Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜಿಲ್ಲೆಯಾದ್ಯಂತ ನನ್ನ ಕಣ್ಣು ಎಂಬ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ಜೊತೆಗೆ ಕನ್ನಡಕ ನೀಡುವ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಟೈಟಾನ್ ಕಂಪನಿಯವರ ಕಾರ್ಯ ಶ್ಲಾಘನೀಯ ಎಂದು ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎಂ.ಎಸ್.ಕವಡಿಮಟ್ಟಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆ, ಟೈನಾನ ಕಂಪನಿ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.ಸರ್ಕಾರಿ ಶಾಲೆಯಲ್ಲಿ ಓದುವ ಬಹುತೇಕ ಮಕ್ಕಳು ಕಡು ಬಡವರಿರುತ್ತಾರೆ. ಅಂಥವರು ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವದಿಲ್ಲ. ಅಂಥವರನ್ನು ಗುರುತಿಸಿ ಉಚಿತ ಚಿಕಿತ್ಸೆ ನೀಡುವದು ಪುಣ್ಯದ ಕಾರ್ಯ ಎಂದರು.ಬಿ.ಐ.ಇ.ಆರ್.ಟಿ ಯ ಎಸ್.ಎಸ್.ರಾಮತಾಳ ಅವರು ಮಾತನಾಡಿ ಈ ಶಿಬಿರದಿಂದ ಅದೆಷ್ಟೋ ಬಡ ಮಕ್ಕಳಿಗೆ ಸಹಾಯವಾಗಿದೆ. ಮಕ್ಕಳಿಗೆ ಮಾತ್ರವಲ್ಲದೇ ಶಿಕ್ಷಕರಿಗೆ, ಬಿಸಿಯೂಟದ ಸಿಬ್ಬಂದಿಗೂ ಸಹ ತಪಾಸಣೆ, ಚಿಕಿತ್ಸೆ, ಕನ್ನಡಕ ಜೊತೆಗೆ ಸಾವಿರ ರೂಗಳನ್ನೂ ಸಹ…
ಮಾನವ ಸರಪಳಿ: ನಾವೀನ್ಯತೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ಬಾಗಲಕೋಟೆ ಜಿಲ್ಲೆಯ ಗಡಿ ಭಾಗದ ಆಲಮಟ್ಟಿಯವರೆಗಿನ ಸುಮಾರು ೬೨ ಕಿ.ಮೀ.ವರೆಗೆ ಯಶಸ್ವಿಯಾಗಿ ಹಮ್ಮಿಕೊಂಡ ಮಾನವ ಸರಪಳಿ ನಿರ್ಮಾಣಕ್ಕೆ ಮಾನವ ಸರಪಳಿ ನಾವೀನ್ಯತೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ.ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಬೀದರನಿಂದ ಚಾಮರಾಜನಗರವರೆಗೆ ಮಾನವ ಸರಪಳಿ ನಿರ್ಮಾಣ ಹಾಗೂ ವಿಶಿಷ್ಟ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಲ್ಡ್ ಆಫ್ ಬುಕ್ ರೆಕಾರ್ಡ ಸೇರ್ಪಡೆಗೊಂಡಿದ್ದು, ಈ ಪೈಕಿ ವಿಜಯಪುರ ಜಿಲ್ಲೆಗೆ ನಾವೀನ್ಯತೆ ವಿಭಾಗದಲ್ಲಿ ಪ್ರಥಮ ಸ್ಥಾನ ಸಂದಿರುವ ಹಿನ್ನಲೆಯಲ್ಲಿ ನವೆಂಬರ್ ೨೬ ರಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಂದ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಶಸ್ತಿ ಸ್ವೀಕರಿಸಿದರು.
