ ಕುಟುಂಬವು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಕಾರಣ ಅವರಿಗೆ ಆದಷ್ಟು ಬೇಗ ನೌಕರಿ ಪಡೆಯುವ ಅಗತ್ಯವಿತ್ತು. ಆದರೂ ಅವರಿಗೆ ಲಭಿಸುತ್ತಿರುವ ನೌಕರಿಯ ಆಯ್ಕೆ ಅವಕಾಶಗಳು ಅವರಿಗೆ ಸೂಕ್ತವೆನಿಸುತ್ತಿರಲಿಲ್ಲ. ತಾವು ವೃತ್ತಿಪರ ಪರ್ವತಾರೋಹಿ ಆಗುವ ಇಚ್ಛೆಯನ್ನು ತಮ್ಮ ಹೆತ್ತವರೊಂದಿಗೆ ಹಂಚಿಕೊಂಡರು. ಅವರ ಕುಟುಂಬಕ್ಕೆ ಇದು ಸುತಾರಾಂ ಹಿಡಿಸಲಿಲ್ಲ. ಏಕೆಂದರೆ ಅವರು ತಮ್ಮ ಬಂಧು ಬಳಗ ಮತ್ತು ಸ್ಥಳೀಯ ಜನರ ಪ್ರಕಾರ ಮಹಿಳೆಯರಿಗೆ ಶಿಕ್ಷಕಿಯಾಗುವು ದೊoದೇ ಸೂಕ್ತ ಎನ್ನುವ ಅಭಿಪ್ರಾಯವಿತ್ತೇ ವಿನಹ ಪರ್ವತಾರೋಹಣವಲ್ಲ.

ಆದರೂ ಪಟ್ಟು ಹಿಡಿದ ಬಚೇಂದ್ರಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅವರು ನೆಹರೂ ಪರ್ವತಾರೋಹಣ ಸಂಸ್ಥೆ ( NIM )ಸೇರಿದರು. ಆಗ ಅತ್ಯುತ್ತಮ ವಿದ್ಯಾರ್ಥಿ ಎನಿಸಿ ವಿಶ್ವದಲ್ಲಿಯೇ ಅತ್ಯುನ್ನತ ಗೌರಿಶಂಕರ ( ಎವರೆಷ್ಟ )ಶಿಖರ ಇರುವ ಕ್ಷಮತೆಯುಳ್ಳವರು ಎಂದು ಎನಿಸಿಕೊಂಡರು. ಎನ್ಐಎಂ ನಲ್ಲಿ ಇರುವಾಗಲೇ 1982 ರಲ್ಲಿ ಬಚೇಂದ್ರಿ ಪಾಲ್ 21, 000 ಅಡಿ ಎತ್ತರದ ಗಂಗೋತ್ರಿ ಹಾಗೂ 19, 091 ಅಡಿ ಎತ್ತರದ ರುದುಗಾರಿಯಾ ಶಿಖರಗಳನ್ನು ಏರಿದರು. ಆ ಸಮಯದಲ್ಲಿ ಮಹಿಳೆಯರಿಗೆ ಪರ್ವಾತಾರೋಹಣ ತರಬೇತಿ ನೀಡಲೆಂದು ಸ್ಥಾಪನೆಯಾದ ರಾಷ್ಟ್ರೀಯ ಸಾಹಸ ಶಾಲೆಯಲ್ಲಿ ಬೋಧಕ ತರಬೇತುದಾರರಾಗಿ ಬಚೇಂದ್ರಿ ಅವರಿಗೆ ಅವಕಾಶ ಲಭಿಸಿತು.
