ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಹಿಲ್ ಟಾಪ್ ಕಾಲೋನಿಯಲ್ಲಿ ಶನಿವಾರ ನಡೆದ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಹೆಚ್ಚು ಹೆಚ್ಚು ಕ್ರೀಡಾಕೂಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಲಗೊಳ್ಳುತ್ತದೆ ಎಂದರು.
ಕ್ರಿಕೆಟ್ ಪಂದ್ಯಕ್ಕೆ ಟಾಸ್ಕ್ ಮೂಲಕ ಚಾಲನೆ ನೀಡಿ ಮಾತನಾಡಿದ ಮಹಿಪಾಲರೆಡ್ಡಿ ಡಿಗ್ಗಾವಿ ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಿ ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸೋಲು ಗೆಲುವು ಲೆಕ್ಕಿಸದೆ ಮುಂದುವರೆದರೆ ಸಹಬಾಳ್ವೆಗೆ ಸಹಕಾರಿಯಾಗುತ್ತದೆ ಎಂದರು.
ಪ್ರಮುಖರಾದ
ಪುರಸಭೆ ಸದಸ್ಯ ರಹೀಮಾನ ಪಟೀಲ್ ಯಲಗೋಡ, ರಾಘವೇಂದ್ರ ಕವಲ್ದಾರ, ಪತ್ರಕರ್ತ ಬಸನಗೌಡ ಪಾಟೀಲ ಪತ್ತೇಪೂರ, ರಂಗಪ್ಪ ವಡ್ಡರ, ಸಚಿನ್ ದೊರೆ, ಹನೀಫ್ ಸಾಸನೂರ, ಶಶಿಕುಮಾರ್ ಮ್ಯಾಗೇರಿ, ಶಿವು ಮಲ್ಲಿಬಾವಿ, ಸೋಹೆಲ್ ಸಾಸನೂರ ಕ್ರೀಡಾಪಟುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