ನಿಜವಾದ ’ಉದಯರಶ್ಮಿ’ ಪತ್ರಿಕೆ ವರದಿಯ ನಿರೀಕ್ಷೆ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದಲ್ಲಿ ಡಿ.೨ ರಂದು ಹಮ್ಮಿಕೊಂಡಿರುವ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮನಗೂಳಿ ಪಟ್ಟಣದ ಸಾಹಿತಿ, ಶಿಕ್ಷಕ ಸಿದ್ದರಾಮ ಈರಗೊಂಡಪ್ಪ ಬಿರಾದಾರ ಅವರನ್ನು ಬುಧವಾರ ಸಂಜೆ ಸ್ಥಳೀಯ ಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ತಾಲೂಕು ಕಸಾಪ ಕಾರ್ಯಾಲಯದಲ್ಲಿ ಜರುಗಿದ ಆಯ್ಕೆ ಸಮಿತಿಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಎಂಟು ಸಾಹಿತಿಗಳು ಅರ್ಜಿ ಸಲ್ಲಿಸಿದ್ದರು. ಎಂಟು ಅರ್ಜಿಗಳನ್ನು ಆಯ್ಕೆ ಸಮಿತಿ ಪರಿಶೀಲನೆ ಮಾಡಿದಾಗ ಸಿದ್ದರಾಮ ಬಿರಾದಾರ ಉಳಿದ ಸಾಹಿತಿಗಳಿಗಿಂತ ಸಾಹಿತಿಕವಾಗಿ, ಶೈಕ್ಷಣಿಕವಾಗಿ ಸೇರಿದಂತೆ ಇತರೇ ವಿಷಯಗಳ ಕುರಿತು ಹೆಚ್ಚು ಪುಸ್ತಕಗಳನ್ನು ರಚಿಸಿದ್ದು ಪರಿಗಣಿಸಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮ್ಮೇಳನ ಸರ್ವಾಧ್ಯಕ್ಷತೆಗೆ ಸಿದ್ದರಾಮ ಬಿರಾದಾರ ಅವರ ಹೆಸರನ್ನು ಹಾಸಿಂಪೀರ ವಾಲೀಕಾರ,…
ಸಿಂದಗಿ ಪುರಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಒಳಚರಂಡಿ ಕಾಮಗಾರಿಗೆ ನೀಡಿದ ಅವಧಿ ಮುಗಿದರೂ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಅವರಿಗೆ ನೊಟೀಸ್ ನೀಡಿ ಎಂದು ಈಗಾಗಲೇ ತಿಳಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ನಿಮಗೆ ಯಾವುದಾದರೂ ತೊಂದರೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಾಮಗಾರಿ ಮಾಡಿದರೇ ಆಗದು ಎಂದು ಒಳಚರಂಡಿ ಇಲಾಖೆಯ ಅಧಿಕಾರಿ ಎಂ.ಎಲ್.ಹೋನಕಟ್ಟಿ ಅವರಿಗೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಎಚ್ಚರಿಸಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಮಾಡಲಾಗಿದೆ. ನೀವು ಅಂದು ಎಲ್ಲಿಗೆ ರಸ್ತೆ ಇದೆಯೋ ಅದರ ಪಕ್ಕದಲ್ಲಿ ಅರಣ್ಯ ಇಲಾಖೆ ಗಿಡಗಳು ಹಚ್ಚಿದರೆ, ವಿದ್ಯುತ್ ಇಲಾಖೆಯವರು ವಿದ್ಯುತ್ ಕಂಬಗಳು ಪಕ್ಕದಲ್ಲಿ ಹಾಕಿದ್ದಾರೆ. ಹಾಕುವ ಮುಂಚೆ ಯೋಚಿಸಿದರೆ ಇಂದು ರಸ್ತೆ ಮಧ್ಯದಲ್ಲಿ ಕಂಬಗಳು ಬರುತ್ತಿರಲಿಲ್ಲ. ಇದೀಗ ರಸ್ತೆಯ ಮೇಲಿರುವ ಕಂಬಗಳನ್ನು ಸ್ಥಳಾಂತರಿಸಬೇಕಾದರೆ ಅದಕ್ಕೆ ಪುರಸಭೆ ಹಣ ಪಾವತಿಸಬೇಕು…
