ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಚದುರಂಗ(ಚೆಸ್) ಆಟವು ನಮ್ಮ ಬೌದ್ಧಿಕ ಸಾಮರ್ಥ್ಯ ಹೆಚ್ಚಳಕ್ಕೆ ಸಹಕಾರಿಯಾದ ಕ್ರೀಡೆಯಾಗಿದೆ ಎಂದು ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಬಿ.ಪಾಟೀಲ ಹೇಳಿದರು.
ಪಟ್ಟಣದ ಜ್ಞಾನಜ್ಯೋತಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂದಗಿ, ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪ್ರಿನ್ಸ್ ಪಬ್ಲಿಕ್ ಹೈಯರ್ ಪ್ರೈಮರಿ ಸ್ಕೂಲ್ ಹೊಸನಗರ ಇವುಗಳ ಅಡಿಯಲ್ಲಿ 2024–25 ನೇ ಸಾಲಿನ ದೈಹಿಕ ಶಿಕ್ಷಣ ಶಿಕ್ಷಕರ ವಿಷಯ ವೇದಿಕೆಯ ಚೆಸ್ ಕ್ರೀಡೆಯ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಚೆಸ್ ಎಂದು ಕರೆಯಲ್ಪಡುವ ಚದುರಂಗ ಮೂಲತ ಭಾರತದ ಕ್ರೀಡೆಯಾಗಿದೆ. ಈ ಆಟದ ಪ್ರತಿಭಾನ್ವಿತ ಆಟಗಾರರರಾದ ವಿಶ್ವನಾಥನ ಆನಂದ, ಕೊನೆರು ಹಂಪಿ, ಗುಕೇಶ ದೊಮ್ಮರಾಜು ಭಾರತವನ್ನು ಪ್ರತಿನಿಧಿಸುವ ಮೂಲಕ ದೇಶದ ಹೆಸರನ್ನು ಅಜರಾಮರವಾಗಿಸಿದ್ದಾರೆ ಎಂದರು.
ಅಂತರಾಷ್ಟ್ರೀಯ ಚೆಸ್ ತೀಪುರ್ಗಾರ ಶಿವಮೊಗ್ಗಾದ ಪ್ರಾಣೇಶ ಯಾದವ್ ಮಾತನಾಡಿ, ಚದುರಂಗ ಆಟದ ಹಿನ್ನೆಲೆ, ಆಟ ಬೆಳೆದು ಬಂದ ಬಗೆ, ವೃಶಿಷ್ಟ್ಯತೆ, ಆಡುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ನಂತರ ಕಾರ್ಯಾಗಾರದಲ್ಲಿ ತಾಲ್ಲೂಕಿನ ದೈಹಿಕ ಶಿಕ್ಷಕರ ಬಳಗದಿಂದ ಸನ್ಮಾನಿಸಲ್ಪಟ್ಟರು.
ಕಾರ್ಯಕ್ರಮದ ಗೌರವಾಧ್ಯಕ್ಷ ಎನ್.ಆರ್.ಚವ್ಹಾಣ, ವಿಷಯವೇದಿಕೆಯ ಅಧ್ಯಕ್ಷ ಆರ್.ಎಂ. ಬಿರಾದಾರ , ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಎಮ್. ಕೊಟ್ಟವಿ, ಚಿತ್ರಕಲಾ ವಿಷಯ ವೇದಿಕೆ ಅಧ್ಯಕ್ಷ ಶರಣಪ್ಪ ಕೇಸರಿ, ದೈಹಿಕ ಶಿಕ್ಷಕರುಗಳಾದ ಎ.ಎಸ್.ಪತ್ತಾರ(ಜಾಲವಾದ), ರಮೇಶ ಬಿರಾದಾರ, ಎಸ್.ಸಿ. ಕೊಣ್ಣೂರ, ಪಿ.ಎಸ್.ಹದಗಲ್ ,ಜಿ.ಕೆ.ಕುಳೇಕುಮಟಗಿ, ಬಿ.ಎನ್.ಯಾತನೂರ, ಎಸ್.ಎಸ್.ನವಲಿ, ಎಂ.ಎನ್. ಬಿರಾದಾರ, ಎಸ್.ಎಸ್.ಹೂಗಾರ, ಜ್ಯೋತಿ ಬಾಗೇವಾಡಿ, ಮಹಾಲಕ್ಷ್ಮಿ ಗೋಡ್ಯಾಳ, ಅಖಿಲ್ ಭಗವಾನ್, ಸೌಭಾಗ್ಯ ದೇಸಾಯಿ, ಅಶ್ವಿನಿ ಗುಂದಗಿ, ರೇಣುಕಾ ಬಗಲಿ, ಸಂಜೀವ ಜಾಧವ, ಸದಾಶಿವ ರೊಳ್ಳಿ, ಭುವನೇಶ್ವರಿ ಒಂಟೆತ್ತೀನ, ಶ್ರೀದೇವಿ ಬಾಗೇವಾಡಿ, ಅಶ್ವಿನಿ ಹೆಬ್ಬಾಳ, ಸರಸ್ವತಿ, ವಿನಯಾ, ವಿದ್ಯಾ, ಶೃತಿ ಇದ್ದರು.