ಆಗ 1984ರಲ್ಲಿ ಎವರೆಸ್ಟ್ 84 ಎನ್ನಲಾದ ಶಿಖರದ ನಾಲ್ಕನೇ ಆರೋಹಣವನ್ನು ಭಾರತವು ನಿಗದಿಪಡಿಸಿತ್ತು. ಆರು ಮಂದಿ ಭಾರತೀಯ ಮಹಿಳೆಯರು ಹಾಗೂ 11ಮಂದಿ ಪುರುಷರ ಉತ್ಕೃಷ್ಟ ತಂಡದ ಸದಸ್ಯರಲ್ಲಿ ಬಚೇಂದ್ರಿ ಒಬ್ಬರಾಗಿ ಆಯ್ಕೆಯಾದರು. ಈ ತಂಡವು ಎವರೆಸ್ಟ್ ಶಿಖರದ ಆರೋಹಣ ಯತ್ನಿಸಲು ವಿಶೇಷ ಅವಕಾಶ ಪಡೆದಿತ್ತು. ಈ ಆಯ್ಕೆಯಿಂದ ಬಚೇoದ್ರಿ ಗೆ ಅಪಾರ ಖುಷಿ, ಅತ್ಯಾನಂದ ಮತ್ತು ರೋಮಾಂಚನವಾಯಿತು. ಅದೇ 1984ರ ಮಾರ್ಚ್ ತಿಂಗಳಲ್ಲಿ ಈ ತಂಡ ನೇಪಾಳದ ರಾಜಧಾನಿ ಕಟ್ಮಂಡು ನಗರ ಕಡೆಗೆ ಚಲಿಸಿತು. ಇಲ್ಲಿಂದ ತಂಡವು ಮುಂದೆ ಸಾಗಿತು. ಶಿಖರವನ್ನು ಮೊದಲ ಬಾರಿಗೆ ಕಣ್ಣಾರೆ ಕಂಡ ಬಚೇಂದ್ರಿ ಹೀಗೆ ಸ್ಮರಿಸಿಕೊಂಡರು “ಬೆಟ್ಟದ ವಾ ಸಿಗಳಾದ ನಾವು ಪರ್ವತಗಳನ್ನು ಎಂದಿಗೂ ಪೂಜಿಸುತ್ತಿರುವೆವು… ಆದ್ದರಿಂದ ಮೊದಲ ಬಾರಿಗೆ ಎವರೆಷ್ಟ ನೋಡಿದ ನನಗೆ ಬಹಳಷ್ಟು ಭಾವುಕತೆ -ಭಕ್ತಿ ಉಂಟಾದವು”.
ಅದೇ 1984ರ ಮೇ ತಿಂಗಳಲ್ಲಿ ತಂಡವು ತನ್ನ ಆರೋಹಣ ಆರಂಭಿಸಿತು. 1984 ರ ಮೇ 15- 16 ರಾತ್ರಿಯಂದು ಸುಮಾರು 24 ಸಾವಿರ ಅಡಿ ಎತ್ತರದಲ್ಲಿ ಕ್ಯಾಂಪ್ ಮೂರರಲ್ಲಿನ ಶಿಬಿರಗಳೊಂದರಲ್ಲಿ ಪಚೇಂದ್ರಿ ಮತ್ತು ಅವರ ಸಹಚರರು ವಿಶ್ರಮಿಸುತ್ತಿದ್ದರು. ಸುಮಾರು 12:30 ಸಮಯದಲ್ಲಿ ಸುಮಾರು 24 ಸಾವಿರ ಅಡಿ ಎತ್ತರದಲ್ಲಿ ಬಚೇoದ್ರಿ ಗೆ ತಟ್ಟನೆ ಎಚ್ಚರವಾಯಿತು. ಅವರಿಗೆ ಏನೋ ವಸ್ತು ಜೋರಾಗಿ ಹೊಡೆದಂತಿತ್ತು. ಅವರನ್ನು ಕಿವುಡುಗೊಳಿಸುವಷ್ಟು ಜೋರಾಗಿ ಸದ್ದು ಸಹ ಕೇಳಿಸಿತು. ಇದೆ ವೇಳೆ ಅವರಿಗೆ ಬಹಳ ತಣ್ಣನೆಯ ವಸ್ತು ಅವರನ್ನು ಸುತ್ತುವರೆಯುವ ಅನುಭವ ಉಂಟಾಯಿತು. ಕ್ಯಾಂಪ್ ಮೂರರ ಮೇಲಿರುವ ಲೊತ್ಸೆ ಹಿಮನದಿಯಲ್ಲಿರುವ ವಿಶ್ವದ ನಾಲ್ಕನೇಯ ದೊಡ್ಡ ಹಿಮ ಗೋಪುರವೆನಿಸಿದ ಭಾಗ ಕೆಳಗೆ ಜಾರಿ, ಶಿಬಿರಗಳ ಮೇಲೆ ಬಿತ್ತು.ಅಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತು. ಅವರ ಶಿಬಿರದಲ್ಲಿ ಮಲಗಿದ್ದವರು ತಮ್ಮ ಚಾಕುವಿನಿಂದ ಈ ಹಿಮಾಚ್ಚಿದತವನ್ನು ಕೊಯ್ದು ಹೊರಬರಲು ಸಾಧ್ಯವಾಯಿತು. ಆನಂತರ ಈ ಹಿಮವನ್ನು ಅಗೆದು ಅಲ್ಲಿಂದ ಪಾರಾಗಲು ಅವರು ಬಚೇಂದ್ರಿಯ ಸಹಾಯ ಮಾಡಿದರು. ಆ ತಂಡದ ಹಲವು ಸದಸ್ಯರು ಗಾಯಗೊಂಡರು. ಅವರಿಗೆ ಆಘಾತವಾಗಿ ಮೂಲ ಶಿಬಿರಕ್ಕೆ ತ್ವರಿತವಾಗಿ ವಾಪಸ್ ಆದರೂ ತಲೆಗೆ ಗಾಯವಾಗಿದ್ದರೂ ಬಚೇಂದ್ರಿ ಶಿಖರಾರೋಹಣ ಮುಂದುವರಿಸಲು ಇಚ್ಛಿಸಿದರು.