ಸಿಂದಗಿ ಅಗಸಿ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣವನ್ನು ಸೌಂದರ್ಯೀಕರಣಗೊಳಿಸಲು ಮತ್ತು ಧೂಳ ಮುಕ್ತ ನಗರವನ್ನಾಗಿ ಮಾಡಲು ನಾನು ಪಣ ತೊಟ್ಟಿದ್ದೇನೆ. ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಮೋರಟಗಿ ರಸ್ತೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಜಯಪುರ ಅನುಷ್ಠಾನ ಕೆ.ಆರ್.ಐ.ಡಿ.ಎಲ್. ಸಿಂದಗಿ ೨೦೨೩-೨೪ ನೇ ಸಾಲಿನ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಅಂದಾಜು ರೂ ೨೫ ಲಕ್ಷಗಳಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಅಗಸಿ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಸಿಂದಗಿ ಜನತೆಯ ಬಹುದಿನದ ಬೇಡಿಕೆಯಾಗಿರುವ ಅಗಸಿ ಮಹದ್ವಾರ ಬಾಗಿಲು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಾಣಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಪಟ್ಟಣದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, ೨೪*೭ ನೀರಿನ ಯೋಜನೆ, ರಸ್ತೆಯ ವಿದ್ಯುತ್ ಕಂಬಗಳ ನಿರ್ಮಾಣ ಸೇರಿದಂತೆ ಹಲವು ಮೂಲಭೂತ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ಉಜ್ಜಯಿನಿ ಸದ್ಧರ್ಮ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ. ರುದ್ರಮುನಿ ಶಿವಾಚಾರ್ಯರ ೪೭ನೇ ಪುಣ್ಯಾರಾಧನೆ ನಿಮಿತ್ತ ನಂ.೨೮ ರಿಂದ ಡಿ.೯ ರವರೆಗೆ ಪ್ರತಿದಿನ ರಾತ್ರಿ ೮ ಗಂಟೆಗೆ ಉಜ್ಜಯಿನಿ ಶ್ರೀಮದ್ ಸಿದ್ದಲಿಂಗ ಜಗದ್ಗುರುಗಳ ಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ.