ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜ೧೮ ಮತ್ತು ಜ೧೯ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಮ್ಮೇಳನದಲ್ಲಿ ಮತ, ಮಠಗಳ ಬೇಧವನ್ನು ಮರೆತು ಬ್ರಾಹ್ಮಣ ಎನ್ನುವ ಸಂಕಲ್ಪ ತೊಟ್ಟು ಭಾಗವಹಿಸಬೇಕು ಎಂದು ತಾಲೂಕಿನ ಹಿರೇಮುರಾಳ ಗ್ರಾಮದ ವಿಪ್ರ ಸಮಾಜದ ಪ್ರಮುಖರಾದ ಕೃಷ್ಣ ಜೋಶಿ ಕರೆ ನೀಡಿದರು.
ತಾಲೂಕಿನ ಹಿರೇಮುರಾಳ ಗ್ರಾಮದ ವಿಪ್ರಸಮಾಜ ಬಾಂಧವರಿಗೆ ಸಮ್ಮೇಳನದ ಆಮಂತ್ರಣ ಸ್ವೀಕರಿಸಿ ಅವರು ಮಾತನಾಡಿದರು.
ಈ ಸಮಾವೇಶದ ಉದ್ದೇಶ ಪರೋಪಕಾರ, ಪರಸ್ಪರ ಸಹಕಾರ ಮತ್ತು ಸಂಸ್ಕೃತಿ ಬೆಳೆಸುವದಾಗಿದೆ. ಸಮಾಜದ ಎಲ್ಲ ಬಾಂಧವರು ಭಾಗಿಯಾದಲ್ಲಿ ಹೊಸ ವಿಚಾರಗಳನ್ನು ತಿಳಿದುಕೊಳ್ಳಬಹುದು. ಪಂಡಿತರ ನುಡಿಗಳನ್ನು ಕೇಳಬಹುದು. ಸಮಾಜದ ಜೀರ್ಣೋದ್ದಾರವಾದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸಾಕಷ್ಟು ಅನುಕೂಲವಾಗುವದು. ಹಾಗಾಗಿ ಪ್ರತಿಯೊಬ್ಬರೂ ಭಾಗಿಯಾಗಿ ಎಂದರು.
ಅಜಿತ ಜೋಶೀಯವರು ಮಾತನಾಡಿ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಂದೇಶ ಮತ್ತು ಆಚಾರ ವಿಚಾರಗಳನ್ನು ಪಡೆಯಬಹುದು. ಶಕ್ತಿ ಪ್ರದರ್ಶಿಸಬಹುದು ಎಂದರು.
ಹುನಗುಂದ ನ ಪ್ರಶಾಂತ ದೇಸಾಯಿ ವಕೀಲರು ಸಮಾಜ ಬವಾಂಧವರಿಗೆ ಆಮಂತ್ರಣ ನೀಡಿದರು. ಪ್ರದೀಪ ಚೌಥಾಯಿ, ಪ್ರಸನ್ನಕುಮಾರ ಜಗೀರದಾರ, ಅಂಬಾದಾಸ ಜಹಾಗೀರದಾರ, ಸುನೀಲ ಜಹಗೀರದಾರ, ರಾಘವೇಂದ್ರ ಜೋಶಿ, ರಮೆಶ ಜೋಶಿ, ಪ್ರಾಣೇಶ ಆಚಾರ, ಅಶೋಕ ಜೋಶಿ, ವಿಜಯೇಂದ್ರ ಜೋಶಿ, ಪ್ರಶಾಂತ ದೇಸಾಯಿ, ಎ.ಜಿ.ದೇಸಾಯಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿಪ್ರ ಸಮಾಜ ಬಾಂಧವರು ಇದ್ದರು.