ಆಗ 1984ರ ಮೇ 22ರಂದು ಇನ್ನಷ್ಟು ಮಂದಿ ಪರ್ವತಾರೋಹಕರು ಎವರೆಸ್ಟ್ ಶಿಖರವನ್ನೇರಲು ಬಚೇಂದ್ರಿ ತಂಡದೊಂದಿಗೆ ಸೇರ್ಪಡೆಯಾದರು. ಇದರೊಂದಿಗೆ ಈ ಗುಂಪಿನಲ್ಲಿ ಬಚೇಂದ್ರಿ ಏಕೈಕ ಮಹಿಳೆಯಾಗಿದ್ದರು. 30 ರಿಂದ 40 ಡಿಗ್ರಿ ಸೆಲ್ಸಿಯಸ್ ಕಡಿಮೆಯ ಅತ್ಯಲ್ಪ ಉಷ್ಣಾಂಶ ತಾಸಿಗೆ ನೂರು ಕಿಲೋಮೀಟರ್ ವೇಗದಲ್ಲಿಬೀಸುವ ಕೊರೆಯುವ ತಣ್ಣಗಿನ ಗಾಳಿ – ಇಂತಹ ಸ್ಥಿತಿಯಲ್ಲಿ ಈ ಗುಂಪು ಹಿಮಗಡ್ಡೆಯ ಚಪ್ಪಡಿ ಗೋಡೆಗಳನ್ನು ಏರುತ್ತ ಸದಸ್ಯರು ಪರ್ವತಾರೋಹಣ ಮುಂದುವರಿಸಿದರು. 1984ರ ಮೇ 23ರಂದು ಬಚೇಂದ್ರಿ ಎವರೆಷ್ಟ ಶಿಖರವನ್ನು ಏರಿದರು ಭಾರತೀಯ ಸಮಯ ಒಂದು ಗಂಟೆಗೆ ಅವರು ಇನ್ನೊಬ್ಬ ಆರೋಹಕರೊಂದಿಗೆ ಶಿಖರದ( 29, 084) ಮೇಲೆ ನಿಂತಿದ್ದರು. ಈ ಶಿಖರವು ಇಬ್ಬರು ನಿಲ್ಲಲಾಗದಷ್ಟು ಚಿಕ್ಕದಾಗಿತ್ತು. ಅದರ ಸುತ್ತಲೂ ಸಾವಿರಾರು ಅಡಿಗಳಷ್ಟು ಕಡಿ ದಾದ ಇಳಿಜಾರಿತ್ತು. ಆದ್ದರಿಂದ ಮೊದಲಿಗೆ ಅವರು ಹಿಮದಲ್ಲಿ ತಮ್ಮ ಕೊಡಲಿಗಳನ್ನು ಗಟ್ಟಿಯಾಗಿ ಸಿಕ್ಕಿಸಿ, ಅವರನ್ನು ಸ್ವತಃ ಅದಕ್ಕೆ ಸುಭದ್ರ ಗೊಳಿಸಿಕೊಂಡು ನಂತರ ಶಿಖರದ ಮೇಲೆ ನಿಲ್ಲಲು ಯತ್ನಿಸಿದರು.