ಪುರಾಣ ಪ್ರಾರಂಭೋತ್ಸವದ ದಿವ್ಯ ಸಾನಿಧ್ಯವನ್ನು ಮುಧೋಳ ಗಂಜಿಗಟ್ಟಿ ಶ್ರೀಮಠದ ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯರು, ಮಳ್ಳಿಯ ರುದ್ರಮುನಿ ಶಿವಾಚಾರ್ಯರು ವಹಿಸಿಕೊಳ್ಳುವರು. ಕಾರ್ಯಕ್ರಮದ ನೇತೃತ್ವವನ್ನು ರೋಡಗಿ ವಿರಕ್ತಮಠದ ಅಭಿನವ ಶಿವಲಿಂಗೇಶ್ವರ ಸ್ವಾಮಿಗಳು, ಕಡಕೋಳ ಹಿರೇಮಠದ ರಾಜಗುರು ಮಹಾಲಿಂಗ ಸ್ವಾಮಿಗಳು, ಕೋರವಾರ ಚೌಕಿಮಠದ ಸದ್ಗುರು ಶಂಕರಾ ನಂದ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಚಳಕಾಪುರ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಮಹಾಸ್ವಾಮಿಗಳು, ನಾಲತವಾಡ ಹಿರೇಮಠದ ಶ್ರೀಗಳು, ಖಾನಾಪುರ ಶ್ರೀಮಠದ ಶ್ರೀಗಳು, ಹೊನ್ನಳ್ಳಿ ಶ್ರೀಮಠದ ಶ್ರೀಗಳು, ಅಲ್ಲಾಪುರ್ ಶ್ರೀ ಮಠದ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಉದ್ದಿಮೆದಾರ ವೆಂಕಟೇಶ ಗುತ್ತೇದಾರ, ಚಿಕ್ಕರೂಗಿ ಈರಣ್ಣ ಶಾಸ್ತ್ರಿಗಳು ನೆರವೇರಿಸಲಿದ್ದಾರೆ. ಪುರಾಣ ಪ್ರವಚನವನ್ನು ಅಮರೇಶ್ವರ ಶಾಸ್ತ್ರಿಗಳು ಉಣಬಡಿಸುವರು. ಸಂಗೀತ ಸೇವೆಯನ್ನು ಪಡದಳ್ಳಿ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕೊಂಡಗೂಳಿ ಗ್ರಾಮದಲ್ಲಿ ಹವಾಮಾನ ವೈಪರಿತ್ಯದಿಂದ ಹಾಳಾದ ತೊಗರಿ ಬೆಳೆಯ ಜಮೀನುಗಳಿಗೆ ಸಿಂದಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ವೈ.ಸಿಂಗೆಗೋಳ ಹಾಗೂ ವಿಮೆ ಕಂಪನಿಯ ರಾಜೇಶ ಭೇಟಿ ನೀಡಿ ವೀಕ್ಷಿಸಿ, ಪರಿಶೀಲಿಸಿದರು.ಕೊಂಡಗೂಳಿ ರೈತ ಸಮುದಾಯ ನಿನ್ನೆಯಷ್ಟೇ ಗ್ರಾಮದ ತೊಗರಿ ಬೆಳೆ ಹವಾಮಾನ ವೈಪರಿತ್ಯದಿಂದ ಸಂಪೂರ್ಣ ಹಾಳಾದ ಕುರಿತು ಹಾಗೂ ತಕ್ಷಣವೇ ರೈತರಿಗೆ ಬೆಳೆ ಹಾನಿಗೆ ಸಂಪೂರ್ಣ ವಿಮೆ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದ್ದರು. ರೈತರ ಮನವಿಗೆ ಸ್ಪಂದಿಸಿದ ಸಹಾಯಕ ಕೃಷಿ ನಿರ್ದೇಶಕ ಸಿಂಗೆಗೋಳ ಬುಧವಾರ ಬೆಳಿಗ್ಗೆ ವಿಮೆ ಕಂಪನಿಯ ಸಿಬ್ಬಂದಿಯೊಂದಿಗೆ ಕೊಂಡಗೂಳಿ ಗ್ರಾಮದ ತೊಗರಿ ಬೆಳೆಗಳು ಹಾಳಾದ ಜಮೀನುಗಳಿಗೆ ತೆರಳಿ ವೀಕ್ಷಣೆ ಮಾಡಿ, ಪರಿಶೀಲಿಸಿದರು. ನಂತರ ರೈತರೊಂದಿಗೆ ಮಾತನಾಡಿ, ಬೆಳೆಯ ವಾಸ್ತವಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ರೈತರ ನೆರವಿಗೆ ನಿಂತು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ರೈತರಾದ ವೀರಘಂಟಯ್ಯಾ ಗದ್ದಿಗೆಮಠ, ಸಿದ್ದಣ್ಣ ಸಿಂದಗೇರಿ, ಅಪ್ಪಾಸಾಹೇಬ ಬಸರಕೋಡ, ಈರಣ್ಣ ತಾವರಖೇಡ, ಕಾಶೀಲಿಂಗ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಜಗದ ಆದಿ, ಮೂಲವನ್ನು ಆಧ್ಯಾತ್ಮಿಕ, ವೈಚಾರಿಕ ತಳಹದಿಯ ಮೇಲೆ ತಿಳಿಸುವ ವಿಧಾನಗಳೇ ಪುರಾಣ, ಪ್ರವಚನ ಸತ್ಸಂಗಗಳೇನಿಸುತ್ತವೆ ಎಂದು ಎಮ್ಮಿಗನೂರ ಹಂಪಿಸಾವಿರದೇವರ ಮಠದ ವಾಮದೇವಶ್ರೀಗಳು ಹೇಳಿದರು.ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ೧೨ ನೇ ವರ್ಷದ ಕಾರ್ತೀಕೋತ್ಸವ ಅಂಗವಾಗಿ ಮಂಗಳವಾರ ಆರಂಭಗೊಂಡ ಮಹಾದಾಸೋಹಿ ಕಲಬುರ್ಗಿ ಶ್ರೀಶರಣಬಸವೇಶ್ವರ ಮಹಾಪುರಾಣಕ್ಕೆ ಚಾಲನೆ ನೀಡಿ ಮಾತನಾಡಿದರು.ಜಗದ ಉದಯಕ್ಕೆ ಕಾರಣರಾದ ದೇವರನ್ನು ಪರಿಚಯಿಸುವ ಜ್ಞಾನವೇ ಆಧ್ಯಾತ್ಮ. ನಮಗೆ ಭೂಮಿ, ನೀರು, ಬೆಂಕಿ, ವಾಯು, ಆಕಾಶಗಳ ಪರಿಚಯವಿದೆ. ಆದರೆ ನಮಗೆ ಸೃಷ್ಟಿಕರ್ತ ಭಗವಂತನ ನೇರ ಪರಿಚಯವೇ ಇಲ್ಲ. ಇಂದಿಗೂ ಸೃಷ್ಟಿಕರ್ತ ಭಗವಂತ ಅಪರಿಚಿತನೇ ಆಗಿದ್ದು, ಇವನನ್ನು ಕಾಣುವ ವಿವಿಧ ವಿಧಾನಗಳನ್ನು ತಿಳಿಸುವ ಅಪರಿಮಿತ, ಅಗಾಧ, ಅನಂತ ಜ್ಞಾನದ ವಿಚಾರಗಳೇ ಪುರಾಣ, ಪ್ರವಚನಗಳಾಗಿವೆ ಎಂದರು.ಬಸವನಬಾಗೇವಾಡಿ ಒಡೆಯರ ಹಿರೇಮಠದ ಶಿವಪ್ರಕಾಶಶ್ರೀಗಳು ಪ್ರವಚನಕಾರರಾಗಿ ಆಗಮಿಸಿ, ಪುರಾಣ, ಪ್ರವಚನ, ಸತ್ಸಂಗಗಳು ಭಾರತೀಯ ಸಂಸ್ಕೃತಿ ಹಾಗೂ ನಮ್ಮೇಲ್ಲಾ ಧಾರ್ಮಿಕ ಆಚರಣೆಗಳ ಅಡಿಪಾಯಗಳಾಗಿವೆ ಎಂದು ನುಡಿದರು.ಸಗರದ ಮರುಳ ಮಹಾಂತಶ್ರೀಗಳು ಆಶೀರ್ವಚನ ನೀಡಿದರು. ಹಾಗೂ ಸ್ಥಳೀಯ ಸದಯ್ಯನಮಠದ ವೀರಗಂಗಾಧರಶ್ರೀಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆನಂದವನ್ನು ಸಂಗ್ರಹಿಸಬೇಕಾದರೆ ಪುಸ್ತಕಗಳನ್ನು ಸಂಗ್ರಹಿಸು, ಪುಸ್ತಕಗಳು ಆಯಾಕಾಲದ ಸಂಸ್ಕೃತಿಯ ಜೀವಂತ ಪ್ರತೀಕ, ಗತಕಾಲದ ಆತ್ಮ ಪುಸ್ತಕಗಳಲ್ಲಿದೆ ಎ೦ದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರುಅವರು ನ.೨೬ ರಂದು ಜಿಲ್ಲಾಧಿಕಾರಿ ಕಚೇರಿ ಸಭಾಗಂಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕನ್ನಡ ಪುಸ್ತಕ ಪರಿಷತ್ ಸಮ್ಮೇಳನ ವಿಜಯಪುರದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು .ಸಾಹಿತಿ ಶಂಕರ ಬೈಚಬಾಳ ಮಾತನಾಡಿ ಲೇಖಕ, ಪ್ರಕಾಶಕ , ಓದುಗರ ನಡುವೆ ಪರಿಷತ್ತು ವೈಶಿಷ್ಠ್ಯ ಪೂರ್ಣ ಚಟುವಟಿಕೆಗಳನ್ನು ಮಾಡುತ್ತಿದ್ದು, ಡಿಸೆಂಬರ್ ೧ ರಂದು ನಗರದ ಚೇತನಾ ಕಾಲೇಜು ಆವರಣದಲ್ಲಿ ನಡೆವ ಕನ್ನಡ ಪುಸ್ತಕ ಪರಿಷತ್ತಿನ ಸಮ್ಮೇಳನಕ್ಕೆ ಆಗಮಿಸಲು ಆಸಕ್ತರೆಲ್ಲರಿಗೂ ಆಮಂತ್ರಣ ನೀಡಿ ಸಮ್ಮೇಳನಕ್ಕೆ ಬರಲು ವಿನಂತಿಸಿದರು.ಸಭೆಯಲ್ಲಿ ಡಿ. ಜೊಶೇಫ್ , ಸಿದ್ಧರಾಮ ಬಿರಾದಾರ, ಜೂನಿಯರ್ ಶಿವರಾಜಕುಮಾರ, ಅಡಿವಿಸ್ಟಾಮಿ ಕೊಳಮಲಿ, ಕೆ.ಎಸ್.ಬಾಗೇವಾಡಿ, ಗಂದನಗೌಡ ಕೆಸರಪೆಂಟಿ, ಮುಂತಾದವರು ಇದ್ದರು .
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ದಿನದಲ್ಲಿ ಎಲ್ಲ ವ್ಯಕ್ತಿಗಳು ಎಲ್ಲಾ ವಿಷಯವನ್ನು ಸಕಾರಾತ್ಮಕವಾಗಿ ತಗೆದುಕೊಳ್ಳಬೇಕು. ಉತ್ತೀರ್ಣ ಅನುತ್ತೀರ್ಣ ಎಂಬ ವಿಷಯವನ್ನು ಬದಿಗಿಟ್ಟು ಸುಂದರ ಭವಿಷ್ಯಕ್ಕೆ ನಾವೆಲ್ಲರೂ ಬೆರತುಕೊಳ್ಳಬೇಕೆಂದು ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಹೇಳಿದರು.ಅವರು ನಗರದ ಡಾಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಲಯನ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಆಯೋಜಿಸಿದ ೧೯ ಒಳಗಿನ ಬಾಲಕ ಬಾಲಕಿಯರ ಆಹ್ವಾನಿತ ಫುಟ್ಬಾಲ್ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.ಸಮಾಜದಲ್ಲಿ ಕೆಳವರ್ಗದವರೊಂದಿಗೆ ಬೆರೆಯಬೇಕು. ಅವರಲ್ಲಿರುವ ಪ್ರತಿಭೆಗೆ ನಾವು ಬೆಂಬಲಿಸಬೇಕು. ಸಮಾಜದಲ್ಲಿ ತಂದೆ ತಾಯಿ ಮಹತ್ವ ದೊಡ್ಡದಾಗಿದೆ, ಅವರು ನೀಡುವ ಒಳ್ಳೆಯ ಸಂಸ್ಕಾರ ಅರಿತುಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಅದಾದ ನಂತರ ಗುರುವಿನ ಮಾರ್ಗದೊಂದಿಗೆ ನಮ್ಮ ಹೆಜ್ಜೆ ಇತಿಹಾಸದತ್ತ ಸಾಗಬೇಕು. ಒಟ್ಟಿನಲ್ಲಿ ನಮ್ಮ ಜೀವನ ಸಮಾಜಕ್ಕೆ ಮಾದರಿಯಾಗುವಂತೆ ಬೆಳೆಯಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಫಯಾಜ ಕಲಾದಗಿ, ಅಧ್ಯಕ್ಷತೆ ವಹಿಸಿದ ಶ್ರೀ ಕೈಲಾಸ್ ಹಿರೇಮಠ ಮಾತನಾಡಿದರು.ಹಿರಿಯ ಆಟಗಾರರಾದ…