ಬಚೇಂದ್ರಿ ತಮ್ಮ ಮೊಣಕಾಲ ಮೇಲೆ ಕುಳಿತು ಧನ್ಯವಾದ ಸೂಚಿಸಲು ಹಿಂದೂ ಪದ್ಧತಿಯಂತೆ ತಮ್ಮ ಗುಡಿಯನ್ನು ಶಿಖರ ಶೃಂಗಕ್ಕೆ ಮುಟ್ಟಿಸಿದರು. ನಂತರ ದುರ್ಗಾ ದೇವಿಯ ಚಿತ್ರ ಹಾಗೂ ಹನುಮಾನ್ ಚಾಲೀಸಾದ ದೇವರ 40 ಶ್ಲೋಕಗಳ ಪವಿತ್ರ ಕಿರು ಹೊತ್ತಿಗೆ ಪ್ರತಿಯೊಂದನ್ನು ಹೊರತೆಗೆದು ಹಿಮದಲ್ಲಿರಿಸಿದರು. 43 ನಿಮಿಷಗಳ ಕಾಲ ಅವರು ಶೃಂಗ ಭಾಗದ ಶಿಖರದಲ್ಲೇ ಇದ್ದು ಅಲ್ಲಿ ಕೆಲವು ಛಾಯಾಚಿತ್ರಗಳನ್ನು ಸೆರೆಹಿಡಿದರು. ಎವರೆಸ್ಟ್ ಶಿಖರವನ್ನೇರಲು
ಬಚೇಂದ್ರಿ ಮೊದಲ ಭಾರತೀಯ ಮಹಿಳೆ ಹಾಗೂ ವಿಶ್ವದಲ್ಲಿ ಐದನೆಯ ಮಹಿಳೆಯಾದರು.
ಅನಂತರ ಅವರು ಶಿಖರ ಅವರೋಹಣ ಮಾಡಿ ಕ್ಷೇಮವಾಗಿ ಮೂಲ ಶಿಬಿರ ತಲುಪಿದರು. ತಮ್ಮ ಈ ಅದ್ಭುತ ಸಾಧನೆಯಿಂದಾಗಿ ಬಚೇಂದ್ರಿಗೆ ವಿಶ್ವದಲ್ಲೆಡೆಯಿಂದ ಹಲವು ಅಭಿನಂದನಾ ಸಂದೇಶಗಳ ಸುರಿಮಳೆಯಾಯಿತು. ಭಾರತದಲ್ಲಿ ಅಂದಿನ ರಾಷ್ಟ್ರಪತಿ ಮತ್ತು ಪ್ರಧಾನಿ ಹಾಗೂ ಪ್ರಮುಖ ಉದ್ಯಮಿ ಹಾಗೂ ಟಾಟಾ ಉದ್ದಿಮೆಯ ಅಂದಿನ ಮುಖ್ಯಸ್ಥ ಜೆ ಆರ್ ಡಿ ಟಾಟಾ ಬಚೇಂದ್ರಿಯವರನ್ನು ಮುಖತ: ಭೇಟಿ ಮಾಡಿ ಅಭಿನಂದಿಸಿದರು.
ವಿಶ್ವದಲ್ಲಿ ಅತ್ಯುನ್ನತ ಶಿಖರವನ್ನು ಏರಿದ ನಂತರ ಬಚೇಂದ್ರಿ ಅದರ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಮುಂದುವರೆದರು. ನಂತರ 1985ರಲ್ಲಿ ಕೇವಲ ಮಹಿಳೆಯರಿದ್ದ ಭಾರತ ನೇಪಾಳ ಪರ್ವತಾರೋಹಣ ತಂಡದ ನೇತೃತ್ವ ವಹಿಸಿ ಮುಖ್ಯಸ್ಥರಾದರು. ಈ ಪರ್ವತಾರೋಣ ಸಾಹಸವು ಏಳು ವಿಶ್ವ ದಾಖಲೆಗಳನ್ನು ಸೃಷ್ಟಿಸಿ ಭಾರತೀಯ ಪರ್ವತಾರೋಹ ನಕ್ಷತ್ರಗಳಲ್ಲಿ ನೂತನ ಮಾನ ದಂಡಗಳನ್ನು ಕಲ್ಪಿಸಿತು. 9 ವರ್ಷಗಳ ನಂತರ 1994 ರಲ್ಲಿ ಸಾಹಸ ದೋಣಿಯಲ್ಲಿ ( Rafting) ಹಾಯುವ ಮಹಿಳಾ ತಂಡದ ಮುಂಚೂಣಿಯಲ್ಲಿದ್ದರು. ಈ ತಂಡವು ಗಂಗಾ ನದಿಯುವುದಕ್ಕೂ ಸಾಗಿ ಹರಿದ್ವಾರದಿಂದ ಕಲ್ಕತ್ತಾ ವರೆಗೆ 2500 ಕಿಲೋಮೀಟರ್ ದೂರ ಕ್ರಮಿಸಿತು. ಪ್ರಸ್ತುತ ಅವರು ಟಾಟಾ ಉದ್ದಿಮೆ ಅಂಗಸಂಸ್ಥೆಯಾದ ಟಾಟಾ ಸ್ಟೀಲ್ ಸಾಹಸ ಕ್ರೀಡೆ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಟಾಟಾ ಸ್ಕೀಲ್ ಉದ್ದಿಮೆ ವ್ಯವಸ್ಥಾಪಕ ತಂಡಗಳಿಗೆ ಕಾಲ್ನಡಿಗೆ ಪ್ರಯಾಣ ಮತ್ತು ಪರ್ವತಾರೋಹಣ ಮತ್ತು ತೆಪ್ಪ ದೋಣಿ ಪ್ರಯಾಣ ಶಿಬಿರಗಳಲ್ಲಿ ಸಮಯ ಕಳೆದು, ಪ್ರತಿಕೂಲಕರ ಸ್ಥಿತಿಗಳಲ್ಲಿ ಬದುಕುಳಿಯುವ ಕೌಶಲ್ಯಗಳಂತಹ ಸಾಹಸ ಚಟುವಟಿಕೆಗಳಲ್ಲಿ ತರಬೇತಿ ನೀಡುವುದು ಅವರ ಕಾರ್ಯ ಚಟುವಟಿಕೆಯಾಗಿದೆ.
ಬಾಕ್ಸ್
ಗೌರವಗಳು ಮತ್ತು ಪ್ರಶಸ್ತಿಗಳು
- ಮೌಂಟೇನೇರಿಂಗ್ ಫೌಂಡೇಶನ್ ಆಫ್ ಇಂಡಿಯಾದಿಂದ ಪರ್ವತಾರೋಹಣದಲ್ಲಿ ಶ್ರೇಷ್ಠತೆಗಾಗಿ ಚಿನ್ನದ ಪದಕ – 1984
- ಪದ್ಮಶ್ರೀ ಪ್ರಶಸ್ತಿ -1984
- ಉತ್ತರ ಪ್ರದೇಶ ಸರ್ಕಾರದ ಶಿಕ್ಷಣ ಇಲಾಖೆಯಿಂದ ಚಿನ್ನದ ಪದಕ – 1985
- ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿ – 1986
- ಕಲ್ಕತ್ತಾ ಲೇಡಿಸ್ ಸ್ಟಡಿ ಗ್ರೂಪ್ ಪ್ರಶಸ್ತಿ – 1986
- ಇವರ ಸಾಧನೆ ಗಿನಿಸ್ ವಿಶ್ವದಾಖಲೆಗಳಲ್ಲಿ ಪಟ್ಟಿ ಮಾಡಲಾಗಿದೆ – 1990
- ಭಾರತ ಸರ್ಕಾರದಿಂದ ರಾಷ್ಟ್ರೀಯ ಸಾಹಸ ಪ್ರಶಸ್ತಿ – 1994
- ಉತ್ತರ ಪ್ರದೇಶ ಸರ್ಕಾರದಿಂದ ಯಶ್ ಭಾರತಿ ಪ್ರಶಸ್ತಿ – 1995
- ಹೇಮಾವತಿ ನಂದನ್ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಗೌರವ ಪದವಿ – 1997
- ಸಂಸ್ಕೃತಿ ಸಚಿವಾಲಯ ಮಧ್ಯಪ್ರದೇಶ ಸರ್ಕಾರದ ಮೊದಲ ವೀರಾಂಗಣ ಲಕ್ಷ್ಮೀಬಾಯಿ ರಾಷ್ಟ್ರೀಯ ಪ್ರಶಸ್ತಿ.- 2013-2014


